ಆರೋಗ್ಯಕ್ಕೆ ಮಾರಕ
ಉರಿಯುವ ಕೊಳ್ಳಿಯ ಬಾಯಲ್ಲಿ ಇಟ್ಟಂತೆ
ಸಿಗರೇಟು ಸೇವನೆ ತಿಳಿ ನೀನು
ಚಟ್ಟಕ್ಕೆ ಹತ್ತಿರವಾಗುತಿದೆ ಕೆಟ್ಟಚಟ
ಬಿಡದಿದ್ದರೆ ಜೀವಕ್ಕೆ ಬಲುಹಾನಿ
ಶ್ವಾಸಕೋಶಕ್ಕೆ ನುಗ್ಗಿದ ಹೊಗೆಯೆಲ್ಲ
ಮೈಯೆಲ್ಲಾ ವ್ಯಾಪಿಸಿ ಬಿಡಬಹುದು
ಕ್ಷಣಿಕ ಸುಖಕೆ ತೆರಬೇಕು ನಾವು
ನಮ್ಮ ಅಮೂಲ್ಯ ಜೀವನವ
ಹೊಗೆಯನ್ನು ಸೇದುವ ಅಭ್ಯಾಸ ತರವಲ್ಲ
ಕ್ಯಾನ್ಸರ್ ರೋಗಕ್ಕೆ ಕಾರಣ
ಮನುಜನ ಸರ್ವನಾಶ ಇದರಿಂದ ಆದೀತು
ನಿರ್ಲಕ್ಷ್ಯ ಬೇಡ ತಿಳಿಯೋಣ
ಪಂಕಜಾ.ಕೆ. ರಾಮಭಟ್ ಮುಡಿಪು
Comments
Post a Comment