Skip to main content

ಮಾಗಿಯ ಚಳಿ

  ಮಾಗಿಯ ಚಳಿ
  ವಾರ್ಧಕ  ಷಟ್ಪದಿ
 
ಮಾಗಿಯಾ  ಚಳಿಗಾಳಿ ಬೀಸುತಿದೆ  ಬಿರುಸಿನಲಿ
ಬಾಗುತಾ ತರುಲತೆಯು  ನಲಿಯುತಿದೆ ಹರುಷದಲಿ
ತೂಗುತಿದೆ ನೋಡುಗರ ಮನಸನ್ನು ಸೆಳೆಯುತ್ತ ಹೊಸ ಕನಸು ಬಿತ್ತುತ್ತಲಿ
ಸಾಗುತಿಹ ಮೋಡಗಳು ಚಿತ್ರಗಳ ಬರೆಯುತ್ತ
ಬೀಗುತಿದೆ ಮರಗಿಡವು  ಹಸಿರುಟ್ಟು ನಲಿಯುತ್ತ
ಬೇಗೆಯಲಿ ಬೇಯುತಿಹ  ಮನುಜನಾ ಮನಸಿನಲಿ  ಹುರುಪನ್ನು ತುಂಬುತ್ತಲಿ

ಹಾಡುತಿದೆ ಕೋಗಿಲೆಯು ಮುದದಿಂದ  ಕುಣಿಯುತ್ತ
ಕಾಡುತಿದೆ  ಚಿಗುರುತಿಹ ವನರಾಜಿ ಮೈಮನವ
ಮಾಡುತಿದೆ   ಮೋಡಿಯನು  ಕೈಬೀಸಿ ಕರೆಯುತ್ತ   ರಸಿಕರಾ ತನುಮನವನು
ಬಾಡಿರುವ  ಜೀವಕ್ಕೆ   ಹೊಸತನವ ಕೊಡುತಿದ್ದು
ಜಾಡಿಸುತ   ತುಂಬಿರುವ ಜಡತೆಯನು ಕಳೆಯುತ್ತ
ನಾಡಿನೆಲ್ಲರ ಮನಕೆ  ಸಡಗರವ  ತುಂಬಿಸುತ  ಬಂದಿಹುದು   ದೀಪಾವಳಿ

ಪಂಕಜಾ.ಕೆ. ಮುಡಿಪು



 

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...