ಮೈಮರೆಸುತಿದೆ ಹಸಿರ ಸಿರಿ
ದೂರದ ಬೆಟ್ಟದ ಎಡೆಯಲಿ
ರವಿ ಮೂಡಿಬಂದ ಭರದಲಿ
ಹೂಗಳು ಅರಳಿದವು ಖುಶಿಯಲಿ
ಹಕ್ಕಿಗಳು ಹಾರಿದವು ನಭದಲಿ
ಅರುಣೋದಯದ ಸುಂದರ ದೃಶ್ಯ
ಸುರಿವ ಮಂಜಿನ ತೆರೆಯ ಲಾಸ್ಯ
ಕುಣಿಯುವ ನವಿಲಿನ ನೃತ್ಯ
ಕವಿಮನದಿ ಬರೆದಿದೆ ಸುಂದರ ಭಾಷ್ಯ
ಬಣ್ಣ ಬಣ್ಣದ ಹೂಗಳು ಅರಳಿ ನಗುತಿವೆ
ಸೌಗಂಧವ ಸೂಸುತ ದುಂಬಿಗಳ ಕರೆಯುತಿವೆ
ಹಕ್ಕಿಗಳು ಚಿಲಿಪಿಲಿ ಗಾನ ಮಾಡುತಿವೆ
ಮಾಮರದಲ್ಲಿ ಕೋಗಿಲೆಗಳು ಹಾಡುತಿವೆ
ಚಿಗುರಿದ ಮರಗಿಡಗಳೆಡೆಯಲಿ
ಚಂದಿರನ ಶೀತಲ ಕಿರಣದಲಿ
ಮಿನುಗುವ ನಕ್ಷತ್ರಗಳ ಕಾಂತಿಯಲಿ
ಮೈ ಮರೆಯುವ ಭಾವನೆ ಎದೆಯಲಿ
ಪಂಕಜಾ.ಕೆ. ಮುಡಿಪು
Comments
Post a Comment