Skip to main content

21 2 2020 ಮೊದಲ ಮಳೆ

[21/02, 2:29 PM] pankajarambhat: ಗುರುಕುಲಾ ಚಾಮರಾಜನಗರ ಘಟಕದ ಸ್ಪರ್ಧೆಗಾಗಿ
ಹನಿಕವನ
ದತ್ತಪದ..ಮೊದಲ ಮಳೆ

      ಪುಳಕ

ಮೊದಲ ಮಳೆಯು
ಇಳೆಗೆ ತಂದಿತು ಪುಳಕ
ಬಿಸಿಲಿಗೆ ಬಾಡಿದ 
ತರುಲತೆಗಳಿಗೆ ಹರುಷದ ಜಳಕ
ಮಣ್ಣಿನ ಘಮಲು 
ಸೆಳೆಯಿತು ರಸಿಕರ ನಾಸಿಕ
ಸುರಿದ ವರ್ಷದಾರೆಗೆ
ಬುವಿಗೆ ಸಂತಸದ ನಡುಕ

 ಶ್ರೀಮತಿ.ಪಂಕಜಾ ಕೆ ಮುಡಿಪು
[21/02, 3:07 PM] pankajarambhat: ಗುರುಕುಲಾ  ಕಲಾಪ್ರತಿಷ್ಠಾನ ಜಿಲ್ಲಾಘಟಕ ಕೊಡಗು 
ವಾರಕ್ಕೊಂದು ಸ್ಪರ್ಧೆಗಾಗಿ
ಹಾಸ್ಯಕವನ
ವಿಷಯ..ಪತಿಮಹಾಶಯ

       ನನ್ನ ದೇವರು

ಮೊದಲ ರಾತ್ರಿ ಪತಿಮಹಾಶಯರು
ಬದಿಗೆ ಸರಿದು ಕುಳಿತುಕೊಂಡು
ಎದುರೆ  ಕುಳಿತ ನನ್ನ ಕಡೆಗೆ ನೋಡುತಿದ್ದರು
ಚದುರೆ ನಿನ್ನ ರೂಪ ಚಂದ
ಕುದುರೆಯಂತೆ ಕೆನೆವೆಯೇಕೆ
ಮದುವೆ ಆಗಿ ಇಂದು ನಾವು ಖುಷಿಯಪಡೋಣ

ಬಯಕೆ ಏನು  ನಿನ್ನದೆಂದು
ನಯದಿ ಕೇಳಿ ನನ್ನ ಮೊಗವ
ಕೈಯಲಿಡಿದು ಕಣ್ಣಿನಲ್ಲೇ ಕೆಣಕುತ್ತಿದ್ದರು
ಮಯಣದಂತೆ ಅಂಟಿಕೊಂಡು
ಹಯದ ತೆರದಿ ನನ್ನ ಸೆಳೆದು
ಜಯವ ಪಡೆದ ಹಿಗ್ಗಿನಲ್ಲಿ ನಗುತ ನಿಂತರು

ಹೆಣ್ಣೇ ನೀನೇಕೆ  ಮುನಿವೇ
ಕಣ್ಣು ತುಂಬಾ ನಿದ್ದೆ ಮಾಡು
ಬಣ್ಣವಿರುವ ಸೀರೆಯನ್ನು ತಂದು ಕೊಡುವೆನು
ಹಣ್ಣು ಹಣ್ಣು ಮುದುಕರಂತೆ
ಬೆನ್ನು ಬಗ್ಗಿಸಿ ನಟನೆ ಮಾಡಿ
ನನ್ನ   ಮೊಗದಿ ನಗುವ ಕಂಡು ಖುಷಿಯ ಪಟ್ಟರು

 ಇಂತು ಇರುವ ಪತಿಮಹಾಶಯ
ದೇವರೆಂದು ತಿಳಿದು ನಾನು  ಖುಷಿಯಲಿರುವೆನು

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸಿಸ್ಟಂಟ್  ಪೋಸ್ಟ್ ಮಾಸ್ಟರ್
ಕುರ್ನಾಡು.ದ.ಕ.
[21/02, 3:13 PM] pankajarambhat: ಗುರುಕುಲಾ  ಕಲಾಪ್ರತಿಷ್ಠಾನ ಜಿಲ್ಲಾಘಟಕ ಕೊಡಗು 
ವಾರಕ್ಕೊಂದು ಸ್ಪರ್ಧೆಗಾಗಿ
ಹಾಸ್ಯಕವನ
ವಿಷಯ..ಪತಿಮಹಾಶಯ

       ನನ್ನ ದೇವರು

ಮೊದಲ ರಾತ್ರಿ ಪತಿಮಹಾಶಯರು ಬದಿಗೆ ಸರಿದು ಕುಳಿತುಕೊಂಡು
ಎದುರೆ  ಕುಳಿತ ನನ್ನ ಕಡೆಗೆ ನೋಡುತಿದ್ದರು
ಚದುರೆ ನಿನ್ನ ರೂಪ ಚಂದ ಕುದುರೆಯಂತೆ ಕೆನೆವೆಯೇಕೆ
ಮದುವೆ ಆಗಿ ಇಂದು ನಾವು ಖುಷಿಯಲಿರೋಣ

ಬಯಕೆ ಏನು  ನಿನ್ನದೆಂದು ನಯದಿ ಕೇಳಿ ನನ್ನ ಮೊಗವ
ಕೈಯಲಿಡಿದು ಕಣ್ಣಿನಲ್ಲೇ ಕೆಣಕುತ್ತಿದ್ದರು
ಮಯಣದಂತೆ ಅಂಟಿಕೊಂಡು ಹಯದ ತೆರದಿ ನನ್ನ ಸೆಳೆದು
ಜಯವ ಪಡೆದ ಹಿಗ್ಗಿನಲ್ಲಿ ನಗುತ ನಿಂತರು

ಹೆಣ್ಣೇ ನೀನೇಕೆ  ಮುನಿವೇ ಕಣ್ಣು ತುಂಬಾ ನಿದ್ದೆ ಮಾಡು
ಬಣ್ಣವಿರುವ ಸೀರೆಯನ್ನು ತಂದು ಕೊಡುವೆನು
ಹಣ್ಣು ಹಣ್ಣು ಮುದುಕರಂತೆ ಬೆನ್ನು ಬಗ್ಗಿಸಿ ನಟನೆ ಮಾಡಿ
ನನ್ನ   ಮೊಗದಿ ನಗುವ ಕಂಡು ಖುಷಿಯ ಪಟ್ಟರು
ಇಂತು ಇರುವ ಪತಿಯ ನಾನು ದೇವರೆಂದು
ತಿಳಿದುಕೊಂಡು ಖುಷಿಯಲಿರುವೆನು

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸಿಸ್ಟಂಟ್  ಪೋಸ್ಟ್ ಮಾಸ್ಟರ್
ಕುರ್ನಾಡು.ದ.ಕ.
[21/02, 3:25 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ
ಜಿಲ್ಲಾ ಘಟಕ ಚಿಕ್ಕಮಗಳೂರು
ವಾರಕ್ಕೊಂದು ಸ್ಪರ್ಧೆಗಾಗಿ
ಚುಟುಕುಗಳು
ದತ್ತಪದ. ಸಂಸಾರ.     ಸಂಸ್ಕಾರ

ಚುಟುಕು 1 ಸಂಸಾರ

ಸಂಸಾರ ಸಾಗರದಲಿ ಈಜಬೇಕು
ಜಗಮೆಚ್ಚುವಂತೆ ಬಾಳಬೇಕು
ಸುಖದುಃಖಗಳ ಸಮಾನವಾಗಿ ಸ್ವೀಕರಿಸಿ
ಸಮರಸದಿ  ಜೀವನವನು ಸಾಗಿಸಿ

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್
ಕುರ್ನಾಡು ದ.ಕ.
[21/02, 3:52 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾ ಘಟಕ ತುಮಕೂರು
ಚಿತ್ರಕವನ ಸ್ಪರ್ಧೆಗಾಗಿ

    ಮಗಳ ಆಸೆ

ಎಡೆಯಲಿ ನುಸುಳುವ ವೈರಿಯ ಬಡಿಯುತ
ಗಡಿಯನ್ನು ಕಾಯುವ ಸೈನಿಕನು
ಮನೆ ಮಠ ಬಿಟ್ಟು ಚಳಿಯಲಿ ನಡುಗುತ
ದೇಶವ ಕಾಯುತ ಕುಳಿತಿಹನು

ರಜೆಯಲಿ ಊರಿಗೆ ಬರುವ ಅಪ್ಪನ ಕಂಡು
ಮಮತೆಯ ಮಗಳಿಗೆ ಸಂತಸವು
ಅಪ್ಪನು ತರುವ ಚಾಕೊಲೇಟ್ ಆಸೆಗೆ
ಪುಟ್ಟಿಯ ಕಂಗಳಲಿ  ಕನಸುಗಳು

ವೈರಿಯ ಹೊಡೆತಕೆ ಮುರಿದಿಹ ಕೈಯನು
ಬೆನ್ನಿಗೆ ಸಿಲುಕಿಸಿ ನಿಂತಿಹನು
ಚಾಕೊಲೇಟ್ ಇರಬಹುದೆನ್ನುವ ಆಸೆಯಲಿರುತ
ಓಡುತ ಬಂದಳು ಚೆಲು ಬಾಲೆ

ಮೊಂಡು ಕೈಯನು ಕಾಣಲು ಮಗಳಿಗೆ
ದುಃಖವು ಮೂಡಿತು ಮನದಲಿ
ಅಪ್ಪನ ನೋವನು ಪಕ್ಕನೆ ತಿಳಿಯುತ
ಭರದಲಿ ಅಪ್ಪುತ  ಸಂತೈಸುವಳು 

ಶ್ರೀಮತಿ ಪಂಕಜಾ ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್. ಪೋಸ್ಟ್.ಮಾಸ್ಟರ್. ಕುರ್ನಾಡು ..ದ.ಕ.
[21/02, 8:35 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾ ಘಟಕ 
 ಚಿತ್ರಕವನ ಸ್ಪರ್ಧೆಗಾಗಿ

     ಕೋಳಿ ಕಟ್ಟ

ಸುಂದರ ಕೋಳಿಯ ಚಂದದಿ ಸಾಕಿ
ಕಾಲಿಗೆ ಬಾಳನು ಕಟ್ಟುವರು
ಕೆಂಪನೆ ಬಣ್ಣದ ಕೋಳಿಯ ಕೊಬ್ಬಿಸಿ
ಕೋಳಿಕಟ್ಟವನಾಡುವರು

ಕೆಂಪನೆ ಅಂಗಿಯ ಹಾಕಿದ ಅಜ್ಜನು
ನಗುತಲಿ ಹಿಡಿದಿಹ ಕೋಳಿಯನು
ತಲೆಯಲಿ ಧರಿಸಿದ ಮುಟ್ಟಾಳೆಯು
ಹಳ್ಳಿಯ ಜನರ ಶಿರಸ್ತ್ರಾಣ

ಬುಟ್ಟಿಯಲಿಟ್ಟು ಕಾಲನು ಕೊಡುತ
ಪ್ರೀತಿಯಲಿ ಸಾಕುದ ಕೋಳಿಯನು
ಆಟದ ಅಂಗಳದಿ ಕೋಳಿಯ ಬಿಟ್ಟು
ಜಗಳದ  ಮಜವನು ಸವಿಯುವರು

ಬಾಳನು ಕಟ್ಟಿದ ಕೋಳಿಯು ಎಗರಲು
ಕಡಿಯದೆ  ಇರದೇ ಜತೆಗಾರನನು
ಕಡಿದರೆ  ಮುಗಿಯಿತು ಆಟದ ಗತ್ತು
ಸೋತ  ಕೋಳಿಗಿದೆ ಆಪತ್ತು

ಪ್ರಾಣಿ ಪಕ್ಷಿಗಳ ಕೊಲ್ಲುತ ಮನುಜ
ತನ್ನಯ ಸುಖವನು ಕಾಣುವನು
ಹಕ್ಕಿಯ ಜ್ವರದ ಭಯವೂ ಇಲ್ಲದೆ
 ಪ್ರಾಣಿಪಕ್ಷಿಗಳ ಮಾಂಸವ ಮೆಲ್ಲುವನು

ಪ್ರಾಣಿಗಳಿಗೂ ಬದುಕುವ ಹಕ್ಕಿದೆ ನಮ್ಮನಿಮ್ಮಂತೆ
ತಿಳಿಯಿರಿ ಇದನು ನೀವ್ ಮೊದಲು
ಸಸ್ಯಾಹಾರವೇ ಮನುಜಗೆ ಶ್ರೇಷ್ಠ
ಇದುವೇ ಆರೋಗ್ಯದ  ಗುಟ್ಟಂತೆ

ಶ್ರೀಮತಿ.ಪಂಕಜಾ.ಕೆ. ಮುಡಿಪು.ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್.ಕುರ್ನಾಡು.ದ.ಕ.
[21/02, 9:08 PM] pankajarambhat: ಗುರುಕುಲಾ ಅಂತರರಾಜ್ಯ ಘಟಕದ ಸ್ಪರ್ಧೆಗಾಗಿ
 ಲೇಖನ
ವಿಷಯ ರಥ ಸಪ್ತಮಿ

ಮಾಘ ಮಾಸದ  ಶುಕ್ಲಪಕ್ಷದ ಸಪ್ತಮಿ ತಿಥಿಯಂದು ಸೂರ್ಯ ತನ್ನ ರಥವನ್ನು ಬದಲಿಸಿ ಹೊಸರಥವನ್ನು ಹತ್ತುತ್ತಾನೆ  ಈದಿನ ಸೂರ್ಯನ ಜನ್ಮದಿನವೆಂದು ಹೇಳಲಾಗುತ್ತದೆ. ರಥ ಸಪ್ತಮಿಯೆಂದು ಆಚರಿಸುವ ಈ ದಿನ ಸೂರ್ಯೋಪಾಸನೆಯನ್ನು ಕೈಕೊಂಡರೆ ಸರ್ವರೋಗಗಳು ನಿವಾರಣೆಯಾಗುವುದೆಂದು ನಂಬಲಾಗುತ್ತದೆ.ಚಳಿಗಾಲದಲ್ಲಿ ಮುದುಡಿದ ಶರೀರ  ರಥ ಸಪ್ತಮಿಯ ಬಳಿಕ ಬರುವ ಬೇಸಿಗೆಯಲ್ಲಿ ಸೂರ್ಯನ  ಶಾಖದಿಂದಾಗಿ ನವಚೈತನ್ಯಪಡೆಯುತ್ತದೆ.ಸೂರ್ಯನ ಕಿರಣಗಳಲ್ಲಿರುವ ವಿಟಮಿನ್ ಡಿ  ಮನುಜನ ಬೆಳವಣಿಗೆಗೆ ಅತ್ಯಗತ್ಯ. ರೋಗಾಣುವನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿದೆ.ಬೆಳಗಿನ ಹಾಗೂ ಸಂಜೆಯ ಸೂರ್ಯಕಿರಣವು ಆರೋಗ್ಯ ವರ್ಧನೆಗೆ ಸಹಾಯಕ ರೋಗದಿಂದ ನರಳುವವರು ಸೂರ್ಯಸ್ನಾನ ಮಾಡಿದರೆ ರೋಗ ನಿವಾರಣೆಯಾಗುವುದು ಇದಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಹುಟ್ಟು ರೋಗಿಷ್ಟನಾದ ಯಶೋಧರನ ಮಗ ರಥ ಸಪ್ತಮಿ ಆಚರಿಸಿ ರೋಗ ಮುಕ್ತನಾದನಂತೆ ಶ್ರೀ ರಾಮನು ರಾವಣನನ್ನು ಸೋಲಿಸಲು ಆದಿತ್ಯ ಹೃದಯದಿಂದ ಸೂರ್ಯರಾಧನೆ ಮಾಡಿದನೆಂದುಪುರಾಣಗಳು ಹೇಳುತ್ತದೆ.ಅಲ್ಲದೆ ಪಾಂಡವರು ವನವಾಸದಲ್ಲಿದ್ದಾಗ ಶ್ರೀ ಕೃಷ್ಣ ಅಣತಿಯಂತೆ  ಸೂರ್ಯರಾಧನೆ ಮಾಡಿ ಅಕ್ಷಯ ಪಾತ್ರೆಯನ್ನು ಪಡೆದರೆಂದು ಹೇಳಲಾಗುತ್ತಿದೆ.  ಸೂರ್ಯಾರಾಧನೆ ಮಾಡಿ ಶಮಂತಕ ಮಣಿ ಪಡೆದ ಕಥೆ ಎಲ್ಲರಿಗೂ ಗೊತ್ತೇ ಇದೆ. ಮಯೂರನೆಂಬ ಕವಿ ಸೂರ್ಯೋಪಾಸನೆ ಮಾಡಿ ತನ್ನ ಕಣ್ಣು ಮರಳಿ ಪಡೆದನೆಂದು ಪ್ರತೀತಿ ..ಸೂರ್ಯೋದಯಕ್ಕೆ ಮೊದಲು ಮಾಡುವ ಮಾಘಸ್ನಾನ ಪುಣ್ಯಪ್ರದ ಆಯುಷ್ಯ ಆರೋಗ್ಯ ಸಂಪತ್ತು ವೃದ್ಧಿಲಭಿಸುವುದಲ್ಲದೆ ಸೂರ್ಯನ ಅನುಗ್ರಹ  ಪ್ರಾಪ್ತಿಯಾಗುತ್ತದೆ  ರಥ ಸಪ್ತಮಿಯಂದು  ನದಿ ಸರೋವರ ಸಂಗಮಗಳಲ್ಲಿ ಸ್ನಾನ ಮಾಡಿ ಸೂರ್ಯನಿಗೆ ಆರ್ಘ್ಯವಿತ್ತರೆ ಪೂರ್ವ ಜನ್ಮದ ಪಾಪ ಹಾಗೂ ಸಕಲ ದುಃಖ  ನಿವಾರಣೆಯಾಗುವುದು. ಈ ದಿನ ಎಕ್ಕದ ಎಲೆಯನ್ನು ತಲೆ ಕಂಕುಳು ಪಾದ ಇತ್ಯಾದಿ ಕಡೆ ಇ ಟ್ಟು ಸ್ನಾನ ಮಾಡುವುದರಿಂದ ಚರ್ಮ ರೋಗ ನಿವಾರಣೆಯಾಗುವುದು

ಶ್ರೀಮತಿ.ಪಂಕಜಾ. ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್.ಕುರ್ನಾಡು.ದ.ಕ 
.

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.