. ವಾರಾಂತ್ಯ
ಕೆಲಸ ಕೆಲಸವೆಂದು ಒದ್ದಾಡುತ
ವಾರವಿಡೀ ದುಡಿಯುವ ಜನರು
ವಾರಾಂತ್ಯದ ರಜೆಯನ್ನು ಸುಖವಾಗಿ
ಮೋಜು ಮಸ್ತಿಯಲ್ಲಿ ಕಳೆಯುವರು
ಪ್ರಕೃತಿಯ ಸುಂದರ ತಾಣದಲ್ಲಿ ವಿಹಾರ
ಮೈಮನಕೆ ಉಲ್ಲಾಸದ ಹಾಸ
ಕೆಲಸದ ಆಯಾಸದ ಪರಿಹಾರಕ್ಕೆ
ಗೆಳೆಯ ಗೆಳತಿಯರ ಜತೆ ಸರಸ
ಮೈಮನದ ಜಡತೆಯನು ಕಳೆಯಲು
ಸಾಗರದ ತಡಿಯಲ್ಲಿ ವಿಹಾರ
ಹುಚ್ಚೆದ್ದು ಕುಣಿಯುವ ಅಲೆಗಳ ನೋಟ
ಕಳೆಯುವುದು ಮನದ ಬೇಸರ
ಸಾಗರದ ಅಲೆಗಳ ಎಡೆಬಿಡದ ನರ್ತನ
ನೋಡುತಿರಲು ಮನದಲಿ ತನನ
ಮುಳುಗುವ ಸೂರ್ಯನ ಕಿರಣದ ದೃಶ್ಯ
ಮನದ ಜಡತೆ ಕಳೆಯುವ ಸಾಧನ
ಮಡದಿ ಮಕ್ಕಳ ಜತೆಗಿನ ಒಡನಾಟ
ಕಳೆಯುವುದು ಮನಸಿನ ಬೇಸರ
ವಾರವಿಡೀ ದುಡಿದ ಆಯಾಸವನು
ಕ್ಷಣಮಾತ್ರದಲಿ ಕಳೆಯುವನು ನೇಸರ
ಪಂಕಜಾ.ಕೆ. ಮುಡಿಪು
Comments
Post a Comment