ವಿಷಯ..ಮೂಢನಂಬಿಕೆ
ಶೀರ್ಷಿಕೆ....ಕಡಿದೊಗೆಯಿರಿ ಮೌಢ್ಯವ
ಮೂಢನಂಬಿಕೆ ಹಾಸುಹೊಕ್ಕಿದೆ
ಮನುಜ ಜೀವನದೆಲ್ಲೆಡೆ
ಪ್ರಾಣಿ ಪಕ್ಷಿಗಳ ಕೂಗಿಗೊಂದು
ಮೂಢನಂಬಿಕೆಯ ಅಂಟಿಸಿ
ಮಾಟ ಮಂತ್ರ ಎನುತ ಹೆದರಿಸಿ
ಮುಗ್ಧ ಮನಗಳ ವಂಚಿಸಿ
ಮಂತ್ರ ತಂತ್ರಗಳ ಬಲೆಯಲಿ ಕೆಡವುತ
ಕಾಸು ಕೀಳುವರು ಮೋದಕೆ
ಕೈಯಲಾಗದ ಸೋಮಾರಿಗಳಿಗೆ
ಕಾಸು ಮಾಡುವ ದಾರಿಯು
ಅರಿಯಬೇಕಿದೆ ಮೊಸಗಾರರ
ಮೋಸವಂಚನೆ ಜಾಲವ
ಮನದಲಿರುವ ಅಂಜಿಕೆಗಳೇ
ಕಷ್ಟ ನಷ್ಟ ಕೆ ಕಾರಣ
ಧೈರ್ಯದಿಂದ ಎದುರಿಸುತಿರಲು
ಬಾಳಲಿರುವುದು ಹೂರಣ
ಸೋಲು ಗೆಲುವು ಜಗದ ನಿಯಮವು
ಹಾಕಬೇಡಿರಿ ಮೂಢನಂಬಿಕೆ ತಳಕನು
ವೈಜ್ಞಾನಿಕ ಮನೋಭಾವನೆ ಬೆಳೆಸುತ
ಕಡಿದೊಗೆಯಿರಿ ಮೌಢ್ಯವ
ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್ ಮಾಸ್ಟರ್
ಕುರ್ನಾಡು.ದ.ಕ.
Comments
Post a Comment