Skip to main content

ಧಾರವಾಡ ಯುವ ಬರಹ ಗಾರರು

[07/03, 3:16 pm] Pankaja K: ಧಾರವಾಡ ಯುವ ಬರಹಗಾರರ ಒಕ್ಕೂಟದ. ಚಿತ್ರಕವನ ಸ್ಪರ್ಧೆಗಾಗಿ

ವಿಷಯ..ಪ್ರೇಮದ ಪಯಣ

ಒಲವಿನ ಜತೆಗಾರ

ಪ್ರೇಮದ ಪಯಣಕೆ ನೀ ಜತೆಯಾಗುತ
ನಲಿವಲಿ  ಕಳೆಯಿತು ದಿನವೆಲ್ಲಾ
ಜೋಡಿ ಹಕ್ಕಿಗಳ ತೆರದಲಿ ನಲಿಯುತ
ಬಾಳದು ಸಾಗಿತು ಮುದದಿಂದ

ಖುಷಿಯಲಿ ಇರುವ ಕ್ಷಣದಲೇ ಬಂದಿತು
ಗಡಿಯ ರಕ್ಷಣೆಯ ಕರೆಯೊಂದು
ಅವಸರದಲೇ ಹೊರಟೇ ಬಿಟ್ಟನು
ಒಲವಿನಾಟಕೆ ತೆರೆಯನು ಎಳೆಯುತಲಿ

ಗಡಿಯನು ಕಾಯುವ  ವೀರಯೋಧನ 
ಮನದಲಿ ತುಂಬಿದೆ ತಲ್ಲಣವು
ಮುದ್ದು ಮಡದಿಯ ಎದೆಯಲಿ 
ಹರಿದಿದೆ ವಿರಹದ ಉರಿಯ ರಿಂಗಣವು

ಮನದ ದುಗುಡವ ಇನಿತೂ ತೋರದೆ
ಹರಸಿ ಕಳಿಸುವ ಕ್ಷಣವದು
ಕಣ್ಣು ತುಂಬಿದ ಮುದ್ದು ಹುಡುಗಿಯ
ಸಂತೈಸಿ ಹೊರಟನು ಕರ್ತವ್ಯಕೆ

ಹೇಳಲಿ ಹೇಗೆ ವಿರಹದ ಕ್ಷಣವ
ಭಾವನೆಗಳೆಲ್ಲವೂ ಬತ್ತಿಹುದು


ಶ್ರೀಮತಿ.ಪಂಕಜಾ.ಕೆ. ಮುಡಿಪು
ಅಂಚೆ.ಕುರ್ನಾಡು. ದ..ಕ.
[14/03, 9:14 pm] Pankaja K: ಧಾರವಾಡ ಯುವ ಬರಹಗಾರರ ಒಕ್ಕೂಟದ ಕವನ ಸ್ಪರ್ಧೆಗಾಗಿ

ವಿಷಯ..ವಿಸ್ಮಯ ಬದುಕು

          ದೇವನ ಸೃಷ್ಟಿ ಯ ಅದ್ಬುತ
          
ದೂರದ ಗಗನದಿ  ಮೂಡುವ ರವಿಯು
ವಿಸ್ಮಯ ತುಂಬಿದನು ಜಗಕೆಲ್ಲಾ
ಕತ್ತಲೆ ರಾತ್ರಿಯು ಕಳೆಯುತಲಿರಲು
ಬೆಳಕದು ಹರಡಿತು ಬುವಿಗೆಲ್ಲಾ

ಬಾನಿನ ತುಂಬಾ ತುಂಬಿದ ಬಣ್ಣವು
ವಿಸ್ಮಯದ ಬದುಕನು ತೋರುತಿದೆ
ಸರ ಸರ ಸರಿಯುವ ಮೋಡಗಳಾಟವು
ಮನದಲಿ ಸಂತಸ ತುಂಬುತಿದೆ

ನೀಲಾಕಾಶವ ಮುತ್ತಿದ ಕರಿ  ಮೋಡಗಳು
ಮಳೆಯನು ಸುರಿಸುವ ಪರಿಯೆಂತು
ಭೂಮಿಯ ಒಡಲಲಿ ಹುದುಗಿದ ಬೀಜಗಳು
ತಲೆಯನು ಎತ್ತುವ  ಪರಿಯೆಂತು

ಕಾಲನ ಆಟಕೆ ತನುವನು ಒಡ್ಡುತ
ನಲಿಯುವ ಗಿಡಗಳ ನೋಡುತಲಿ
ಬೆರಗನು ಮೂಡಿಸಿ ಅರಳುವ ಹೂಗಳು
ನಲಿವನು ಕೊಡುತಿದೆ ಮೈ ಮನಕೆ

 ಶ್ರೀಮತಿ.ಪಂಕಜಾ.ಕೆ. ಮುಡಿಪು
 ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ 
 ಶ್ರೀ ಗಣೇಶ ಕೃಪಾ ಮುಡಿಪು .ಕುರ್ನಾಡು.ದ.ಕ 574153
 ಮೊಬೈಲ್ ನಂಬರ್ 9964659620
[30/05, 4:54 pm] Pankaja K: ಧಾರವಾಡ ಯುವಬರಹಗಾರರ ಒಕ್ಕೂಟದ  ಚುಟುಕು ಸ್ಪರ್ಧೆಗಾಗಿ

ದತ್ತಪದ..ಪ್ರಕೃತಿ ಹರಣ

1 ಹಸಿರು  ಉಸಿರು

ಹಸಿರು ಗಿಡಮರವಿದ್ದರೆ ಸಿಗುವುದು ಉಸಿರು
ಉಳಿಸಿ ಬೆಳೆಸಬೇಕು ಭೂತಾಯಿ ಬಸಿರು
ಪ್ರಕೃತಿ ಹರಣ ಮಾಡುವುದರಿಂದ ಆಪತ್ತು
ಬಂದಿತು ಮನುಕುಲಕೆ ಎಂದಿಲ್ಲದ ವಿಪತ್ತು

2  ಉಳಿಸಿ ಬೆಳೆಸಿ

ಮಾಡಬಾರದೆಂದಿಗೂ ಪ್ರಕೃತಿ ಹರಣ
ಕಾಯುವುದು ಅದು ನಮ್ಮ  ಪ್ರಾಣ
ಹಸಿರಿದ್ದರೆ ಮಾತ್ರ  ಸಿಗಬಹುದು ಉಸಿರು 
ಉಳಿಸಿ ಬೆಳೆಸಬೇಕು ನಾವು ಅದಕಾಗಿ ಹಸಿರು

ಶ್ರೀಮತಿ.ಪಂಕಜಾ.ಕೆ. ಮುಡಿಪು
ಕುರ್ನಾಡು.ದ.ಕ.
[13/06, 5:57 pm] Pankaja K: ಧಾರವಾಡ ಯುವ ಬರಹಗಾರರ ಒಕ್ಕೂಟದ ಹಾಯ್ಕುಗಳ ರಚನೆ ಸ್ಪರ್ಧೆಗಾಗಿ
 ದತ್ತಪದ..ಸಾಮರಸ್ಯ

1.ಬದುಕಿನಲಿ
ಸಾಮರಸ್ಯವಿದ್ದರೆ
ಬಾಳು ಸುಂದರ

2.ನಂದನವನ
ಸಾಮರಸ್ಯದ ಬಾಳು
ಸ್ವರ್ಗ  ಸದೃಶ

ಶ್ರೀಮತಿ.ಪಂಕಜಾ.ಕೆ. ಮುಡಿಪು
ಮೊಬೈಲ್ ನಂಬರ್ 9964659620
[20/06, 9:09 pm] Pankaja K: ಧಾರವಾಡ ಯುವ ಬರಹಗಾರರ ಒಕ್ಕೂಟದ 
 ನ್ಯಾನೊ ಕಥೆ ರಚನೆಯ ಸ್ಪರ್ಧೆಗಾಗಿ

ಅಪ್ಪನ ತ್ಯಾಗ

ಇದ್ದೊಬ್ಬ ಮಗನನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು , ಚೆನ್ನಾಗಿ ವಿದ್ಯೆ ಕಲಿಸಿ ಒಳ್ಳೆಯ ವ್ಯಕ್ತಿಯಾಗುವಂತೆ ಮಾಡಬೇಕೆನ್ನುವ ಗುರಿ ಹೊಂದಿದ್ದ ರಾಮಪ್ಪ ,ರಾತ್ರಿ  ಹಗಲೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ.ತಂದೆಯ ಕಷ್ಟದ ಬಗ್ಗೆ ಅರಿವಿಲ್ಲದ ಮಗ ದಿನಕ್ಕೊಂದು ಬೇಡಿಕೆಯನ್ನು ಇಡುತ್ತಿದ್ದ.ಒಂದು ದಿನ ತನ್ನ ಗೆಳೆಯರ ಜತೆ ಹೋಟೆಲಿನಲ್ಲಿ ತಿಂಡಿ ತಿನ್ನುತ್ತಿದ್ದಾಗ ಅಪ್ಪ ಅಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದುದು ಕಂಡು ಆತನ ಮನಸ್ಸು ಮಿಡಿಯಿತು. ತನ್ನ ಅಪ್ಪ ತನಗಾಗಿ ಎಷ್ಟು ಕಷ್ಟ ಪಡುತ್ತಿದ್ದಾರೆ ಎನ್ನುವುದು ತಿಳಿದ ಮೇಲೆ ಪವನ್ ಮತ್ತೆಂದು  ತನ್ನ ಅಪ್ಪನಲ್ಲಿಯಾವದೇ ಬೇಡಿಕೆಯನ್ನು ಇಡಲಿಲ್ಲ 

ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್.ಮಾಸ್ಟರ್
[04/07, 9:26 pm] Pankaja K: ಧಾರವಾಡ ಯುವ ಬರಹಗಾರರ ಒಕ್ಕೂಟದ  ಕವನ
ಸ್ಪರ್ಧೆಗಾಗಿ. 
ದತ್ತಪದ .  ಆಪದ್ಬಾಂಧವ

       ಜೀವ ರಕ್ಷಕ

ರೋಗಿಗಳ ಪಾಲಿನ ಆಪದ್ಬಾಂಧವನು
ವೈದ್ಯನೆಂಬ ಜೀವರಕ್ಷಕನು
ನಿಷ್ಠೆಯಿಂದ ರೋಗಿಗಳ ಸೇವೆಮಾಡುವನು
ಜಗದ ಜನರ ರಕ್ಷಕನಿವನು

ನೊಂದವರಿಗೆ ಸಾಂತ್ವನ ಹೇಳುವನು
ಜೀವ  ರಕ್ಷಿಸಲು ಶ್ರಮಿಸುವನು
ಕಾಯಕದಲ್ಲಿ ತೃಪ್ತಿ ಕಾಣುವನು
ತನ್ನ ಸುಖವ ಬದಿಗೊತ್ತಿ ದುಡಿಯುವನು

ಹಗಲು ಇರುಳು ಸೇವೆ ಮಾಡುವನು
ರೋಗಿಗಳ ಉಳಿಸಲು ಶ್ರಮಿಸುವನು
ವೈದ್ಯರು ದೇವರ ಸಮಾನರು
ರೋಗಿಗಳ ಸೇವೆಯಲಿ ಸುಖ ಕಾಣುವರು

ರೋಗಿಗಳಲಿ  ಆತ್ಮವಿಶ್ವಾಸ ತುಂಬುವನು
ಸೇವೆಯೇ ಮೂಲಮಂತ್ರವಾಗಿರುವನು
ಇಂತಹ ವೈದ್ಯರಿಗೆ ಸಲ್ಲಿಸಬೇಕು ನಮನ
ನೆನೆಯುತ  ಅವರ ಶ್ರಮವನು ಅನುದಿನ

 ಶ್ರೀಮತಿ.ಪಂಕಜಾ ಕೆ. ಮುಡಿಪು
 ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ 
 ಕುರ್ನಾಡು .ದ.ಕ.574153
 ಮೊಬೈಲ್ ನಂಬರ್ 9964659620

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.