Skip to main content
[27/8/2018, 7:43 PM] pankajarambhat: ಕಾದಿಹಳು ರಾಧೆ

ಕಾದಿಹಳು. ರಾಧೆ 
ಮಾಧವನ ಬರುವಿಕೆಯ
ನಿರೀಕ್ಷೆಯ ತಪದಲಿ
ಯಮುನಾತೀರದ ದಂಡೆಯಲಿ

ನವಿಲಗರಿಯೊಡನಾಡುತ್ತ
 ಮುರಳಿಗಾನದ ಸವಿ ಯ
 ಕೇಳುವಾತುರದಲಿ
 ಎದೆತೆರೆದು ನಿಂತಿಹಳು 

ಬರುವೆನೆಂದವ ಮರೆತನೆ
ರಾಧೆಯೊಲವಿನ ನೆನಪ
ನವಿಲುಗರಿಯೊಡೆಯ 
ಮನಕೆ ಮುದಕೊಟ್ಟು ನಲಿದವ

ಕೊಳಲನೂದುತ ಮನಸೆಳೆದವ
ಕಾಯುತಿಹಳು ರಾಧೆ
ಒಲವಗಾನದಕರೆಗೆ ಮನತೆರೆದು
ಎಂದು ಬಂದಾನೋ ಮಾಧವ

ತಾಳಲಾರದೆ ವಿರಹ
ಸುಡುತಿರುವ ತನುವ
ಬಳಸುತಿಹ  ಬಾಹುಗಳ
ನಿರೀಕ್ಷೆಯಲಿ ಕಾದಿಹಳು

ಎಂದು ಬಂದಾನೋ ಮೋಹನಾಂಗ
ಬಳಸುತ ಬಳ್ಳಿ ನಡುವ
ಕೊಳಲನೂದುತ ಮನವ
ತಣಿಸುವ  ನಲ್ಲ
ಕಾಯುತಿರುಳು ರಾಧೆ

ಪಂಕಜಾ. ಕೆ. ಮುಡಿಪು ಕುರ್ನಾಡು
[16/9/2018, 9:44 AM] pankajarambhat: ಒಲುಮೆಯಲಿ

ನಿನ್ನ ಒಲುಮೆಯಲಿ ಮಿಂದು
ಅರಳಿ ನಗುತ್ತಿರುವ ಹೂವು ನಾನು
ನಿನ್ನ  ಸಾಂಗತ್ಯದಲಿ ನಲಿದು
ಹಾರುತಿರುವ ಹಕ್ಕಿ ನಾನು

ನೀ ಬಂದ ಕ್ಷಣದಿಂದ
ಕನಸು ಮನಸಲಿ ನೀನೇ ನಲ್ಲ
ಮಳೆಯ   ಸವಿ ಮುದ್ದಿಗೆ
ಬಿರಿದರಳಿದ ಹೂವಿನಂತೆ

ನಿನ್ನ ಒಡನಾಟದಲಿ
ಬಾಳಾಯಿತು ಹಾಲುಜೇನು
ಹೂವಾಗಿ  ಕಾಯಾಗಿಹಣ್ಣಾಗುತ
ನಗುತಲಿರುವೆ ನಿತ್ಯ ನಿನಗಾಗಿ

ನೀ ನನ್ನ ಬಾಳ ತೇರು
ನೋವಿರಲಿ ನಲಿವಿರಲಿ
ಜತೆಯಾಗಿ ನೀನಿರಲು
ಬಾಳಲ್ಲಿ ಅರಳುತಿದೆ ಹೂವು

ಬಣ್ಣಬಣ್ಣದ ಹೂವು 
ಅರಳಿರುವ ಗಿಡದಂತೆ
ನಿತ್ಯ ನಗುತ್ತಿರುವ ನಾವು
ಕಷ್ಟ ಸುಖಗಳಲಿ ಜತೆಯಾಗಿ

ಪಂಕಜಾ.ಕೆ
[6/10/2018, 8:45 PM] pankajarambhat: ಹಕ್ಕಿ ಗೂಡು

ಹಕ್ಕಿಯೊಂದು ಪುಟ್ಟ ಗೂಡ
ಕಟ್ಟುತಿರುವುದು
ತನ್ನ ಇನಿಯನೊಡನೆ ಬಂದು
ಇಣುಕುತಿರುವುದು

ಅಲ್ಲಿ ಇಲ್ಲಿ ಹಾರಿ ಬಂದು
ಕಸ ಕಡ್ಡಿ ಹೆಕ್ಕಿ ತಂದು
ಪುಟ್ಟದೊಂದು ಗೂಡನಲ್ಲಿ 
ಕಟ್ಟುತಿರುವುದು

ಅತ್ತ ಇತ್ತ ಕತ್ತು ತಿರುಗಿಸಿ
ಗೂಡ ಒಳಗೆ ಕೂತು ಎದ್ದು
ಗಟ್ಟಿಯಿರುವ ಗೂಡನೊಂದು
ಕಟ್ಟಿ ಬಿಟ್ಟಿತು


ಕಾಳು ಕಡ್ಡಿ ಹೆಕ್ಕಿ ತಂದು
ತನ್ನ ಇನಿಯನೊಡನೆ ಕೂಡಿ
 ಚಂದದಲ್ಲಿ ಹಾಡ ಹಾಡಿ  
ನಕ್ಕು ನಲಿಯುವುದು

ಮೊಟ್ಟೆ ಇಟ್ಟು ಕಾವು ಕೊಡುತ 
ಸಂಗಾತಿ ಕುಳಿತ ಸಮಯದಿ 
ಗಂಡು  ಹಕ್ಕಿ  ಕಾಳು  ಕಡ್ಡಿ 
ತಂದು ಉಣಿಸಿತು

ಕಾವು ಕೊಡಲು ಪುಟ್ಟ ಪುಟ್ಟ
ಮರಿಗಳು ಹೊರಗೆ ಬಂದವು
ಮರಿಗಳಿಗೆ ಗುಟುಕ ನೀಡಿ
ಉಣಿಸುತ್ತಿರುವುದು

ಅಲ್ಲಿ ಇಲ್ಲಿ ತಿರುಗಿ ಬಂದು
ಕಾಳು ಕಡ್ಡಿ ಹೆಕ್ಕಿ ತಂದು
 ಮರಿಗಳನ್ನು ಜತನದಿಂದ
ಕಾಯುತಿರುವುದು

ರೆಕ್ಕೆ ಬಂದ ಹಕ್ಕಿಗಳು 
ಗೂಡ ಬಿಟ್ಟು ಹಾರಲದರ
ಅಮ್ಮ ತಾನು ಜತೆಗೆ ಹಾರುತ
ಕಲಿಸುತ್ತಿರುವುದು

ರೆಕ್ಕೆ ಬಂದ ಹಕ್ಕಿಗಳು 
ಗೂಡ ಬಿಟ್ಟು ಹಾರಿ ಹೋದವು
 ಸ್ವಚ್ಛಂದದಿಂದ  ಬಾನಿನಲ್ಲಿ
ವಿಹರಿಸುತ್ತಿರುವುದು

ಪಂಕಜಾ.ಕೆ
[12/10/2018, 5:08 PM] pankajarambhat: ಸ್ಪರ್ದೆಗಾಗಿ

     ಹೆಣ್ಣು ಮನೆಯ ಕಣ್ಣು

ಹೆಣ್ಣೆಂದರೆ ಸಹನಶೀಲೆ  ತ್ಯಾಗ, ಸ್ನೇಹದ ಪ್ರತೀಕ..ಹೆಣ್ಣಿನ ಬಗ್ಗೆ ಬರೆಯಲು ಹೊರಟರೆ ಶಬ್ದಗಳಿಗೆತಡಕಾಡುವಂತಾಗುತ್ತದೆ .ಆಕೆ ಸೌಂದರ್ಯದ ಗಣಿ, ಮಮತಾಮಯಿ, ಮುದ್ದಿಸುವ ಮಾತೆಯಾಗಿ ,ಒಲವಸುರಿಸುವ ಸಹೋದರಿಯಾಗಿ,ಪ್ರೇಮಮಯಿ,ಬಾಳಸಂಗಾತಿಯಾಗಿ ,ಮನೆಬೆಳಗುವಸೊಸೆಯಾಗಿ ,ಮನಸು ತುಂಬುವ ಮಗಳಾಗಿ ,ಹತ್ತು ಹಲವು ರೂಪದಲ್ಲಿ ತನ್ನ ತನವನ್ನು ಮೆರೆಯುತ್ತಿದ್ದಾಳೆ .
           ಹೆಣ್ಣು ಇಲ್ಲದ್ದೆ ಇದ್ದರೆ ಆ ಮನೆ ದೀಪವಿಲ್ಲದ ಮನೆಯಂತೆ, ಸುವಾಸನೆಯಿಲ್ಲದಹೂವಿನಂತೆಮಂಕಾಗುವುದು .ಹೆಣ್ಣು ಮನೆಯ ಕಣ್ಣು  ,ಮನೆ ಮನಗಳನ್ನು ಬೆಳಗುವ ಜ್ಯೋತಿ. ಮನೆಯ ಮಹಾಲಕ್ಷ್ಮಿ ಎಂದರೂ ತಪ್ಪಾಗಲಾರದು.  ಒಡಲಲ್ಲಿ ಹೊತ್ತು ,ಮಡಿಲಲ್ಲಿ ಮಲಗಿಸಿ, ಕೈತುತ್ತು ಉಣ್ಣಿಸಿ, ಕೈ ಹಿಡಿದು ಬಾಳು ಬೆಳಗುವ ಹೆಣ್ಣು ಮನೆಯ ಕಣ್ಣು
         ಹೆಣ್ಣು ಎಷ್ಟು ಸಹನಮೂರ್ತಿಯೊ ಅಷ್ಟೇ ಕೆಣಕಿದರೆ ಚಂಡಿ ಆಗಬಲ್ಲಳು ಎನ್ನುವುದಕ್ಕೆ ದುರ್ಗಾದೇವಿಯು ಒಂದು ಉದಾಹರಣೆ . ಮುನಿದರೆ ಮಾರಿಯು ಹೌದು . ಮನೆಯಲ್ಲಿ ಆಕೆಯ ಪಾತ್ರ ಹಿರಿದು ಆಕೆ ಮನೆ ಮಂದಿಯರ ಆರೋಗ್ಯ ಕಾಯುವ ಅನ್ನಪೂರ್ಣೆ ,ಮಕ್ಕಳಿಗೆ ವಿದ್ಯೆ ಬುದ್ದಿ ಕಲಿಸುವ ಶಾರದಾ ಮಾತೆ , ಮನೆ ಬೆಳಗುವ ಗೃಹ ಲಕ್ಷ್ಮಿ ,ಆಕೆಯಿಲ್ಲದ ಮನೆ  ಸ್ಮಶಾನಕ್ಕೆ ಸಮಾನ  .
        ಮಕ್ಕಳನ್ನು  ಹೆತ್ತು ಹೊತ್ತು  ಸಾಕಿ ಸಲಹಿ ವಿದ್ಯೆ ಬುದ್ದಿಗಳ ಕಲಿಸಿ  ತಿದ್ದಿ ತೀಡಿ ಅವರನ್ನು ಉತ್ತಮ ಪ್ರಜೆಗಳಾಗಿಸುವಲ್ಲಿ ತಾಯಿಯ ಪಾತ್ರ ಹಿರಿದು. ತಾಯಿಯಿಲ್ಲದ ಮಗುವಿನ ಬೆಳವಣಿಗೆಅಪೂರ್ಣ.ಹೆಣ್ಣೆಂದರೆ  ಮೃದುಮದುರ  ಭಾವನೆಗಳ ಗಣಿ  ,ಜೀವನೋಲ್ಲಾಸ ಹೆಚ್ಚಿಸುವ ಸಂಜೀವಿನಿ  ರೂಪ ಗುಣಗಳ ಗಣಿ ಸೃಷ್ಟಿಯ ಒಂದು ಅದ್ಭುತ 

ಪಂಕಜಾ.ಕೆ. ಮುಡಿಪು
: ಸ್ಪರ್ಧೆಗಾಗಿ

  ಕುಟುಂಬ ಜೀವನ

ರಮಾ  ತುಂಬು ಕುಟುಂಬದಲ್ಲಿ ಹುಟ್ಟಿ ಬೆಳೆದ ಹೆಣ್ಣು ಮಗಳು. ಮನೆಯಲ್ಲಿ ಅಮ್ಮ ಅಪ್ಪ  ಅತ್ತೆ ಅಜ್ಜಿ ಅಜ್ಜ  ಅಣ್ಣ ತಮ್ಮಂದಿರು ಜತೆ ಬೆಳೆದ ಆಕೆಗೆ ಮೊದಲಿನಿಂದ ಹೆಣ್ಣು ಮಕ್ಕಳ ಮೇಲೆ  ಮಾತ್ರ ಕುಟುಂಬದ ನಿಯಮಗಳನ್ನು  ಹೇರುವ ಅಜ್ಜ ಅಜ್ಜಿಯರ  ಬಗ್ಗೆ  ಬೇಸರ.
          ಚಿಕ್ಕಂದಿನಿಂದಲೂ ಆಕೆಯನ್ನು ಅದು ಮಾಡಬೇಡ, ಇದು ಮಾಡಬೇಡ ,ಹೆಣ್ಣು ಮಕ್ಕಳು ತಲೆ ಕೂದಲು ಬಿಟ್ಟು ಕೊಂಡು ಇರಬಾರದು ,ಹಣೆಗೆ ಕುಂಕುಮ ಇಡಬೇಕು, ಬೆಳಗಿನ ಜಾವದಲ್ಲಿ ಬೇಗ ಎದ್ದು  ತಲೆ ಸ್ನಾನ ಮಾಡಿ ದೇವರಿಗೆ ದೀಪಇಟ್ಟು ರಂಗೋಲಿ ಹಾಕಿ  ಗಂಡಸರ ಊಟ ಆದಮೇಲೆಯೇ ಉಣ್ಣಬೇಕು, ಎನ್ನುವ ಕಟ್ಟು ಪಾಡು ಇದರಿಂದ ಎಷ್ಟೋ ಬಾರಿ ಆಕೆಗೆ ಊಟ ಮಾಡದೆ ಹಸಿವಿನಿಂದ ಬಳಲುವ ಪ್ರಸಂಗ ಬರುತಿತ್ತು ಆಗೆಲ್ಲಾ ಅಜ್ಜಿಯ ಮೇಲೆ ಆಕೆಗೆ ವಿಪರೀತ ಕೋಪ ಬರುತಿತ್ತು ಆದರೇನು ಮನೆ ಮರ್ಯಾದಿ ಬೀದಿ ಪಾಲಾಗುವ ಭೀತಿಯಲ್ಲಿ ಆಕೆ ಎಲ್ಲವನ್ನು ಮೌನವಾಗಿ ಸಹಿಸುತ್ತ ಇದ್ದಳು
       ಅವಳ  ಅಮ್ಮನದು ಮೂಗೆತ್ತಿನ ಜೀವನ  ತಾನಾಯಿತು ತನ್ನ ಕೆಲಸವಾಯಿತು ಎಂದು ಇರುವ ಜಾಯಮಾನ ಅಜ್ಜಿಯ ಮಾತುಗಳಿಗೆ ಕಿವುಡಾಗಿ ದುಡಿಯುವುದೇ ಅವಳ ಜೀವನ ಅಜ್ಜಿಯ ದುಸುಮುಸು   ನಿತ್ಯವೂ ಸುರಿಸುವ ಬೈಗಳು ಇವುಗಳನ್ನು ಕೇಳಿ ಕೇಳಿ ಅಮ್ಮ ಈ ರೀತಿ ಮೂಕಿ ಯಾಗಿರಬಹುದುಎನ್ನುವ  ಭಾವನೆ ರಮಾಳದು 

       ತಂದೆಯದು ತುಂಬಾ ಶಾಂತ ಸ್ವಭಾವ ಅಮ್ಮನ ಜೊತೆಗೆ ಮಾತಾಡಲು ಹೆದರುವ ಆತ ಹೆಂಡತಿಗಾಗಿ  ನಿತ್ಯ ಮರುಗುತ್ತಿದ್ದ ಆದರೆ ತನ್ನಿಂದ ಏನೂ ಮಾಡಲಾಗದ ಅಸಹಾಯಕತೆ ಆತನನ್ನು ಕಟ್ಟಿ ಹಾಕಿತ್ತು
            ಅದೊಂದು ದಿನ ರಮಾ ಳ ಚಿಕ್ಕಪ್ಪ  ಚಿಕ್ಕಮ್ಮ  ಬೆಂಗಳೂರಿನಿಂದ ಬಂದಿದ್ದರು 
ರಮಾಳಿಗಂತು ತುಂಬಾ ಖುಷಿ ಚಿಕ್ಕಪ್ಪ ಆಕೆಗೆ ತಂದು ಕೊಡುವ ಕಥೆ ಪುಸ್ತಕಗಳನ್ನು  ಓದಿ ಆಕೆ  ತನ್ನದೇ ಆದ ರೀತಿಯಲ್ಲಿ ಬಾಳುವ ನಿರ್ಧಾರವನ್ನು ಮಾಡಿದ್ದಳು 
          ಚಿಕ್ಕಮ್ಮ  ಸಂಧ್ಯಾ ಓದಿದ ಹೆಣ್ಣು  ಕೌಟುಂಬಿಕ ನಿಯಮಗಳು ಅಂದರೆ ಆಕೆಗೆ ಅಷ್ಟಕ್ಕಷ್ಟೇ  ಎಲ್ಲಾ ನಿಯಮಗಳು ಪುರುಷಪರ  ಪುರುಷರೇ ಮಾಡಿದ ಕಟ್ಟುಪಾಡುಗಳೆಂದು ಆಕೆ ಯಾವಾಗಲೂ ಹೀಗಳೆಯುತ್ತಿದ್ದಳು   ಆಕೆ ಮನೆಗೆ ಬಂದರೆ ಅಜ್ಜ ಅಜ್ಜಿಯರ  ದುಸುಮುಸು ಜಾಸ್ತಿ ಆಗುತ್ತಿತ್ತು  ಸಂಧ್ಯಾ ಳನ್ನು ಏನೂ ಹೇಳಲಾಗದೆ  ಹಿರಿ ಸೊಸೆಗೆ ಬೈಗುಳ ಸುರಿಮಳೆ ಸುರಿಸುತ್ತಾ ಇದ್ದರು
             ಆ ದಿನ  ಸಂಧ್ಯಾ ಎದ್ದವಳೇ ಅಡಿಗೆ ಕೋಣೆಗೆ  ಹೋಗಿ ಏನೋ ಮುಟ್ಟಿದಳೆಂದು ಅಜ್ಜಿಯ ಬೊಬ್ಬೆಗೆ ಹೆದರಿ ಮೂಲೆ ಸೇರಿದ ರಮಾ ಳನ್ನು ಸಂಧ್ಯಾ ಳೆ ಸಮಾಧಾನಿಸಿ ಒಳಗೆ ಕರೆದೊಯ್ದು ದ್ದು ನೋಡಿ ಅಜ್ಜ ಅಜ್ಜಿ ಸಿಟ್ಟಿನಿಂದ  ಕೋಲು ಹಿಡಿದು ಒಂದು ಬಿಗಿದೆ ಬಿಟ್ಟರು ಯಾರ ಮೇಲಿನ ಕೋಪಯಾರ ಮೇಲೋ ಸಂಧ್ಯಾಳು ಕೋಪದಿಂದ 4 ಮಾತಾಡಿ ಇಂದಿನ ಕುಟುಂಬ ದೌರ್ಜನ್ಯದ ಕಾನೂನಿನ ಬಗ್ಗೆ ಮನೆ ಮಂದಿಗೆ ತಿಳಿ ಹೇಳುತ್ತಾಳೆ   ಈಗ ಮಹಿಳೆ ಅಬಲೆ ಯಲ್ಲ ಆಕೆಗೆ ಕಾನೂನಿನ ರಕ್ಷಣೆ ಇದೆ ನೀವು ಇದೆ ರೀತಿ ಇದ್ದರೆ ನಾನು ಪೊಲೀಸ್ಗೆ ರಿಪೋರ್ಟ್ ಮಾಡುತ್ತೇನೆ ಎಂದು ಹೆದರಿಸುತ್ತಾಳೆ ಇದರಿಂದ ಹೆದರಿದ ಮನೆ ಮಂದಿ  ಮುಂದಕ್ಕೆ ಹೊಂದಾಣಿಕೆಯಿಂದ ಬಾಳಲು ನಿರ್ಧರಿಸುತ್ತಾರೆ  ರಮಾ ಳಿಗೆ ಚಿಕ್ಕಮ್ಮನ ಧೈರ್ಯ ಕಂಡು ಹೆಮ್ಮೆ ಎನಿಸುತ್ತದೆ ತಾನು ದೊಡ್ಡವಳಾದಾಗ ಯಾರಿಗೂ ಹೆದರದೆ ಒಳ್ಳೆಯ ರೀತಿಯಲ್ಲಿ ಜೀವಿಸುವ ಕನಸು ಕಾಣುತ್ತಾಳೆ
ಕೌಟುಂಬಿಕ ನಿಯಮಗಳು ಮನೆಯ ಸ್ವಾಸ್ಥ್ಯ ಕ್ಕೆ ಭಂಗ ತರುವಂತಿರಬಾರದು ಮನೆಯ ಎಲ್ಲಾ ಸದಸ್ಯರು ಪ್ರೀತಿಯಿಂದ ಹೊಂದಾಣಿಕೆಯಿಂದ ಜೀವಿಸಿದರೆ ಆ ಮನೆ ಸ್ವರ್ಗವಾದೀತು

ಪಂಕಜಾ .ಕೆ. ಮುಡಿಪು
 ಮದುವೆ ಸಂಭ್ರಮ

 ಮದುವೆಯಸಂಭ್ರಮನೋಡವ್ವ 
ಮನೆತುಂಬಾ ನೆಂಟರು ತುಂಬಿದರಪ್ಪ
ಅಡುಗೆಗೆ ಜನ ಬಂದರಪ್ಪ
ಬೇಗ ಬೇಗ ಚಪ್ಪರ ಕಟ್ಟ ಬೇಕಪ್ಪ
ಎಲ್ಲೆಲ್ಲೂ ಸಂಭ್ರಮ  ನೋಡವ್ವ

ದಿಬ್ಬಣ ಬಂತು ನೋಡವ್ವ
ದಿಬ್ಬಣ ಎದುರುಗೊಳ್ಳಲು ಬಾರವ್ವ
ಬ್ಯಾಂಡು ವಾಲಗ ಇರಲವ್ವ
ಅರಸಿನ ಕುಂಕುಮನೀರು ತಾರವ್ವ

ಆರತಿ ಎತ್ತಿ  ಕರೆತರಬೇಕವ್ವ
ರೂಪದಲ್ಲಿ  ಆತ ಚಂದ್ರನವ್ವ
ಕೇರಿಗೆಲ್ಲಾ ಒಬ್ಬನೇ ಗಂಡವ್ವ

ನಮ್ಮ ಮಗಳು  ಭೂಲೋಕದ ರಂಬೆವ್ವ
ಅಚ್ಚಕೆಂಪು ಸೀರೆ ಉಟ್ಟಳವ್ವ
ಕೈತುಂಬಾ ಬಳೆ ತೊಟ್ಟಳವ್ವ
ಸಿರಿಗೌರಿ ಯಂತವಳವ್ವ 

 ಏಳು ಮಲ್ಲಿಗೆ  ತೂಕದ ರಾಜಕುಮಾರಿಯವ್ವ
ಬೇಗನೆ ಹಸೆಗೆ ಕರೆತರಬೇಕವ್ವ
ಮುಹೂರ್ತ ಹತ್ತಿರ ಬಂತವ್ವ

ಸರಬರ ಸೀರೆ ಶಬ್ದವ ಕೇಳವ್ವ
ಪುರೋಹಿತರ ಮಂತ್ರದ ಅಬ್ಬರ ನೋಡವ್ವ
ಕುತ್ತಿಗೆಗೆ ತಾಳಿ ಕಟ್ಟಿಯಾನವ್ವ
ನಾಚಿಗೆ ಮುಖಕೆ ಬಂತು ನೋಡವ್ವ

ಚಂದಕೆ  ಮದುಮಕ್ಕಳಹರಸ
ಬೇಕವ್ವ
ಲಾಡು ಚಿರೋಟಿ ಊಟ ಅಯ್ತೆನವ್ವ
ಎಲೆ ಅಡಿಕೆ ವೀಳ್ಯ ಹಾಕೊಳ್ಳವ್ವ
ನೆಂಟರಿಗೆ ಕಾಫಿ ಕೊಡಬೇಕವ್ವ
ಚಂದಕೆ ಮಗಳನ್ನು ಕಳಿಸೇನವ್ವ

ಮುದ್ದಾಗಿ ಸಾಕಿದ ಮಗಳವ್ವ
ತಪ್ಪನು ಹೊಟ್ಟೆಲಿ ಹಾಕಿರವ್ವ
ಪ್ರೀತಿ ಲಿ ನೋಡಿ ಕೊಳ್ಳಿರವ್ವ
ನಿಮ್ಮ ಮನೆ ಬೆಳಗುವ ಲಕ್ಷ್ಮಿಯವ್ವ

ಪಂಕಜಾ .ಕೆ ಮುಡಿಪು
[18/10/2018, 10:55 PM] pankajarambhat: ಹರಸು ಬಾ ತಾಯೇ

ಶಕ್ತಿ ಸ್ವರೂಪಿಣಿ ದೇವಿ
ನವರಾತ್ರಿಯ ನವದಿನಗಳಲಿ
ಮನೆ ಮನಗಳನ್ನು ಬೆಳಗಿ
ಹರಸು ಬಾ  ತಾಯೇ

ಧನ ಧಾನ್ಯ ಸಿರಿ ಸಂಪತ್ತುಗಳು
ತುಂಬಿ ಪಾವನವಾಗಲಿ ಮನೆ
ಶಿಷ್ಟರನು ರಕ್ಷಿಸುತ ದುಷ್ಟರನು ಶಿಕ್ಷಿಸಿ
ಹರಸು  ಬಾ ತಾಯೇ

ಪರ್ವತರಾಜನ ಕುವರಿ ಶೈಲಪುತ್ರಿಯೇ
ಪರಮೇಶ್ವರನಸತಿಪಾರ್ವತಿಯೇ 
ನವರಾತ್ರಿಯ ಮೊದಲ ದಿನ
ಪೂಜಿಸುವೆ ಭಕ್ತಿಯಿಂದ
ಹರಸು ಬಾ ತಾಯೇ

ಹಿಮವಂತನ ಕುವರಿ ಬ್ರಹ್ಮಚಾರಿಣಿ ದೇವಿ
ಚಿತ್ತಚಾಂಚಲ್ಯವ ನಿವಾರಿಸಿ
ಸದಾಚಾರಗಳ ತುಂಬಿ
ಹರಸು ಬಾ ತಾಯೇ

 ಸಿಂಹ ವಾಹಿನಿ ಚಂದ್ರಗಂಟಿ
ಪಾಪನಾಸಿನಿಪರಮಪಾವನಿದೇವಿ
ಕೊಡುನಮಗೆ ಸುಖಶಾಂತಿ ಸಮೃದ್ಧಿಯ 
ನವರಾತ್ರಿಯ ಶುಭದಿನದಂದು ಹರಸು ಬಾ ತಾಯೇ

ಅಷ್ಟಭುಜಗಳ ದೇವಿ ಕೂಷ್ಮಾಂಡೆ 
ಮಂದಸ್ಮಿತ ವದನೆ ದುರ್ಗಾಂಭೆ
ಮನದ ಕ್ಲೇಶ ಕಳೆದು ಜ್ಞಾನದ ಬೆಳಕು ನೀಡಿ
ಹರಸು ಬಾ ತಾಯೇ

ಸಿಂಹ ವಾಹಿನಿ ಕಮಲಾಸನಿ ದೇವಿ
ಸ್ಕಂದದರನ ಮಾತೆ ಮಯೂರವಾಹಿನಿ
ನವರಾತ್ರಿಯ ಶುಭದಿನದಿ ಬಂದು
ಹರಸು ಬಾ ತಾಯೇ

ಮಹಿಷಾಸುರ ಮರ್ದಿನಿ ಕಾತ್ಯಾಯಿನಿ
ಧರ್ಮ ಅರ್ಥ ಕಾಮಮೋಕ್ಷಗಳ ಕೊಟ್ಟು
ಹರಸು ಬಾ ತಾಯೇ

ಶುಭಕರಿ ಕಾಲರಾತ್ರಿ
ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ
ದುರಿತಗಳ ನಿವಾರಿಸಿ
ಹರಸು ಬಾ ತಾಯೇ

ವೃಷಭವಾಹಿನಿ ದೇವಿ
ಶುಭ್ರವಸನಧಾರಿ ಗೌರಿ
ಮನದ ಕಲ್ಮಶ ತೊಳೆದು ಕಳೆದು
ಹರಸು ಬಾ ತಾಯೇ

ವೀಣಾಪಾಣಿಯಾಗಿ ಮೆರೆದೆ
ದೇವಿ ಶಾರದಾಂಬೆಯೆ
ವಿದ್ಯೆಗಳ ರಾಣಿ ಸರಸ್ವತಿಯೇ
ವಿದ್ಯೆ ಬುದ್ದಿಗಳ ಕರುಣಿಸಿ
ಹರಸು ಬಾ ತಾಯೇ

ಪಂಕಜಾ ಕೆ. ಮುಡಿಪು

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.