ನವ ಪರ್ವ
ಸಂಕ್ರಾಂತಿ ಹಬ್ಬವು ಬಂದೈತೆ ನಾಡಿಗೆ
ಹಬ್ಬದ ಸಾಲನ್ನು ತಂದೈತೆ/ಮನೆಯಲ್ಲಿ
ಸುಗ್ಗಿಯ ಬೆಳೆ ತುಂಬೆಯ್ತೆ
ಮಾವಿನ ತೋರಣ ಕಟ್ಟುವ ನಾವೆಲ್ಲ
ಚಂದಾಗಿ ಅಂಗಳ ಸಾರಿಸೋಣ / ಬಾಗಿಲಿಗೆ
ರಂಗೋಲಿ ಇಟ್ಟು ನಲಿಯೋಣ
ಉತ್ತರದ ದಿಕ್ಕಿಗೆ ಹೊರಟಾನ ಸೂರ್ಯಣ್ಣ
ಬಿಸಿಲು ಗಾಲ ಬಂದೈತೆ / ಮೈಯಲ್ಲಿ
ಹೊಸ ಹುರುಪು ಮೂಡಿ ಬಂದೈತೆ
ಎಳ್ಳು ಬೆಲ್ಲವ ಬೀರಿ ಒಳ್ಳೆ ಮಾತಾಡುವ
ನೆರೆಹೊರೆ ಜನರಲ್ಲಿ ಸೌಹಾರ್ದ / ವಾಗಿರುತ
ಒಂದಾಗಿ ಹಬ್ಬವ ಮಾಡೋಣ
ಎಣ್ಣೆಯ ಮಜ್ಜನ ಮಾಡಬೇಕು ನಮ್ಮವ್ವ
ಗಂಗೆಯ ಸ್ನಾನ ಮಾಡಬೇಕು/ಮಡಿಯಲ್ಲಿ
ಹುಗ್ಗಿಯ ಪಾಯಸದಡುಗೆ ಮಾಡಬೇಕು
ಪಂಕಜಾ.ಕೆ.ರಾಮಭಟ್ .ಮುಡಿಪು
Comments
Post a Comment