ಚುಟುಕುಗಳು
1 ಹಣ
ಎಲ್ಲರಿಗೂ ಬೇಕು ಕೈ ತುಂಬಾ ಹಣ
ಅದಕಾಗಿ ಉರುಳಿಸುವರು ಹೆಣ
ಸವಕಲು ನಾಣ್ಯದಂತಾಗಿದೆ ಗುಣ
ಹಣದ ಬೆನ್ನತ್ತಿ ಕಳೆಯುವರು ಪ್ರಾಣ
2 ಜಾತಿ
ಜಾತಿ ಭೇದಗಳನ್ನು ಅಳಿಸಬೇಕು
ನಾವೆಲ್ಲಾ ಒಂದೇ ಎಂದು ತಿಳಿಯಬೇಕು
ನುಡಿದಂತೆ ನಡೆಯಲು ಕಲಿಯಬೇಕು
ಜೀವನ ಸಾರ್ಥಕ ಪಡಿಸಿಕೊಳ್ಳಬೇಕು
3 ರಾಜಕೀಯ
ರಾಜಕೀಯವೊಂದು ಡೊಂಬರಾಟ
ಕುರ್ಚಿಗಾಗಿ ಮಾಡುವರು ಕಾದಾಟ
ಅಶ್ವಾಸನೆಗಳನು ಕೊಡುವುದೇ ಆಟ
ಬಡ ಜನರ ಜೀವನಕೆ ತಪಿಲ್ಲ ಪರದಾಟ
4 ಸಿ.ಡಿ.
ಸಿ.ಡಿ.ಹಗರಣಗಳು ಮನೆ ಮಾತಾಗಿದೆ
ನ್ಯಾಯ ದೇವತೆ ಕಣ್ಣಿಗೆ ಬಟ್ಟೆ ಕಟ್ಟಿದೆ
ಮೋಸ ವಂಚನೆಗಳೇ ಜೀವನವಾಗಿದೆ
ಜಗತ್ತನ್ನು ದೇವರೇ ಕಾಯಬೇಕಾಗಿದೆ
ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್.ಮಾಸ್ಟರ್
ಕುರ್ನಾಡು.ದ.ಕ
Comments
Post a Comment