Skip to main content

ತಾಳ್ಮೆಯಿರಲಿ

ತಾಳ್ಮೆಯಿರಲಿ

ಎಷ್ಟು ಹೊತ್ತಿನಿಂದ ಅಲ್ಲಿ ಕುಳಿತಿದ್ದನೋ ಅವನಿಗೆ ನೆನಪಿಲ್ಲ ಇಹದ ಪರಿವೆಯೇ ಇಲ್ಲದೆ ಯಾವೊದೋ ಯೋಚನೆಯಲ್ಲಿ ಮುಳುಗಿದ್ದ  ಅವನನ್ನು ಹುಡುಕಿಕೊಂಡು ಬಂದ  ಗೆಳೆಯ ವೈಭವ ,ಇಲ್ಲಿ ಇದ್ದಿಯೇನೋ  ಬಡವ ನಿನ್ನನ್ನು ಎಲ್ಲೆಂದು ಹುಡುಕುವುದು. ಏನೋ ಮದುವೆಯಾಗಿ  ಇನ್ನೂ ಆರು  ತಿಂಗಳೂ ಆಗಿಲ್ಲ  ಈಗಲೇ ಹೀಗೆ ಇಹದ ಪರಿವೆಯಿಲ್ಲದೆ  ಕುಳಿತುಕೊಂಡರೆ ಮುಂದೇನು ಎನ್ನುತ್ತಾ ಕೀಟಲೆ ಮಾಡುತ್ತಾನೆ.
             ಗೆಳೆಯನ ಕೀಟಲೆಗೆ ಮೌನವಾಗಿಯೇ ಇರುವ ಶರತ್ ನನ್ನು ಕಂಡು ಅಚ್ಚರಿಪಟ್ಟ ವೈಭವ ನಿಗೆ ಎಲ್ಲೋ ಏನೋ ತಪ್ಪಿದೆ ಇಲ್ಲದಿದ್ದರೆ ಶರತ್ ಈ ರೀತಿ ಮೌನವಾಗಿರುವುದೆಂದರೇನು? ಅರಳು ಹುರಿದಂತೆ ಮಾತಾನಾಡುವ ಶರತ್ ಎಲ್ಲಿ ಇಂದೀಗ ಮೌನದ  ಮೊರೆ ಹೋದ ಶರತ್ ಎಲ್ಲಿ ಎಂದು ಯೋಚಿಸಿ  ಹೇಗಾದರೂ ಗೆಳೆಯನ ಮನದ ಚಿಂತೆ ತಿಳಿಯ ಬೇಕೆಂದು ಅವನನ್ನು ಎಬ್ಬಿಸಿ ತನ್ನೊಂದಿಗೆ ಅವನನ್ನು ಒಂದು ಕಾಪಿ ಹೌಸ್ಗೆ  ಕರೆದೊಯ್ದು ಕಾಪಿ ತಿಂಡಿಗೆ ಹೇಳಿ ಅದು ಬರುವ ತನಕ ಮಾತನಾಡಿಸೋಣವೆಂದು  ಏನೋ ಶರತ್ ಇಷ್ಟೊಂದು ಮೌನವಾಗಿದ್ದಿಯಾ .ಏನು ನಿನ್ನ ಚಿಂತೆ ನನ್ನೊಡನೆ ಹೇಳಬಾರದೆ ಎಂದು ಕೇಳುತ್ತಾನೆ.
          ಅಷ್ಟರಲ್ಲಿ ಕಾಪಿ ತಿಂಡಿ ಬಂದಿದ್ದರಿಂದ  ಗೆಳೆಯನಲ್ಲಿ ತಿಂಡಿ ತಿನ್ನಲು ಒತ್ತಾಯಿಸಿ ತಿನ್ನುತ್ತ ಇರುವಾಗ ಇನ್ನೊಮ್ಮೆ ಅವನನ್ನು ಮಾತಿಗೆಳೆಯುತ್ತಾನೆ. ಶರತ್  ತನ್ನ ಮನದ ಚಿಂತೆಯನ್ನು ಹೇಳಿ ನಮ್ಮಿಬ್ಬರ ಮಧ್ಯೆ ಇರುವ ಈ  ಬಿರುಕು ಕಂದಕವಾಗಬಹುದೇ ಅದನ್ನು ಹೇಗೇ ಮುಚ್ಚುವುದು ಎಂದು ತಿಳಿಯದೆ ಕಂಗಾಲಾದ ಬಗ್ಗೆ ತಿಳಿಸುತ್ತಾನೆ.
                    ಶರತ್  ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸದಲ್ಲಿ ಇರುವ ಸ್ಪುರದ್ರೂಪಿ ಯುವಕ , ಆತನಿಗೆ ಕೆಲಸವಾದ ತಕ್ಷಣವೇ ಅವನ ಮದುವೆ ಬಗ್ಗೆ ಯೋಚಿಸುತ್ತಿದ್ದ ತಂದೆ ತಾಯಿ 2 ವರ್ಷದಿಂದ ಹುಡುಕಿ  ಕೊನೆಗೂ ಅವನ ಮನಸ್ಸಿಗೆ ಒಪ್ಪಿಗೆಯಾದ ಹುಡುಗಿಯೇ ಮನಸ್ವಿ.  ಎಂ.ಬಿ.ಎ. ಪದವಿಯನ್ನು ಅದೀಗ ತಾನೇ ಪೂರೈಸಿದ ಆಕೆಗೆ ಈಗಲೇ ಮದುವೆಯಾಗುವ ಇಚ್ಛೆ ಇರಲಿಲ್ಲ .ಆದರೆ ತಂದೆ ತಾಯಿ ಮಗಳ ಮದುವೆ ಮಾಡಿ ತಮ್ಮ ಭಾರ ಇಳಿಸಿಕೊಳ್ಳಲು ಕಾದಿದ್ದರು. 
              ಅದರಂತೆ ಬಂದ ಶರತ್ ನ ಸಂಬಂಧವನ್ನು ನಿರಾಕರಿಸುವ ಯಾವುದೇ ಕಾರಣವಿಲ್ಲದೆ ಇದ್ದುದರಿಂದ  ಮನಸ್ವಿ ಮದುವೆಗೆ ಒಪ್ಪಿ ಕೊಂಡಿದ್ದಳು ..ಮದುವೆ ಆದಮೇಲೆ ಕೆಲಸಕ್ಕೆ ಪ್ರಯತ್ನಿಸೋಣ ಎನ್ನುವ ಆಸೆಯು ಇತ್ತು. 
            . ಮದುವೆ ಆಗಿ ಬೆಂಗಳೂರಿಗೆ ಬಂದ ಅವರಿಬ್ಬರು ಜೋಡಿ ಹಕ್ಕಿಗಳಂತೆ ಒಂದು ತಿಂಗಳು ಸಿಮ್ಲಾ  ಊಟಿ ಕೊಡೈಕನಾಲ್ ಎಲ್ಲಾ ಕಡೆ ಸುತ್ತಾಡಿ ಬಂದು ಇದೀಗ ಒಂದು ವಾರದ ಹಿಂದೆ   ಶರತ್  ಆಫೀಸಿಗೆ ಹೋಗಲು ಪ್ರಾರಂಭಿಸಿದ್ದನಷ್ಟೇ ಅಷ್ಟರಲ್ಲಿಯೇ  ಮನಸ್ವಿ  ಮನೆಯಲ್ಲಿ ತನಗೆ ಹೊತ್ತು ಹೋಗುವುದಿಲ್ಲ ನಾನು ಯಾವದಾದರು ಕೆಲಸಕ್ಕೆ ಸೇರುತ್ತೇನೆ ಎಂದು ದುಂಬಾಲು ಬಿದ್ದಳು .
                      ಮಡದಿ ಕೆಲಸಕ್ಕೆ ಹೋಗುವುದು ಸ್ವಲ್ಪವೂ ಇಷ್ಟವಿಲ್ಲದ ಶರತ್ ಅವಳನ್ನು  ರಮಿಸಿ   ಸಾಯಂಕಾಲ ಆದಷ್ಟು ಬೇಗ ಕೆಲಸ ಮುಗಿಸಿ ಬರುತ್ತಿದ್ದ ನಂತರ ಇಬ್ಬರೂ ಒಟ್ಟಿಗೆ ಕಬ್ಬನ್ ಪಾರ್ಕ್ ಅಲ್ಲಿ ಇಲ್ಲಿ ತಿರುಗಾಡಿ ಹೋಟೆಲ್ ನಲ್ಲಿಯೇ ಊಟ ತೀರಿಸಿ ಮನೆಗೆ ಬರುತ್ತಿದ್ದರು. ಹೀಗಿರಲು ಕೊರೊನಾ ಮಾಹಾಮಾರಿಯಿಂದಾಗಿ ಹೆಚ್ಚಿನವರು ಕೆಲಸವನ್ನು ಮನೆಯಿಂದವೇ  ಮಾಡುವ ಪರಿಸ್ಥಿತಿ ಬಂತು . 
           ಗಂಡ ಮನೆಯಲ್ಲೇ ಇರುವುದರಿಂದ ತನಗೆ ಇನ್ನು ಅಷ್ಟು ಬೇಸರವಾಗಲಿಕ್ಕಿಲ್ಲವೆಂದು ತಿಳಿದ  ಮನಸ್ವಿ  ತುಂಬಾ ಹರ್ಷ ಚಿತ್ತಳಾಗಿದ್ದಳು ..ಆದರೆ ಅವಳ ಖುಷಿ ಹೆಚ್ಚು ದಿನ ಉಳಿಯಲಿಲ್ಲ
             ದಿನ ಕಳೆದಂತೆ  ಶರತ್ ಗೆ ಕೆಲಸ ಜಾಸ್ತಿಯಾಗುತ್ತಾ ರಾತ್ರಿಯೂ ಒಮ್ಮೊಮ್ಮೆ ಕೆಲಸ ಮಾಡುವ ಪರಿಸ್ಥಿತಿ ಇರುತ್ತಿತ್ತು ಈಗ ರಾತ್ರಿ ಹಗಲು ಒಂಟಿಯಾಗಿರಬೇಕಾದ ಮನಸ್ವಿ ಯ ತಳಮಳ ಹೇಳತೀರದು.
            ಹೀಗಿರುವಾಗಲೇ ವಾಟ್ಸಪ್ ಮೂಲಕ ಪರಿಚಯವಾದವನೆ ಸಂದೇಶ್ ಅವನ ಪ್ರೀತಿಯ ಮಾತುಗಳು ತಮಾಷೆ ನುಡಿಗಳು ಆಕೆಯನ್ನು ಉಲ್ಲಸಿತಳಾಗಿಡಲು  ಸಹಕಾರಿಯಾಯಿತು. ಆರು ತಿಂಗಳಿಂದ ಗಂಡನ ನಿರ್ಲಕ್ಷ್ಯದಿಂದ ಬೇಸತ್ತ  ಮನಸ್ವಿಯ  ಮನಸ್ಸು ಈ ಹೊಸ ಸ್ನೇಹಕ್ಕೆ ಬಹು ಬೇಗನೆ ಸ್ಪಂಧಿಸಿ ಬಿಟ್ಟಿತು .  
             ಅದೊಂದು ದಿನ ತನ್ನ ಪ್ರೊಜೆಕ್ಟ್ ಮುಗಿಸಿದ ಖುಷಿಯಲ್ಲಿ ಬಿಡುಗಡೆಯ ನಿಟ್ಟುಸಿರಿನೊಂದಿಗೆ ಹೊರಬಂದ ಶರತ್ ಗೆ ಹೆಂಡತಿ ಯಾರೊಡನೆಯೊ ನಗುತ್ತಾ ತಮಾಷೆಯಾಗಿ ಮಾತನಾಡುವುದು ಕಿವಿಗೆ ಬಿತ್ತು  .
               ಇಷ್ಟೊಂದು ಆತ್ಮೀಯ ಗೆಳತಿ ಅವಳಿಗೆ ಇದ್ದ ನೆನಪು ಇಲ್ಲದ ಅವನಿಗೆ ಯಾರಿರಬಹುದು ಎನ್ನುವ ಕುತೂಹಲ ಕಾಡಿತು ಆಕೆ ಮಾತು ಮುಗಿಸಿ ಬಂದಾಗ ಅವಳಲ್ಲಿ ಕೇಳಿದರೆ ಆಕೆ ಉತ್ತರವೇ ಕೊಡದೆ ಸರಿದು ಹೋಗಿದ್ದು ಶರತ್ ಮನಸ್ಸಿಗೆ ಎಲ್ಲೋ ತಮ್ಮಿಬ್ಬರ ಮಧ್ಯೆ ಬಿರುಕು ಮೂಡಿದ   ಭಾವನೆ ಸುಳಿಯಿತು.
                  ಈ ಬಿರುಕು  ಕಂದಕವಾಗಬಹುದೇ ಎಂದು ಭಯಪಟ್ಟ ಆತ ಅದನ್ನು ಈಗಲೇ ಮುಚ್ಚ ಬೇಕು ಎನ್ನುವ ಉದ್ದೇಶದಿಂದ ಹೆಚ್ಚು ಹೆಚ್ಚು ಅವಳೊಡನೆ ಕಳೆಯಲು ಪ್ರಯತ್ನಿಸಿದಷ್ಟು ಆಕೆ ಅವನಿಂದ ದೂರ ಸರಿಯುತ್ತಿರುವುದು ತಿಳಿದು ಏನು ಮಾಡಲಿ ಅತ್ತೆ ಮಾವನನ್ನು ಬರಲು ಹೇಳೋಣವೇ ಎಂದು ಒಂದು ಕ್ಷಣ ಯೋಚಿಸಿದರೂ ಪಾಪ ಮಗಳು ಇಲ್ಲಿ ಸುಖವಾಗಿದ್ದಾಳೆ ಎಂದು ತಿಳಿದು ಖುಷಿಯಲ್ಲಿರುವ ಅವರನ್ನು ನೋಯಿಸುವುದು ಬೇಡ ಇದು ತನ್ನದೇ ಸಮಸ್ಯೆ ತಾನೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ನಿರ್ಧರಿಸಿ .ಮೊದಲು ಸಮಸ್ಯೆ ಏನೆಂದು ತಿಳಿಯಲು ಪ್ರಯತ್ನಿಸಿದರೂ ತಿಳಿಯಲು ಸಾಧ್ಯವಾಗದಾಗ ಕೊನೆಗೊಮ್ಮೆ   ಮನಸ್ವಿ ಸ್ನಾನಕ್ಕೆ ಹೋದಾಗ ಅವಳ ಮೊಬೈಲ್ ನೋಡುವ ಹುಚ್ಚು  ದೈರ್ಯ ಮಾಡಿ ಮೊಬೈಲ್ ನೋಡಿದಾಗ  ತಿಳಿದ ವಿಷಯದಿಂದ ಅವನ ಜಂಘಾಬಲವೆ  ಉಡುಗಿ ಹೋಯಿತು ಏನು ಮಾಡುವುದು ಎಂದು ತಿಳಿಯದೆ ಆತ ತನ್ನ ಆಪ್ತ ಮಿತ್ರ  ವೈಭವನಿಗೆ ಫೋನ್ ಮಾಡಿ ಕಬ್ಬನ್ ಪಾರ್ಕಿಗೆ ಬರಲು ಹೇಳಿ  ತಾನು ಚಿಂತೆಯ ಮೂಟೆಯನ್ನೇ ತಲೆಯಲ್ಲಿ ಹೊತ್ತು ಕುಳಿತಿದ್ದ
                ಗೆಳೆಯ ಬಂದುದೂ ತಿಳಿಯದಷ್ಟು ಚಿಂತೆಯಲ್ಲಿ ಮುಳುಗಿ ಹೋಗಿದ್ದ ಶರತ್ ನ ಚಿಂತೆ ತಿಳಿದ  ವೈಭವ  ಚಿಂತೆ ಮಾಡಬೇಡವೋ ಇನ್ನು 2 ದಿನ ಸಮಯ ವಿದೆಯಲ್ಲಾ ನಾನು ಎಲ್ಲಾ ಸರಿ ಪಡಿಸುತ್ತೇನೆ ನೀನು ಆರಾಮ ಟೂರ್ ಹೋಗಲು  ರೆಡಿಮಾಡಿಕೊಳ್ಳು  ಎಂದು  ಹೇಳಿ ಅವನಿಂದ ಸಂದೇಶನ ಅಡ್ರೆಸ್  ತೆಗೆದುಕೊಂಡು ಗೆಳೆಯನನ್ನು ಸಮಾಧಾನಿಸಿ ಹೊರಟು ಹೋಗುವನು
                  ಮನೆಗೆ ಬಂದ ಶರತ್ ನಿಗೆ ಹೆಂಡತಿ ಹಿಂದೆಂದಿಗಿಂತಲೂ ಹೆಚ್ಚು ಖುಷಿಯಲ್ಲಿರುವಂತೆ ಕಂಡು ಬಂದಿತು ಅದಕ್ಕೆ ಕಾರಣ ಅವನಿಗೆ ತಿಳಿದಿದ್ದರೂ ತನ್ನ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು  ತಿಳಿದ ಆತ ಅವಳನ್ನು ಮಾತನಾಡಿಸುವ  ಪ್ರಯತ್ನ ಮಾಡುತ್ತಾ ತನ್ನ ಪ್ರೊಜೆಕ್ಟ್  ಮುಗಿದಿದ್ದರಿಂದ ಕಂಪನಿ ತನಗೆ ಒಂದು ತಿಂಗಳು ರಜೆ ಕೊಟ್ಟಿರುವುದಾಗಿಯೂ  ನಾವು  ಈ ಸಲ  ಕೊರೊನಾ ಇರುವುದರಿಂದ ಇಲ್ಲಿಯೇ ಹತ್ತಿರದ ಸ್ಥಳಗಳಿಗೆ ಟೂರ್ ಹೋಗುವ ಎಂದು ಅವಳೊಡನೆ ಹೇಳುತ್ತಿದ್ದ  ಅವಳು ಇದು ಯಾವುದರ ಬಗ್ಗೆಯೂ ಕಿವಿಕೊಡದೆ ತನ್ನಷ್ಟಕ್ಕೆ ಅವನು ಹೇಳಿದ್ದಕ್ಕೆಲ್ಲಾ ತಲೆಯಾಡಿಸುತ್ತಿದ್ದಳು .ಇದನ್ನು ಕಂಡು ಪಿಚ್ಚೆನ್ನಿಸಿದರು, ಏನು ಮಾಡಲಾರದ ಶರತ್  ಅವಳನ್ನು ಬಲವಂತವಾಗಿ ಹೊರಡಿಸಿ  ಅಲ್ಲಿಯೇ ಹತ್ತಿರದ ಪಾರ್ಕಿಗೆ  ಕರೆದೊಯ್ದು ಪ್ರೀತಿಯಿಂದ ಮಾತಿಗೆಳೆಯುತ್ತಿದ್ದ .
                  ಇದ್ದಕ್ಕಿದ್ದಂತೆ ಆಕೆ ಹತ್ತಿರವೇ ಸರಿದು ಹೋದ ಜೋಡಿಯನ್ನು ಎವೆಇಕ್ಕದೆ ನೋಡುತ್ತಿರುವುದು ನೋಡಿ ತಾನು ಆ ಕಡೆನೋಡಿದಾಗ  ಅವಳ ಮೊಬೈಲ್ ನಲ್ಲಿ ಕಂಡ ಅದೇ ಹುಡುಗನನ್ನು ಕಂಡು ಹಲ್ಲು ಮಸೆದರೂ  ಅವಳ ಚಡಪಡಿಕೆಯನ್ನು ಕಂಡು ಅವಳಲ್ಲಿ ನಾನು ಈಗ ಬರುವೆ ನೀನು ಇಲ್ಲಿಯೇ ನಿಲ್ಲು ಎಂದು ಹೇಳಿ  ಅಲ್ಲೇ ಮುಂದೆ ಅವಳು ಮತ್ತು  ಆತ ತನಗೆ ಕಾಣುವ ಸ್ಥಳದಲ್ಲಿ ನಿಂತು ಗೆಳೆಯ ವೈಭವನಿಗೆ ಫೋನ್ ಮಾಡಿ ವಿಷಯ ತಿಳಿಸುತ್ತಾನೆ . 
              ತಾನು ಈ ಕಡೆ ಬಂದ ಕೂಡಲೇ ಅವಳು ಅವನಿಗೆ ಫೋನ್ ಮಾಡುತ್ತಾಳೆ ಎನ್ನುವ ನಂಬಿಕೆ ಇದ್ದ ಶರತ್ ನೆನೆಸಿದಂತೆ  ಅತ್ತಲಿಂದ ಅವನು ಫೋನ್ ತೆಗೆದುಕೊಂಡು ಮಾತನಾಡುವುದು ಕೇಳುತ್ತಿತ್ತು .
               ತಾನು ಮನೆಯಲ್ಲೇ  ಇರುವುದಾಗಿಯು ಪಾರ್ಕಿನಲ್ಲಿ  ನೀನು ಬೇರೆಯಾರನ್ನಾದರು ನೋಡಿದ್ದಿರಬಹುದೆಂದು ಹೇಳುತ್ತಿರುವುದು ಕೇಳಿ ನಖಸಿಖಾಂತ ಉರಿದೆದ್ದ ಶರತ್ ಅವನನ್ನು ಅಲ್ಲೇ ಹಿಡಿದು ಚಚ್ಛ  ಬೇಕೆಂದಿದ್ದಾಗ ವಿವೇಕ ಜಾಗೃತವಾಗಿ ನಿಧಾನವಾಗಿ ಹಿಂದಕ್ಕೆ ಬರುವಾಗ  ಮನಸ್ವಿ  ಮೊಬೈಲ್ ಆಫ್ ಮಾಡಿ ನಿಂತಿರುವುದು ಕಂಡು ಅವಳನ್ನು ಅಲ್ಲಿಂದ ಹೊರಡಿಸಿಕೊಂಡು ಮನೆಗೆ  ಬರುತ್ತಾ, ತಾನು ತೆಗೆದ ತಮ್ಮಿಬ್ಬರ ಫೋಟೋದ ಜತೆ ಅಲ್ಲಿ ಇದ್ದ ಕೆಲವು ಜೋಡಿಗಳ ಪೋಟೋಗಳನ್ನು  ಮನಸ್ವಿಗೆ ಕಳಿಸುತ್ತಾನೆ . 
ಫೋಟೋಗಳನ್ನು ನೋಡಿದ  ಮನಸ್ವಿ  ವಿಹ್ವಲ ಗೊಂಡಿದ್ದು ತಿಳಿದು ಆತ ಸಮಾಧಾನಗೊಳ್ಳುತ್ತಾನೆ   
          ಈ ದಿನ ರಾತ್ರಿಯೇ  ಮನೆ ಬಿಡುವ ನಿರ್ಧಾರ ಮನಸ್ವಿಯದು ಎಂದು ತಿಳಿದಿದ್ದ ಶರತ್ ಅವಳಿಗೆ ತೊಂದರೆಯಾಗ ಬಾರದೆಂದು ನಾನು ಈ ದಿನ ಸಾಯಂಕಾಲ ನನ್ನ ಫ್ರೆಂಡ್ ಮನೆಗೆ ಹೋಗುತ್ತೇನೆ ನೀನು ಬರುತ್ತಿಯಾ ಎಂದು ಕೇಳುತ್ತಾನೆ  ಆಕೆ ಬರುವುದಿಲ್ಲವೆಂದು ತಿಳಿದೇ ಆತ ಕೇಳಿದ್ದು, ಆಕೆ ಬರಲು ನಿರಾಕರಿಸಿದಾಗ ಸರಿ ನಾನು ಬರುವಾಗ ತಡವಾದೀತು ನೀನು ನನಗಾಗಿ ಕಾಯಬೇಡ ಊಟಮಾಡಿ ಮಲಗು ಎಂದು ಹೇಳಿ ಹೋಗುತ್ತಾನೆ. 
            ಗಂಡ  ಹೊರಗೆ ಹೋದುದು  ಮನಸ್ವಿಗೆ ಇನ್ನಷ್ಟು ಅನುಕೂಲವಾಯಿತು .ಆಕೆ ಬೇಗ ಬೇಗನೆ ತನ್ನೆಲ್ಲ ಬಟ್ಟೆ ಬರೆಗಳನ್ನು ಪ್ಯಾಕ್ ಮಾಡಿ ಇನ್ನೇನು  ಸಂದೇಶ್  ಕರೆ ಬರಬಹುದೆಂದು  ಕಾಯುತ್ತ  ಇದ್ದರೂ ಕರೆ ಬಾರದೆ ಇದ್ದುದರಿಂದ ಮೆಸೇಜ್ ಮಾಡಿರಬಹುದೆಂದು  ವಾಟ್ಸಪ್ ಓಪನ್ ಮಾಡಿದಾಗ ಆತ ಅವಳನ್ನು ಬ್ಲಾಕ್ ಮಾಡಿದ್ದು ತಿಳಿದು ಆಕೆಗೆ ಏನು ಮಾಡುವುದೆಂದು ತಿಳಿಯದೆ ಅವನ ನಂಬರಿಗೆ ಫೋನ್ ಮಾಡಿದರೆ ನಂಬರ್ ಬ್ಲಾಕ್ ಆಗಿದ್ದರಿಂದ ಅದು ಸಾಧ್ಯವಾಗದೇ ಆಕೆ ಚಿಂತೆಯಿಂದ ಇರುವಾಗಲೇ ಆಕೆಯ ನಂಬರಿಗೆ  ಅಪರಿಚಿತ ನಂಬರಿನಿಂದ ಸುದ್ದಿಯ ಜತೆ ಕೆಲವು ಫೋಟೋಗಳು ಬಂದು ಅವುಗಳನ್ನು ನೋಡಿದಾಗ ಆಕೆಗೆ ಕೈ ಕಾಲು ನಡುಗಲು ಪ್ರಾರಂಭಿಸಿ ಆಕೆ ಅಲ್ಲಿಯೇ ಕುಸಿದು ಕುಳಿತಳು .
                ಎಷ್ಟು ಹೊತ್ತು ಹಾಗೆ ಕುಳಿತಿದ್ದಳೋ ಶರತ್ ಬಂದು ಅವಳ ಭುಜ ಅಲುಗಿಸಿದಾಗಲೇ ಅವಳಿಗೆ ಎಚ್ಚರ ಕೂಡಲೇ ಶರತ್ ನನ್ನು ತಬ್ಬಿಕೊಂಡ ಆಕೆ ನನ್ನನ್ನು ಕ್ಷಮಿಸಿ ಎಂದು ಬಿಕ್ಕಿ ಬಿಕ್ಕಿ ಅಳುತ್ತಾಳೆ .ಶರತ್ ಮೌನವಾಗಿ  ಅವಳ ತಲೆ ಸವರುತ್ತಾ ಬಿಗಿಯಾಗಿ ಅವಳನ್ನು ತಬ್ಬಿ ಸಮಾಧಾನಿಸುವನು
                 ಮರುದಿನವೇ ಅವರಿಬ್ಬರು  ಮೊದಲು ಅವಳ ತಂದೆ ತಾಯಿಯರನ್ನು ಭೇಟಿಯಾಗಿ ಅಲ್ಲಿಂದ ಒಂದು ತಿಂಗಳು ಪ್ರವಾಸ ಹೋಗಿ ಬರಲು ನಿರ್ಧರಿಸಿ ಇಬ್ಬರು ಒಬ್ಬರಿನ್ನೊಬ್ಬರನ್ನು ತಬ್ಬಿಕೊಂಡೆ ನಿದ್ರಿಸುತ್ತಾರೆ 
                    
ಪಂಕಜಾ.ಕೆ. ಮುಡಿಪು

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.