Skip to main content
[9/5/2018, 9:48 AM] pankajarambhat: ಪ್ರಕೃತಿ ಚೆಲುವು

ರಾತ್ರಿಯು ಸುರಿದ ಮಳೆಯಲಿ ಮಿಂದು
ಪ್ರಕೃತಿಯುನಲಿದಳು ಮುದದಲಿ ನಿಂದು

ಹಸುರಿನ ಸೀರೆಯ ಸೆರಗನು
ಹೊದ್ದು 
ಹರಿಸುತ ನಿಂದಳು ಚೆಲುವಿನ ಮುದ್ದು

ನವಿಲಿನ ನಾಟ್ಯದ ತೆರದಿ
 ಕುಣಿದಳು  ಪ್ರಕೃತಿ ಮುದದಿ

ಹರಡಿತು ಎಲ್ಲೆಡೆ ಮಣ್ಣಿನ ಗಂಧ
ಹಬ್ಬಿತು ಬಗೆಬಗೆ ಹೂಗಳಗಂಧ

ಹಸಿರಿನ ಸೆರಗಲಿ ಹೂವನು ತುಂಬಿ
ಕರೆದಳು ಒಲವಲಿ ಮೈದುಂಬಿ

ಮಧುವನುಹೀರುವದುಂಬಿಗಳಾಟ
ತರುತಿದೆ  ಮನಕೆ ಚೆಲ್ಲಾಟ

ಎಲ್ಲೆಡೆ ತುಂಬಿತು ತಂಪು
ಮನವನು  ತುಂಬಿತು ಕಂಪು

ಕೆರೆಕೊಳಗಳಲಿ ಉಕ್ಕಿತು ನೀರು
ಮನಸಿಗೆ ತಂದಿತು ಹರ್ಷದ ತೇರು

ಹಾರುವ ಬಾನಾಡಿಗಳಂದ
ಹಾಡುವಹಕ್ಕಿಗಳಿಂದ

ಕೊಳದಲಿ  ಅರಳಿದ ತಾವರೆಯಿಂದ
ಇಳೆಯಲಿ ತುಂಬಿತು ಆನಂದ

ಪಂಕಜಾ ಕೆ ಮುಡಿಪು ಕುರ್ನಾಡು
[31/5/2018, 9:33 AM] pankajarambhat: ಮಳೆಗಾಲ

ಮಳೆಯು ಸುರಿದು
ಇಳೆಯ ತಬ್ಬಿ ಹರುಷ
ತಂದಿತು ಮನಸಿಗೆ

ನೀರ ಹರಿವು ತುಂಬಿ 
ತುಳುಕಿ   ಆಯಿತಲ್ಲಿ ಹೊಳೆ
ಕೊಚ್ಚಿಹೋಯಿತು ಕೊಳೆ

ಬಿಸಿಲ ಬೇಗೆಗೆ ಹೊತ್ತಿ
ಉರಿದ ಧರೆಗೆ ತಂದಿತು
ತಂಪು ಕಂಪಿನ ಉಸಿರನು

ಕೆರೆಕೊಳ ಕಟ್ಟೆಗಳು 
ಉಕ್ಕಿ ಹರಿದವು ಭರದಲ್ಲಿ
ತುಂಬಿ ನಿಂತಿತು ನೀರು ಎಲ್ಲೆಡೆ 

ಚಂಡಮಾರುತ  ಬಂದು 
ಆಯಿತು ಜನಜೀವನ ತತ್ತರ
ಮನೆ ಮಠ ಮುಳುಗಿ ಹೋಗಿ

ಬಾಳು ಆಯಿತು ದುರ್ಭರ
ಜೀವ ಕೋಟಿಗಳೆಲ್ಲ ನರಳಿ
ನಾಶವಾಯಿತು ಜೀವನ

ಹಸಿರು ಕಾಡಿನ ಕಡಿದು ಮನುಜ  
ಕಾಂಕ್ರೀಟ್ ಕಾಡಿನ  ಕಟ್ಟಿದ
ನೀರ ಹರಿವಿಗೆ ಜಾಗವಿಲ್ಲದೆ
 ಕುಸಿದು ಹೋಯಿತು ಮನೆ ಮಠ

ಹಸಿರು ಕಾಡಿನ ಬದಲು
ಕಾಂಕ್ರೀಟ್ ಕಾಡು ಬೆಳೆಸಿದ
ಫಲವಿದು  ಪ್ರಕೃತಿ  ಉಳಿವು ನಮ್ಮ 
ಉಳಿವು ತಿಳಿಯುವುದೆಂದಿಗೆ ಮನುಜಗೆ

ಪಂಕಜಾ. ಕೆ. ಮುಡಿಪು ಕುರ್ನಾಡು
[9/6/2018, 9:00 AM] pankajarambhat: ಚಿತ್ತ ಚೋರ

ನಿನ್ನ  ಮುರಳಿಯ ಕರೆ
ನನ್ನ ಮನವನು ಸೆಳೆದು
ನಿನ್ನೊಲವ ಭಾವವನು
ತಿಳಿಸಿತಂದು

ಒಲಿದು ಬಂದೆನು ನಿನ್ನ
ಪ್ರೇಮಗಾನ ದ ಕರೆಗೆ
ಮನವ ಕದ್ದು ಒಲವ
ಪಡೆದೆ ನಾನಿಂದು

ಮನವ ಕದ್ದಿಹ ಚೋರ
 ನೀ ಜತೆಯಲಿರಲು
ಒಂದೊಂದು ಕ್ಷಣವೂ
ಮದುರಾತಿ ಮಧುರ

ನೀನಿಲ್ಲದಾ ಕ್ಷಣವು
ನಿಮಿಷಗಳು ಯುಗಗಳಾಗಿ
ತುಂಬುತ್ತಿದೆ ಶೂನ್ಯಭಾವ
ಎಂದು ಬರುವೆಯೋ ನಲ್ಲ

ನಿನ್ನ ಒಲುಮೆಯ ಪಡೆದ
ನಾ ಧನ್ಯಳೆಂದು ಬೀಗಿದ್ದೆನಾಗ
 ನೀ ನಡೆದೆ ನನ್ನೊಲವ
 ಕರೆಗೆ  ಕಿವುಡನಂದದೀಗ

ರಾಧೆಯೊಲುಮೆಗೆ ನೀ
 ಮೌನವಾಗಿರುವಿಯೇಕೆ
ಮರೆತು ಹೋಯಿತೇ
ಆ ಮಧುರ ಕ್ಷಣವೂ

ಬೃಂದಾವನದ ಯಮುನಾ
ತೀರದಲ್ಲಿನಮ್ಮಿಬ್ಬರೊಡನಾಟಕ್ಕೆ
 ಯಾರ ಕೆಟ್ಟ ಕಣ್ಣಿನ  ದೃಷ್ಟಿ
ತಗಲಿತೋ ಅಗಲಿಕೆಯ
ಈ ಕ್ಷಣವ ಸಹಿಸಲಾರೆ

ಕಾಯುತ್ತಿದೆ  ತನು ಮನವು
ನಿನ್ನ  ಒಲವಿನೊಡನಾಟಕ್ಕೆ
ಎಂದು ಬರುವೆಯೋ ಕೃಷ್ಣ
ಬೇಗ ಬಂದೆನ್ನ  ತಣಿಸು

ಪಂಕಜಾ .ಕೆ. ಮುಡಿಪು ಕುರ್ನಾಡು
[6/7/2018, 7:12 AM] pankajarambhat: ಪಶ್ಸಾತ್ತಾಪ

 ಅದೊಂದು ಸುಂದರ ಉದ್ಯಾನವನ ಸಂಜೆಯಾಯಿತೆಂದರೆ ಅಲ್ಲಿ ಮಕ್ಕಳ ಕಲರವ ತುಂಬಿರುತ್ತದೆ ತಾಯಂದಿರು ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಮಕ್ಕಳ ಆಟ ವನ್ನು ನೋಡಿ ಅನಂದಿಸುತ್ತಾ ಹರಟೆಯಲ್ಲಿ ತೊಡಗಿರುವ ದೃಶ್ಯ ಸಾಮಾನ್ಯ
ಆಕೆ ನಿತ್ಯವೂ ಆ ಪಾರ್ಕಿನಲ್ಲಿ ಕುಳಿತುಕೊಂಡು ಮಕ್ಕಳ ಆಟಪಾಟ  ನೋಡಿ ಅನಂದಿಸುತ್ತಿದ್ದಳು  ಮಕ್ಕಳೆಲ್ಲ ತಮ್ಮ ತಮ್ಮ ತಂದೆ ತಾಯಿಯರ ಕೈ ಹಿಡಿದು ನೂರಾರು ಪ್ರಶ್ನೆಕೇಳುತ್ತ ಹೋಗುವ ದೃಶ್ಯ ಕಂಡಾಗಲೆಲ್ಲಾ ಆಕೆಯ ಮನಸ್ಸುಅಗ್ನಿಕುಂಡವಾಗುತ್ತದೆ ಮನಸ್ಸು ಹಿಂದಿನ ದಿನಗಳ ನೆನಪಿನಿಂದಉದ್ವಿಗ್ನ.ವಾಗುತ್ತದೆ

ಆಗಿನ್ನೂ ಆಕೆಗೆ ಮದುವೆ ಆದ ಹೊಸದು ಗಂಡ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸದಲ್ಲಿದ್ದ 
ಈಕೆಯದು ಕಣ್ಣು ಕುಕ್ಕುವ ಸೌಂದರ್ಯ ನೋಡಿದ ತಕ್ಷಣ ಆಕೆಯನ್ನು ತನ್ನ ಬಾಳಸಂಗಾತಿ  ಯಾಗಿಸಲು  ಆತ ಆಕೆಯ ತಂದೆ ತಾಯಿಯರ ಭೇಟಿ ಮಾಡಿ ಒಪ್ಪಿಸಿದ್ದ ಆಕೆ ಆಗತಾನೆ ಡಿಗ್ರಿ ಮುಗಿಸಿದ್ದು ಕೆಲಸಕ್ಕೆ ಸೇರಿ ಸಂಪಾದಿಸುವ  ಅಭಿಪ್ರಾಯ ಹೊಂದಿದ್ದಳು ತಂದೆತಾಯಿಯರ ಒತ್ತಾಯಕ್ಕೆ ಆತನನ್ನು ನೋಡಿದರೂ ಆತನ ಸರಳವ್ಯಕ್ತಿತ್ವ ಸೌಂದರ್ಯ ಕ್ಕೆ ಆಕೆಯೂ ಮನಸೋತು ತನ್ನ ಒಪ್ಪಿಗೆ  ಕೊಟ್ಟು ಬಿಟ್ಟಳು

ಆ ದಿನ ಆತ ಆಕೆಯನ್ನು ನೋಡಿ ಒಪ್ಪಿಗೆ ಕೊಟ್ಟ ದಿನ ಜಗತ್ತನ್ನೇ ಗೆದ್ದ ಸಂಭ್ರಮ ಇಬ್ಬರ  ಮನದಲ್ಲಿ ತುಂಬಿತ್ತು ಮದುವೆವರೆಗೆ ಅವರಿಬ್ಬರೂ ಮಾತನಾಡದ ವಿಷಯವಿರಲಿಲ್ಲ
ಅವರ ಹನಿಮೂನ್  ಊಟಿ ಕೊಡೈಕನಲ್ ನಲ್ಲಿನ  ಸುಂದರ ಪ್ರಕೃತಿ ಪರಿಸರದಲ್ಲಿ ಸಂತಸದಿಂದ  ಕಳೆಯಿತು ಒಂದು ವಾರ ದಿನಗಳು ಕಳೆದುದೆ  ಅವರಿಗೆ  ಅರಿವಾಗಲಿಲ್ಲ ಹನಿಮೂನ್ ನಿಂದ ಬಂದ ಕೂಡಲೇ ಆಕೆ ಕೆಲಸಕ್ಕೆ ಹೋಗುವ ಬಗ್ಗೆ ತನ್ನ ಗಂಡನಿಗೆ ತಿಳಿಸಿದಾಗ ಆತ ಇದಕ್ಕೆ ಸಮ್ಮತಿಸಲಿಲ್ಲ ತನಗೇ ಸಾಕಷ್ಟು ಸಂಪಾದನೆ ಇರುವಾಗ ತನ್ನ ಅರಗಿಣಿ ಕಷ್ಟ ಪಡುವುದು ಆತನಿಗೆ ಬೇಡವಾಗಿತ್ತು  

 ತಾನು ಒಂದೆರಡು ವರ್ಷವಾದರೂ ಸ್ವತಂತ್ರವಾಗಿ ಸಂಪಾದಿಸುವ ಅಭಿಪ್ರಾಯ ಆಕೆಯದು ಈ ಬಗ್ಗೆ ಗಂಡ ಒಪ್ಪಿಗೆ ಕೊಡದಾಗ ಮನೆಯಲ್ಲಿ ಶೀತಲ ಸಮರ ಪ್ರಾರಂಭವಾಗುತ್ತದೆ  ಇದರಿಂದ ಬೇಸತ್ತು ತನಗೆ ಇಷ್ಟವಿಲ್ಲದಿದ್ದರೂ ಅರೆಮನಸ್ಸಿನಿಂದ ಪ್ರಖ್ಯಾತ್ ಒಪ್ಪಿಗೆ ಕೊಟ್ಟು ಬಿಟ್ಟ ಧರಣಿಗೆ ಖುಷಿಯೋ ಖುಷಿ ಆಕೆ ಆತನನ್ನು  ತಬ್ಬಿ ಮುತ್ತಿನ ಮಳೆ ಸುರಿಸಿ ಬಿಟ್ಟಳು

ಕೆಲಸಕ್ಕೆ ಹೋಗುತ್ರ ವರ್ಷಗಳು ಉರುಳಿದ್ದೆ ಅವರಿಬ್ಬರು ತಿಳಿಯಲಿಲ್ಲ ಜೀವನ ಯಾಂತ್ರಿಕ ವಾಗುತ್ತಿದೆ ಎಂದು ಪ್ರಖ್ಯಾತ್ ಗೆ ಅನಿಸುತ್ತಾ ಇತ್ತು ಆ ಸಮಯದಲ್ಲಿ  ಇದ್ದಕ್ಕಿದ್ದಂತೆ ಧರಣಿಗೆ  ವಾಂತಿ ತಲೆಸುತ್ತು   ಪ್ರಾರಂಭವಾಗಿ ಆಯಾಸದಿಂದ ಮಲಗಿ ಬಿಟ್ಟಳು  ಪ್ರಖ್ಯಾತ್ ಕೂಡಲೇ ಡಾಕ್ಟರ್ ಗೆ ಫೋನ್ ಮಾಡಿ ಬಂದು ಧರಣಿ ಕೈಯನ್ನು ಪ್ರೀತಿಯಿಂದ ನೇವರಿಸುತ್ತಾ ಕುಳಿತು ಬಿಟ್ಟ ಡಾಕ್ಟರ್ ಬಂದು ಟೆಸ್ಟ್ ಮಾಡಿ  ನಸುನಗುತ ಗಾಬರಿಗೆ ಕಾರಣವಿಲ್ಲ  ನೀವಿಬ್ಬರೂ ಅಪ್ಪ ಅಮ್ಮ ಆಗುತ್ತಿದ್ದಿರ ಅಂತ ಹೇಳಿ 
ಪ್ರಖ್ಯಾತ್ ಕೈ ಕುಲುಕಿ ತೆರಳುತ್ತಾರೆ ಪ್ರಖ್ಯಾತ್ ಒಳಬಂದವನೆ ಮಡದಿಯನ್ನು ಎತ್ತಿ ಮುದ್ದಾಡಿಬಿಟ್ಟ ಅವನಿಗೆ ಅತೀವ ಸಂತಸವಾಗಿತ್ತು 


ನಮ್ಮ ಯಾಂತ್ರಿಕ ಜೀವನಕ್ಕೆ ಬೆಳಕಾಗುವ ನಮ್ಮ ಪ್ರೀತಿಯ ಸಂಕೇತ ಮುದ್ದು ಮಗುವೊಂದು ಮನೆ ತುಂಬಾ ಓಡಾಡುವ ಕಲ್ಪನೆಯಲ್ಲಿ ಆತನಿಗೆ ಎಂದಿಲ್ಲದ ಉತ್ಸ್ತಾಹ  ಬಂದು ಧರಣಿಯೊಡನೆ ತಮ್ಮ ಮುದ್ದು ಮಗುವಿನ ಬಗ್ಗೆ ಅದು ಹೇಗಿರಬಹುದು ಎನ್ನುವ ಬಗ್ಗೆ ಮಾತಿಗಿಳಿದ ದರಣಿಗಾದರೊ ಈ ಮಗು ಬೇಡವಾಗಿತ್ತು ತಾನಿನ್ನು ತನ್ನ ಕೆರಿಯರ್ ರೂಪಿಸುತ್ತಿರುವ ಈ ಹಂತದಲ್ಲಿ ಮಗುವಾದರೆ ಕೆಲಸ ಬಿಡಬೇಕು ಅದು ಆಕೆಗೆ ಸುತಾರಾಂ ಇಷ್ಟ ವಿರಲಿಲ್ಲ ಆಫ್ದರಿಂದ ಆಕೆ ಮುಖ ಗಂಟಿಕ್ಕಿ  ನನಗೆ ಈ ಮಗು ಬೇಡ ನಾಳೆಯೇ ಈ ದರಿದ್ರವನ್ನು ತೆಗೆಸುತ್ತೇನೆ ಎಂದು ಹಠ ಹಿಡಿದಳು ನನ್ನ ಸಾಧನೆಗೆ ಇದು ಅಡ್ಡಿ ನಾನಿನ್ನು ಸಾಧಿಸುವುದು ತುಂಬಾ ಇದೆ  ಎಂದು ಹಠ ಮಾಡುವುದು ನೋಡಿ ಪ್ರಖ್ಯಾತ್ ಎಷ್ಟೋ ಸಮಾಧಾನ ಮಾಡುತ್ತಾನೆ ಈ ಬಾರಿ ಇರಲಿ ಚಿನ್ನ ಮುಂದೆಂದೂ ನಿನಗೆ ಈ ಕಷ್ಟ ಕೊಡೋಲ್ಲ ಎಂದು ಪರಿಪರಿಯಿಂದ ಬೇಡಿಕೊಂಡರೂ ಧರಣಿ ಕೇಳಲೆಯಿಲ್ಲ

  ಪ್ರಖ್ಯಾತ್ ಕೋಪದಿಂದ  ಅನುನಯದಿಂದ ಎಷ್ಟೆಷ್ಟೋ ಹೇಳಲು ಪ್ರಯತ್ನಿಸಿದರೂ ಆಕೆ  ಕೇಳಲು  ತಯಾರಿರಲಿಲ್ಲ  ಈ ವಿಷಯವಾಗಿ  ದಂಪತಿಗಳಲ್ಕಿ  ವಾರದಿಂದ ಚರ್ಚೆ ಜಗಳ ಯಾವದಕ್ಕೂ ಜಗ್ಗದ ಧರಣಿ ಆ ದಿನ ಡಾಕ್ಟರ್ ಹತ್ತಿರ ಹೋಗಿ ಇನ್ನು ಕಣ್ಣು ಬಿಡದ ಆ ಮುದ್ದು ಕಂದನನ್ನು ತೆಗೆಸಿ ಏನೂ ಆಗದ ಹಾಗೆ ಮನೆಗೆ ಬಂದು ಬಿಟ್ಟಳು ಎರಡು ದಿನದಿಂದ ಹೆಂಡತಿ ಮಗು ತೆಗೆಸುವ ವಿಷಯ ಮಾತನಾಡದೆ ಇರುವುದು ನೋಡಿ ಆಕೆ ತನ್ನ ದಾರಿಗೆ ಬಂದಳೆಂದು ಖುಷಿಯಲ್ಲಿ  ಪ್ರಖ್ಯಾತ್ ಸಿಳ್ಳೆ ಹಾಕುತ್ತ ಆ ದಿನ ಮನೆಗೆ ಬರುವಾಗ ಹೂವು ಹಣ್ಣು ತಂದು ಆಕೆಯನ್ನು ಪ್ರೀತಿಯಿಂದ ಉಪಚರಿಸುತ್ತಾನೆ ಆಕೆಯೂ ಈ ಬಗ್ಗೆ  ಏನೂ ಹೇಳದೆ ಎಂದಿನಂತೆ ಇದ್ದಳು ಒಂದು ದಿನ ಡಾಕ್ಟರ್   ಪ್ರಖ್ಯಾತ್ ಗೆ ಸಿಕ್ಕಿ ವಿಷಯ ತಿಳಿಸಿ ಯಾಕೆ ಹೀಗೆ ಮಾಡಿದ್ದೀರಿ ಒಂದು ಮಗು ಆದಮೇಲೆ ಬೇಕಿದ್ದರೆ   ಒಪರೇಷನ್ ಮಾಡಬಹುದಿತ್ತು ಎಂದು ಹೇಳಿದಾಗ  ಪ್ರಖ್ಯಾತ್ ಗೆ ಆದ ಅಶ್ವರ್ಯ ಅಷ್ಟಿಷ್ಟಲ್ಲ ಡಾಕ್ಟರ್ ರಿಂದ ವಿಷಯ ತಿಳಿದ  ಪ್ರಖ್ಯಾತ್ ಗೆ  ಹೆಂಡತಿಯ ಬಗ್ಗೆ ಅತೀವ ತಿರಸ್ಕಾರ ಬಂದು ಆಕೆಗೆ ಏನನ್ನು ಹೇಳದೆ ಒಂದು ದಿನ ಆತ  ಆ  ಊರನ್ನೇ ಬಿಟ್ಟು ಹೋಗುತ್ತಾನೆ

ಇತ್ತ ಧರಣಿ ಗಂಡ ಎಲ್ಲಿಗೆ  ಹೋದ ಎಂದು ತಿಳಿಯದೆ  ಅವನ ಆಫೀಸಿನಲ್ಲಿ ವಿಚಾರಿಸಿದಾಗ ಆತ ದೂರದ ಊರಿಗೆ ಟ್ರಾನಸ್ಫರ್ ಮಾಡಿಸಿ ಹೋದದ್ದು ತಿಳಿದು ದುಃಖಿಸುತ್ತಾಳೆ  ಒಂದು ದಿನ   ಗಂಡನ  ಡ್ರೆಸ್ಸ್ ಇಡುವ  ಕಪಾಟಿನಲ್ಲಿ ಒಂದು ಡೈರಿ ಸಿಗುತ್ತದೆ ಅದರಲ್ಲಿ ಗಂಡಬರೆದದ್ದು ಓದಿ ಆಕೆಗೆ ದುಃಖ ತಡೆಯಲಾಗುವುದಿಲ್ಲ ಗಂಡನನ್ನು ಹುಡುಕುವ ಪ್ರಯತ್ನ ಒಂದೂ ಕೈಗೂಡದಿದ್ದಾಗ ಆಕೆ ತನ್ನ ಕಾಯಕದಲ್ಲಿ ಎಲ್ಲಾ ಮರೆಯಲು ಪ್ರಯತ್ನಿಸಿ ತನ್ನ ವೃತ್ತಿಯಲ್ಲಿ ಉನ್ನತ ಹುದ್ದೆಗೆ ಏರಿ. ಕಳೆದ ವಾರವಷ್ಟೇ ನಿವೃತ್ತಿ ಆಗಿರುತ್ತದೆ ಈಗೀಗ ಆಕೆಗೆ ಜೀವನ ತುಂಬಾ ದೀರ್ಘ ಅನಿಸುತ್ತದೆ  ತಾನೆಂತ ತಪ್ಪು ಮಾಡಿದೆ  ಗಂಡ ಮಗುವಿನ ಮುದ್ದಾದ ಸಂಸಾರ ತನ್ನದಾಗುತ್ತಿತ್ತು ಕೈಯಾರೆ ಅದನ್ನು ನಾಶ ಪಡಿಸಿದೆ ಎಂದು ದುಃಖಿಸುತ್ತಾಳೆ  ಒಂದು ದಿನ ಎಂದಿನಂತೆ ಆಕೆ ಪಾರ್ಕ್ ನಲ್ಲಿ ಕುಳಿತಿದ್ದಾಗ ಚಿಕ್ಕಮಗುವೊಂದು ಓಡೋಡಿ  ಬಂದು ಆಕೆಯನ್ನು ತಬ್ಬಿ ಅಜ್ಜಿ ಎನ್ನುತ್ತಾ ಮುದ್ದುಗರೆಯಲು ಪ್ರಾರಂಭಿಸಿದಾಗ  ಒಂದು ಕ್ಷಣ ಗಲಿಬಿಲಿ ಗೊಂಡರೂ ಮರುಕ್ಷಣ ತನ್ನ ತಾಯ್ತನ ಜಾಗ್ರತ ಗೊಂಡಂತಾಗಿ ಆಕೆ  ಮಗುವನ್ನು ಬಿಗಿದಪ್ಪುತ್ತಾಳೆ 

 ಅಷ್ಟರಲ್ಲಿ ಮಗುವನ್ನು ಕೂಗುತ್ತ ಒಬ್ಬ ವೃದ್ಧರು ನಿಧಾನವಾಗಿ ನಡೆಯುತ್ತ ಬರುವುದುಕಂಡು ಆಕೆಗೆ ಈತನನ್ನು ಎಲ್ಲೋ ನೋಡಿದಂತೆ ಆಗುತ್ತದೆ ನೆನಪಿನಾಳವನ್ನು  ಕೆದಕಿದಾಗ  ಈತ ತನ್ನ ಪತಿ ಎಂದು ತಿಳಿದು ಆಕೆ ನಾಚಿಕೆ ಅವಮಾನದಿಂದ ಕಂಪಿಸುತ್ತಾಳೆ  ಆತ ಹತ್ತಿರ ಬಂದು ಒಂದು ಕ್ಷಣ ದಿಗ್ಮೂಡನಾಗಿ ನಿಲ್ಲುತ್ತಾನೆ ಮರುಕ್ಷಣವೇ ಮಗುವನ್ನು ಆಕೆಯ ಕೈಯಿಂದ ಸೆಳೆದು ಹೊರಟು ಹೋಗುತ್ತಾನೆ ಆಕೆ ಆತನ ಬೆನ್ನು ಹಿಡಿದು  ಓಡು ನಡಿಗೆಯಲ್ಲಿ ಆತನನ್ನು ಸಮೀಪಿಸಿ ಪಾಶ್ಸಾತ್ತಾಪ ದಿಂದ ಕಣ್ಣೀರಿಡುತ್ತಾಳೆ ಆತ ಈ ಬಗ್ಗೆ ಗಮನವೇ ಹರಿಸದೆ ಹತ್ತಿರದಲ್ಲೇ ಇದ್ದ ತನ್ನ ಕಾರಿನಲ್ಲಿ ಕುಳಿತು ಹೊರಟು ಹೋಗುತ್ತಾನೆ
ಈಕೆ ಯೌವನ ದಲ್ಲಿ ತಾನು ಮಾಡಿದ ತಪ್ಪು ನಿರ್ದಾರ ಇಂದು ತನ್ನ ಬರಡು ಬಾಳಿಗೆ ಕಾರಣ ಎಂದು ಪಾಶ್ಸಾತ್ತಾಪ ದಿಂದ  ಕಣ್ಣೀರಿಡುತ್ತಾಳೆ

ನೀತಿ...ಮಗು ಆಗುವ ಸಮಯದಲ್ಲಿ  ಕೆರಿಯರ್ ನೆಪದಲ್ಲಿ ಮಗುವಾಗುವುದನ್ನು ಮುಂದಕ್ಕೆ ಹಾಕಿದರೆ ಹರಿಣಿಯಂತೆ  ವೃದ್ಧಾಪ್ಯ ದಲ್ಲಿ ಪಾಶ್ಸಾತ್ತಾಪ ದಲ್ಲಿ  ನರಳಬೇಕಾದೀತು  
ಪಂಕಜಾ. ಕೆ. ಮುಡಿಪು ಕುರ್ನಾಡು
[26/7/2018, 3:56 PM] pankajarambhat: ವೀರ ಯೋಧ 

ಭಾರತಾಂಬೆಯ ಶಿಖರದಲಿ
ಮಳೆ ಬಿಸಿಲಿಗೆ ಮೈಯನೊಡ್ಡಿ
ಮೈಯ ಕೊರೆವ ಚಳಿಗಾಳಿ ಯಲ್ಲೂ
ದೇಶಕಾಯುವ ವೀರಯೋಧನೆ
ಸಲ್ಲಿಸುವೆ ನಿನಗೆ ನಿತ್ಯ ವಂದನೆ

ಭಾರತಾಂಬೆಯ  ಸೆರಗ ಸೆಳೆಯುವ 
ವೈರಿಗಳ ಸದೆ ಬಡಿದು ನೀವು
 ಭಾರತಾಂಬೆಯ ಮಾನವನ್ನು
ಕಾಯುತಿರುವಿರಿ ಶ್ರೀಕೃಷ್ಣನಂತೆ
ಮೆರೆಯುತಿರುವಿರಿ ಕ್ಷಾತ್ರತೇಜವ
ಬೆಚ್ಚಿ ಬೆದರದೆ ಅಂದು ಇಂದು ಎಂದೆಂದಿಗೂ

ಊಟ ತಿಂಡಿಯ ಪರಿವೆ ಇಲ್ಲದೆ
ಮನೆ ಮಠಗಳ ತೊರೆದು 
ಜೀವದ ಹಂಗು ಕಳಚಿ ನೀವು
ದೇಶ ತಾಯಿಯ ಸೇವೆಗೈಯುತ
ಮೆರೆಯುತಿರುವಿರಿ ನಿಮ್ಮ ವೀರ ತೇಜವ

ಹಿಮಗಿರಿಯ ಮಂಜಿನ ತೆರೆಯಲಿ
ಪಾತಕಿಗಳು ನುಸುಳುತಿರಲು
ಜೀವದಹಂಗುತೊರೆದುಕಾಯ್ದೆ  
 ನೀಭಾರತಾಂಬೆಯ ವೀರಪುತ್ರ

ಮೆರೆದಿರಿನಿಮ್ಮಯ ಕ್ಷಾತ್ರತೇಜವ
ಕಾರ್ಗಿಲ್ಲಿನ ಯುದ್ಧದಲಿ
ಭೇದಿಸುತ ವೈರಿಗಳ ಚಕ್ರವ್ಯೂಹವ
ಅಭಿಮನ್ಯುವಿನಂತೆಮೆರೆದುಮರೆಯಾಗಿ
ಆಗಸದತಾರೆಯಂದದಿ ಮಿನುಗುತಿರುವಿರಿ

ವರುಷ ಉರಿಳಿದರೂ ಮರೆಯಲಾರೆವು ಮೈನವಿರೇಳಿಸುವ ನಿಮ್ಮ 
ಆ ಶೂರ ಧೀರ ನಡೆಯ
ಸಲ್ಲಿಸುವೆ  ನಿಮಗೆ ವಂದನೆಯ 
ಭಾರತಾಂಬೆಯ  ಹೆಮ್ಮೆಯ ಪುತ್ರರತ್ನಗಳೆ

ಪಂಕಜಾ. ಕೆ. ಮುಡಿಪು ಕುರ್ನಾಡು
[2/8/2018, 8:29 AM] pankajarambhat: ಮಲ್ಲಿಗೆಯೊಳಗೆ

ಮಲ್ಲಿಗೆಯ
ಮಾಲೆಯನು
ಮುಡಿಗೇರಿಸಿ
ಮನವ ಕೆಣಕುವ
ಮುಸಿನಗೆಯಲಿ
ಮನವರಳಿತು

ಮಾನಿನಿಯೇ
ಮನದಲೇನಿದೆ
ಮೌನದಲಿ ಕೆಣಕಿ
ಮನಸೂರೆಗೊಂಡೆ
ಮುನಿಸೀಕೆ
ಮಲ್ಲಿಗೆಯಿರಲು

ಮುನಿಸು ತೊರೆ
ಮಲ್ಲಿಗೆಯ
ಮಾಲೆಯನು
ಮುಡಿಸುವೆನು
ಮುಡಿಯಲ್ಲಿ

ಮನೆ ಮನವ ತುಂಬಿ
ಮನಸು ತಣಿಸಿ
ಮುದ ಗೊಳಿಸು 
ಮರೆಯಲಾರೆ ನನ್ನ
ಮನಸೆಳೆದ ನಲ್ಲೇ

ಪಂಕಜಾ. ಕೆ.
[26/8/2018, 12:39 PM] pankajarambhat: ರಾಖಿ ಹಬ್ಬ

ರಾಖಿಯ ಕಟ್ಟಲು 
ಕಾಯುವ ಕೈಗಳು
ಮಮತೆಯ ಮಳೆಯನು
ಸುರಿಸುತಿದೆ

ರಾಖಿಯ. ಬಂದನ
ಸ್ನೇಹದ ಬಂದದಿ
ಬಿಗಿಯುತ ಮುದವನು
ತುಂಬುತಿದೆ

ಅಣ್ಣನ ಹಾರೈಕೆ 
ತಂಗಿಗೆ ರಕ್ಷೆ
ತಂಗಿಯ ರಕ್ಷೆ 
ಅಣ್ಣನ ಉಸಿರು

ಸಹೋದರ ಪ್ರೇಮದಿ
ನಲಿಯುವ ದಿನವು
ರಾಖಿಯ ಕಟ್ಟುತ
ಸಂಭ್ರಮಿಸುತಿದೆ

ರಾಖಿ ಹಬ್ಬದ ಸಂಭ್ರಮವು
ಸೋದರಪ್ರೀತಿಯದ್ಯೋತಕವು 
ಮಮತೆಯ ಬಂಧನ
ಬೆಸೆಯುವುದು ಸಹೋದರ
ಭಾಂಧವ್ಯವನು

ಅಣ್ಣನ ಬಾಳಲಿ 
ಸುಖ ಸಂತೋಷವು
ತುಂಬಿರಲೆಂದು
ಹಾರೈಸುತ್ತಿದೆ
ತಂಗಿಯ ಮನವು

ತಂಗಿಯ ಜೀವನ
ಸುಖ ಸಂತೋಷದಿ
ಕಳೆಯಲಿ ಎಂದು
ಅಣ್ಣನು ಹರಸುವನು

ಅಣ್ಣನ ಹರಕೆ
ತಂಗಿಯ ಬಯಕೆ
ಈಡೇರುತ ಖುಷಿಯಲಿ
ನಲಿಯುವ ದಿನವಿಂದು
ಸಹೋದರ ಪ್ರೇಮವರಳಿ
ಜಗದಿ ನೆಲೆಸಲಿ ಸುಖ ಶಾಂತಿ

ಪಂಕಜಾ. ಕೆ. ಮುಡಿಪು ಕುರ್ನಾಡು

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.