ಬಾರೇ ನನ್ನೊಲವೆ
(ಭಾವಗೀತೆ)
ಎದೆಯಾಳದಲ್ಲಿರುವ ಚೆಲುವಾದ ಬಾವಗಳು
ಹೊರಬರಲು ತವಕಿಸುತಿದೆ ಕೇಳು ಗೆಳತಿ
ಚೆಲುವಾದ ಹೂವೊಂದು ಅರಳಿರುವ ಲತೆಯಂತೆ
ನೀನಿರಲು ಬಾಳೆಲ್ಲಾ ಹೂವ ಹಾಸಿಗೆಯಂತೆ
ಪಡಿಯಕ್ಕಿ ಎಡವಿ ನೀನಂದು ಬಂದೆ
ಒಲವ ರಸ ಹರಿಸುತ್ತ ಮನದಲ್ಲಿ ನಿಂದೆ
ಈ ಜೀವ ನಿನಗಾಗಿ ತುಡಿಯುತಿದೆ ನಲ್ಲೆ
ನನ್ನುಸಿರು ನೀನಾದೆ ನೀ ಅದನು ಬಲ್ಲೆ
ಪ್ರಳಯವೇ ಆದರೂ ಜತೆಯಾಗಿ ನಾನಿರುವೆ
ಸ್ವರ್ಗದಾ ಸುಖವನ್ನು ಸವಿಯೋಣ ಇಲ್ಲೇ
ಏಕಿಂಥ ಮುನಿಸು ನಿನಗಿದು ತರವೇ
ನಿನ್ನ ಅಗಲಿಕೆಯ ಕ್ಷಣಗಳನು ನಾ ಸಹಿಸಲಾರೆ
ಕಾದಿರುವೆ ನಿನಗಾಗಿ ಪ್ರೀತಿ ಹೂಗಳ ಹಿಡಿದು
ನನ್ನೀ ಮನವು ಬರಿದಾಗಿದೆ ನೀನಿಲ್ಲದೆ ಇಂದು
ಬೇಗ ಬಾ ನನ್ನೊಲವೆ ಕಾದಿರುವೆ ನಿನಗೆ
ಮೈಮನವನಾವರಿಸು ಒಲವರಸ ಸುರಿದು
ಪಂಕಜಾ.ಕೆ. ರಾಮಭಟ್ ಮುಡಿಪು
Comments
Post a Comment