Skip to main content

ಪುರಾಣದ ಕಥೆ ಲಕ್ಷ್ಮಣ ರೇಖೆ

ಪುರಾಣದ ಕಥೆ

  ಲಕ್ಷ್ಮಣ ರೇಖೆ

ಪಿತೃವಾಕ್ಯ ಪರಿಪಾಲಕನಾದ ಶ್ರೀ ರಾಮಚಂದ್ರನು ಹದಿನಾಲ್ಕು ವರ್ಷ ವನವಾಸಕ್ಕೆಂದು ಹೊರಟಾಗ ಪತಿವ್ರತಾ ಶಿರೋಮಣಿಯಾದ ಶ್ರೀ ರಾಮನ ಹೆಂಡತಿ ಸೀತಾಮಾತೆಯೂ ಅವರೊಂದಿಗೆ ಹೊರಟಳು ಕಾಡು ಮೇಡುಗಳಲಿ ಹಣ್ಣುಗಳನ್ನು ತಿನ್ನುತ್ತಾ ಅವರು   ಅಲ್ಲಿ ಒಂದು ಪರ್ಣಕುಟೀರವನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾಗ, ಮಾರೀಚನೆಂಬ ಮಾಯಾವಿ  ರಾಕ್ಷಸನು ಸೀತಾದೇವಿಯನ್ನು ಆಕರ್ಷಿಸಲು ಚಿನ್ನದ ಜಿಂಕೆಯ ರೂಪ ತಾಳಿ ಪರ್ಣ ಕುಟೀರದ ಸುತ್ತುಮುತ್ತಲಿನ ಸ್ಥಳಗಳಲ್ಲಿ ತಿರುಗಾಡುತ್ತಿದ್ದನು ..ಚಿನ್ನದ ಜಿಂಕೆಯನ್ನು ಕಂಡ ಸೀತಾದೇವಿಗೆ ಅದರ ಮೇಲೆ ಮೋಹವುಂಟಾಗಿ, ಆಕೆ ತನ್ನ ಗಂಡ ಶ್ರೀರಾಮಚಂದ್ರನಲ್ಲಿ ಅದನ್ನು ಜೀವಂತವಾಗಿ ತಂದು ಕೊಡುವಂತೆ ಪೀಡಿಸುತ್ತಾಳೆ. ಶ್ರೀ ರಾಮನು ಎಷ್ಟೆಷ್ಟೋ ಸಮಾಧಾನ ಮಾಡಿದರೂ ಸೀತಾದೇವಿ ತನ್ನ ಹಠವನ್ನು ಬಿಡುವುದಿಲ್ಲ .ಅದು ರಾಕ್ಷಸರ.ಮಾಯೆ ನಿಜವಾದ ಜಿಂಕೆಯಲ್ಲ  ಎಂದು ಹೇಳಿದರೂ ಸೀತಾದೇವಿ ತನ್ನ ಆಸೆಬಿಡದೆ ತನಗೆ ಅದು ಬೇಕೇ ಬೇಕೆಂದು ಹಠ ಹಿಡಿಯುತ್ತಾಳೆ. ಗತ್ಯಂತರವಿಲ್ಲದೆ ಶ್ರೀರಾಮನು ಜಿಂಕೆಯನ್ನು ಹಿಡಿಯಲು ಹೋಗುತ್ತಾನೆ .ಹೋಗುವಾಗ ತನ್ನ ತಮ್ಮ ಲಕ್ಷ್ಮಣ ನನ್ನು ಸೀತಾದೇವಿಯ ರಕ್ಷಣೆಗೆ  ನಿಲ್ಲಿಸಿ ತಾನು ಬಿಲ್ಲು ಬಾಣ ತೆಗೆದುಕೊಂಡು ಜಿಂಕೆಯನ್ನು ಹಿಡಿಯಲು ಹೋಗುತ್ತಾನೆ ಮಾಯಾವಿಯಾದ ಜಿಂಕೆ ರಾಮನನ್ನು  ಆಟವಾಡಿಸುತ್ತ ಕೈಗೆ ಸಿಕ್ಕಿಯೂ ಸಿಕ್ಕದಂತೆ ಜಾರಿಕೊಂಡು ಓಡುತ್ತಾ ನೆಗೆಯುತ್ತಾ ದಿಕ್ಕು ತಪ್ಪಿಸುತ್ತಿತ್ತು.ಅದನ್ನು ಕೊಲ್ಲದೆ ಜೀವಂತ ತರಲು ಸೀತಾದೇವಿಯ ಆಜ್ಞೆಯಾಗಿದ್ದರಿಂದ ಕೊಲ್ಲುವಂತೆಯೂ ಇರಲಿಲ್ಲ. ಜಿಂಕೆಯು ಶ್ರೀ ರಾಮನನ್ನು ದೂರ ದೂರಕ್ಕೆ  ಸೆಳೆದೊಯ್ದಿತು. ಕೊನೆಗೆ ಅನಿವಾರ್ಯವಾಗಿ  ಶ್ರೀ ರಾಮನು ಅದರ ಮೇಲೆ ಬಾಣ ಪ್ರಯೋಗ ಮಾಡಬೇಕಾಯಿತು. ಶ್ರೀರಾಮನ ಬಾಣಕ್ಕೆ ಗುರಿಯಾದ ಜಿಂಕೆ ಸಾಯುವಾಗ ಹಾ ಸೀತೆ..ಹಾ .ಲಕ್ಷ್ಮಣ  ಎಂದು ಶ್ರೀ ರಾಮನ ದನಿಯಲ್ಲಿ ಕೂಗಿ  ಪ್ರಾಣ ಬಿಟ್ಟಿತು.

             ಇತ್ತ ಪರ್ಣಕುಟೀರದಲ್ಲಿದ್ದ ಸೀತೆ ಹಾಗೂ ಲಕ್ಷ್ಮಣನಿಗೆ ಈ ಆಕ್ರಂದನವು ಕೇಳಿ  ಸಿಡಿಲು ಬಡಿದಂತಾಯಿತು. ಅದು ರಾಕ್ಷಸರ ಮಾಯೆಯಿರಬಹುದೆಂಬ ಸಂಶಯ ಲಕ್ಷ್ಮಣನಿಗೆ ಬಂತು .ಆತ ಸೀತಾದೇವಿಯನ್ನು ಸಮಾಧಾನ ಪಡಿಸಿದ .ಆದರೆ ಸೀತಾದೇವಿಯು ಕಟುಮಾತುಗಳಿಂದ ಲಕ್ಷ್ಮಣನನ್ನು ನಿಂದಿಸಿ  ಶ್ರೀ ರಾಮನ   ಸಹಾಯಕ್ಕೆ ಕೂಡಲೇ ಹೊರಟು ಹೋಗಲು ತಿಳಿಸಿದಳು .ಅತ್ತಿಗೆಯ ಕಟುಮಾತುಗಳನ್ನು ಕೇಳಲಾರದೆ  ಅತ್ತಿಗೆಯ ಆಜ್ಞೆಯಂತೆ.  ಧ್ವನಿ ಬಂದ ದಿಕ್ಕಿನತ್ತ ಲಕ್ಷ್ಮಣ  ಹೊರಡುತ್ತಾನೆ. ಹೋಗುವ ಮೊದಲು ಲಕ್ಷ್ಮಣನು ಸೀತಾದೇವಿಯ ಸುರಕ್ಷತೆಗಾಗಿ ಕುಟೀರದ ಹೊರಗೆ ಮೂರು ಗೆರೆಯನ್ನು ಎಳೆದು ಅಭಿಮಂತ್ರಿಸಿ ಅಣ್ಣನನ್ನು ಕಾಣಲು ತೆರಳಿದನು.ಇದೇ ಸಂದರ್ಭಕ್ಕೆ  ಕಾದಿದ್ದ ರಾವಣನು ಸನ್ಯಾಸಿಯ ವೇಷ ಧರಿಸಿ ಸೀತಾದೇವಿಯಲ್ಲಿ ಭಿಕ್ಷೆ ಬೇಡಿ ಆಕೆ ಲಕ್ಷ್ಮಣ ರೇಖೆಯನ್ನು ಮೀರಿ  ಹೊರಗೆ ಬರುವಂತೆ ಮಾಡಿ ಆಕೆಯನ್ನು ಅಪಹರಿಸುತ್ತಾನೆ.ಇದು ಮುಂದೆ ರಾವಣನ ಸಂಹಾರಕ್ಕೆ  ಕಾರಣವಾಗುತ್ತದೆ.ಇಲ್ಲಿ ಸೀತೆಯ ಹಠ ಲಕ್ಷ್ಮಣ ರೇಖೆಯನ್ನು ಮೀರಿ ನಡೆದ ಫಲ ಸೀತಾದೇವಿಯನ್ನು ರಾವಣನು ಅಪಹರಿಸಲು ಕಾರಣವಾಯಿತು. ಇಲ್ಲಿ ಹಾಕಿದ ಲಕ್ಷ್ಮಣರೇಖೆ ಸೀತಾದೇವಿಗೆ ಮಾತ್ರವಲ್ಲದೆ ಪ್ರಪಂಚದ ಎಲ್ಲರಿಗೂ ಅನ್ವಯಿಸುತ್ತದೆ.ಸಾಮಾಜಿಕ ಸಾಂಸ್ಕೃತಿಕ ಧಾರ್ಮಿಕ ನೈತಿಕ ಕಟ್ಟುಪಾಡುಗಳು ಲಕ್ಷ್ಮಣರೇಖೆಯಾಗಿದೆ.ಅವುಗಳನ್ನು ಮೀರಿ ನಡೆದರೆ ಅನಾಹುತ ತಪ್ಪಿದ್ದಲ್ಲ ಎನ್ನುವುದನ್ನು  ರಾಮಾಯಣದ ಈ ಪ್ರಕರಣದಿಂದ ತಿಳಿಯಬಹುದು

             

ಶ್ರೀಮತಿ.ಪಂಕಜಾ.ಕೆ. ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.