ಗಜಲ್
ಸುಂದರ ವದನದ ಹಿಂದಿನ ಕರಾಳತೆಯ ತೋರಲಿಲ್ಲವೇಕೆ ಹೇಳು
ಮಂದಹಾಸವ ತೋರುತ್ತ ಮನದಾಳದ ನೋವನು ಮುಚ್ಚಿಟ್ಟೆಯೇಕೆ ಹೇಳು
ಕುಂದು ಕೊರತೆ ತೋರದಂತೆ ನಿನ್ನನ್ನು ನೋಡಿಕೊಂಡಿರುವೆನಲ್ಲವೇ
ಒಂದು ದಿನವೂ ನಿನ್ನ ಆಸೆಗಳನ್ನು ವ್ಯಕ್ತಪಡಿಸಲಿಲ್ಲವೇಕೆ ಹೇಳು
ಮದುವೆಯಾಗಿ ಬಂದಂದಿನಿಂದಲೂ ನಿನಗಾಗಿ ಹಗಲಿರುಳು ದುಡಿದೆ ನಾನು
ಎದೆ ತುಂಬಾ ಮೊಗೆ ಮೊಗೆದು ಪ್ರೀತಿ ಕೊಟ್ಟರೂ ಮೌನಗಿರುವೆಯೇಕೆ ಹೇಳು
ನನ್ನ ಬರಡು ಜೀವನಕೆ ಸಂಜೀವಿನಿಯಾಗಿ ಬಂದಿರುವೆ ನೀನು ಸಖಿ
ಮುನ್ನಿನ ದಿನದ ನೆನಪಿನಲಿ ಸುಮ್ಮನೆ ಕೊರಗಿ ಬಸವಳಿಯುವೇಕೆ ಹೇಳು
ಹಿಂದು ಮುಂದಿಲ್ಲದ ನನ್ನನ್ನು ಪ್ರೀತಿಸಿ ನಿನಗೆ ಸುಖವಿಲ್ಲವಾಯಿತೆ ಪಂಕಜಾ
ಹಿಂದೆಂದೂ ಇಲ್ಲದ ಬಯಕೆಗಳ ತೋರುತ್ತ ಮೈಮನವ ಕಾಡುವೆಯೇಕೆ ಹೇಳು
ಪಂಕಜಾ.ಕೆ. ರಾಮಭಟ್ .ಮುಡಿಪು
Comments
Post a Comment