ಹೊಸ ವರ್ಷಕ್ಕೆ ಸ್ವಾಗತ
ಹೊಸವರ್ಷದಾಗಮನವು ಸಂತಸವ ತಂದಿಹುದು
ಹೊಸಕನಸ ಬಿತ್ತುತಲಿ ಬೆಸೆಯುತಲಿ ಬಂಧವನು
ಕುಸಿಯುತಿಹ ಜೀವಕ್ಕೆ ಮರುಕಲ್ಪ ನೀಡಿ
ಮಂಜಿನಾ ಹನಿಯಲ್ಲಿ ಮಿಂದೆದ್ದ ಸುಂದರಿಯು
ಬಂಜೆಯೆನ್ನುವ ಸೊಲ್ಲ ಬಿಡಿಸುತಲಿ ಅರಳುತ್ತ
ಸಂಜೆಯಾ ಸಮಯಕ್ಕೆ ಕಾತರಿಸಿ ಕಾದು
ಮಾಗಿಯಾ ಚಳಿಯಲ್ಲಿ ಚಿಗುರುತಿದೆ ತರುಲತೆಯು
ನೀಗಿಸುತ ರಸಿಕರಾ ಮನಸಿನಾ ಬಯಕೆಗಳ
ಬೀಗುತಲಿ ತೂಗುತಿದೆ ತಲೆಯನ್ನು ಬಾಗಿ
ಪಂಕಜಾ.ಕೆ. ರಾಮಭಟ್.ಮುಡಿಪು
Comments
Post a Comment