ತಾಯಿ ದೇವರು
ಅಮ್ಮಾ ಎಂದರೆ ಮಮತೆಯ ಕಡಲು
ಸುಖ ದುಃಖಕೆ ಸಾಂತ್ವನದ ಹೆಗಲು
ಪ್ರೀತಿ ವಿಶ್ವಾಸ ಸ್ನೇಹದ ಮಡಿಲು
ತ್ಯಾಗ ಕರುಣೆಯ ಒಲವಿನ ಒಡಲು
ಮಗುವನ್ನು ಬೆನ್ನಲಿ ಹೊತ್ತು ತಿರುಗುವಳು
ಎಷ್ಟೇ ಕಷ್ಟ ಬಂದರೂ ಸಹಿಸಿ ನಗುವಳು
ಕಂದನ ನಗುವಲ್ಲೇ ತನ್ನ ಸುಖವನ್ನು ಕಾಣುವಳು
ಮಮತಾಮಯಿ ತಾಯಿ ಧರೆಗಿಳಿದ ದೇವತೆಯವಳು
ತನ್ನ ಕಷ್ಟವನ್ನು ಕಡೆಗಣಿಸಿ ಬಿಡುವಳು
ಹೆತ್ತು ಹೊತ್ತು ಮಮತೆಯಲಿ ಸಾಕಿ ಸಲಹುವಳು
ಕಂದನ ಏಳಿಗೆಗಾಗಿ ಹಗಳಿರುಳೂ ದುಡಿಯುವಳು
ಮಗುವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವಳು
ಪಂಕಜಾ.ಕೆ. ರಾಮಭಟ್ ಮುಡಿಪು
Comments
Post a Comment