ಪೂರ್ಣ ಚಂದ್ರ
ಭೋಗ ಷಟ್ಪದಿ
ಬಾನಿ ನಂಚಿನಲ್ಲಿ ಮಿನುಗಿ
ಬಾನ ತಾರೆಯಂತೆ ಹೊಳೆದು
ಮಾನಿನಿಯರ ಮನವ ಸೆಳೆದ ಮೋಡಿಗಾರನು
ತಾನು ಹಿಡಿದ ದಾರಿಯಲ್ಲಿ
ಮೇನೆ ಯಲ್ಲಿ ಕುಳಿತುಕೊಂಡು
ಸಾನುರಾಗದಿಂದ ನಲಿವ ಪೂರ್ಣ ಚಂದ್ರನು
ಅರಳಿ ನಗುವ ನೈದಿಲೆಯನು
ಕರದಿ ಹಿಡಿದು ಮುದ್ದಿಸುತ್ತ
ಭರದಿ ಹರಿಸುತಿರುವ ಧರೆಗೆ ತಂಪು ಕಿರಣವ
ಮರೆಯಲಿರುವ ತಾರೆಯೊಡನೆ
ತೆರೆಯ ಮರೆಯಲಾಡುತಿದ್ದು
ಸರಿಸಿಬಿಡುವ ಜಗದ ಜನರ ಕೋಪ ತಾಪವ
ಜಸವ ಪಡೆಯಲೆಂದು ತಾನು
ಹೊಸೆದು ಕೈಯ ಇನಿಯನೊಡನೆ
ರಸಿಕ ತನದಿ ಸುಖಿಸುತಿಹುದು ಹರಿಣ ಜೋಡಿಯು
ರಸಿಕ ಮನದಿ ಕನಸು ತುಂಬಿ
ಕಸಿಯುತಿರುತಲವರ ಮನವ
ಹೊಸತು ಹುರುಪು ತುಂಬಿ ಕೊಡುವ ತನ್ನ ಬೆಳಕಲಿ
ಪಂಕಜಾ.ಕೆ. ರಾಮಭಟ್ ಮುಡಿಪು
Comments
Post a Comment