Skip to main content

5

[14/12/2019, 7:47 PM] pankajarambhat: ಕಾವ್ಯಾಂತರಂಗ  ಸ್ಪರ್ಧೆಗಾಗಿ
ವಿಷಯ ....ಬರಗಾಲದ ಲ್ಲಿ ರೈತನ ಗೋಳು 

ಅನ್ನದಾತನ ಬವಣೆ

ಭೂಮಿ ಬಿರಿದಿದೆ 
ಒಡಲು  ನೊಂದಿದೆ
ಜೀವನ ಬಾರವೆನಿಸಿದೆ

ಕಣ್ಣು ತುಂಬಿದೆ
ಮನಸು ಅಳುತಿದೆ
ದೇವ ಕರುಣೆಯು ಬಾರದೆ

ಬಾನ ಬಯಲಲಿ
ಮುಗಿಲು ತುಂಬಿದೆ
ಮಳೆಯ ಸುರಿಸದೆ ಸರಿದಿದೆ

 ಬೆಳೆದ ಬೆಳೆಗಳು
ನೀರ ಕೊರತೆಗೆ
ಬಾಡಿ ಉದುರಿ ಹೋಗಿದೆ

ಪಟ್ಟ ಕಷ್ಟಕೆ 
ಫಲವು ಇಲ್ಲದೆ 
ಬಾಳ ದೋಣಿಯು ಮುಳುಗಿದೆ

ಹರಿದ ಬಟ್ಟೆಯು
ಹಸಿದ ಹೊಟ್ಟೆಯು
ಬರಗಾಲದ ಬವಣೆಯ ತಿಳಿಸಿದೆ

ಕಾಲ ಕಾಲಕೆ 
ಮಳೆಯು  ಸುರಿಯುತ
ಬದುಕ ಬವಣೆಯು ನೀಗಲಿ

ಅನ್ನ ಬೆಳೆಯುವ
ರೈತನರಮನೆಯಲಿ
ಹೊನ್ನ ಕಣಜವು ತುಂಬಲಿ

ಪಂಕಜಾ.ಕೆ ಮುಡಿಪು
[18/12/2019, 11:14 AM] pankajarambhat: ತಿಂಗಳ ಬೆಳಕು

ತಿಂಗಳ ಬೆಳಕಲಿ
ಅಂಗಳ ಬದಿಯಲಿ 
ಹಾಲಿನ ಹೊಳೆಯೇ ಹರಿಯುತಿದೆ

ತಂಪಿನ  ಕಿರಣವು
ಇಂಪಿನ ಗಾನವು
ಮೈಮನವನ್ನು ಮರೆಸುತಿದೆ

ಚಂದದ ಹೂಗಳು
ಅಂದದಿ ಅರಳುತ
ಕಂಪನು ಎಲ್ಲೆಡೆ ಹರಡುತಿದೆ

ಕೊಳದಲಿ ಅರಳಿದ
ತಳದಲಿ ನಲಿದಿಹ
ನೈದಿಲೆ ನಗುವನು ಬೀರುತಿದೆ

ಚಂದಿರ ಬರಲು
ಕಂದರ ವಿರಲು
ಮನದಲಿ ಸಂತಶ ತುಂಬುತಿದೆ

ಬಾನಲಿ ಓಡುತ
ಎಡೆಯಲಿ ಮಿನುಗುತ
ರಸಿಕರ ಮನವನು ಸೆಳೆಯುತಿದೆ
ಪಂಕಜಾ.ಕೆ
[22/12/2019, 9:08 PM] pankajarambhat: ವಚನ

ಹಸಿರು ಕಾಡನು ಕಡಿದೆಸೆದು
ಕಾಂಕ್ರೀಟ್ ಕಾಡು ಕಟ್ಟುವರಲ್ಲ
ಭೂಮಿತಾಯಿಯ ಒಡಲು ಬಗೆದು
ಸಿಹಿನೀರ ಒರತೆಯನು ಬತ್ತಿಸುವರಲ್ಲ
ಭೂತಾಯಿಯ ನಿಟ್ಟುಸಿರು 
ಬಡಬಾಗ್ನಿಯಾಗಿ ಕಾಡಿರಲು
ನೀರು  ನೀರು ಎನುತ
ಬಾಯ್ಬಿಡುತಿರುವರಲ್ಲ
ಪಂಕಜಾರಾಮ

ಪಂಕಜಾ .ಕೆ
[22/12/2019, 9:08 PM] pankajarambhat: ವಚನ
ತಾಯ  ಹಾಲಿಗೆ
ಸಮನಾದ ಹಾಲು
ಕೊಡುವ ಗೋವಿನ
ಹಾಲು ಕುಡಿದು
ಬರಡಾಯಿತೆಂದು
ಕಸಾಯಿಖಾನೆಗೆ ಅಟ್ಟುವರಯ್ಯ
ಕೃತಜ್ಞತೆಯಿಲ್ಲದ
ಮನುಜರಿಗೆ
ಏನೆನಲಿ ಪಂಕಜಾರಾಮ

ಪಂಕಜಾ.ಕೆ
[22/12/2019, 9:08 PM] pankajarambhat: ವಚನ
ಹೆಣ್ಣು ಭ್ರೂಣಹತ್ಯೆಯ ಮಾಡಿ
ಗಂಡುಮಗುವನ್ನು ಪಡೆದು
ಮಗನ ಮದುವೆಗೆ ಈಗ
ಹೆಣ್ಣು ಹುಡುಕುವರಯ್ಯ
ಜಗದ ಜನರ ನೀತಿಗೆ
ಎಷ್ಟು ಬುದ್ದಿಯ ಹೇಳಿದರೇನೂ ಪಂಕಜಾರಾಮ

ಪಂಕಜಾ.ಕೆ
[10/4/2020, 5:35 AM] pankajarambhat: ನವಪರ್ವ ಫೌಂಡೇಷನ್ ಬಳಗದಲ್ಲಿ ಅತ್ಯುತ್ತಮವೆಂದು ಆಯ್ಕೆಯಾದ ನನ್ನ ಕವನ

ನಮ್ಮ ಶಾಲೆ

 (ಮಕ್ಕಳ ಕವನ)

ನಮ್ಮಯ ಶಾಲೆಯ
ಅಂದದ ಪರಿಸರ
ಎಲ್ಲರ ಮನವನು ಸೆಳೆಯುವುದು

ಸುತ್ತಲೂ ಬೆಳೆಸಿದ
ಕೈತೋಟದ ಚೆಲುವು
ಮಕ್ಕಳ ಶ್ರಮವನು ತಿಳಿಸುವುದು

ಪಾಠದ ಮೊದಲಿಗೆ 
ಶಿಸ್ತಲಿ ನಿಲುತಲಿ
ಗುರುವಂದನೆಯನು ಮಾಡುವೆವು

ಶಿಕ್ಷಕರು ಕಲಿಸುವ
ಪಾಠಗಳೆಲ್ಲವ ಕಲಿಯುತ
ದಿನ ದಿನ ಬೆಳೆಯುವೆವು

ಶಾಲೆಯ ಸುತ್ತಲೂ 
ಇರುತಿಹ ಬಯಲಲಿ
ಬಗೆ ಬಗೆ ಆಟವ ಆಡುವೆವು

ತರ ತರ ಸ್ಪರ್ಧೆಯು
ವಿಧ ವಿಧ ಕೂಟವು
ಮಕ್ಕಳ ಮನವನು ಸೆಳೆಯುವುದು

ದಿನವೂ ನಗಿಸುತ 
ಪಾಠವ ಕಲಿಸುತ
ಬಿಸಿ ಬಿಸಿ ಊಟವ  ಬಡಿಸುವರು

ಓದಲು ಬರೆಯಲು
ಕಲಿಸುತ ನಮ್ಮನು
ಪ್ರಗತಿಯ ಪಥದಲಿ ನಡೆಸುವರು

ಶಿಕ್ಷಕರೆಲ್ಲರು
ಚಂದದಿ ಕಲಿಸುತ
ಉತ್ತಮ ಶಿಕ್ಷಣ ನೀಡುವರು

ಪರಿಸರ ಅರಿವನು
ಮೂಡಿಸಿ ಮನದಲಿ
ಪಠ್ಯೇತರ ಚಟುವಟಿಕೆಗಳ ನಡೆಸುವರು

ನಮ್ಮಯ ಶಾಲೆಯಲಿ
ಕಲಿಯುತ ನಾವು
ಭಾರತ ಕೀರ್ತಿಯ ಹಬ್ಬಿಸುವೆವು

ಪಂಕಜಾ.ಕೆ.
[4/10/2020, 8:54 PM] pankajarambhat: ಕಾವ್ಯದೀಪ ಸಾಹಿತ್ಯ ಕಲಾವೇದಿಕೆ ಕುಂಬಳೆ ಕಾಸರಗೋಡು ಕವನ ವಾಚನ ಗೋಷ್ಟಿಗಾಗಿ

ಜೀವನದಿ

ಮನದ ನೆಮ್ಮದಿ ಕಳೆದು ಹೋಗಿದೆ
ಎಲ್ಲಿ ಹುಡುಕಲಿ ನಿನ್ನನು
ಸುತ್ತು ಮುತ್ತಲು ಎತ್ತ ನೋಡಲು
ತುಂಬಿ ಕೊಂಡಿದೆ ವಂಚನೆ

ಕಪಟ ಮನುಜರ ಮೊಸದಾಟಕೆ
ಜೀವ ಸಂಕುಲ ನರಳಿದೆ
ಮನುಜ ಮನುಜರಲಿ ದ್ವೇಷ ತುಂಬಿದೆ
ಯಾರ ನಂಬಲಿ ದೇವನೆ

ನಂಬಿಕೆಯ ನೆಲೆಗಟ್ಟು ಮುರಿದಿದೆ
 ಈಶ ದಾರಿಯ ತೋರೆಯಾ
 ಜಗದ ಎಲ್ಲೆಡೆ ಶಾಂತಿ ನೆಲೆಸಲಿ
 ಕರುಣೆಯಿಂದಲಿ ನೋಡೆಯಾ
 
ಪ್ರೀತಿ ಎನ್ನುವ ಜೀವ ಜಲವಿರೆ
ಬಾಳಲಿರುವುದು ನೆಮ್ಮದಿ
ಆಶೆಗಳನು ಕಡಿಮೆ ಮಾಡುತ
ಮನದಿ ತುಂಬಲಿ ಸಂತಸ

ಪಂಕಜಾ.ಕೆ. ಮುಡಿಪು

ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ 
ಶ್ರೀ ಗಣೇಶ ಕೃಪಾ ಮುಡಿಪು
ಅಂಚೆ..ಕುರ್ನಾಡು..ದ.ಕ.574153

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.