Skip to main content

2 ಗಜಲ್ ಗಳು



ಗಜಲ್  (ಕಡಲು ವಿಷಯದ ಬಗ್ಗೆ)

ಅಂತರಾಳದಲಿ ಭಾವನೆಗಳು ಬೋರ್ಗರೆಯುತಿದೆ ಗೆಳತಿ
ಮುಖವು ಕಡಲಾಳದ ನೀರಿನ ತೆರದಿ ಶಾಂತವಾಗಿದೆ ಗೆಳತಿ.

*ನೆನಪುಗಳ ಭಾರದಿಂದ ಮನ ಜರ್ಝರಿತವಾಗಿದೆ*
ಚಿಂತೆಗಳು ಮನಸಿನಾಳವ ಕೆದಕಿ ರಾಡಿಗೊಳಿಸಿದೆ ಗೆಳತಿ

ಸಾಗರದ  ಅಲೆಯಂತೆ ಜೀವನದ ತೊರೆಗಳು ಏರಿಳಿಯುತಿವೆ
ಒಡಲಲ್ಲಿ ತುಂಬಿರುವ ನೋವನು ಹಂಚಬೇಕೆನಿಸಿದೆ ಗೆಳತಿ

ಕ್ರೂರ ಮೃಗಗಳಂತಿರುವ ಮನುಜರ  ಕಂಡು ನೆತ್ತರು ಕುದಿಯುತಿದೆ 
ಹೆಣ್ಣಿನ ಮೇಲೆ ಏಕಿಷ್ಟು ದೌರ್ಜನ್ಯವಾಗುತಿದೆ ಗೆಳತಿ

ಹೆಣ್ಣಿಲ್ಲದ ಜೀವನ ಪರಿಪೂರ್ಣವಾಗಲಾರದು ಅಲ್ಲವೇ 
ಕಣ್ಣಿದ್ದೂ ಕುರುಡರಾಗಿರುವ  ಕಾಮಾಂಧರಿಗೆ ಶಿಕ್ಷೆಯಾಗಬೇಕಾಗಿದೆ ಗೆಳತಿ

*ನಿತ್ಯವೂ ಕಾಮಾಂಧರ ಆರ್ಭಟವ ನೋಡಿ ಮನಸ್ಸು ಕಲ್ಲಾಗಿದೆ*
ಸಮಾಜಘಾತುಕರ ಸಂತತಿಯನ್ನೇ ಹೊಸಕಿ ಹಾಕಬೇಕಿದೆ ಗೆಳತಿ

ಗಂಡು ಮಕ್ಕಳಿಗೆ ಹೆಣ್ಣುಮಕ್ಕಳನ್ನು ಗೌರವಿಸಲು ಕಲಿಸಬೇಕು ಪಂಕಜಾ
*ಒಡಹುಟ್ಟಿದವರಂತೆ ಹೆಣ್ಣನ್ನು ರಕ್ಷಿಸಬೇಕಾಗಿದೆ ಗೆಳತಿ*
ಪಂಕಜಾ.ಕೆ.


: ಗಜಲ್

ಹಗಲಿರುಳು ದುಡಿಯುತ್ತಿತ್ತು ಆ ಜೀವ 
ಮಮತೆಯ ಕಡಲನ್ನು ಹರಿಸಿತ್ತು  ಆ ಜೀವ 

ಗರ್ಭದಲ್ಲಿ ನವಮಾಸ ಹೊತ್ತು ಹೆತ್ತಳು ಅವಳು
ಹೊಟ್ಟೆ ಬಟ್ಟೆ ಕಟ್ಟಿ ವಿದ್ಯೆ ಬುದ್ದಿ ಕಲಿಸಿತ್ತು ಆ ಜೀವ

ಕಂದನಿಗಾಗಿ ನೋವಲ್ಲೂ ನಗು ಬೀರುವಳು ಅವಳು
ಆತನ ಏಳಿಗೆಗಾಗಿಯೇ ಜೀವ ಸವೆಸಿತ್ತು ಆ ಜೀವ

ವೃದ್ದಾಪ್ಯದಲ್ಲಿ ಅಸರೆಯಾಗಬಹುದೆನ್ನುವ ಆಸೆ 
ನಿತ್ಯವೂ ಮಗನ ದಾರಿ ಕಾಯುತ್ತಿತ್ತು ಆ ಜೀವ

ಹೆತ್ತಮ್ಮನನ್ನು ವೃದ್ಧಾಶ್ರಮಕೆ ಅಟ್ಟಬಹುದೇ ಹೇಳು ಪಂಕಜಾ
ಹಿಂದಿನದನೆಲ್ಲಾ ನೆನೆಸುತ್ತಾ ಕಣ್ಣೀರು ಮಿಡಿಯುತ್ತಿತ್ತು ಆ ಜೀವ

ಪಂಕಜಾ.ಕೆ

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...