ನನ್ನ ರಾಣಿ
ದ್ವಿರುಕ್ತಿ ಕವನ
ನಿಲ್ಲು ನಿಲ್ಲು ಹೋಗಬೇಡ
ಬಲ್ಲೆ ಬಲ್ಲೆ ನಿನ್ನ ಆಟ
ಕಣ್ಣು ಕಣ್ಣು ಕೂಡಿದಾಗ
ಕದ್ದು ಕದ್ದು ನೋಡಿ ನೀನು ನಗುವೆಯೇತಕೆ
ಚಂದ ಚಂದದ ಹೂಗಳಿವೆ
ಬಣ್ಣ ಬಣ್ಣದ ಚಿಟ್ಟೆಗಳಿವೆ
ಹಾಡು ಹಾಡುವ ಹಕ್ಕಿಗಳಿವೆ
ಬಾರೇಬಾರೆ ನನ್ನ ಜತೆಗೆ ಕಾಡಿಗೆ ಹೋಗುವ
ಮೆಲ್ಲ ಮೆಲ್ಲ ನಡೆದು ಬರುತ
ಝಲ್ ಝಲ್ ಗೆಜ್ಜೆ ಕುಣಿಸಿ
ಬಾರೇ ಬಾರೇ ನನ್ನ ರಾಣಿ
ಕೈ ಕೈ ಹಿಡಿದು ನಾವು ಆಡಿ ಕುಣಿಯುವ
ಮುದ್ದು ಮುದ್ದು ಕಂದನಂತೆ
ಅತ್ತು ಅತ್ತು ಕರಗಬೇಡ
ಸಾಕು ಸಾಕು ನಿನ್ನ ಅಳು
ಮತ್ತೆ ಮತ್ತೆ ನಿನ್ನ ನಾನು ಮುದ್ದುಮಾಡುವೆ
ಶ್ರೀಮತಿ.ಪಂಕಜಾ.ಕೆ. ರಾಮಭಟ್ ಮುಡಿಪು
Comments
Post a Comment