ನೊಂದ ಮನ
ಪ್ರೀತಿಯ ಅಲೆಯಲಿ ತೇಲುತಲಿರಲು
ಹೊಸ ಹೊಸ ಕನಸು ಮನದಲ್ಲಿ
ಕಸಿವಿಸಿಗೊಳ್ಳುವ ಭಾವನೆಯೆಲ್ಲವೂ
ಮರೆಯಿತು ನಿನ್ನಯ ಒಲವಿನಲಿ
ಕಣ್ಣಲಿ ಕಾಡುತ ಮೈಮನ ಮರೆಯಿಸಿ
ಬಂದೆ ನೀ ಚೆಲುವೆ ನನ್ನೆಡೆಗೆ
ಕುಂದನು ತಾರದ ತೆರದಲಿ ಒಲಿಸುತ
ಹೊಂದಿದೆ ನನ್ನಯ ಬಾಳಿನೆಡೆ
ಕ್ಷಣಿಕ ಆಸೆಯ ಬಲೆಯಲಿ ಬಿದ್ದು
ಮರೆತೆಯಾ ನನ್ನಯ ಪ್ರೀತಿಯನು
ನೆನಪಿನ ಪಯಣಿಗನಾಗಿಹೆ ನಾನು
ಮರೆಯನು ನಿನ್ನಯ ಒಲವನ್ನು
ಕಾಡುವೆ ಏಕೆ ನನ್ನಯ ಮನವನು
ಮತ್ತೆ ಬಾರದಿರು ಮನಕೆ ನೆನಪುಗಳೇ
ಬತ್ತಿಸಿ ಬಿಟ್ಟಿದೆ ಬಯಕೆಯ ಬಳ್ಳಿಯ
ನಿನ್ನಯ ವಿರಹದ ನೋವುಗಳೇ
ಪಂಕಜಾ.ಕೆ. ಮುಡಿಪು
Comments
Post a Comment