Skip to main content

ತುಳು ಕನ್ನಡ 9

[1/10/2020, 9:06 PM] pankajarambhat: ತುಳು ಕನ್ನಡ ಕಾವ್ಯ ವೇದಿಕೆ
ಜಾನಪದ ಗೀತೆ ಸ್ಪರ್ಧೆಗಾಗಿ
ದತ್ತ ಪದ ನನ್ನಾಕಿ

ನನ್ನವಳು

ಆಷಾಢ ಮಾಸ ಬಂದೈತೆ ನೋಡವ್ವ
ಮಡದಿ ತವರಿಗೆ ಹೊರಟಾಳ
ಮನೆಯೆಲ್ಲಾ ಬಿಕೋ ಅಂತೈತವ್ವ

ನನ್ನಾಕಿ ಇದ್ದಾಗ ಮನೆಯೆಲ್ಲಾ ತುಂಬೈಯ್ತೆ
ಗಲ ಗಲ ಮಾತು ಕೇಳ್ತಾಯ್ತೆ
ಮನೆಯೆಲ್ಲಾ ನಗು ತುಂಬುತೈತೆ

ತುಂಬಿದ ಸಂಸಾರ ಇದ್ದರೂ ಕೂಡಾ
ಬೇಸರ ಪದಲಿಲ್ಲ ನೋಡವ್ವ
ಅಕಿ ಮನಸು ಬೆಣ್ಣೆವ್ವ

ಅತ್ತೆ ಮಾವರ  ಪ್ರೀತಿಯಿಂದ ನೋಡ್ಯಾಳ
ತನ್ನ ಅಪ್ಪ ಅಮ್ಮನ ತರ ಕಾಂತಳ
ಮನೆಮಂದಿ ಎಲ್ಲರ ಯೋಗಕ್ಷೇಮ ನೋಡ್ತಾಳವ್ವ

ಗೆಜ್ಜೆ ಕಾಲ್ಗಳ ನಾದವ ಬೀರುತ ಮನೆತುಂಬ
ನಗು ನಗುತ್ತಾ ಓಡ್ಯಾಡುತ್ತಾಳವ್ವ
ಆಕಿ ಇಲ್ಲದೆ ಜೀವ ನೊಂಡೈತೆವ್ವ

ಹೆಣ್ಣಿಲ್ಲದ ಮನೆ ಮನೆಯಲ್ಲ ನನ್ನವ್ವ
ಹೆಣ್ಣನ್ನು ಪ್ರೀತಿಯಿಂದ ಕಾಣಬೇಕವ್ವ
 ಆಕಿ ಮನೆಬೆಳಗೊ ನಂದಾ ದೀಪಕಾಣವ್ವ
 
 ಪಂಕಜಾ. ಕೆ. ಮುಡಿಪು
[15/10/2020, 6:33 PM] pankajarambhat: ತುಳು ಕನ್ನಡ ಕಾವ್ಯ ಸಂಗಮ ಸ್ಪರ್ಧೆಗಾಗಿ

ಗಜಲ್

ಉತ್ತಮ ಅವಕಾಶವೊಂದು ನಿನಗಾಗಿ ಕಾದಿದೆ ಗೆಳತಿ
ಭವಿಷ್ಯವನು ಉಜ್ವಲಗೊಳಿಸಲು ಅದು ಬಂದಿದೆ ಗೆಳತಿ

ನಾಳೆ ಎಂದವನ ಮನೆ ಹಾಳು ಎಂದು ತಿಳಿದಿಲ್ಲವೇ
ಇಂದಿನ ಕೆಲಸ ಇಂದೇ ಮಾಡಬೇಕಾಗಿದೆ ಗೆಳತಿ

ಹುಟ್ಟುತ್ತಲೇ ಯಾರೂ ಮೇಧಾವಿಗಳಾಗುವುದಿಲ್ಲ ಅಲ್ಲವೇ
ನಿರಂತರ ಕಲಿಕೆಯಿಂದ ಅದು ಸಾಧ್ಯವಾಗಿದೆ ಗೆಳತಿ

ಬಾಳು ಹಾವು ಏಣಿಯಾಟ ದಂತೆ ಇರುವುದಲ್ಲವೇ
ಸೋತಾಗ ಕುಗ್ಗದೆ ಗೆಲುವಿಗಾಗಿ ಶ್ರಮಿಸಬೇಕಿದೆ ಗೆಳತಿ

ಎಲ್ಲರೊಡನೆ ಹೊಂದಿಕೊಂಡು ಬಾಳಬೇಕಲ್ಲವೇ ಪಂಕಜಾ
ಜೀವನವು ನನಗೆ ಒಂದಲ್ಲ ಒಂದು ಪಾಠ ಕಲಿಸಿದೆ ಗೆಳತಿ

ಪಂಕಜಾ.ಕೆ. ಮುಡಿಪು
[22/10/2020, 8:56 PM] pankajarambhat: ತುಳು ಕನ್ನಡ  ಕಾವ್ಯ ಸಂಗಮ ಸ್ಪರ್ಧೆಗಾಗಿ

ಶಿಶುಗೀತೆ 
ದತ್ತಪದ.. ಜೋಕಾಲಿ

ಚಂದಿರ

ಮೋಡದ ಮರೆಯಲಿ ಓಡುತ
ಚಂದಿರ ಬಾನಲಿ ಹೊಳೆಯುವನು
ಹಾಲಿನ ಬೆಳಕನು ಹರಿಸುತ ಧರೆಗೆ
ಚಿಣ್ಣರ ಸೆಳೆಯುವನು

ಬೆಳ್ಳನೆ ಮೋಡದಿ ಜೋಕಾಲಿ ಕಟ್ಟಿ
ಆಟವ ಆಡುವನು
ಚಂದದ ಚುಕ್ಕಿಗಳ ಒಡನಾಡುತ
ಬಾನಲಿ ನಲಿಯುವನು

ಹುಣ್ಣಿಮೆ ದಿನದಲಿ ತಣ್ಣನೆ ಹೊಳೆಯುತ
ತಂಪನು ತರುತಿಹನು
ಅಂದದ ಚಂದದ ಬೆಳ್ಳಿಯ ಚಂದಿರ
ದುಂಡನೆ ಮೊಗದವನು

ನನಗೂ ಬಾನಲಿ ಜೋಕಾಲಿ ಕಟ್ಟಿ 
ತೂಗುವ ಆಸೆಯಿದೆ
 ನನ್ನೊಡನಾಡಲು ಚಂದಿರ ಬರುವನೆ
 ಬೇಗನೆ ಕರೆಯಮ್ಮ
 
ಪಂಕಜಾ. ಕೆ. ಮುಡಿಪು
[24/10/2020, 2:05 PM] pankajarambhat: ತುಳು ಕನ್ನಡ ಕಾವ್ಯ ಸಂಗಮ ಸ್ಪರ್ಧೆಗಾಗಿ
ಭಕ್ತಿಗೀತೆ

ನಮೋ ದೇವಿ ಶಾರದೆ

ಶ್ವೇತ ವಸ್ತ್ರವ ಧರಿಸಿ ಕರದಲಿ
ವೀಣೆ ಹಿಡಿದಿಹ ದೇವಿಯೇ
ಬೇಡಿಕೊಂಬೆನು ತಾಯಿ  ಶಾರದೆ
ನಿನ್ನ ಪದ ತಲಕೆ ಎರಗುತ

ಮಂದಹಾಸವ ಮುಖದಿ ಬೀರುತ
ಕಮಲ ಪುಷ್ಪದಲಿ ಕುಳಿತಿಹ
ತುಂಗಭದ್ರಾ ತೀರವಾಸಿನಿ
ವಂದಿಸುವೆನು  ಮಾತೆಯೇ

ಜ್ಞಾನ ಮುದ್ರೆಯ ಧರಿಸಿ ಕರದಲಿ
ಭಕ್ತರ ಹರಸುವ ದೇವಿಯೇ
ಮಾನ ಸ್ಮಾನಗಳು ನೀಡುತ
ವಿದ್ಯೆ ಬುದ್ಧಿಯ ಕರುಣಿಸು

ಕಾವ್ಯ ದೇವತೆ ಶಾರದಾಂಬೆಯೆ
ನವಿಲು ಗರಿಗಳಿಂದ ಶೋಭಿತೆ
ಸಾನುರಾಗದಿ ಭಜಿಸಿ ಪೂಜಿಸಲು
ಒಲಿದು ಕೊಡುವಳು ಸುಜ್ಞಾನವ

ಪಂಕಜಾ.ಕೆ. ಮುಡಿಪು
[26/10/2020, 7:46 PM] pankajarambhat: ತುಳು ಕನ್ನಡ ಕಾವ್ಯ ಸಂಗಮ

ತುಳು ಕಬಿತೆ  ಸುರುಟು ಬರೆಪುನೆ ತಪ್ಪು ಇತ್ತುಂಡ ಪನ್ಲೆ ಮಾರ್ರೆ

ಮೊಕೆದ ಚಂದ್ರೇ

ಪುಣ್ಣಿಮೆ ಚಂದಿರ ಬಾನೋಡು 
ನಲಿಪುನ ಪೊರ್ಲುನ ತೂಲೇ
ಬೆಳ್ಳಿದ ತಟ್ಟೆದ ಲೆಕ್ಕ ತೋಜೊಂಡುಲ್ಲೇ

ಪ್ರೇಮಿಗಳ ಬಾಳೊಡು 
ತುಂಬುವೆ ನವ ವಸಂತ
ತಂಪು ತಂಪು ಆಯೇನ ಬೊಲ್ಡ್  ಮೋನೆ

 ನಮ ರಡ್ಡು ಜೆನಲಾ ಪ್ರೀತಿಡು ಉಪ್ಪುನ
 ತೂದು ಬಾನೋಡುಪ್ಪೆ ಚಂದಿರ ತೇಲಿಪುವೆ 
  ಅಳೆನ  ಮೋನೆ .ನಾಚಿಕೆಡು  ಕೆಂಪಾಂಡು
 
 ಚುಕ್ಕಿ ಒಟ್ಟುಗೂ ಆಯೆನ ನಲಿಕೆ
 ಕಣ್ಣುಗು  ತಂಪು ಆಯೇನ ತೆಲಿಕೆ
 ತುವೊಡು ಪುಣ್ಣಿಮೆಡು ಆಯೇನ ಪೊರ್ಲು
 
ಪಂಕಜಾ.ಕೆ. ಮುಡಿಪು
[29/10/2020, 7:22 PM] pankajarambhat: ಸ್ಪರ್ಧೆಗಾಗಿ
ಚುಟುಕು
ದತ್ತಪದ..ಕನ್ನಡ

ಚುಟುಕು 1   ಉಸಿರು

ಕನ್ನಡ ಅಕ್ಷರ ಕಂದನ ಮೊದಲ ನುಡಿ
ಕನ್ನಡಕ್ಕಾಗಿ ಜೀವನವೆಲ್ಲಾ ದುಡಿ
ಕನ್ನಡ ಉಸಿರಾಗಿರಲಿ
ಕನ್ನಡದ ಬಗ್ಗೆ  ಅಭಿಮಾನವಿರಲಿ

ಚುಟುಕು 2.ಕನ್ನಡ ನುಡಿ

ಅ ಆ ಎನ್ನುವ  ಅಕ್ಷರ ಮಾಲೆ
ಕಂದನ ತೊದಲಿನ ಮಾತಿನ  ಮಾಲೆ
ನುಡಿಯಲು ಸರಳ ಕನ್ನಡ ಭಾಷೆ
ಭವ್ಯ ಪರಂಪರೆ  ತುಂಬಿದ ಭಾಷೆ

ಪಂಕಜಾ.ಕೆ. ಮುಡಿಪು
[31/10/2020, 9:24 PM] pankajarambhat: ತುಳು ಕನ್ನಡ ಕಾವ್ಯ ಸಂಗಮ ಸ್ಪರ್ಧೆಗಾಗಿ

ದತ್ತಪದ..ಬಿಳಿ.ಮುಗಿಲು

ಬಾನಿನ ಸೊಬಗು

ತಿಳಿನೀಲ ಬಾನಿನಲಿ
ಬಿಳಿ ಮೋಡದ  ತೊಟ್ಟಿಲಲಿ
ತೂಗುತ್ತಿರುವ ಚಂದಿರನು
ಪ್ರೇಮಿಗಳ ಮನವನು ತಾ ಸೆಳೆದನು

ತರ ತರದ ಆಕೃತಿಯ
ಬಾನಿನಲಿ ಬಿಡಿಸುತಲಿ
ಉಕ್ಕೇರಿ ಬರುತಲಿದೆ
ರಸಿಕರ ಮನಕೆ ಲಗ್ಗೆಯಿಡುತಲಿ

ಚಿತ್ರವನು ಬರೆದವನು
ಯಾರಿರಬಹುದು ಹೇಳಿ
ಮೈ ಮನಕೆ ಮುದಕೊಟ್ಟು
ಅಂಬರದ ತುಂಬೆಲ್ಲ ಹರಡಿರುವುದು

ಕಣ್ಣುಗಳ  ತುಂಬಾ
ತುಂಬುತಿದೆ ಚೆಲುಕನಸು
ರಸಿಕತನವು  ಮೈಯೇರಿ
ಇನಿಯನೊಡನಾಟಕೆ ಮನ ಬಯಸಿತು

ಪಂಕಜಾ.ಕೆ. ಮುಡಿಪು
[3/11/2020, 9:05 PM] pankajarambhat: ತುಳು ಕನ್ನಡ ಕಾವ್ಯಕುಸುಮ ಸ್ಪರ್ಧೆಗಾಗಿ

ಜನಪದ ಗೀತೆ
ನನ್ನರಸ..ನನ್ನರಸಿ

ಹೊತ್ತು ಮುಳುಗೋ 
ಹೊತ್ತಾಯ್ತು ನೋಡವ್ವ
ಎನ್ನರಸ ಇನ್ನೂ ಬಂದಿಲ್ಲ ತಂಗೆವ್ವ

ಹೊತ್ತಾರೆ ಬೇಗ ಬರುತೇನೆ 
ಎಂದವನೆ ನಂಬರದ
ನನ ಜೀವ ಪುಕು ಪುಕು ಅಂತೆಯ್ತೆವ್ವ

ಬರುವಾಗ ಜರತಾರಿ  ಸೀರೆ
 ತರುತೇನೆ ಎಂದಾನವ್ವ
 ಉಟಕೊಂಡು ಜಾತ್ರೆಗೆ ಹೋಗಬೇಕವ್ವ
 
 ಒಂಟಿಯಾಗಿ ಸಿಕ್ಕಾಗ
ಮುದ್ದಾಗಿ ನನ್ನ ಕಾಡುತಾನವ್ವ
 ನನ್ನರಸಿ ನೀ ಜಾಣೆ  ಅನ್ನುತ್ತಾನವ್ವ
 
ಕಣ್ಣೊಡೆದು ಕಣ್ಣಲ್ಲೇ ನಗುತಾನವ್ವ
ನಾಚಿಕೆ  ನನ್ನ ಮುಖದಾಗ ತುಂಬಿ
ಸೇಬಿನ ತರ ಕಾಣು ತೈತವ್ವ

ಒತ್ತಾರೆ ಬಂದಾಗ  
ಸೆರಗಿಡಿದು  ತಿರುಗುತ್ತನ
ನನಕಂಡ್ರೆ ಪ್ರೀತಿ ಅನುತಾನವ್ವ

ಪಂಕಜಾ.ಕೆ. ಮುಡಿಪು
[5/11/2020, 7:25 PM] pankajarambhat: ತುಳು ಕನ್ನಡ ಕಾವ್ಯ ಸಂಗಮ ಸ್ಪರ್ಧೆಗಾಗಿ

ಟಂಕಾಗಳು

1 ಸ್ವಾರ್ಥ ತುಂಬಿದ
ಮಾನವನ ಮನಸು
ಕೊಚ್ಚೆಯ ಗುಂಡಿ
ಇನ್ನೊಬ್ಬರ ಏಳಿಗೆ
ಸಹಿಸಲಾರನಲ್ಲ

2
ಸ್ವಾರ್ಥಸಾಧನೆ
ಮನುಕುಲಕೆ ಶಾಪ
ಪ್ರಕೃತಿ ನಾಶ
ಮಾನವನ ಅಳಿವು
ನಿಸ್ವಾರ್ಥದಿ ಬದುಕು

ಪಂಕಜಾ.ಕೆ. ಮುಡಿಪು

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.