ಭಕ್ತಿಗೀತೆ
ವಿಷಯ..ತಂದೆ. ತಾಯಿ
ಪ್ರತ್ಯಕ್ಷ ದೇವರು
ಬುವಿಗೆ ಬಂದ ಜೀವಿಗಳಿಗೆ
ತಂದೆ ತಾಯಿಯೇ ದೇವರು
ಹೆತ್ತು ಹೊತ್ತು ಸಾಕಿ ಸಲಹಿದ
ಮಾತೇ ನಿನಗೆ ವಂದನೆ
ವಿದ್ಯೆ ಬುದ್ಧಿಯ ಕಲಿಸಿ ನಮ್ಮನು
ನೆಲೆಗೆ ಹಚ್ಚಿದ ದಾತರೆ
ತಾಯಿ ತಂದೆ ನಿಮ್ಮ ಋಣ ತೀರಿಸಲು
ಕೋಟಿ ಜನ್ಮವು ಸಾಲದು
ತಮ್ಮ ಸುಖವನು ಬದಿಗೆ ಒತ್ತಿ
ಬೆಳೆಸಿದಂತ ತಂದೆ ತಾಯಿಯೇ
ಪ್ರತ್ಯಕ್ಷ ದೇವರೇ ನೀವು ಎನುತ
ಭಕ್ತಿಯಿಂದಲಿ ನಿಮಗೆ ನಮಿಸುವ
ಧರೆಗೆ ಬಂದ ದೇವರೆನುತ
ನಿಮ್ಮ ಚರಣಕೆ ಎರಗುವೆ
ಹರಸಿ ನಮ್ಮನು ನೆಲೆಗೆ ಹಚ್ಚುತ
ಬಾಳ ಜ್ಯೋತಿಯ ಬೆಳಗಿಸಿ
ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್
ಕುರ್ನಾಡು.ದ.ಕ
Comments
Post a Comment