*ಬೆಳಗುವ ದೀಪ*
ಅಂಧಕಾರವ ತೊಲಗಿಸುತಲಿರುತಲಿ
ಬೆಳಗಿದೆ ದೀಪದ ಪ್ರಭಾವಳಿ
ಮನೆ ಮನೆಯಲ್ಲೂ ಸಂಭ್ರಮ ತಂದಿದೆ
ಬೆಳಕಿನ ಹಬ್ಬ ದೀಪಾವಳಿ
ಕತ್ತಲೆ ಕಳೆದು ಬೆಳಕನು ತುಂಬುತ
ಬಾಳಿನ ತಮವನು ಕಳೆಯುತಿದೆ
ಮನೆ ಮನಗಳ ಕೊಳೆಯನು ಕಳೆಯುತ
ಜ್ಞಾನದ ಜ್ಯೋತಿಯ ಉರಿಸುತಿದೆ
ಎಣ್ಣೆಯ ಸ್ನಾನವು ಕೊಡುತಿದೆ ತನುವಿಗೆ
ಮರೆಸುತ ಮೈ ಕೈ ನೋವುಗಳ
ದೀಪದ ಬೆಳಕಲಿ ಹೊಳೆದಿದೆ ಮನೆಯು
ನೀಗಿಸಿ ಮನುಜನ ಕಷ್ಟಗಳ
ಪರಿಸರ ಸ್ನೇಹಿ ಮಣ್ಣಿನ ಹಣತೆಯು
ಬೆಳಗಲಿ ಪ್ರತಿ ಮನೆಗಳನು
ಪರಿಸರ ಕೆಡಿಸುವ ಪಟಾಕಿ ಹಚ್ಚದೆ
ಸವಿಯಿರಿ ದೀಪಾವಳಿಯ ಸವಿಯನ್ನು
*ಶ್ರೀಮತಿ.ಪಂಕಜಾ.ಕೆ. ಮುಡಿಪು*
Comments
Post a Comment