ಜೈ ಶ್ರೀ ರಾಮ್
ರಾಮತಾರಕ ಮಂತ್ರ ಜಪಿಸುತ
ರಾಮಕರುಣೆಯ ಪಡೆಯಿರಿ
ಕಾಮಿತಾರ್ಥವ ಕೊಡುವ ಶ್ರೀಹರಿ
ನಾಮದಿಂದಲಿ ಒಲಿಸಿರಿ
ಸಾಮಗಾನದಿ ಭಜಿಸುತಿರುತಿರೆ
ಭಾಮೆಯರಸನು ಬರುವನು
ನೇಮದಿಂದಲಿ ಮಾಡಿ ಪೂಜೆಯ
ರಾಮನೊಲಿದು ಬಿಡುವನು
ದುಷ್ಟ ರಾವಣನನ್ನು ವಧಿಸುತ
ಶಿಷ್ಟ ರಕ್ಷಣೆ ಗೈದನು
ಇಷ್ಟವೆಲ್ಲವ ಕರುಣಿಸುತಲವ
ಭ್ರಷ್ಟ ಜನರನು ತರಿದನು
ತಂದೆ ಮಾತನು ಉಳಿಸಲಿಕೆ
ಕಾಡಿನೆಲ್ಲೆಡೆ ಅಲೆದನು
ಮಾತೆ ಅಹಲ್ಯೆಗೆ ಶಾಪ ಮುಕ್ತಿಯ
ಮಾಡಿ ಲೋಕದಿ ಮೆರೆದನು
ಶಬರಿ ಭಕುತಿಗೆ ಒಲಿದು ಬಿಡುತಲಿ
ಮುಕುತಿಯನ್ನು ಕರುಣಿಸಿ
ಶರಣು ಬಂದ ವಿಭೀಷಣನಿಗೆ
ಲಂಕೆ ಪಟ್ಟವ ಕೊಡಿಸಿದ
ರಾಮನಾಮವ ಜಪಿಸುತಿರುತಿರೆ
ಸಕಲ ಕಷ್ಟವು ಕಳೆವುದು
ನೋವನೆಲ್ಲವ ಮರೆಸಿ ಮನದಲಿ
ಹರುಷ ಮೂಡಿಸಿ ಬಿಡುವುದು
ಪಂಕಜಾ.ಕೆ. ರಾಮಭಟ್.ಮುಡಿಪು
Comments
Post a Comment