*ಸುಂದರ ಸಮಾಜದ ಶಿಲ್ಪಿ*
ಕಗ್ಗಲ್ಲನ್ನು ಸುಂದರ ಶಿಲ್ಪವಾಗಿಸುವ
ಕಲೆಯನು ಕಲಿತಿಹ ಶಿಕ್ಷಕನು
ಮಕ್ಕಳ ಮನದಲಿ ಸ್ಪೂರ್ತಿಯ ತುಂಬುತ
ಬಾಳಿಗೆ ಗುರಿಯನು ತೋರುವನು
ಸನ್ಮಾರ್ಗದ ದಾರಿಯಲಿ ನಡೆಸುತಲಿರುತ
ಸರಿ ತಪ್ಪುಗಳ ತಿಳಿಸುವನು
ಪಾಠದ ಜತೆಯಲಿ ಜೀವನದ ದಾರಿಗೆ
ಕಾಯಕಲ್ಪವ ಹಾಕುವನು
ಕರುಣೆ ಸಹನೆಯ ಮೂರ್ತಿಯಾಗುತ
ಮಕ್ಕಳ ಮನವನು ಸೆಳೆಯುವನು
ಗುರುತರ ಹೊಣೆಯನು ಹೊರುತಲಿರುತಲಿ
ಬಾಳಿಗೆ ದಾರಿಯ ತೋರುವನು
ಸುಂದರ ಸಮಾಜದ ನಿರ್ಮಾಣವ ಮಾಡಲು
ಮಾಲಿಯ ತೆರದಲಿ ದುಡಿಯುವನು
ಬೌದ್ಧಿಕ ಜ್ಞಾನವ ತುಂಬುತಲಿರುತಲಿ
ಸಾಧಕನಾಗಲು ಪ್ರೇರೇಪಿಸುವನು
*ಪಂಕಜಾ.ಕೆ ಮುಡಿಪು*
Comments
Post a Comment