ಒಳಿತು ಮಾಡು
ಮನುಷ್ಯತ್ವವಿಲ್ಲದ ಮನುಜ ದಾನವ
ಪ್ರೀತಿ ಪ್ರೇಮದ ಬೆಲೆ ತಿಳಿ ನೀನು ಮಾನವ
ಕಳೆದೊಗೆ ಮನಸಿನಲಿ ತುಂಬಿದ ಕಲ್ಮಶವ
ಎಲ್ಲರಿಗೂ ಒಳಿತನ್ನೇ ನಾವು ಬಯಸುವ
ಜೀವನವೊಂದು ಅಮೂಲ್ಯ ಆಸ್ತಿ ಸಿಗಬಹುದು ಕಾರ್ಯಕ್ಕೆ ತಕ್ಕ ಸಾಸ್ತಿ
ಎಂದಿಗೂ ಮಾಡಬೇಡ ಪರರಿಗೆ ದ್ರೋಹ
ಕಳೆದು ಬಿಡು ಮೈಮನದ ಮೋಹ
ದೇವ ಕೊಟ್ಟಿರುವ ಸುಂದರ ಜೀವನ
ಪರೋಪಕಾರದಲಿ ಜನ್ಮ ಪಾವನ
ಅನುದಿನವೂ ನೆನೆಯುತಿರು ದೇವನ
ನುಡಿದಂತೆ ನಡೆದರೆ ಬಾಳು ಹೂಬನ
ತನ್ನಂತೆ ಪರರ ಬಗೆಯಬೇಕು
ಇತರರ ಕಷ್ಟಕ್ಕೆ ಸ್ಪಂದಿಸಬೇಕು
ಹೆತ್ತವರಿಗೆ ಊರುಗೋಲಾಗಬೇಕು
ಸನ್ನಡತೆಯಿಂದ ಬಾಳು ಸಾಗಿಸಬೇಕು
ಪಂಕಜಾ.ಕೆ. ರಾಮಭಟ್ ಮುಡಿಪು
Comments
Post a Comment