ಲಲಿತ ರಗಳೆ
ಮನೆ ಬೆಳಗುವ ಹೆಣ್ಣು
ಅರಳಿರುವ ಮಲ್ಲಿಗೆಯ ಮಾಲೆಯನು ಕಟ್ಟುತಲಿ
ಕರಗಳಲಿ ಹಿಡಿಯುತ್ತ ನಡೆಯುವಳು ಹರುಷದಲಿ
ಹರನನ್ನು ನೆನೆಯುತ್ತ ಭಕುತಿಯಲಿ ಬೇಡುವಳು
ಶಿರಬಾಗಿ ನಮಿಸುತ್ತ ಮೈಮರೆತು ನಿಲ್ಲುವಳು
ಕಂಗಳಲಿ ಕಾಂತಿಯನು ತುಂಬುತಿದೆ ಸವಿಕನಸು
ಹೊಂಗನಸ ಕಾಣುತಿದೆ ತರುಣಿಯಾ ಮೈಮನಸು
ಮಂಗಳದ ಸುದಿನಕ್ಕೆ ಕಾಯುತಲಿ ನಿಂತಿಹಳು
ರಂಗನ್ನು ಬಳಿಯುತಿದೆ ಇನಿಯನಾ ನಗೆಮುಗುಳು
ಹಸನಾದ ಹೆಣ್ಣಿವಳು ಮನೆಬೆಳಗೊ ಮಗಳಿವಳು
ನಸುನಗುತ ಮನೆಮಂದಿ ಜತೆಯಲ್ಲಿ ಬಾಳುವಳು
ಹಸುವಂತ ಮನದವಳು ಮನೆ ಮನವ ತುಂಬಿದಳು
ತುಸು ತುಸುವೆ ಅಮೃತವ ನೆಲ್ಲರಿಗೆ ಉಣಿಸುವಳು
ಪಂಕಜಾ .ಕೆ. ಮುಡಿಪು
Comments
Post a Comment