Skip to main content

ಮೋಸ ಗಾರ ಕಥೆ

ಮೋಸಗಾರ

ಹವಾನಿಯಂತ್ರಿತ  ಕೊಠಡಿಯಲ್ಲಿ ಕುಳಿತ ರಮ್ಯಳನ್ನು ಕಾಣಲು ಯಾರೋ ಮೋಹನ ಅನ್ನುವವರು  ಬಂದಿದ್ದಾರೆ ಎಂದು ಜವಾನ  ಬಂದು ತಿಳುಸಿದಾಗ ,ಒಂದು ಕ್ಷಣ ರಮ್ಯಳ ಮನಸು ಗಲಿಬಿಲಿಗೊಂಡಿತು .ತನ್ನ ಭಾವನೆಗಳನ್ನು ನಿಯಂತ್ರಿಸಿ ಆಕೆ ಜವಾನನಿಗೆ ಅವರನ್ನು ಒಳಗೆ ಕಳಿಸಲು  ಹೇಳಿ ತನ್ನ ಮೊಬೈಲ್ ಹಿಡಿದು ತಿರುಗು ಖುರ್ಚಿಯನ್ನು  ಬಾಗಿಲಿಗೆ ಬೆನ್ನು ಹಾಕುವಂತೆ ತಿರುಗಿಕೊಂಡು ಕುಳಿತು ಸಂಭಾಷಣೆಯಲ್ಲಿ ನಿರತಳಾದಳು.
               ಇದ್ದಕ್ಕಿದ್ದಂತೆ ಮೇ ಐ ಕಂ ಇನ್ ಮೇಡಂ ಅನ್ನುವ ಗಂಭೀರ ಸ್ವರ ಕೇಳಿದಾಗ ರಮ್ಯಾ ಫೋನ್ ಗೆ ಕೈ ಅಡ್ಡ ಇಟ್ಟು  ಎಸ್ ಕಮಿನ್ ಟೇಕ್ ಯುವರ್ ಸೀಟ್ ಎಂದು ಹೇಳಿ ಪುನಃ ಸಂಭಾಷಣೆಯಲ್ಲಿ ನಿರತಳಾದಳು .ಕಾಲುಗಂಟೆಯಾದರೂ ಆಕೆ ಮಾತು ಮುಗಿಸದಾಗ ಆತ  ಮೆಲ್ಲಗೆ ಕೆಮ್ಮಿ ಮೇಡಂ ಎಂದು ಹೇಳಿದಾಗ ಆಕೆ ಫೋನ್ ನಲ್ಲಿ ಸೀ.ಯೂ ಲಾಟರ್ ಎಂದು ಹೇಳಿ  ಸರಕ್ಕನೆ ಈ ಕಡೆ ತಿರುಗಿದಾಗ ಎದುರು  ಕುಳಿತ  ಮೋಹನನ ಮುಖ ಒಂದು ಕ್ಷಣ ಗಲಿಬಿಲಿಯಿಂದ ವಿವರ್ಣವಾಯಿತು 
          .ಸಾವರಿಸಿಕೊಂಡು ಕುಳಿತಾಗ ರಮ್ಯಾ ಎಸ್   ಹೇಳಿ ಎಂದು ಗಂಭೀರವಾಗಿ ಹೇಳಿ ಟೇಬಲ್ ಮೇಲಿದ್ದ ಫೈಲ್ ನತ್ತ ದೃಷ್ಟಿ  ನೆಟ್ಟಳು.ಮೇಡಂ ದಯವಿಟ್ಟು ಕ್ಷಮಿಸಿ .ತಮ್ಮ  ಕಂಪನಿಯಲ್ಲಿ ನನಗೆ  ಒಂದು ಕೆಲಸ ಕೊಡಲು  ಸಾಧ್ಯವೇ .ದೈನ್ಯವೇ ಮೂರ್ತಿವೆತ್ತಂತೆ ಕುಳಿತ ಅವನನ್ನು ಕಂಡಾಗ ಒಂದು ಕ್ಷಣ ರೋಷ ಉಕ್ಕಿ ಬಂದರೂ ಮರುಕ್ಷಣವೇ ಕೋಪವನ್ನು ನಿಯಂತ್ರಿಸುತ್ತಾ ಇಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲವಲ್ಲ ಎಂದು  ಹೇಳಿದಾಗ ಮೋಹನ ತಟ್ಟನೆ ಮೇಡಂ ದಯವಿಟ್ಟು ಇಲ್ಲ ಎನ್ನಬೇಡಿ ನಾನು ಇದ್ದ ಕಂಪನಿ ತನ್ನ ಕೆಲಸಗಾರರನ್ನು ತೆಗೆದು ಹಾಕಿದ್ದರಿಂದ ನಾನು  ಬೇರೆ  ಕೆಲಸಕ್ಕಾಗಿ ಅಲೆದು ಬಸವಳಿದಿದ್ದೇನೆ  ಪ್ಲೀಸ್ ಮೇಡಂ ಎಂದು ಕೈ ಮುಗಿದ
                ಆತನನ್ನು ಕಂಡು ಒಂದು ಕ್ಷಣ ಕರುಣೆಯುಕ್ಕಿದರೂ ಮರುಕ್ಷಣವೇ ಆತನ ಮೋಸ ನೆನಪಾಗಿ ತನಗೆ ಆತ ಮಾಡಿದ ಗಾಯ  ಮಾಯ್ದರೂ ಕಲೆ ಹಾಗೆ ಉಳಿದಿರುವುದು ತಿಳಿದು ಮೆಲ್ಲಗೆ ಕೈ ಆ ಗಾಯದತ್ತ ಸರಿಯಿತು 
                ಅದನ್ನು ಕಂಡ ಅವನಿಗೂ ಆ ಘಟನೆಯ ನೆನಪಾಯಿತೇನೋ ಕ್ಷಮಿಸಿ ಮೇಡಂ  ಎಂದು ಏನೋ ಹೇಳಬೇಕೆಂದಿದ್ದಾಗ ಆಕೆ ನೀವು ಹೋಗಿ ನಾಳೆ  ಇದೇ ಹೊತ್ತಿಗೆ ನಿಮ್ಮ ಡಾಕ್ಯುಮೆಂಟ್ ತೆಗೆದುಕೊಂಡು ಬನ್ನಿಎಂದು ಹೇಳುತ್ತಾಳೆ. ಮೋಹನ ಆ ಕಡೆ ಹೋದ ತಕ್ಷಣ ರಮ್ಯಳ ಮನಸು ಬೇಡ ಬೇಡವೆಂದರೂ ಹಿಂದಕ್ಕೆ ಓಡಿತು  
             ಯಾವ ದೈರ್ಯದ ಮೇಲೆ ಅವರು ಇಲ್ಲಿಗೆ ಬಂದಿರಬಹುದು .ಬಹುಶಃ ರಮ್ಯಾ  ನಾನೇ ಎನ್ನುವ ಅನುಮಾನ ಆತನಿಗೆ ಬಂದಿರಲಾರದು ಇಲ್ಲಿ ನನ್ನ ನೋಡಿದಾಗ ಆತನ ಮುಖದಲ್ಲಿ ಕಂಡ ಭಾವನೆಯೇ ಅದನ್ನು ತಿಳಿಸುತ್ತದೆ.
            ಅದೀಗ ತಾನೇ ಇಂಜಿನೀರ್ ಪೂರೈಸಿ ಕೆಲಸದ ಬೇಟೆಯಲ್ಲಿದ್ದ ತನಗೆ ಆದಷ್ಟು ಬೇಗ ಮದುವೆ ಮಾಡುವ ಆಸೆ ತಂದೆ .ತಾಯಿಯರದು. ತನಗಾದರೊ ಕೆಲಸಕ್ಕೆ ಸೇರಿ ಸಂಪಾದಿಸಬೇಕು ಎನ್ನುವ ಆಸೆ ಆದರೆ ತಂದೆ ತಾಯಿಯರ ಮನ ನೋಯಿಸಲಾರದೆ ಒಪ್ಪಿದ್ದ  ರಮ್ಯಳನ್ನು ನೋಡಲು ಒಬ್ಬ ವರ ಬರುವವನಿದ್ದ ಸ್ಪುರದ್ರೂಪಿಯಾದ  ಅವನನ್ನು ನೋಡಿದ ತಕ್ಷಣ ರಮ್ಯಾ ಒಪ್ಪಿ ಬಿಟ್ಟಳು.ಹುಡುಗ ಅಮೆರಿಕದಲ್ಲಿದ್ದು  15 ದಿನದ ರಜೆಗೆ ಊರಿಗೆ ಬಂದಿದ್ದು 15 ದಿನದಲ್ಲಿ ಮದುವೆ ಮಾಡಿ ಕೊಡಬೇಕೆಂದು  ತಾಕೀತು ಮಾಡಿದ್ದ.  
                  ಬಣ್ಣ ಬಣ್ಣದ ಕನಸುಗಳನ್ನು ಕಾಣುತ್ತಿದ್ದ ರಮ್ಯಾ ಅವನಿಂದ ಬರುವ ಫೋನ್ ಕರೆಗಾಗಿ ನಿತ್ಯವೂ ಕಾಯುತ್ತಿದ್ದಳು .ಮದುವೆ ದಿನ ಹತ್ತಿರ ಬಂದರೂ ಆತ ತನಗೆ ಫೋನ್ ಮಾಡುವುದಾಗಲಿ ಹೊರಗೆ ತಿರುಗಾಡಲು ಕರೆದು ಕೊಂಡು ಹೋಗುವುದು ಮಾಡದೆ ಇದ್ದಾಗ  ಸಹಜವಾಗಿಯೇ ಅವಳ ಮನ ನಿರಾಶೆಯಿಂದ ಕುದಿಯುತ್ತಿತ್ತು .ಮದುವೆ ಆದಮೇಲೆ . ಅಮೆರಿಕಕ್ಕೆ ತನ್ನನ್ನು ಕರೆದೊಯ್ಯುತ್ತಾನಲ್ಲ  ಎನ್ನುವ ಆಸೆಯಿಂದ ಆಕೆ ಆ ಸುಂದರ ದಿನಕ್ಕಾಗಿ ಕಾಯುತ್ತಿದ್ದಳು. 
              ತುಂಬಾ ಸರಳವಾಗಿ ಮದುವೆ ಮಾಡಿಕೊಂಡ ಆತ ಮದುವೆ ಕಳೆದು  ಎರಡು  ದಿನದಲ್ಲಿಯೇ  ಅಮೆರಿಕಾಕ್ಕೆ ಹೊರಟು ಹೋದ 
            ಮೊದಲ ರಾತ್ರಿಯಂದು ರಮ್ಯಾ ಹತ್ತಿರ ಬಂದಾಗ ಆತ ಆಕೆಯನ್ನು ಬಲವಾಗಿ ತಳ್ಳಿ ನೋಡು  ರಮ್ಯಾ ನನಗೆ ಈಗಾಗಲೇ ಮದುವೆ ಆಗಿ ಮಗುವೂ ಇದೆ ಅಮ್ಮ ಅಪ್ಪನ ಒತ್ತಾಯಕ್ಕೆ ನಿನ್ನನ್ನು ಮದುವೆಯಾಗಿದ್ದೇನೆ .ನನ್ನೊಡನೆ ಅಮೆರಿಕಕ್ಕೆ ಬರುವ ಕನಸು ಇಟ್ಟುಕೊಳ್ಳಬೇಡ .ಬೇಕಿದ್ದರೆ ನಿನಗೆ ಡೈವೋರ್ಸ್ ಕೊಡುತ್ತೇನೆ ನೀನು ಬೇರೆ ಮದುವೆಯಾಗು ಎಂದು ಹೇಳಿ ನೂರಾರು ಕನಸು ಕಟ್ಟಿ  ಮೊದಲ  ರಾತ್ರಿಯ ಸಂಭ್ರಮ ಸವಿಯಲು ಬಂದ ಅವಳ ಮನಸ್ಸಿಗೆ   ಮಾಯದ ಗಾಯವನ್ನು ಮಾಡಿದ್ದ. 
            ಅವನು ತಳ್ಳಿದ ರಭಸಕ್ಕೆ ಕೈ ಪಕ್ಕದ  ಟೀಪಾಯಿಗೆ ಬಡಿದು ಕೈಯಲ್ಲಿದ್ದ ಗಾಜಿನ ಬಳೆಗಳು ಒಡೆದು ಕೈಗೆ ಚುಚ್ಚಿ ಮಾಯದ ಗಾಯ ಮಾಡಿ ಬಿಟ್ಟಿತ್ತು .ಅವಳ ಕೈಯ ಗಾಯ ನೋಡಿದರೂ ಏನೂ ಆಗದಂತೆ  ಆತ ಅಲ್ಲಿಯೇ ಹತ್ತಿರದಲ್ಲಿದ್ದ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. 
                 ತನ್ನ ಜೀವನ ಈ ರೀತಿಯಾದುದು ತಿಳಿದು ರಮ್ಯಾ ತುಂಬಾ ದುಃಖ ಪಟ್ಟಳು.ಆದರೆ ತನ್ನ ದುಃಖವನ್ನು ತೋರ್ಪಡಿಸಿಕೊಳ್ಳದೆ ,ಮರುದಿನ ಎಂದಿನಂತೆ ಎಲ್ಲರ ಜತೆ ಮಾತುಕತೆಯಾಡುತ್ರಾ ಇದ್ದ ರಮ್ಯಳನ್ನು ಕಂಡು ಅವಳ ಅತ್ತೆ ಮಾವ ನಿಟ್ಟುಸಿರುಬಿಟ್ಟರು ಎಲ್ಲಾ ಗೊತ್ತಿದ್ದೂ ತಾವು ಮಗನಿಗೆ ಮದುವೆ ಮಾಡಿ ಒಂದು ಹುಡುಗಿಯ ಜೀವನವನ್ನು  ಹಾಳು ಮಾಡಿದೇವೇನೋ ಎನ್ನುವ ಭಾವನೆ ಬಂದು ಅವರು ದುಃಖದಿಂದ ತಲೆತಗ್ಗಿಸಿ ಕುಳಿತು ಬಿಟ್ಟರು .
          ಅಮೆರಿಕಕ್ಕೆ ಹೋಗುವ ಮೊದಲು ತಂದೆ ತಾಯಿಯರ ಹತ್ತಿರ ಬಂದ ಪವನ್ ಎಲ್ಲಾ ವಿಷಯವನ್ನು ಹೇಳಿ ರಮ್ಯಳಿಗೆ ಡೈವರ್ಸ್ ಪತ್ರವನ್ನು ಕೊಟ್ಟು  ಹೊರಟು ಹೋಗಿದ್ದ. 
               ವಿಷಯ ತಿಳಿದ ಅವನ ತಂದೆ ತಾಯಿಯರ ದುಃಖ ಹೇಳ ತೀರದು. ಈ ವಿಷಯ ಮೊದಲೇ ಹೇಳುತ್ತಿದ್ದರೆ ತಾವು ಅವನಿಗೆ ಮದುವೆ ಮಾಡಿಸುವ  ಸಾಹಸ ಮಾಡುತ್ತಿರಲಿಲ್ಲ .ಈಗ ಅವನಿಂದಾಗಿ ಯಾವುದೇ ತಪ್ಪು ಮಾಡದ  ರಮ್ಯಳ ಬಾಳು  ಹಾಳಾಯಿತೆಂದು  ದುಃಖಿಸುತ್ತಾ ರಮ್ಯಳನ್ನು ಸಮಾಧಾನಿಸಲು ಅವಳ ರೂಮಿಗೆ ಹೋಗುವರು
                ರೂಮಿನಲ್ಲಿ ಒಂಟಿಯಾಗಿ  ಕುಳಿತು ದುಃಖಿಸುತ್ತಿದ್ದ ರಮ್ಯಾಳನ್ನು ಸಮಾಧಾನಿಸಿ ಅವಳು ಕೆಲಸಕ್ಕೆ ಸೇರಿದರೆ ಮನಸ್ಸು ಸಮಾಧಾನಗೊಳ್ಳಬಹುದೆಂದು ರಾಯರು ತನ್ನ ಸ್ನೇಹಿತ ಗೋಪಾಲರಾಯರಲ್ಲಿ  ಎಲ್ಲಾ ವಿಷಯ ಹೇಳಿ ರಮ್ಯಾಳಿಗೆ ಅವರ ಕಂಪನಿಯಲ್ಲಿ ಕೆಲಸ ಸಿಗುವಂತೆ ಮಾಡಿದ್ದಲ್ಲದೆ ಅವಳಿಗೆ ತಮ್ಮ ಮಗನಿಂದ ಡೈವರ್ಸ್ ಕೊಡಿಸಿ  ಅವಳ ಮನಸ್ಸಿಗೆ ಧೈರ್ಯ ತುಂಬಿದ್ದರು.
                ತನ್ನ ಕೈಯ ಗಾಯ ಮಾಯ್ದರೂ ಮನಸ್ಸಿಗೆ  ಆದ  ಗಾಯ ಮಾಯದೆ ರಮ್ಯಳನ್ನು ಪದೇ ಪದೇ ಕಾಡುತ್ತಿತ್ತು.
               ಹೀಗಿರಲು  ಅವಳ ಕೆಲಸದಲ್ಲಿ ಅವಳಿಗಿರುವ ಶ್ರದ್ಧೆಯನ್ನು ಕಂಡ ಗೋಪಾಲ ರಾಯರು  ತಮ್ಮ ಕಂಪನಿಯ .ಎಂ  .ಡಿ.ಯಾಗಿ ಮಾಡಿದ್ಧಲ್ಲದೆ ,ತಮ್ಮ ಮಗ ಸಂಜಯನ ಜತೆ ಮದುವೆಯನ್ನೂ ಮಾಡಿಸಿದ್ದರು
                ತನಗಾದ ಆಘಾತದಿಂದ  ಚೇತರಿಸದೆ ಇದ್ದ ರಮ್ಯಾಳನ್ನು ಯಾವುದೇ ಕಾರಣಕ್ಕೂ ಒತ್ತಾಯಿಸದೆ ಪ್ರೀತಿಯಿಂದವೇ ಕಾಣುತ್ತಿದ್ದ ಸಂಜಯ  ಅವಳೆಲ್ಲಾ ಕಾರ್ಯಕ್ಕೆ  ಒತ್ತಾಸೆಯಾಗಿದ್ದ.
                    ಕೆಲಸವೆಲ್ಲಾ ಮುಗಿದ ಮೇಲೆ ಸಂಜಯನ  ರೂಮಿಗೆ  ಹೋದ ರಮ್ಯಾ ಒಂದು ಫೈಲ್ ಅನ್ನು ಅವನೆದುರು ಇಟ್ಟು  ಕೈ ಕಟ್ಟಿ ನಿಂತಳು. ಅವಳ ನಡೆಯಿಂದ ಚಕಿತನಾದ ಸಂಜಯ ಫೈಲ್ ತೆರೆದು ನೋಡಿದಾಗ ವಿಷಯದ ಅರಿವಾಗಿ .ನೋಡು ರಮ್ಯಾ ಇವನನ್ನು ಕೆಲಸಕ್ಕೆ ತೆಗೆದುಕೊಳ್ಳುವುದು ಬಿಡುವುದು ನಿನಗೆ ಸೇರಿದ್ದು  ನನ್ನ ಅಭ್ಯಂತರವಿಲ್ಲ ಎಂದು ಹೇಳಿದಾಗ ಹೆಮ್ಮೆಯಿಂದ ರಮ್ಯಳ ಕಂಗಳಲ್ಲಿ ಸಂಜಯನ ಬಗ್ಗೆ ಮೊದಲ ಬಾರಿಗೆ ಪ್ರೀತಿ ವಾತ್ಸಲ್ಯ ಉಕ್ಕಿ ಬಂದಿತು.
                 ಮರುದಿನ 10 ಗಂಟೆಯಾದರೂ ಪವನ್ ಬಾರದೆ ಇದ್ದುದು ಕಂಡು ಬಹುಶಃ ಅವನಿಗೆ ತನ್ನನ್ನು ದಿನಾ ಎದುರಿಸುವುದು ಸಾಧವಿಲ್ಲವೇನೋ ಅದಕ್ಕೆ ಬರಲಿಲ್ಲ ಎಂದು ಕೊಳ್ಳುತ್ತಾಳೆ .ಆದರೆ ಸಾಯಂಕಾಲ ಟಿ. ವಿ.ಯಲ್ಲಿ ಬಂದ ವಾರ್ತೆ ನೋಡಿ ರಮ್ಯ ದಂಗಾದಳು . ಏಕೆಂದರೆ ಪವನ್ ನಿದ್ದೆ ಮಾತ್ರೆ ತಿಂದು ಆತ್ಮಹತ್ಯೆ ಮಾಡಿಕೊಂಡಿದ್ದ .ಕೆಲಸ ಸಿಗದ ನಿರಾಸೆಯಿಂದ ತಾನು ಸಾಯುತ್ತಿರುವುದಾಗಿ ಪತ್ರ ಬರೆದಿಟ್ಟುದರಿಂದ ಯಾವುದೇ ಸಮಸ್ಯೆಯಾಗದೆ   ಪವನ್ ನ ಅಧ್ಯಾಯ ಮುಗಿದಿತ್ತು.
                 ಅಂದು ರಾತ್ರಿ ರಮ್ಯಾ ತನ್ನ ಗಂಡ ಸಂಜಯನನ್ನು ಬಳಸಿ ಅವನ ಎದೆಯ ಮೇಲೆ ತಲೆ ಇಟ್ಟು ನಿದ್ದೆ ಮಾಡಿದಳು .ಮಡದಿಯ ಮನವನ್ನು ಅರಿತ ಸಂಜಯ ಅವಳನ್ನು ತಬ್ಬಿ ಅವಳನ್ನು ತನ್ನ ಎದೆಗೊರಗಿಸಿ  ನಿದ್ದೆ ಹೋದ
                ಸೂರ್ಯನ ಕಿರಣಗಳು ಕಿಟಕಿಯಿಂದ ತೂರಿ ಬಂದಾಗ ಕಣ್ಣು ಬಿಟ್ಟ ರಮ್ಯಳಿಗೆ ತಾನು ಸಂಜಯನ ಎದೆಯ ಮೇಲೆ ತಲೆಯಿಟ್ಟು ಮಲಗಿರುವುದು ತಿಳಿದು ನಾಚಿಕೆಯಿಂದ ಮುಖ ಕೆಂಪಗಾಗಿತ್ತು .
            ಅವಳು ಏಳಬೇಕೆಂದು ಮಾಡಿದಾಗ ಸಂಜಯನ ಬಲವಾದ  ತೋಳುಗಳು ಅವಳನ್ನು ಬಳಸಿ ಹಿಡಿದು ಆತ ಅವಳನ್ನು ತಬ್ಬಿ ಮುತ್ತಿಟ್ಟಾಗ ಎಂದೂ ಇಲ್ಲದ ನಾಚಿಕೆ ರಮ್ಯಳನ್ನು ಆವರಿಸಿ ಅವಳು ಸಂಜಯನ ಪ್ರೀತಿಯಲ್ಲಿ ಕಳೆದು ಹೋದಳು. 
              ಮೇಲೇರಿ ಬರುವ ಸೂರ್ಯನನ್ನು ನೋಡಿ ನಕ್ಕು ಸಂಜಯ ಇಂದು ನಮ್ಮ  ಬಾಳಿನ ಮೊದಲ ಸೂರ್ಯೋದಯ ಬಾ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಅಡ್ಡಾಡುವ ಎಂದು ಅವಳನ್ನು ಮನೆಯ ಎದುರಿನ ಹೂದೋಟಕ್ಕೆ ಕರೆದೊಯ್ದ

ಪಂಕಜಾ.ಕೆ.  ರಾಮಭಟ್ ಮುಡಿಪು
           
.

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.