ಕಿರುಗತೆ* ಮರಳಿ ಗೂಡಿಗೆ ತಮ್ಮ ಮನೆಯ ವರಾಂಡದಲ್ಲಿ ಆರಾಮವಾಗಿ ಪೇಪರ್ ಓದುತ್ತಾ ಕುಳಿತಿದ್ದ ರಾಯರಿಗೆ ಮೊಬೈಲ್ನ ರಿಂಗ್ ಎಚ್ಚರಿಸಿತು.ಆ ಕಡೆಯಿಂದ ಬೀಗರು ಶ್ಯಾಮಣ್ಣನವರ ಆತಂಕದ ಧ್ವನಿ ಕೇಳಿಸಿತು.ಅಂಜಲಿ ರಮೇಶ್ ಇಬ್ಬರೂ ಅಮೆರಿಕಾದಿಂದ ವಾಪಸ್ ಬರ್ತಾ ಇದ್ದಾರೆ.ಅವರಿಗೆ ಅಲ್ಲಿ ಏನೋ ತೊಂದರೆಯಾಗಿದೆ..ತುಂಬಾ ಒತ್ತಡದಲ್ಲಿದ್ದಾರೆ ಅನ್ನಿಸ್ತು ಇಂದು ಸಂಜೆ ನೀವು ಬನ್ನಿ.ಎಲ್ಲರೂ ಒಟ್ಟಿಗೆ ಕೂತು ಮಾತಾಡೋಣ ಎಂದರು ಶ್ಯಾಮಣ್ಣ..ಅವರ ಮಾತು ಕೇಳುತ್ತಲೇ ರಾಯರಿಗೆ ಸಿಡಿಲು ಬಡಿದಂತಾಯ್ತು.. ಖಾಸಗಿ ಕಂಪನಿಯೊಂದರಲ್ಲಿ ಗುಮಾಸ್ತರಾಗಿ ಬಡತನದಲ್ಲೇ ಬದುಕಿದ ರಾಯರು ಹೆಂಡತಿ ತೀರಿಕೊಂಡ ನಂತರ ಒಬ್ಬಳೇ ಮಗಳು ಅಂಜಲಿಗಾಗಿ ಬಹಳ ಕಷ್ಟದ ಬಾಳುವೆ ನಡೆಸಿದ್ದರು..ತಾಯಿ ಇಲ್ಲದ ಮಗಳೆಂದು ಅಂಜಲಿಯನ್ನು ಅತ್ಯಂತ ಪ್ರೀತಿಯಿಂದ ಬೆಳೆಸಿದ್ದರು..ಅಂಜಲಿಯೂ ಸಹ ಬಡತನವಿದ್ದರೂ ಜಾಣತನದಿಂದ ಅಚ್ಚುಕಟ್ಟಾಗಿ ಮನೆ ಕೆಲಸ, ಅಡುಗೆ,,ಕಾಲೇಜು ಎಲ್ಲವನ್ನೂ ತೂಗಿಸಿಕೊಂಡು ಹೋಗುತ್ತಿದ್ದಳು.ತಂದೆಯವರ,ಅತಿಥಿ ಅಭ್ಯಾಗತರ ಕಾಳಜಿ ವಹಿಸುತ್ತ ಎಲ್ಲರ ಅಚ್ಚುಮೆಚ್ಚಿನವಳಾಗಿದ್ದಳು. ಅಂಜಲಿ ಕಾಲೇಜು ಮುಗಿಸುವ ಮೊದಲೇ ವಿದೇಶದಲ್ಲಿ ನೌಕರಿ ಮಾಡುವ ವರ ಸಿಕ್ಕನೆಂದು ರಾಯರು ರಮೇಶ್ ನೊಡನೆ ಮದುವೆ ಮಾಡಿ ಕೊಟ್ಟಿದ್ದರು.ಮಗಳು ಅಳಿಯ ಇಬ್ಬರೂ ಅಮೆರಿಕಾಕ್ಕೆ ಹೋಗಿ ಆರು ತಿಂಗಳಲ್ಲೇ ಮತ್ತೆ ವಾಪಸ್ ಬರುತ್ತಿದ್ದಾರೆ.ಅವರಿಗೆ ದೇಶ ಬಿಟ್ಟು ಬರುವಂತಹ ಏನು ಸಮಸ್ಯೆ ಬಂದಿರಬಹುದೆಂಬ ರಾಯರಿಗೆ ಚಿಂ...