ಸಾಧನೆಗೆ ಅಂತ್ಯವಿಲ್ಲ
ಬಾಧಿಸುವ ಕಷ್ಟಗಳ ಕಡೆಗಣಿಸಿ ಮುನ್ನಡೆದು
ಸಾಧಿಸುವ ಛಲವಿರಲಿ ಮನದಾಳದಿ
ಸೋತರೂ ಛಲಬಿಡದೆ ಮುನ್ನುಗ್ಗಿ ನಡೆಯುತಿರು
ಒಂದಲ್ಲ ಒಂದು ದಿನ ಗೆಲುವು ನಿನ್ನದು
ಕಾಲೆಳೆಯುವ ಮಂದಿಯರ ಎಡೆಯಲ್ಲಿ ಮುನ್ನುಗ್ಗು
ದೈರ್ಯದಲಿ ಸಾಧನೆಯ ಶಿಖರವೇರು
ನಗುಮುಖದಿ ಮುನ್ನಡೆದು ಜಯಿಸುತಿರೇ ಬಾಳಿನಲಿ
ಖಂಡಿತವು ಸೋಲನ್ನು ಗೆಲ್ಲಬಹುದು
ಎಡವಿ ಮುಗ್ಗರಿಸಿದರೂ ಬಿಡಬೇಡ ಛಲವನ್ನು
ಪ್ರಯತಕ್ಕೆ ತಕ್ಕ ಫಲ ಸಿಗಬಹುದು ನೋಡು
ಮರೆಯದಿರು ಕಾಯುವ ದೇವನನು ಎಂದೆಂದೂ
ಎತ್ತರಕ್ಕೆ ಏರುತಲಿ ಪಡೆ ನೀನು ಯಶಸ್ಸು
ಸಾಧನೆಗೆ ಅಂತ್ಯವಿಲ್ಲವೆನ್ನುವುದ ತಿಳಿಯುತಲಿ
ಗುರಿಮುಟ್ಟುವವರೆಗೆ ವಿಶ್ರಮಿಸದಿರು ನೀನು
ಅಡೆತಡೆಯ ಸರಿಸುತ್ತ ಮುನ್ನುಗ್ಗು ವೇಗದಲಿ
ಜಯಲಕ್ಷ್ಮಿ ಒಲಿದಾಳು ಮಾಲೆಯನು ಹಿಡಿದು
ಪಂಕಜಾ.ಕೆ. ಮುಡಿಪು
Comments
Post a Comment