Skip to main content

ಕಾವ್ಯಾಕುಸುಮ

[02/02, 9:12 PM] pankajarambhat: ತುಳು ಕನ್ನಡ ಕಾವ್ಯ ಸಂಗಮ  ಸ್ಪರ್ಧೆಗಾಗಿ

ಪ್ರೇಮಕವನ
ದತ್ತಪದ  ..ಉತ್ಕಟ

ಒಲವು  ..ಗೆಲುವು

ಉತ್ಕಟ ಪ್ರೀತಿಯ ಬಾವವು ತುಂಬಿ
ತಟ್ಟನೆ ಮನದಲಿ ಒಲವದು ಮೂಡಿ
ಒಟ್ಟಿಗೆ ಇರಲು ಬಯಸಲು ಮನವು
ನೆಟ್ಟಗೆ ನಿನ್ನೆಡೆ ಬಂದಿಹೆನು

ನಿನ್ನಯ ಸುಂದರ ವದನದ ಕಾಂತಿಗೆ
ನನ್ನಯ ಮನದಲಿ ಮೂಡಿತು ಒಲವು
ಚೆನ್ನಿಗ ಚೆಲುವನ ಮೋಡಿಗೆ ಸೋತು
ಮನ್ನಣೆ ಪಡೆಯಲು ಬಯಸಿದೆನು

ಕಣ್ಣಿನ ನೋಟದ ಬಲೆಯಲಿ ಸಿಲುಕಿ 
ತಣ್ಣನೆ ಕೊರೆಯುತ ನನ್ನನು ಮಣಿಸಿ
ಬಣ್ಣನೆ ಮಾಡುತ ಒಲಿಸುತ ಬಂದು
ಕಣ್ಣಿಗೆ ಕಣ್ಣು ಬೆರೆಯಲು ಮೂಡಿತು ಪ್ರೀತಿ

ಚೆಲುವೆಯ ವದನದ ಮೋಹಕ ಮಾಟ
ಒಲುಮೆಯ ಸೂಸುವ ಕಣ್ಣಿನ ನೋಟ
ಬಳುಕುವ ಬಳ್ಳಿಯ ತನುವಿನ ಮಾಟ
ಸೆಳೆಯಿತು ನನ್ನಯ ಕಣ್ಣು

ಒಲವಿಗೆ ಸಿಕ್ಕಿತು ಇಂದಿಗೆ ಗೆಲುವು
ಹಲವರ ಹಾರೈಕೆಯಲಿ ಜತೆಯಾಗಿ
ಬಾಳಿನ ಪಯಣವ ಸಾಗಿಸುತ
ಒಲವೇ ಗೆಲುವು ಎನ್ನುತ ಬಾಳುವ ಜತೆಯಾಗಿ

ಶ್ರೀಮತಿ.ಪಂಕಜಾ.ಕೆ. ಮುಡಿಪು
[04/02, 2:16 PM] pankajarambhat: ತುಳುಕನ್ನಡ ಕಾವ್ಯ ಸಂಗಮ
ಅಬಾಬಿ ಗಳು

 ಅಬಾಬಿ 1.

ಹೆಣ್ಣು ಭ್ರೂಣ ಹತ್ಯೆ
ನಿರಂತರವಾಗಿ ಸಾಗಿದೆ
ಹೆಣ್ಣಿಲ್ಲದೆ ಪ್ರಪಂಚವಿದೆಯೇ
ಪಂಕಜಾರಾಮಾ
ಇನ್ನು ಮನೆಗಳಿಲ್ಲ

 ಅಬಾಬಿ .2 .
ಕಾಮಾಂಧರ ಕಾಟ ಅತಿಯಾಗಿದೆ
ಸಣ್ಣ ಮಕ್ಕಳನ್ನು ಬಿಡಲಾರರು 
ಅಕ್ಕತಂಗಿಯರಿಲ್ಲವೇ ಇವರಿಗೆ
ಪಂಕಜಾ ರಾಮಾ 
ಈ ಕೀಚಕರಿಂದ ಅಬಲೆಯರ ರಕ್ಷಿಸು

ಶ್ರೀಮತಿ.ಪಂಕಜಾ.ಕೆ. ಮುಡಿಪು
[07/02, 5:48 PM] pankajarambhat: ಗುರುಕುಲಾ  ಕಲಾಪ್ರತಿಷ್ಠಾನ
ಜಿಲ್ಲಾ ಘಟಕ  ಚಾಮರಾಜನಗರ 
ನ್ಯಾನೊ ಕಥಾ ಸ್ಪರ್ಧೆಗಾಗಿ
ದತ್ತಪದ.....ಗೌರವ

        ಮುಖವಾಡ
        
ಅಭಿನವ್ ಒಬ್ಬ ಗೌರವಾನ್ವಿತ ವ್ಯಕ್ತಿ ಊರ ಪರವೂರ ಜನರೆಲ್ಲಾ ತುಂಬು ಗೌರವ ದಿಂದ ಅವನನ್ನು ನೋಡುತ್ತಿದ್ದರು.
ಬಡ ಬಗ್ಗರಿಗೆ,ಕಷ್ಟದಲ್ಲಿರುವವರಿಗೆ ತನ್ನಿಂದಾದಷ್ಟು ಸಹಾಯ ಮಾಡುವ ಗುಣವನ್ನು ಹೊಂದಿದ್ದ ಅವನ ಬಗ್ಗೆ ಎಲ್ಲರೂ ತುಂಬು ಅಭಿಮಾನ  ಗೌರವವನ್ನು ಇಟ್ಟಿದ್ದರು. ಆದರೆ ಪೊಲೀಸರ  ಧಾಳಿಯಲ್ಲಿ ಆತನ ಮನೆಯೇ ಮಾದಕ ಜಾಲದ ಕೇಂದ್ರವೆಂದು ಸಾಬೀತಾದಾಗ ಎಲ್ಲವೂ ತಲೆಕೆಳಗಾಯಿತು

ಶ್ರೀಮತಿ.ಪಂಕಜಾ ಕೆ..ಮುಡಿಪು.
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್.
ಕುರ್ನಾಡು.ದ.ಕ.
[09/02, 8:06 PM] pankajarambhat: ಶಿಶುಗೀತೆ
ದತ್ತಪದ..ಅಳಿಲು

 ನನ್ನ ತೋಟ

ನನ್ನ ಮನೆಯಲೊಂದು
ಪುಟ್ಟ ತೋಟವಿರುವುದು
ತೋಟದೊಳಗೆ  ಗಿಡದ ತುಂಬ
ಹೂವು ಹಣ್ಣು ಇರುವುದು

ಹಣ್ಣುಗಳನು ತಿನ್ನಲೆಂದು
ಪುಟ್ಟ ಅಳಿಲು ಬರುವುದು
ರಾಮದೇವರ ಪ್ರೀತಿ ಪಾತ್ರನಂತೆ
ಅಜ್ಜಿ ನಿತ್ಯ ಹೇಳುವರು

ಅಳಿಲಿಗೆಂದು ನಿತ್ಯ ನಾನು 
 ಕಾಳು  ಕಡ್ಡಿ ಇಡುವೆನು
ಅತ್ತ ಇತ್ತ ನೋಡಿಕೊಂಡು
 ಅಳಿಲು ಮೆಲ್ಲ ಬರುವುದು

ಉದ್ದ ಮೂತಿ ದೊಡ್ಡ ಬಾಲ
ಬೆನ್ನ ಮೇಲೆ ಮೂರು ನಾಮ
ಚಿವ್ ಚಿವ್ ಎನ್ನುವ  ಅದರ ಕೂಗು
ಮನಕೆ ಮುದವ ಕೊಡುವುದು

ಶ್ರೀಮತಿ.ಪಂಕಜಾ. ಕೆ. ಮುಡಿಪು
[11/02, 8:10 PM] pankajarambhat: ಗುಣಿತಾಕ್ಷರ ಕವನ
ದತ್ತಪದ ಸ

ಸುಖೀ ಜೀವನ

ಸವಿಯಾದ ಮಾತುಗಳ
ಸಾಸಿರದಲಿ ನುಡಿಯುತ
ಸಿಹಿಕನಸುಗಳನೆಲ್ಲ ನನಸಾಗಿಸಿ

ಸೀಮೆಯಿಲ್ಲದ ತೆರದಿ
ಸುಖವನು ಪಡೆಯುತ
ಸೂಸುತಲಿ ಎಲ್ಲೆಡೆಗೆ ಸೌರಭವನು

ಸೃಷ್ಟಿಯ ಸೊಬಗಿನ
ಸೆಳೆತದಲಿ ಸಿಲುಕದೆಯೇ
ಸೇರು ನೀ ಬೇಗದಿಂ ಬಾಳಗುರಿಯ

ಸೈರಣೆಯಿಂದಿರುತಲಿ
ಸೊಕ್ಕುಗಳನಡಗಿಸುತ
ಸೋಲಿಗಂಜದೆ ಬಾಳಿ ಬದುಕಬೇಕು

ಸೌಜನ್ಯನುಡಿಗಳಲಿ
ಸಂಪೂರ್ಣ ಸುಖವನು
ಸಹನೆಯಲಿ ಪಡೆಯುತ  ನಲಿಯಬೇಕು

ಶ್ರೀಮತಿ.ಪಂಕಜಾ.ಕೆ. ಮುಡಿಪು
[13/02, 6:51 PM] pankajarambhat: ತುಳು ಕನ್ನಡ ಕಾವ್ಯ ಸಂಗಮ ಸ್ಪರ್ಧೆಗಾಗಿ 
ದತ್ತಪದ..ಕನಸು

ಇನಿಯನೊಲವು

ನನ್ನ ಕನಸಲಿ ಮೂಡಿ ಬಂದಿದೆ
ನಿನ್ನ ಸುಂದರ ರೂಪವು
ಇನಿಯ ನಿನ್ನಯ ಒಲವಿನಾಟವು
ಮನಕೆ ತಂದಿತು ಹಾಸವು

ಜೀವ ಭಾವವು ಜತೆಗೆ ಸೇರಿ
ಮದುರ ಜೀವನವಾಗಿದೆ
ಬಾಳ ಪಯಣದ ದಾರಿಯುದ್ದಕು
ತನಿರಸವನು ಉಣಿಸಿದೆ

ಮನದ ತಲ್ಲಣ ಭೀತಿಗಳಿಗೆ
ನಿನ್ನ ಸಾಂತ್ವನ ನುಡಿಗಳು
ಮನಕೆ  ಆತ್ಮವಿಶ್ವಾಸವ ತುಂಬಿ
ಹುರುಪು ಮೂಡುವ  ಕ್ಷಣಗಳು

ಒಂದುಗೂಡುತ ಜತೆಗೆ ಸಾಗಲಿ
ನಮ್ಮ ಒಲವಿನ ಪಯಣವು
ಕಲ್ಲು ಮುಳ್ಳುಗಳೇನೇ ಇರಲಿ 
ಜತೆಗೆ ಸಾಗಲು ಹೂಗಳು

ಶ್ರೀಮತಿ .ಪಂಕಜಾ.ಕೆ. ಮುಡಿಪು
[16/02, 6:10 PM] pankajarambhat: ತುಳು ಕನ್ನಡ ಕಾವ್ಯ ಸಂಗಮ ಸ್ಪರ್ಧೆಗಾಗಿ
ರುಬಾಯಿ
ದತ್ತಪದ  ದ್ವೇಷ  ವೇಷ

ರುಬಾಯಿ 1 ದ್ವೇಷ

ದ್ವೇಷವೊಂದು ಉತಿಯುವ ಕೊಳ್ಳಿ
ತನುಮನವನು ಸುಡುವ ವಿಷದ ಬಳ್ಳಿ
ದ್ವೇಷದಿಂದ ಏನನ್ನೂ ಸಾಧಿಸಲಾಗದು
ಹಬ್ಬಿಸಬೇಕು ಪ್ರೀತಿಯ ಹೂಬಳ್ಳಿ

 ರುಬಾಯಿ 2  ವೇಷ

ಹೊಟ್ಟೆಗಾಗಿ  ಹಾಕುವರು ವೇಷ
ಹೋಗಬಾರದೆಂದಿಗೂ ಮೋಸ
ಎಚ್ಚರದಿಂದ ಇರಬೇಕು  ನಾವು
ಮೈಮರೆತರೆ ಆದೀತು ಸರ್ವನಾಶ

ಶ್ರೀಮತಿ.ಪಂಕಜಾ ಕೆ. ಮುಡಿಪು
[17/02, 8:45 PM] pankajarambhat: ಕಾವ್ಯ ಕುಸುಮ  ಸ್ಪರ್ಧೆಗಾಗಿ

ಕವನ
ದತ್ತಪದ..ಕಂಪನ

ಒಲವಿನ ಗೆಳೆಯ

ನಲಿಯುವ ದಿನಗಳು
ಕ್ಷಣದಲಿ  ಕಳೆದಿದೆ
ಚೆಲುವನ ಮೋಹಕ ಮೋಡಿಯಲಿ

ಒಲವನು ಸುರಿಸುತ
ಕಣ್ಣಲಿ ಕೆಣಕುವ 
ಚೆಲುವನ ಕಾಣಲು ಕಂಪನವು

ಮೈಯನು ಮರೆಸುತ
ತೋಳಲಿ ಬಳಸುತ
ಮುತ್ತಿನ ಮಳೆಯನು ಸುರಿಸುವನು

ಹರುಷವು  ತುಂಬಿದೆ
ಮೈಮನದಲೆಲ್ಲಾ
ಇನಿಯನ ಒಡನಾಟದಲಿ

ಬಾಳಿನ ಆಗಸದ ತುಂಬಾ
ಚೆಲು ಕನಸನು ಬಿತ್ತುತ
ಒಲವಲಿ ಮೈಯನು ಮರೆಸುವನು

ಶ್ರೀಮತಿ.ಪಂಕಜಾ.ಕೆ. ಮುಡಿಪು

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.