Skip to main content

ತುಮಕೂರು ಘಟಕ

[14/03, 4:33 pm] Pankaja K: ಗುರುಕುಲಾ ಜಿಲ್ಲಾ ಘಟಕ ತುಮಕೂರು
ವಾರಕ್ಕೊಂದು ಸ್ಪರ್ಧೆಗಾಗಿ.ಟಂಕಾಗಳು

ಟಂಕಾ.1. ಲಲಿತಕಲೆ

       ಒಂದು ದಾರಿಯು
       ಮನದ ಉಲ್ಲಾಸಕ್ಕೆ
       ಲಲಿತಕಲೆ
       ನಿವಾರಿಸುವುದಿದು
       ಏಕತಾನತೆಯನ್ನು
ಟಂಕಾ..2   ಕಾರಣ

ಸುಖದುಃಖಕ್ಕೆ
ಮಾನವನ ಮನಸು
ಒಂದು ಕಾರಣ
ಒತ್ತಡಗಳಿಲ್ಲದ 
ಬದುಕು ಸುಂದರವು

ಶ್ರೀಮತಿ.ಪಂಕಜಾ.ಕೆ. ಮುಡಿಪು
ಕುರ್ನಾಡು.ದ.ಕ.574153
[21/03, 7:55 pm] Pankaja K: ಗುರುಕುಲಾ ಕಲಾ ಪ್ರತಿಷ್ಠಾನ ಜಿಲ್ಲಾ ಘಟಕ  ತುಮಕೂರು
ಸ್ಪರ್ಧೆಗಾಗಿ ಕವನ

ದತ್ತಪದ. ಸ್ನೇಹ


ಸ್ನೇಹದ  ಕಡಲು

 ಪ್ರೀತಿ ವಿಶ್ವಾಸದ ಕಡಲು
ನಂಬಿಕೆ  ಭರವಸೆಯ ತೊಟ್ಟಿಲು
ರಕ್ತ ಸಂಬಂಧಕ್ಕಿಂತ ಮಿಗಿಲು
ಸಾಂತ್ವನಕೆ ಸಿಗುವ ಹೆಗಲು

ಕಷ್ಟಕ್ಕೆ  ಸ್ಪಂದಿಸುವ ಗುಣ
ಎಂದಿಗೂ ಬಯಸನು ಹಣ
ಶುದ್ಧ ಸ್ನೇಹ ಸಿಗಲು ಬೇಕು ಋಣ
ಸ್ನೇಹಿತರಿಲ್ಲದ  ಜೀವನ ಭಣ ಭಣ

ಯಾವುದೋ ಜನ್ಮದ ಅನುಬಂಧ
ಸ್ನೇಹವೆಂಬ ಈ ಮಧುರ ಸಂಬಂಧ
ಕಷ್ಟ ನಷ್ಟಗಳಿಗೆ ಜತೆಯಾಗುವ ಬಂಧ
ಸುಖ ದುಃಖಗಳಿಗೆ ಹೆಗಲಾಗುವ ಚಂದ

ಶ್ರೀಮತಿ.ಪಂಕಜಾ.ಕೆ. ಮುಡಿಪು
ಕುರ್ನಾಡು.ದ.ಕ
[28/03, 8:19 pm] Pankaja K: ಗುರುಕುಲಾ ಕಲಾಪ್ರತಿಷ್ಠಾನ
ಜಿಲ್ಲಾ ಘಟಕ ತುಮಕೂರು
ವಾರಕ್ಕೊಂದು  ಸ್ಪರ್ಧೆಗಾಗಿ
ವಚನಕ್ಕೊಂದು ವಿಮರ್ಶೆ

ಆಸೆಯೇ ಮಾಯೆ

ಹೆಣ್ಣು ಹೊನ್ನು ಮಣ್ಣುಗಳನು 
ಮಾಯೆಯೆಂದರು ಹಿರಿಯರು
ಇವುಗಳಾವುವೂ ಮಾಯೆಯಲ್ಲ
ಮೂಢನಂಬಿಕೆ ಇದು ತಿಳಿಯಿರಿ

ಹುಚ್ಚುಕುದುರೆಯಂತೆ ಓಡುವ
ಮನವು ಒಂದು ಮಾಯೆಯು
ಮನದ ಮುಂದಣ ಆಸೆಯೇ
ಮಾಯೆಯೆಂದರು  ಅಲ್ಲಮಪ್ರಭುಗಳು

ಕಾಮ ಮೋಹ ಮದ ಮತ್ಸರ
ಅರಿಷಡ್ವರ್ಗಗಳೇ ಮಾಯೆಯು
ಆಸೆಯೇ ದುಃಖಕ್ಕೆ ಮೂಲಕಾರಣ
ಎಂದರಾ ವಚನಕಾರರು

ಶ್ರೀಮತಿ .ಪಂಕಜಾ.ಕೆ. ಮುಡಿಪು
ಕುರ್ನಾಡು.ದ.ಕ.
[04/04, 8:42 pm] Pankaja K: ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾ ಘಟಕ  ತುಮಕೂರು ವಾರಕ್ಕೊಂದು ಸ್ಪರ್ಧೆಗಾಗಿ

ಗಜಲ್

ನಿನ್ನ  ಕಣ್ಣಿನ  ಬೆಳಕು   ನನ್ನ  ಮನವನ್ನು ಸೆಳೆದಿದೆ  ಸಖಿ
ಮನಸು ನಿನ್ನೊಡನಾಟವನ್ನು  ಅನುದಿನ ಬಯಸಿದೆ ಸಖಿ

ನನ್ನೆದೆಯ ಬಾಂದಳದಲ್ಲಿ ಮಿಂಚೊಂದು ಮೂಡಿದೆ
ನವಿರಾದ ಬಾವಗಳು ಎಡೆಬಿಡದೆ ಬರುತಿದೆ ಸಖಿ

ನಿನಗಾಗಿ ತಂದಿರುವೆ ಈ ಚಂದದ ಗುಲಾಬಿ ಹೂವನು
ಮುಡಿಗೆ ಮುಡಿಸಲು ನಿನ್ನ ಒಪ್ಪಿಗೆ ಬೇಕಾಗಿದೆ ಸಖಿ

ಪ್ರಕೃತಿಯ ಮಡಿಲಲ್ಲಿ ವಿಹರಿಸುವುದು ಖುಷಿ ಕೊಡುತಿದೆ
ಆಹ್ಲಾದಕರ ಗಾಳಿಯು  ಬೀಸಿ ಮೈಮರೆಸುತಿದೆ ಸಖಿ

ನೀನು ಜತೆಯಲ್ಲಿದ್ದರೆ ನನಗೆ  ಬೇರೇನೂ ಬೇಡ ಪಂಕಜಾ
ನನ್ನೊಡಲ ಒಲವೆಲ್ಲಾ ನಿನಗೆಂದೇ ಮುಡಿಪಾಗಿಟ್ಟಿರುವೆ  ಸಖಿ

 ಶ್ರೀಮತಿ.ಪಂಕಜಾ.ಕೆ. ಮುಡಿಪು 
ನಿವೃತ್ತ ಅಸ್ಸಿಸ್ಟಂಟ್. ಪೋಸ್ಟ್.ಮಾಸ್ಟರ್
ಕುರ್ನಾಡು.ದ.ಕ.
[25/04, 8:33 pm] Pankaja K: ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾಘಟಕ ತುಮಕೂರು
ಕವನ ಸ್ಪರ್ಧೆಗಾಗಿ
ನಟಸಾರ್ವಬೌಮ ಡಾ. ರಾಜಕುಮಾರರಿಗೆ  ನುಡಿನಮನ

      ಹೆಮ್ಮೆಯ ಪುತ್ರ

ಕನ್ನಡ ನಾಡಿನ ಹೆಮ್ಮೆಯ ಪುತ್ರರಿವರು
ವರನಟ ರಾಜಕುಮಾರನೆಂದು ಬಿರುದಾಂಕಿತರು
ಕನ್ನಡ ಚಿತ್ರರಂಗದ ಮೇರು ನಟರಿವರು
ಕನ್ನಡಿಗರ ಮನೆ ಮನದಲಿ ನೆಲೆಯಾದರು

ನಟನೆಯ ಮೂಲಕ ಜನಮನಗೆದ್ದರು
ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದರು
ಹಲವು ಪ್ರಶಸ್ತಿಗಳ ಮುಡಿಗೇರಿಸಿ ಕೊಂಡರು
ಸರಳ ಸಜ್ಜನಿಕೆಯ ಮೂರ್ತಿ ಇವರು

ನಾದಮಯ ಲೋಕವನ್ನೇ ಸೃಷ್ಟಿಸಿದರು
ಕನ್ನಡವೇ ನನ್ನ ಉಸಿರೆಂದು ಬಾಳಿದರು
ಹುಟ್ಟಿ ಬಾ ಮತ್ತೊಮ್ಮೆ ಓ ಕನ್ನಡ ಸುಪುತ್ರರೇ
ನಿಮಗಿದೋ ಸಲ್ಲಿಸುವೆನು ನನ್ನ ನುಡಿ ನಮನ

ಪಂಕಜಾ.ಕೆ. ಮುಡಿಪು
ಕುರ್ನಾಡು.ದ.ಕ.
[02/05, 8:28 pm] Pankaja K: ಗುರುಕುಲಾ ಕಲಾಪ್ರತಿಷ್ಠಾನ 
ಜಿಲ್ಲಾ ಘಟಕ ತುಮಕೂರು
ಭಾವಗೀತೆ  ಸ್ಪರ್ಧೆಗಾಗಿ

        ಪ್ರಕೃತಿ ಗಾನ

 ಬಾಂದಳದಲಿ ಮಿನುಗುವ ಶಶಿಯು
ಬಾಳಿಗೆ ಬಣ್ಣವ ಕಲಸಿದನು
ಕೊಳದಲಿ ಅರಳಿದ   ನೈದಿಲೆಯಂದವು
ಕಂಗಳ ಸೆಳೆಯುತ ಕಾಡಿಹುದು

ಅರಳಿದ  ಸುಮಗಳು  ಗಂಧವ ಬೀರಲು
ಬಯಕೆಯ ಬಳ್ಳಿಯು ಹಬ್ಬಿಹುದು
ಒಲವಿನ ಬಲೆಯಲಿ ಸಿಲುಕಿದ ಮನವು
ವಿರಹದ ಉರಿಯಲಿ ಬೇಯುತಿದೆ

ಕಂಗಳ ತುಂಬಾ ಕನಸನು ತುಂಬಿ
ನಿನಗಾಗಿಯೇ ಕಾದಿರುವೆ
ಕಣ್ಣಿನ ನೋಟದ ಮದನನ ಬಾಣಕೆ
ನನ್ನೆದೆ ಮೆಲ್ಲನೆ ಕಂಪಿಸಿದೆ

ಒಲವನು ಹರಿಸುತ ಬಲವನು ತುಂಬುತ
ಬಳುಕುತ ಬಾರೇ ಓ ಚೆಲುವೆ
ಮೈಮನ ಮರೆಸುವ ಒಲವಿನ ಸುಧೆಯಲಿ
ಮೀಯುತ ಜಗವನು ಮರೆಯೋಣ

ಶ್ರೀಮತಿ.ಪಂಕಜಾ.ಕೆ. ಮುಡಿಪು
ಕುರ್ನಾಡು.ದ.ಕ
[30/05, 5:12 pm] Pankaja K: ಗುರುಕುಲಾ ಕಲಾಪ್ರತಿಷ್ಠಾನ
ಜಿಲ್ಲಾ ಘಟಕ ತುಮಕೂರು
ಚುಟುಕು ರಚನಾ ಸ್ಪರ್ಧೆಗಾಗಿ ವಿಷಯ..ಬುದ್ಧ
  ಬೌದ್ಧ ಧರ್ಮ ಸ್ಥಾಪಕ

ಭೋಗ ಭಾಗ್ಯಗಳನು ತ್ಯಜಿಸಿದ ಯೋಗಿ
ಭೋಧಿ ವೃಕ್ಷದಡಿ ಜ್ಞಾನ ಪಡೆದ ತ್ಯಾಗಿ
ಅಹಿಂಸೆಯೇ ಪರಮ ಧರ್ಮವೆಂದ ಬುದ್ಧ
ಬೌದ್ಧಧರ್ಮದ ಸ್ಥಾಪಕನಾಗಿ ಜಗವ ಗೆದ್ದ

ಶ್ರೀಮತಿ.ಪಂಕಜಾ.ಕೆ. ಮುಡಿಪು
ಕುರ್ನಾಡು.ದ.ಕ
[06/06, 5:52 pm] Pankaja K: ಗುರುಕುಲಾ ಕಲಾಪ್ರತಿಷ್ಠಾನ
ಜಿಲ್ಲಾ ಘಟಕ ತುಮಕೂರು
ರುಬಾಯಿ ಸ್ಪರ್ಧೆಗಾಗಿ
ದತ್ತಪದ..ಹಸಿರೇ ಉಸಿರು

ಆಮ್ಲಜನಕದ ಕಣಜ

ಹಸಿರೇ ಉಸಿರು ಎನ್ನುವುದು ಮರೆಯದಿರು
ಹಸಿರು ತುಂಬಿದ ಧರೆಯ ಕೆಡಿಸದಿರು
ಖರ್ಚಿಲ್ಲದೆ ಸಿಗುವುದು ಆಮ್ಲಜನಕ 
ಪ್ರಕೃತಿಯೊಡಲಿಗೆ ಕೊಡಲಿ  ಹಾಕದಿರು 

ಶ್ರೀಮತಿ.ಪಂಕಜಾ.ಕೆ. ಮುಡಿಪು
[03/07, 9:02 am] Pankaja K: ಅಪ್ಪನಬಗ್ಗೆ ಚುಟುಕು

       ಅದ್ಬುತ ವ್ಯಕ್ತಿ

ಅಪ್ಪನೊಬ್ಬ ಅದ್ಬುತ ವ್ಯಕ್ತಿ
ಮಕ್ಕಳ ಏಳಿಗೆಯ ಶಕ್ತಿ
ಹಾಕಿಕೊಟ್ಟ ಉತ್ತಮ ಪಂಕ್ತಿ
ಬಾಳಿನಲಿ ಅಳವಡಿಸಿದ ಸೂಕ್ತಿ

          ಗುರಿಕಾರ

ಬಾಳಿನ ಗುರಿ ತೋರಿದ  ಗುರಿಕಾರ
ಕಷ್ಟ ಸುಖಗಳಿಗೆ ಹೆಗಲಾದ ಜತೆಗಾರ
ಮಕ್ಕಳ ಏಳಿಗೆಗಾಗಿ ದುಡಿದ ಸಾಹುಕಾರ 
ಸಂಸಾರದ ನೊಗಕೆ ಹೆಗಲು ಕೊಟ್ಟ ಸೂತ್ರಧಾರ

ಶ್ರೀಮತಿ.ಪಂಕಜಾ.ಕೆ. ಮುಡಿಪು
ಕುರ್ನಾಡು.ದ.ಕ.
[04/07, 7:36 pm] Pankaja K: ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾಘಟಕ ತುಮಕೂರು
ಚಿತ್ರಕ್ಕೊಂದು ಕವನ ಸ್ಪರ್ಧೆಗಾಗಿ

ಒಡೆದ ಮನಸು

ನೂರು ಕನಸುಗಳನ್ನು ಕಾಣುತ
ನಲಿಯುತ್ತಿದ್ದ ಮನದಲಿ
ಭೀತಿಯೆನ್ನುವ ವಿಷ ಸರ್ಪವು
ಹೆಡೆಯನೆತ್ತುತ ನಲಿದಿದೆ

ಮುಗ್ಧ ಕುಸುಮವ ಹೊಸಕಿ ಹಾಕಿದ 
ರಕ್ಕಸರನು ಕಾಣುತ
ಕೈಗಳೆರಡರ ಮುಷ್ಠಿ ಬಿಗಿದಿದೆ  
ರೋಷ ಮನದಲಿ ತುಂಬಿದೆ

ಒಡೆದ ಕನ್ನಡಿಯಲ್ಲಿ ಕಾಣುವ
ಬಿಂಬದಂತೆಯೇ ಜೀವನ
ನಲುಗಿ ಹೋಯಿತು ಕಾಮಾಂಧರ
ಆಟವಾಗುತ ತನುಮನ

ಕಣ್ಣು  ತುಂಬಿದ ನೀರ ಹನಿಗಳು
ಉದುರದಂತೆ ತಡೆದಿದೆ
ರೆಕ್ಕೆ ಮುರಿದ ಹಕ್ಕಿಯಂತೆ
ದುಗುಡ ಮನದಲಿ ತುಂಬಿದೆ

ಪಂಕಜಾ.ಕೆ. ಮುಡಿಪು
ಕುರ್ನಾಡು ದ ಕ 574153

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.