ನೆನಪಿನ ನಾವಿಕ ಸಾಹಿತ್ಯವೇದಿಕೆ ಲೇಖನ ಸ್ಪರ್ಧೆಗಾಗಿ ವಿಷಯ..ಪರಿಸರ ಜಾಗೃತಿ ಹಸಿರು ಕಾಡು ಗುಡ್ಡಗಳಿಂದ ತುಂಬಿದ ಪ್ರಕೃತಿಯೇ ಪರಿಸರ. ಪರಿಸರದ ಅಳಿವು ಉಳಿವು ಮನುಜನ ಕೈಯಲ್ಲಿದೆ. ಪ್ರತಿಯೊಬ್ಬರೂ ತಮ್ಮ ಸುತ್ತುಮುತ್ತಲಿನ ಪರಿಸರ ಹಸಿರಾಗಿ ಇರುವಂತೆ ನೋಡಿಕೊಳ್ಳಬೇಕು .ಹಸಿರು ಇದ್ದರೆ ಮಾತ್ರ ನಾವು ಉಸಿರಾಡಲು ಸಾಧ್ಯ . ಮಾನವನ ದುರಾಸೆಗೆ ಇಂದು ಪ್ರಕೃತಿ ನಾಶವಾಗುತ್ತಿದೆ .ಎಲ್ಲೆಂದರಲ್ಲಿ ಕಸದ ತ್ಯಾಜ್ಯಗಳನ್ನು ಎಸೆದು ಕಾಡು ಗುಡ್ಡಗಳನ್ನು ಕಡಿದು ಕಾಂಕ್ರೀಟ್ ಕಟ್ಟಡಗಳನ್ನು ಕಟ್ಟುತ್ತಾ ಭೂಗರ್ಭಕ್ಕೆ ಕನ್ನ ಹಾಕಿ ನೀರಿನ ಒರತೆಯನ್ನು ಬತ್ತಿಸಿ,ಪ್ರಕೃತಿಯನ್ನು ಮಲಿನ ಮಾಡುವ ಮನುಜ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತಿದ್ದಾನೆ.ಪರಿಸರ ನಾಶದಿಂದ ಕೊರೊನಾದಂತ ಕಂಡು ಕೇಳದ ರೋಗವು ಮಾನವನನ್ನು ಬಾಧಿಸುತ್ತಿದೆ..ಸ್ವಚ್ಛ ಸುಂದರ ಪರಿಸರ ಆರೋಗ್ಯವನ್ನು ಕೊಡುತ್ತದೆ.ದೇವರು ಯಥೇಚ್ಛವಾಗಿ ಕೊಟ್ಟ ಶುದ್ಧ ಗಾಳಿ ನೀರು ಜಗದ ಜೀವಿಗಳಿಗೆ ಒಂದು ವರವಿದ್ದಂತೆ ಬುದ್ದಿಜೀವಿಯಾದ ಮನುಜ ಪರಿಸರದ ಉಳಿವಿನ ಬಗ್ಗೆ ತಿಳಿದುಕೊಂಡು ಅದರ ರಕ್ಷಣೆ ತನ್ನ ಹೊಣೆಯೆಂದು ತಿಳಿಯಬೇಕು ಪರಿಸರ ದಿನಾಚಾರಣೆಯು ಕೇವಲ ಆಚರಣೆಯಾಗದೆ ಕಾರ್ಯರೂಪಕ್ಕೆ ಬರುವಂತಾಗಬೇಕು .ಪ್ರಚಾರಕ್ಕಾಗಿ ಗಿಡಗಳನ್ನು ನೆಡದೆ ಸ್ವ ಇಚ್ಛೆಯಿಂದ ಗಿಡಗಳನ್ನು ನೆಟ್ಟು ಪೋಷಿಸಿ ಪ್ರಕೃತಿ ರಕ್ಷಣೆ...