Skip to main content

ಕೊನೆಯಿಲ್ಲದ ದಾರಿ ಕಥೆ

21  ಕೊನೆಯಿಲ್ಲದ ದಾರಿ
  
ರಾಕೇಶನ ಕಾಲುಗಳು  ಕೊನೆಯಿಲ್ಲದ ಆ ದಾರಿಯಲ್ಲಿ ನಡೆಯುತ್ತಾ ಇದ್ದರೂ  ಮನಸು ಮಾತ್ರ ಕಳೆದು ಹೋದ  ದಿನಗಳನ್ನು   ಮೆಲುಕು ಹಾಕುತ್ತಿತ್ತು
                     ಚಿಕ್ಕಂದಿನಿಂದಲೂ ಬಡತನದಲ್ಲಿ ಬೆಳೆದ ರಾಕೇಶ ನಿಗೆ ಹಣದ ಬೆಲೆ ತಿಳಿದಿತ್ತು .ಆದ್ದರಿಂದ  ಶಾಲೆಗೆ ಹೋಗುತ್ತಿದ್ದಾಗಲೇ ಬೆಳಗ್ಗಿನ ಜಾವ  ಬೇಗನೆ ಎದ್ದು ಮನೆ ಮನೆಗೆ ಪೇಪರ್ ಹಾಕಿ ಸಂಪಾದನೆ ಮಾಡಿ ತನ್ನ ಶಾಲಾ ಪುಸ್ತಕ ಇತ್ಯಾದಿ ಸಣ್ಣಪುಟ್ಟ ಖರ್ಚುಗಳನ್ನು ಭರಿಸುತ್ತಿದ್ದ..
                 ಓದಿನಲ್ಲಿ ಜಾಣನಾಗಿದ್ದ ರಾಕೇಶ್ ಪ್ರತಿ ತರಗತಿಯಲ್ಲು  ಪ್ರಥಮ ಸ್ಥಾನ ಬಂದು  ಎಸ್.ಎಸ್.ಎಲ್.ಸಿ ಯಲ್ಲಿ  ರಾಜ್ಯಕ್ಕೆ ಪ್ರಥಮ ಸ್ಥಾನ ಬಂದು ಆ ಊರಿನ ಕೀರ್ತಿಯನ್ನು ಹೆಚ್ಚಿಸಿದ್ದ. ಆತನ ಮುಂದಿನ ಓದಿನ ಖರ್ಚನ್ನು ಸರಕಾರವೇ ಭರಿಸಿದ್ದರಿಂದ ರಾಕೇಶ್ ತನ್ನ ವಿದ್ಯಾಭ್ಯಾಸವನ್ನು ಪೂರೈಸಿ  ಒಳ್ಳೆಯ ಕೆಲಸಕ್ಕೆ ಸೇರಿ ತನ್ನ ಹಾಗೂ ತನ್ನ. ಮನೆಯವರ ಬಡತನವನ್ನು ನೀಗಿಸಿದ್ದಲ್ಲದೆ  ತನ್ನಂತೆ ಬಡ  ಕುಟುಂಬದಲ್ಲಿ ಹುಟ್ಟಿ ವಿದ್ಯಾಭ್ಯಾಸ ಮಾಡಲಾಗದ   ಎಷ್ಟೋ ಜನರನ್ನು ತನ್ನ ಖರ್ಚಿನಲ್ಲಿ ಓದಿಸಿದ್ದು . ಅವರೆಲ್ಲಾ ಇಂದು ಉತ್ತಮ ಕೆಲಸದಲ್ಲಿದ್ದು .ರಾಕೇಶನ ಬಗ್ಗೆ ಅಭಿಮಾನವಿಟ್ಟು ಕೊಂಡಿದ್ದರು. 
                   ಎಷ್ಟೊಂದು  ಸುಂದರವಾಗಿತ್ತು  ನನ್ನ ಸಂಸಾರ  ಪತ್ನಿ ರಮಾ ನನ್ನ ಬೇಕು ಬೇಡಗಳನ್ನು ತಾನು ಹೇಳುವ ಮುಂಚೆಯೇ ತಿಳಿದುಕೊಂಡು  ಮಾಡುತ್ತಿದುದರಿಂದ ತನಗೆ ಮನೆಯ ಬಗ್ಗೆ ಯಾವುದೇ ಚಿಂತೆ ಇರಲಿಲ್ಲ ಮಕ್ಕಳಿಬ್ಬರೂ ತನ್ನಂತೆ  ಪ್ರತಿಭಾವಂತರಾಗಿದ್ದರು .ತನ್ನಂತೆ   ಅವರು ಕಷ್ಟಪಡಬಾರದೆಂದು ಅವರಿಗೆ ಎಲ್ಲಾ ಅನುಕೂಲತೆಗಳನ್ನು ಮಾಡಿ ಕೊಟ್ಟಿದ್ದ ತಾನು ಅವರನ್ನು ಪ್ರೀತಿಸುವುದರಲ್ಲಿಯೂ ಹಿಂದೆ ಬಿದ್ದಿರಲಿಲ್ಲ ಆದರೆ ಈಗ  ತಾನು  ಕೆಲಸದಿಂದ ನಿವೃತ್ತಿ ಗೊಂಡ ತಕ್ಷಣ ಮಕ್ಕಳಿಗೆ ತಾನು ಬೇಡವಾದೆನೇ  ಪತ್ನಿ ರಮ ಈಗ ಇರುತ್ತಿದ್ದರೆ  ತಾನು ಈ ರೀತಿ  ಮಕ್ಕಳ  ಹಂಗಣೆಯಲ್ಲಿ ಇರಬೇಕಾಗಿರಲಿಲ್ಲ . ಈಗ ಒಂಟಿ ಪಕ್ಷಿಯಾದ ತನಗೆ  ಮಕ್ಕಳ  ನಿರ್ಲಕ್ಷ್ಯ ಸಹಿಸಲಾಗುತ್ತಿಲ್ಲ . ವೃದ್ಧಾಶ್ರಮಕ್ಕೆ ತನ್ನನ್ನು ಸೇರಿಸುವ ಮಾತನಾಡುತ್ತಿರುವ ಮಕ್ಕಳ ಮಾತನ್ನು ಕೇಳಿ ತನಗಂತೂ ತುಂಬಾ ಬೇಸರವಾಗಿತ್ತು . ಇಷ್ಟಕ್ಕಾಗಿಯೇ ,ಇಂಥವರಿಗಾಗಿಯೇ  ತಾನು   ಕಷ್ಟಪಟ್ಟು  ಹಗಲು ಇರುಳೂ ದುಡಿದು ಸಂಪಾದನೆ ಮಾಡಿದ್ದು ಎಂದು  ಬೇಸರದಲ್ಲಿ ರಾತ್ರಿ ಚಳಿಗೆಂದು ಧರಿಸಿದ  ಬೆಚ್ಚನೆಯ ಉಡುಪಿನಲ್ಲಿಯೇ  ಮನೆ ಬಿಟ್ಟು ಬಂದುದಾಗಿತ್ತು .ಹೋಗುವುದು ಎಲ್ಲಿಗೆ  ತಿಳಿಯದೆ ಮುಂದೆ ಉದ್ದಕ್ಕೆ ಚಾಚಿದ ರಸ್ತೆಯಲ್ಲಿ ನಡೆಯುತ್ತಾ ಬಳಲಿ ಒಂದು ಕಡೆ ಕುಳಿತು ಬಿಟ್ಟ ರಾಕೇಶನನ್ನು ಆ ದಾರಿಯಲ್ಲಿ ಬಂದ   ಸುಮಂತ್  ನೋಡಿ   ತನ್ನ ಕಾರಿನಲ್ಲಿ ಮನೆಗೆ ಕರೆದೊಯ್ದು ಅವರನ್ನು ಉಪಚರಿಸಿ,   ಅವರ ಕಥೆಯನ್ನು ಕೇಳಿ  ನೊಂದುಕೊಂಡು ,  ಅಪ್ಪಾಜಿ ನೀವು ಇಲ್ಲೇ ಇದ್ದು ಬಿಡಿ ನನಗೂ ಮನೆಯಲ್ಲಿ ಹಿರಿಯರು ಇದ್ದರೆ  ಏನೋ ಒಂಥರ ಧೈರ್ಯ .ನಮ್ಮ ಮಗನಿಗೂ ಅಜ್ಜನ ಪ್ರೀತಿ ಸಿಗುತ್ತದೆ ಎಂದು  ಹೇಳಿದ್ದು ಕೇಳಿ ರಾಕೇಶನ ಕಣ್ಣುಗಳು ತುಂಬಿ  ಬಂತು.ಅದನ್ನು ಕಂಡ ಸುಮಂತ್ ಅಪ್ಪಾಜಿ ನೀವು ಅಳಬಾರದು  ನನ್ನಂತ ಎಷ್ಟೋ ಅನಾಥರಿಗೆ ದಾರಿ ತೋರಿಸಿದ ನೀವು ಎಂದಿಗೂ ಅನಾಥರಲ್ಲ ಆಗಲು  ನಾನು ಬಿಡುವುದೂ ಇಲ್ಲ ಎಂದು ಅವರನ್ನು ತಬ್ಬಿ ಅವರ ಮಡಿಲಲ್ಲಿ ಮಗುವಿನಂತೆ ಮಲಗಿ ಬಿಟ್ಟ ರಾಯರ ಕೈಗಳು ಸುಮಂತನ ಕೂದಲನ್ನು ಸವರುತ್ತಿದ್ದರೂ ಮನಸ್ಸು ಚಿಂತಿಸುತ್ತಿತ್ತು ಯಾರು ನಮ್ಮವರು ಎಂದು
                   
ಪಂಕಜಾ. ಕೆ. ಮುಡಿಪು

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.