Skip to main content

ಮತ್ತೆ ಕೂಗಿತು ಕೋಗಿಲೆ

ಮತ್ತೆ ಕೂಗಿತು  ಕೋಗಿಲೆ
           
  ಪಾರ್ಕಿನ ಕಲ್ಲಿನ ಬೆಂಚಿನಲ್ಲಿ ಕುಳಿತ ಶ್ರೀಪತಿರಾಯರ ಮನಸು ಇಂದೇಕೋ ಅಸ್ತವ್ಯಸ್ತವಾಗಿತ್ತು.ತಾನು ಹೊರಡುವಾಗ  ತನ್ನನ್ನೇ ದಿಟ್ಟಿಸಿದ ಆಕೆಯ ಕಣ್ಣುಗಳಲ್ಲಿ ತುಂಬಿದ  ನೀರು ಯಾಕಾಗಿ ಇರಬಹುದು?ಏಕೋ ಇತ್ತೀಚೆಗೆ ರತ್ನ  ಮೌನಿಯಾಗುತ್ತಿದ್ದಾಳೆ ಅರಳು ಹುರಿದಂತೆ ಮಾತನಾಡುತ್ತಿದ್ದ ಆಕೆ ಯಾಕೆ ಮೌನವಾದಳು? ಅದನ್ನು ತಿಳಿಯಬೇಕೆನ್ನುವ ಕುತೂಹಲವೂ ತನಗಿಲ್ಲ  ಯಾಕೆ ಅದನ್ನು ತಿಳಿಯಲು ತನಗಿರುವ ಅಹಂ ಅಡ್ಡಬಂತೆ?ತಾನು ತಪ್ಪಿದೆಲ್ಲಿ ಎಂದು ಯೋಚಿಸಬೇಕಿತ್ತು
             ಅವಳಿಗೇನು ಕಡಿಮೆ ಮಾಡಿದ್ದೇನೆ ಉಡಲು ಉಣ್ಣಲು ಕೊರತೆಯಿಲ್ಲ ಅರಮನೆಯಂತ  ಮನೆಯಿದೆ ಕೆಲಸಕ್ಕೆ ಆಳು ಕಾಳುಗಳಿದ್ದಾರೆ ಇನ್ನೇನು ಬೇಕು ಎನ್ನುವ ದೊರಣೆ ನನ್ನದು .  ಆದರೆ ಇಂದೇಕೋ ರತ್ನ ವಿಶೇಷವಾಗಿ ಕಾಡುತ್ತಿದ್ದಾಳೆ ಎಂದು ಯೋಚಿಸುತ್ತಾ ಇದ್ದಾಗ.ಪಕ್ಕದಲ್ಲಿಯೇ ಕುಳಿತ ವೃದ್ಧ ದಂಪತಿಗಳ ಸರಸ ಸಲ್ಲಾಪದತ್ತ ಮನ  ಹೊರಳಿತು.
       ವಿದ್ಯಾ ನೀನು ನನ್ನ ಬಾಳಿಗೆ ಬಂದ ದಿನದಿಂದವೇ ನನ್ನ ಬಾಳಲ್ಲಿ ಬೆಳದಿಂಗಳು ಮೂಡಿತು ಎಂದು ಹೇಳಿ ಮಡದಿಯನ್ನು ಬಿಗಿದಪ್ಪುವ ವೃದ್ಧನನ್ನು ಕಂಡಾಗ ಶ್ರೀಪತಿರಾಯರ ಮನಸ್ಸು ಕೂಡಾ ಹೌದಲ್ಲವೇ ರತ್ನ ತನ್ನ ಬಾಳಿಗೆ  ಬಂದ  ದಿನವೇ  ತನ್ನ ಬಾಳು  ಕೂಡಾ ಬೆಳಕಾಗಿತ್ತಲ್ಲ ಆದರೆ ತಾನು ಅದನ್ನು ಒಮ್ಮೆಯೂ ಆ ವೃದ್ದರಂತೆ ಅವಳೊಡನೆ ಹೇಳಿಲ್ಲ ಯಾಕೆ ತಾನು ಅವಳೊಡನೆ ಒಮ್ಮೆಯೂ ಪ್ರೀತಿಯ ಮಾತನಾಡಲಿಲ್ಲ ತಾನು ತಪ್ಪಿದ್ದೆಲ್ಲಿ ಎನ್ನುವ ಯೋಚನೆಗೆ ಬಿದ್ದ ರಾಯರ ಮನಸ್ಸು ಹಿಂದಕ್ಕೋಡಿತು                  
                       ತನಗೆ 5 ವರ್ಷವಾದಾಗ ತಾಯಿ ಯಾವುದೋ ಕಾಯಿಲೆಗೆ ತುತ್ತಾಗಿ ಮರಣಹೊಂದಿದ್ದರಿಂದ ,ತನ್ನನ್ನು ನೋಡಿಕೊಳ್ಳಲೆಂದು ತಂದೆ ಮರುಮದುವೆಯಾಗಿದ್ದರೂ, ಚಿಕ್ಕಮ್ಮ ತಾಯಿಯಾಗದೆ ಮಲತಾಯಿಯಾಗಿಯೇ ಉಳಿದು,ತನ್ನನ್ನು ಮಾತು ಮಾತಿಗೆ ತಿವಿಯುತ್ತಾ ತಾನು ಪ್ರೀತಿಯ ಕೊರತೆಯಿಂದ ನರಳುತ್ತಿದ್ದಾಗ ,ತಂದೆ ಹತ್ತಿರ ಬಂದು ಮಾತನಾಡಿದರೂ ಸಹಿಸದ ಚಿಕ್ಕಮ್ಮ  ತಂದೆ ಇಲ್ಲದ ಸಮಯದಲ್ಲಿ ಕಿವಿ ಹಿಂಡಿ ತಮ್ಮಿಬ್ಬರ ಮಧ್ಯೆ ಇನ್ನೊಮ್ಮೆ ಬಂದರೆ ನಿನ್ನ ನಾಲಿಗೆ ಕತ್ತರಿಸುತ್ತೇನೆ ಎಂದು ಹೇಳಿದ್ದರಿಂದ ತನಗುಂಟಾದ ಭಯಕ್ಕೆ ತಾನು ಮೌನದ ಮೊರೆ ಹೊಕ್ಕಿದ್ದೇನಲ್ಲ . ಅಪ್ಪನಿಗೆ ತನ್ನ ಮೌನ ಹಿಂಸೆಯಾದಂತೆನಿಸಿ ಚಿಕ್ಕಮ್ಮನನ್ನು ತರಾಟೆಗೆ ತೆಗೆದು ಕೊಂಡಾಗ ಚಿಕ್ಕಮ್ಮ ಎಲ್ಲವನ್ನು ಒದರಿದ್ದರಿಂದ ಸಿಟ್ಟಿಗೆದ್ದ ತಂದೆ ತನ್ನನ್ನು ಬೋರ್ಡಿಂಗ್ ಶಾಲೆಗೆ ಸೇರಿಸಿದ್ದು, ಆಗಾಗ ಬಂದು ವಿಚಾರಿಸುತ್ತಿದ್ದರೂ , ಸಹಪಾಠಿಗಳಂತೆ ರಜೆಯಲ್ಲಿ ತನಗೆ ಮನೆಗೆ ಹೋಗುವ ಅಧಿಕಾರವಿರಲಿಲ್ಲ. ತನ್ನ ಈ ಒಂಟಿತನವೇ ತನಗೆ ಯಾರನ್ನು ಪ್ರೀತಿಸಲಾಗದಂತೆ ಮಾಡಿತೇನೋ ಪಾಪ ರತ್ನ ಇದರಿಂದ ಎಷ್ಟು ನೊಂದಿರಬಹುದು ತುಂಬು ಕುಟುಂಬದಲ್ಲಿ ಬೆಳೆದ ಆಕೆ ಇಲ್ಲಿ ಒಂಟಿಯಾಗಿ ಹೇಗೆ ಕಾಲ ಕಳೆಯುತ್ತಿದ್ದಾಳೋ? ಈ ಬಗ್ಗೆ ತನಗೇಕೆ ಇಷ್ಟರ ತನಕ ಯೋಚನೆ ಬರಲಿಲ್ಲ.ಎಂದು ಯೋಚಿಸುತ್ತಿದ್ದ ರಾಯರ ಮನಸ್ಸು ಪುನಃ ತಮ್ಮ ಮದುವೆಯತ್ತ ಹೊರಳಿತು. 
                        ತಾನು ಕಲಿತು ಕೆಲಸಕ್ಕೆ ಸೇರಿದ ಕೂಡಲೇ  ಬೆಳದಿಂಗಳ ಬಾಲೆಯಂತ ಸುಂದರ ತರುಣಿಯನ್ನು  ತನಗಾಗಿ  ತಂದೆ ನೋಡಿ ಇಟ್ಟಿದ್ದು ,ತಾನು ಈಗಲೇ ಮದುವೆ ಬೇಡ ಎಂದು ಹೇಳಿದಾಗ ಹುಡುಗಿಯನ್ನು ನೋಡು ಬೇಡದಿದ್ದರೆ ಬೇಡ ಎಂದು ಹೇಳಿದರಾಯಿತೆಂದು ಒತ್ತಾಯಿಸಿ ಹುಡುಗಿ ನೋಡಲು ಕರೆದೊಯ್ದಿದ್ದು ,ಅಲ್ಲಿ  ಹುಡುಗಿಯ ಮೋಹಕ ರೂಪು ತನ್ನನ್ನು ಸೆಳೆದಿದ್ದು ಮುಂದೆ ತನ್ನ ಮದುವೆ.ಮಾತುಗಾತಿಯಾದ ರತ್ನಳ ಒಲವು ತನ್ನ ಬಾಳಿಗೆ  ಒಂದು ಅರ್ಥ ತಂದು ಕೊಟ್ಟಿದ್ದು ಎಲ್ಲವನ್ನು ನೆನಪು ಮಾಡುತ್ತಾ ಇದ್ದ ಹಾಗೆ ಶ್ರೀಪತಿರಾಯರಿಗೆ ತಾನು ತಪ್ಪಿದ್ದೆಲ್ಲಿ ಎನ್ನುವುದು ತಿಳಿದು ಬಂತು.ಆ ವೃದ್ಧ ದಂಪತಿಗಳಲ್ಲಿ ಇರುವಷ್ಟು ಪ್ರೀತಿಯು  ತಮ್ಮಲಿಲ್ಲ, ತಮ್ಮಲಿಲ್ಲ ಅನ್ನುವುದಕ್ಕಿಂತಲೂ ಹೆಚ್ಗಾಗಿ ತಾನು ರತ್ನಳಿಗೆ ಕೊಟ್ಟಿಲ್ಲ ಎಂದು ನೆನಪಾದಾಗ ಪಶ್ಚಾತ್ತಾಪ ದಿಂದ ಶ್ರೀಪತಿರಾಯರ ಕಣ್ಣು ಹನಿಗೂಡಿತು.ನಿಧಾನವಾಗಿ ಕಾಲೆಳೆಯುತ್ತಾ ಮನೆಗೆ ಬಂದ ರಾಯರಿಗೆ  ಗೇಟಿನ ಬಳಿಯೇ ಆತಂಕದಿಂದ ಕಾಯುತ್ತಿದ್ದ ಮಡದಿಯನ್ನು ಕಂಡು  ,ಒಂದು ಕ್ಷಣ ಮನಸ್ಸು ಮೂಕವಾಯಿತು.
                         ತನ್ನನ್ನು ಕಂಡ ತಕ್ಷಣ ಒಳಗೆ ಹೋಗಲೆಂದು  ತಿರುಗಿದ ರತ್ನಾಳ ಭುಜ ಬಳಸಿದ ರಾಯರು ಯಾಕೆ ರತ್ನ ಭಯವಾಯಿತೆ? ಯಾವುದೋ ಯೋಚನೆ  ಮಾಡುತ್ತಾ ಪಾರ್ಕಿನಲ್ಲಿ ಕುಳಿತು ಬಿಟ್ಟೆ  ನಡಿ ಒಳಗೆ ಹೋಗೋಣ  ಎಂದು ಹೇಳಿ ಅವಳನ್ನು ಬಳಸಿಕೊಂಡೇ ಒಳಗೆ ಕರೆದೊಯ್ದಾಗ ಗಂಡನ ಅನಿರೀಕ್ಷಿತ ಪ್ರೀತಿಯ ಸ್ಪರ್ಶದಿಂದ ರತ್ನಾಳ ಮನ ಹಕ್ಕಿಯಂತೆ ಹಾರಾಡಿತು.
                          ಊಟ ಆದಮೇಲೆ ರಾಯರು ರತ್ನಾಳನ್ನು ಹತ್ತಿರ ಕುಳ್ಳಿರಿಸಿ ಆಕೆಯ ಮೃದು ಹಸ್ತವನ್ನು ಹಿಡಿದುಕೊಂಡು ರತ್ನ ನನ್ನನ್ನು ಕ್ಷಮಿಸು ಮದುವೆಯಾದಂದಿನಿಂದ ನಿನ್ನನ್ನು ಎಲ್ಲಿಗೂ ಕರೆದೊಯ್ಯಲಾಗಲಿಲ್ಲ .ಬರುವ ವಾರ ನಾವು ಎಲ್ಲಾದರೂ ಒಂದುವಾರ ಹೋಗಿ ಬರೋಣ  ನಿನಗೂ ಮನೆಯಲ್ಲೇ ಕುಳಿತು ಬೇಸರವಾಗಿರಬಹುದು ಎಂದು ಹೇಳಿದಾಗ ಖುಷಿ ತಡೆಯಲಾರದೆ ರತ್ನ ಗಂಡನ ಭುಜಕ್ಕೆ ಒರಗಿದಳು.
                          ತನ್ನ ಭುಜಕ್ಕೆ ಒರಗಿದ ಮಡದಿಯನ್ನು ಮೃದುವಾಗಿ ಬಳಸಿ ,ನನಗೆ ನಾನು ಮದುವೆಯಾಗುವಾಗ ಇದ್ದ ಮಾತಿನ ಮಲ್ಲಿ ರತ್ನ ಬೇಕು ಈ ಮೌನ ಗೌರಿಯಲ್ಲ.ನಾಳೆಯಿಂದ ಎಲ್ಕಾ ಯೋಚನೆ ಬಿಟ್ಟು ಮೊದಲಿನಂತೆ ಇರುತ್ತಿ ತಾನೇ ಎಂದು ಮುದ್ದುಗರೆದಾಗ, ಗಂಡನ  ಉತ್ಕಟ ಪ್ರೀತಿಯಲ್ಲಿ ರತ್ನ ಕರಗಿ ಹೋದಳು. ಆ ರಾತ್ರಿ ದಂಪತಿಗಳಿಗೆ ಮಧುಚಂದ್ರವಾಗಿತ್ತು .ದಂಪತಿಗಳ ಸರಸವನ್ನು ನೋಡಿ ಬಾನಿನ ಚಂದ್ರ ಮೋಡಗಳೆಡೆಯಲ್ಲಿ ಮರೆಯಾದ
                          ಪಂಕಜಾ.ಕೆ. ಮುಡಿಪು

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.