Skip to main content

ರಾಮಾಯಣ ಭಾಗ 4

   ರಾಮಾಯಣ ಭಾಗ 4 

 27 ಚಿನ್ನದ ಜಿಂಕೆ  ಮನೋಲ್ಲಾಸ

ಪರಿವರ್ಧಿನಿಷಟ್ಪದಿ..


ವನದಲಿ ತಿರುಗುತ  ಗುಡಿಸಲು ಕಟ್ಟುತ

ಮನದಲಿ  ಬೇಸರವಿದ್ದರು ತೋರದೆ

ಜನಕನ ಕುವರಿಯ ಜತೆಯಲಿ ರಾಮನು   ಹರುಷದಿ  ಕೂಡುತಲಿ

ಅನುಜನು ಲಕ್ಷ್ಮಣ ಜತೆಯಲ್ಲಿರುತಿರೆ

ಬೆನಕನ ದಯೆಯಲಿ  ದಿನಗಳು ಕಳೆಯಲು

ಕನಸಿನ ತೆರದಲಿ ಜೀವನ ಸಾಗಿತು  ಕಾಡಲಿ ನಡೆಯುತಲಿ


ಸುಂದರ ಜಿಂಕೆಯ ಕಾಣುತ  ಸಾದ್ವಿಯು

ನಂದನ ರಾಮನ ಕರೆದಳು ಬೇಗನೆ

ಚಂದದ  ಹರಿಣವು ಬೇಕೆನಗೆನ್ನುತ  ಹಠವನು ಮಾಡಿದಳು

ಚಂದಿರ ವದನೆಯೆ ಕೇಳೆನ್ನುತಲೀ

ಮಂಧರಧರ ಶ್ರೀರಾಮನು ತಿಳಿಸಿದ

ನಂದಿನಿ ಪೇಳ್ವೆನು ನಿಜವಲ್ಲವಿದೂ ರಾಕ್ಷಸ ಮಾಯೆಯದು 


ಸೀತೆಯ ಕೋಪಕೆ ಹೆದರಿದ ರಾಮನು

ಮಾತೊಂದರುಹುತ ಲಕ್ಷ್ಮಣನೊಡನೆಯೆ

ಮಾತೆಯ  ನೆನೆಯುತ ಹರಿಣವ ಹಿಡಿಯಲು

ಹೊರಟನು ಕಾಡಿನೆಡೆ  

ನೀತಿಯ ಪಾಠವ  ಮನದಲಿ ಪಠಿಸುತ

ಭೀತಿಯ ತೋರದೆ  ಲಕ್ಷ್ಮಣನೊಡನೆ

ನಾಥನು ಬರುವ ದಾರಿಯ ನೋಡುತ ಹರಿಣಿಯು ಬಳಲಿದಳು


ಹರಿಣವ ಹಿಡಿಯಲು ಹೊರಟಿಹ ರಾಮನು

ಬರದಿರೆ  ಭಯವದು ಮೂಡಿತು  ಮನದಲಿ

ಕರೆಯುವ ರಾಮನ ದನಿಯನು ಕೇಳಲು   ಜಾನಕಿ  ಬೆದರಿದಳು

ತರುಣಿಯು  ಕರೆದಳು ಲಕ್ಷ್ಮಣನನುತಾ

ಭರದಲಿ ಹೋಗೆಂದೆನುತಲಿ ಕಳುಹಲು

ಸರಸರ ಬಂದನು ರಾವಣನಲ್ಲಿಗೆ  ವೇಶವ ಹಾಕುತಲಿ

ಕರೆಯುತ ಕೇಳಿದ ದಾನವ ನೀಡಲು

ಹರಿಸತಿ ಬೇಗನೆ ಭಿಕ್ಷೆಯನಿಕ್ಕಲು

ಸರಸಕೆ ಕರೆದನು ರಾವಣ ತನ್ನಯ ರೂಪವ ತೋರುತಲಿ


ಭಯದಲಿ ಕಂಪಿಸುತಿರುತಿಹ  ತರಳೆಯ

ದಯೆಯನು ತೋರದೆ ಹಿಡಿದನು ಮುಡಿಯನು

ಮಯಣದ ತೆರದಲಿ ಹೊಳೆಯುವ ಪುಷ್ಪಕ ವಾಹನದೆಡೆಸೆಳೆದು

ಹಯವನ್ನೇರಿದ  ದುರುಳನು ಬೇಗನೆ

ಜಯಿಸುವೆನವಳನು  ಕ್ಷಣದಲ್ಲೆನುತಲಿ

ಜಯಜಯವೆನ್ನುತ ಹೊರಟನು ಸೀತೆಯ ಜತೆಯಲಿ ಲಂಕೆಯೆಡೆ


ಅಳುತಿಹ ಸೀತೆಯ ಕಣ್ಣಿಗೆ ಕಂಡಿತು

ಕೆಳಗಿಹ ವಾನರ ವೀರರ  ಮನೆಗಳು

ಕಳೆದಳು  ತನ್ನಯ ವಸ್ತ್ರಾಭರಣಗಳ ಗಂಟನು ಕಟ್ಟುತಲಿ

ಸೆಳೆದಳು ಕಟ್ಟಿದ ಬಟ್ಟೆಯ ತುಂಡನು

ಕೆಳಗಡೆ ಬೀಳುವ ತೆರದಲ್ಲವುಗಳ

ತಿಳಿಯಲಿ ನಾಥನು  ತನ್ನನ್ನೊಯ್ದಿಹ  ದಾರಿಯ  ಬೇಗದಲಿ


ಲಂಕೆಯ ಸೇರಲು ರಾವಣ ನಗುತಲಿ

ಬಿಂಕದಿ ತೋರಿದ ತನ್ನಯ ರಾಜ್ಯವ 

ಶಂಕರಿ  ಬಾನನ್ನೆಡೆಗೆನ್ನುತಲೀ  ಬಾಗಿದ ಹರಿಣಿಯೆಡೆ

ಕಂಕಣ ತೊಟ್ಟಿಹ ತನ್ನಯ ಕರಗಳ 

ಪಂಕಜಲೋಚನೆ ಮುಗಿಯುತ ಮನದಲಿ

ಸಂಕಟ ತೊಲಗಲು ರಾಮನ ಜಪವನು ಬೇಗನೆ   ಮಾಡಿದಳು


ಪಂಕಜಾ.ಕೆ. ರಾಮಭಟ್.


















Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.