Skip to main content

ಗೋಪ ಬಾಲ

ಗೋಪಬಾಲ

 ಭಾಮಿನಿ ಷಟ್ಪದಿ


ಕೈಯಲಿರಿಸಿದ  ಮಣ್ಣು ತಿನ್ನಲು

ತಾಯಿ  ಕಳವಳದಿಂದ ನೋಡುತ

ಬಾಯಿ ತೆರೆಸಲು ಜಗವ ತೋರಿದ ಬಾಲ ಗೋಪಾಲ

ಮಾಯಕದ ಜಗವನ್ನು  ಕಂಡಿರೆ

ಮಾಯವಾಯಿತು ಸಕಲ ಚಿಂತೆಯು

ಮಾಯೆಯಿಂದಲಿ ಜಗವ ಪೊರೆಯುವ     ಮಗುವ ಕಾಣುತಲಿ


ಬಾಲಗೋಪಾಲನಿಗೆ  ಮುದದಿಂ

ಹಾಲು ಕುಡಿಸುತ ಮಾತೆ  ಮರೆತಳು

ಕಾಲನಾಡಿಸಿ  ನಗುವ  ಕಂದನನೆತ್ತಿ  ಮುದ್ದಿಸುತ 

ಲೋಲ  ಮುರಳಿಯು  ತುಂಟತನದಲಿ 

ಶಾಲ ಸೆಳೆದನು ಕಾಡಿ ಗೋಪಿಯ

ಮೇಲೆ ಮರದಲಿ ಕುಳಿತು ರಾಧೆಯ ಕೆಣಕಿ ನಗುತಿಹನು


ಕಾಟ  ಕೊಡುತಿಹ  ಕಂಸನನುಚರ

ಮಾಟ ಮಾಡುತ ಬಂದ ಬೇಗನೆ 

ನೋಟದಿಂದಲೆ ತಿಳಿದನವರನು ದೇವ ಗೋಪಾಲ

ತಾಟಕಿಯನೂ ಕೊಂದ ಬಾಲನು

ಬೇಟೆಯಾಡುತ ದುರುಳರೆಲ್ಲರ

ಸಾಟಿಯಿಲ್ಲದ   ಶೂರತನದಲ್ಲವರ  ಕಡಿದೊಗೆದ


ಗೋವುಗಳಿಗೂ ಮೇವನುಣ್ಣಿಸಿ 

ಹಾವ  ಹೆಡೆಯಲಿ ನಲಿದು ಬಿಡುತಲಿ

ಜೀವವುಳಿಸಲು ಗಿರಿಯನೆತ್ತಿದ  ನಂದನಾ ಕಂದ

ಜಾವದಲ್ಲಿಯೆ ಹೊರಟು ಬಿಡುತಲಿ

ರಾವಣನ ತೆರದಲ್ಲಿ ಕಾಣುವ

ಮಾವ ಕಂಸನ ದುರುಳತನವನುಮಟ್ಟ ಹಾಕಿದನು 


ತಂದೆ ತಾಯಿಯ ಸೆರೆಯ ಬಿಡಿಸಿದ

ನಂದ ಗೋಪನ  ನಡೆಯ ಕಾಣುತ

ಮುಂದೆ  ಬರುತಲಿ  ತಬ್ಬಿ ಬಿಟ್ಟಳು ಮಾತೆ ದೇವಕಿಯು

ಬಂದ ಜನರನು  ಪ್ರೀತಿಯಿಂದಲಿ

ಕುಂದು ಬಾರದ ತೆರದಲೊಲಿಸುತ

ಕಂದ ನೀನೇ  ಜಗದ ರಕ್ಷಕನೆಂದು  ನುತಿಸುವಳು


ಶ್ರೀಮತಿ.ಪಂಕಜಾ.ಕೆ. ರಾಮಭಟ್

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...