ಅತಿ ಮಾತು ತರವಲ್ಲ
ದೂರದ ಕೆರೆಯಲಿ ಕೊಕ್ಕರೆಗಳೆರಡು
ಅಮೆಯ ಗೆಳೆತನ ಮಾಡಿದವು
ಮಾತಿನ ಮಲ್ಲ ಅಮೆಯ ಜತೆಯಲಿ
ಸರಸದಿ ದಿನಗಳ ಕಳೆಯುತಲಿ
ಬೇಸಿಗೆ ಬರುತಲಿ ಕೆರೆಯದು ಬತ್ತಲು
ನೀರನು ಹುಡುಕಲು ತೆರಳಿದವು
ತಮ್ಮಯ ಜತೆಯಲಿ ಗೆಳೆಯನ ಸಾಗಿಸಲು
ಕೋಲನು ಕಚ್ಚಲು ಹೇಳಿದವು
ಅಮೆಯು ಕಚ್ಚಿದ ಕೋಲಿನ ತುದಿಯನು
ಹಿಡಿಯುತ ಮೇಲ್ಗಡೆ ಹಾರಿದವು
ಬಯಲಲಿ ಆಡುವ ಪುಟಾಣಿ ಮಕ್ಕಳು
ಸೋಜಿಗ ಕಾಣಲು ಕೇಕೆಯ ಹಾಕಿದವು
ಮಾತಿನ ಮಲ್ಲ ಅಮೆಗೆ ಬಂದಿತು
ಕೋಪವು ಮೂಗಿನ ತುದಿಯಲ್ಲೇ
ಮೂರ್ಖನ ತೆರದಲಿ ಅವರನು ಬೈಯಲು
ಬಾಯನು ತೆರೆದೇ ಬಿಟ್ಟಿತ್ತು
ಬಾಯಲಿ ಹಿಡಿದ ಕೋಲಿನ ಹಿಡಿತವು
ಸಡಿಲವಾದ ಕ್ಷಣದಲ್ಲೇ
ಪಟ್ಟನೆ ಕೆಳಗಡೆ ಬಿದ್ದೆ ಬಿಟ್ಟಿತು
ಅತಿ ಮಾತಿಗೆ ಕೊಟ್ಟಿತು ತನ್ನ ಪ್ರಾಣವನು
ಪಂಕಜಾ.ಕೆ. ಮುಡಿಪು
ಕುರ್ನಾಡು
Comments
Post a Comment