Skip to main content

ಕವನಗಳು

[12/6/2022, 3:59 pm] Pankaja K: ಗುರುಕುಲಾ ಚಾಮರಾಜನಗರ ಘಟಕ

ಸ್ಪರ್ಧೆಗಾಗಿ ಕವನ
ದತ್ತವಿಷಯ ಬಾಲಕಾರ್ಮಿಕ ಪದ್ದತಿ ತೋಲಗಿಸೋಣ

ಕಮರದಿರಲಿ ಬದುಕು

ಬಡತನದ ಬೇಗೆಯಲಿ
ಬಳಲುತಿಹ ಕಾರ್ಮಿಕರು
ಕೂಲಿ ಕೆಲಸಗಳಿಗೆ ತಮ್ಮ 
ಮಕ್ಕಳನು ದೂಡುವರು

ವಿದ್ಯೆಯನು ಕಲಿಯದೆಯೇ
ಬದುಕುತಿಹ ಮುಗ್ಧರು
ಕಷ್ಟದಲಿ ದುಡಿಯುತಲೆ
ಬಾಲ್ಯವನು ಕಳೆಯುವರು

ಬಾಲ್ಯದಾಟವಾಡುವಾ ವಯಸಿನಲಿ
ಕೆಲಸವನು ಮಾಡುವರು
ಹಸಿವಿನಾ ಕೂಪದಲಿ ಬೇಯುತ್ತ
ಅರಳದೆಯೇ ಮುದುಡುವರು

ಸರಿಯಲ್ಲ ಚಿಕ್ಕ ಮಕ್ಕಳನು
ಹಚ್ಚುವುದು ಕೆಲಸಕ್ಕೆ
ವಿದ್ಯೆಬುದ್ಧಿಯ ಕಲಿಸುತಲಿ
ಅಣಿಗೊಳಿಸಿ ಜೀವನಕೆ

ಬಾಲಕಾರ್ಮಿಕ ಪದ್ದತಿಯ
ತೊಲಗಿಸೋಣ ನಾವೆಲ್ಲಾ
ಅರಳಿಸುತಲವರ ಕನಸುಗಳ
ತುಂಬೋಣ ಸಂತಸವ  ಬಾಳೆಲ್ಲಾ

ಪಂಕಜಾ.ಕೆ. ಮುಡಿಪು
[19/6/2022, 5:12 pm] Pankaja K: ಗುರುಕುಲಾ ಕಲಾಪ್ರತಿಸ್ಥಾನ 
ಜಿಲ್ಲಾ ಘಟಕ  ಚಿಕ್ಕಮಗಳೂರು
ಪ್ರೇಮಕವನ ಸ್ಪರ್ಧೆಗಾಗಿ

ಹೃದಯ ಬಂಧನ

ನನ್ನ ಹೃದಯದಿ ನಿನ್ನ ಕನಸಿದೆ
ಚೆಲುವ ವದನದ ಸುಂದರಿ
ಮನದ  ಬಯಲಲಿ ನಿನ್ನ ಹೆಸರಿದೆ
ಮನವ ಸೆಳೆದಿಹ ಮೋಹಿನಿ

ನನ್ನ ಹೃದಯವು ಬಂದಿಯಾಗಿದೆ
ನಿನ್ನ ಪ್ರೇಮದ ಪಂಜರದಲಿ
ಎನಿತು ಸುಖವದು ಚೆಲುವೆ ನಿನ್ನಯ
ಒಲವಿನಾಸರೆಯಿರುತಲಿ

ಮಧುರ ಕ್ಷಣಗಳ ನೆನಪು ತುಂಬಿದೆ
ಹೃದಯ ದೇಗುಲದಲೆಲ್ಲಿಯೋ
ಮರೆತು ಹೋಗದು ಮಧುರ ಕ್ಷಣಗಳು
ಕನಸು ಮನಸಲಿ  ತುಂಬಿದೆ

ಒಲವ ರಸವನು ಸವಿಯುವಾತುರ
ಮನದ ತುಂಬಾ ತುಂಬಿದೆ
ಚೆಲುವೆ ನಿನ್ನಯ ಪ್ರೇಮ ಪಂಜರದಿ
ನನ್ನ ಹೃದಯವು ಕುಣಿದಿದೆ

ಪಂಕಜಾ.ಕೆ. ಮುಡಿಪು
[3/7/2022, 7:56 pm] Pankaja K: ಉಳ್ಳಾಲ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಸ್ಪರ್ಧೆಗಾಗಿ
ಚಿತ್ರಕ್ಕೊಂದು ಕವನ

ಕಮರಿದ ಬದುಕು

 ಅಂದದ ಮೊಗದ ಮಕ್ಕಳ ಬಾಲ್ಯವು
ವಿದ್ಯೆಯು ಇಲ್ಲದೆ ಸೊರಗಿಹುದು
ಚಿಂದಿಯ ಹೆಕ್ಕುತ ಮಂದಿಯ  ಬೇಡುತ
ಕಂದರು ಅಲೆಯುವರು ರಸ್ತೆಯಲಿ

ಶಾಲೆಗೆ ಹೋಗುವ ಮಕ್ಕಳ  ಸಾಲನು
ಕಾಣುತ  ದುಃಖವು ಕಾಡಿಹುದು
ಕಲಿಯುವ  ಬಯಕೆಯು ಮನದಲ್ಲಿದ್ದರೂ.
ಬಡತನ ಬೆನ್ನಿಗೆ  ಬಿದ್ದಿಹುದು

 ಬೆಕ್ಕಸ ಬೆರಗಿನ  ಜಗದಲಿ ಅವರಿಗೆ
ವಿದ್ಯೆಯ ಮಹತ್ವದ ಅರಿವಿಲ್ಲ
ಮಕ್ಕಳ ಬಾಲ್ಯವು ಸಕ್ಕರೆಯಾಗಲು
ಪಾಲಕರೆಲ್ಲರೂ ಒಂದಾಗಿ 

ಕಣ್ಣಲಿ ಕನಸನು ಅರಳಿಸುತಲವರಿಗೆ
 ಶಾಲೆಯ ದಾರಿಯ ತೋರಿಸಿರಿ
ಬಾಳಿನ ಗುರಿಯನು  ತಲುಪಲು ಅವರಿಗೆ 
ಸರಕಾರದ ಕೊಡುಗೆಯ  ತಿಳಿಸುತಿರಿ

ಪಂಕಜಾ.ಕೆ. ಮುಡಿಪು
[3/7/2022, 8:45 pm] Pankaja K: ಗುರುಕುಲಾ ದಕ್ಷಿಣ ಕನ್ನಡ ಘಟಕ
ಸ್ಪರ್ಧೆಗಾಗಿ ಚಿತ್ರಕ್ಕೊಂದು ಕವನ

 ಧಾವಂತದ ಬದುಕು


ಕಿರಿದಾದ ರಸ್ತೆಯಲಿ ವಾಹನದ ದಟ್ಟಣೆಯು
ಬೆಳಗಿನಾ ಜಾವದಾ  ಈ ದೃಶ್ಯವು
ಜನಜಾತ್ರೆ ಸೇರಿಹುದು ಬೆಳಗಿನವಸರದಲ್ಲಿ
ಗುರಿ  ತಲುಪಬೇಕೆಂಬ ಧಾವಂತವು

ಸೂಚನಾ ಫಲಕವನು ಕಡೆಗಣಿಸಿ ಸರಿಯುತಲಿ 
 ಸರಸರನೆ ಗಾಡಿಗಳು  ಓಡುತಿಹುದು
 ಅವಸರವ ಮಾಡಿದರೆ  ಕುತ್ತಿಹುದು ಜೀವಕ್ಕೆ 
 ತಿಳಿದರೂ ತಿಳಿಯದಂತೆ ಸಾಗುತಿಹುದು

ಚೀಲವನು ಹೆಗಲಿಗೆ  ಹಾಕಿರುವ ಮಕ್ಕಳೆಲ್ಲ
ಹಸಿರುಟ್ಟ ದಾರಿಯಲಿ ನಡೆಯುತಿರುವರು
ನಡಿಗೆಗೂ  ಜಾಗವಿಲ್ಲದಂತೆಯೇ ಇರುವ
ದಾರಿಯಲಿ ಎಚ್ಚರವು ಅತ್ಯಗತ್ಯವು

ಬಸ್ಸು ಕಾರು ಬೈಕುಗಳ ಸಾಲುಗಳು
ಕೊನೆಯಿಲ್ಲದಂತೆಯೇನಿಂತಿರುವುದು
ಮಾಲಿನ್ಯ ತುಂಬುತಲಿ ಹಸಿರನ್ನು ಕೆಡಿಸುತ್ತ
ದಿನನಿತ್ಯ ವಾಹನಗಳು ಚಲಿಸುತಿಹುದು

ಪಂಕಜಾ.ಕೆ. ಮುಡಿಪು
[15/7/2022, 8:18 am] Pankaja K: ಹಾಯ್ಕು
ದತ್ತಪದ.ಸ್ವರ್ಗ ನರಕ 

ಸ್ವರ್ಗ ನರಕ
ಮನೋಭಾವದಲ್ಲಿದೆ
ಬೇರೆಲ್ಲೂ ಇಲ್ಲ

ಪಂಕಜಾ ಕೆ. ಮುಡಿಪು
[15/7/2022, 5:40 pm] Pankaja K: ಹಾಯ್ಕು

 ಸ್ಪರ್ಧೆ ಗಾಗಿ ಹಾಯ್ಕುಗಳು   

1   ನರಕ  2  ಸ್ವರ್ಗ

ಹಾಯ್ಕು 1
 ಪ್ರಾಣಿ ಹಿಂಸೆಯು 
ನರಕಕ್ಕೆ ದಾರಿಯು
ಹಿಂಸೆ ತ್ಯಜಿಸಿ


 ಹಾಯ್ಕು 2 

ಸ್ವರ್ಗ ನರಕ
ಮನೋಭಾವದಲ್ಲಿದೆ
ಬೇರೆಲ್ಲೂ ಇಲ್ಲ

ಪಂಕಜಾ ಕೆ. ಮುಡಿಪು
[23/7/2022, 8:18 pm] Pankaja K: ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು
ಸ್ಪರ್ಧೆಗಾಗಿ ಹಾಯ್ಕು

1 ಕಾಮ

ಅತಿ ಕಾಮವು
ಹಿತಕರವಲ್ಲವು
ನಿಗ್ರಹಿಸಿರಿ

2 ಕ್ರೋಧ

ಕ್ರೋಧವಂತನು
ಎಲ್ಲರಿಂದಲೂ ದೂರ
ಸಹನೆ ಬೇಕು

 3 ಲೋಭ

ಲೋಭವಿದ್ದರೆ
ಬದುಕು ನಿಸ್ಸಾರವು
ದಾನಮಾಡಿರಿ

4  ಮೋಹ

ಮೋಹವಿರಲು
ಮತಿಹೀನನಾಗುತ
ಕಣ್ಣು ಕುರುಡು

5  ಮದ

ಮದವೇರಿದ
ಆನೆಯಂತಾಗಬೇಡ
ಸೋಲು ಖಂಡಿತ

6 ಮಾತ್ಸರ್ಯ

ಬೆಂಕಿಯಂತೆಯೇ
ತನ್ನನ್ನೇ ಸುಡುವುದು
ಮಾತ್ಸರ್ಯ ತಿಳಿ

ಪಂಕಜಾ.ಕೆ. ಮುಡಿಪು.
[7/8/2022, 10:16 am] Pankaja K: ಗುರುಕುಲಾ ಕಲಾಪ್ರತಿಸ್ಥಾನ 
ಜಿಲ್ಲಾ ಘಟಕ ಚಿಕ್ಕಮಗಳೂರು
*ಸ್ಪರ್ಧೆಗಾಗಿ*

*ಸಿಂಹಪ್ರಾಸ ಕವನ*

    *ಮಧುರ ನೆನಪು*

ಹೊಳೆಯ ಬದಿಯಲಿ ಆಟವಾಡುತ
ಕಳೆದ ದಿನಗಳ ನೆನಪಲಿ
ಬಳಿಯಲಿರುತಿಹ ಲಲನೆ ಮನವನು
ಸೆಳೆದ ತನ್ನೆಡೆ  ಒಲವಲಿ

*ಪಂಕಜಾ.ಕೆ. ಮುಡಿಪು*
[14/8/2022, 6:32 pm] Pankaja K: ಗುರುಕುಲಾ ಚಿಕ್ಕಮಗಳೂರಿ ಘಟಕ
ಸ್ಪರ್ಧೆಗಾಗಿ  ಆದಿಪ್ರಾಸದ ಗಜಪ್ರಾಸ ಕವನ
ವಿಷಯ..ದೇಶಭಕ್ತಿಸಾರುವ  ಕವನ

 ನನ್ನ ದೇಶ ಭಾರತ
 
ಭಾರತದೇಶದ ಹಿರಿಮೆಯ ಸಾರುತ
ಹಾರಿತು ಬಾನಲಿ ಬಾವುಟವು
ಸೇರುತಲೆಲ್ಲೆಡೆ ದೇಶಭಕ್ತರು
ತೋರಿಸಿ ಗೌರವ ದೇಶದೆಡೆ

ಪಂಕಜಾ.ಕೆ. ಮುಡಿಪು
[14/8/2022, 6:41 pm] Pankaja K: ಗುರುಳುಲಾ ಚಾಮರಾಜನಗರ
ಸ್ಪರ್ಧೆಗಾಗಿ ಟಂಕಾ
 ದತ್ತಪದ.       1. ಸ್ವಾತಂತ್ರೋತ್ಸವ
                       2.. ದೇಶಸೇವೆ

     ಟಂಕಾ 1  
ಸ್ವಾತಂತ್ರೋತ್ಸವ
ಆಚರಿಸುವ ದಿನ
ಸಡಗರದಿ
ಶಾಂತಿ ಸಹನೆಯಿಂದ
ವೀರರ ನೆನೆಯುವ


ಟಂಕಾ 2

ದೇಶ ಸೇವೆಯು
ಈಶನ ಸೇವೆಯೆಂದು
ತಿಳಿಯಬೇಕು
ಎಲ್ಲರೂ ಒಗ್ಗಟ್ಟಾಗಿ
ದೇಶವನ್ನು ಕಾಯುವ

ಪಂಕಜಾ. ಕೆ. ಮುಡಿಪು
[19/8/2022, 10:21 pm] Pankaja K: ವಿರಹಗೀತೆ

ರಾದೆಯ ವಿರಹ

ವಿರಹದ ಬೇಗೆಯು ಮನವನು ಸುಡುತಿದೆ
ತಣಿಸಲು ಬಾರೆಯಾ ಶ್ರೀಕೃಷ್ಣ
ಯಮುನಾ ತೀರದಿ ನಿನ್ನಯ ನೆನಪಲಿ
ಕಾಯುತಿರುವೆನು ಹೇ ಮುರಾರಿ

ಕಳೆದಿಹ ದಿನಗಳು ಬೇಗೆಯ ತರುತಿದೆ
ಸಹಿಸೆನು ನಾನು ಈ ವಿರಹ
ಬೇಗನೆ ಬಂದು   ಮುರಳಿಯ ನುಡಿಸುತ
ಮೈ ಮನ ಮರೆಸು ಗೋಪಾಲ

ಗೋಪಿಯರೆಲ್ಲರೂ  ಇದ್ದರೂ ಸನಿಹ
ನಿನ್ನಯ ಇರವನು  ಮನ ಬಯಸುತಿದೆ
ಹಗಲೂ ಇರುಳೂ ವಿರಹವು ಕಾಡಿದೆ
ನೀನಿಲ್ಲದೆ ನಾ ಹೇಗಿರಲಿ

ಪಂಕಜಾ.ಕೆ. ಮುಡಿಪು
[21/8/2022, 3:21 pm] Pankaja K: ಗುರುಕುಲಾ  ಚಿಕ್ಕಮಗಳೂರು ಘಟಕ ಸ್ಪರ್ಧೆಗಾಗಿ  ಹನಿಕವನ
ದತ್ತಪದ. ಪಂಜರ

ಪ್ರಕೃತಿ ಹರಣ

ಪಂಜರದ ಪಕ್ಷಿಯಂತಾಗಿದೆ ಬಾಳು
ದಿನ ನಿತ್ಯ ಒಂದಲ್ಲ  ಒಂದು ಗೋಳು
ಮನುಜ ಮಾಡಿದ ಪ್ರಕೃತಿಯ ಹಾಳು
ಗುಡ್ಡಬೆಟ್ಟಗಳ  ಕಡಿಯಬೇಡ ತಾಳು
ಭೂಮಿಯಾಗಿದೆ  ಇಂದು ಬರೀ ಜಾಳು 
ಪ್ರಕೃತಿ   ಹರಣದಿಂದ   ನಮ್ಮ ನಾಶ ಕೇಳು

ಪಂಕಜಾ.ಕೆ. ಮುಡಿಪು
[21/8/2022, 3:42 pm] Pankaja K: ಗುರುಕುಲಾ ಕೊಡಗು ಘಟಕ
ಸ್ಪರ್ಧೆಗಾಗಿ. ಕವನ
ದತ್ತಸಾಲು.   ನಿನ್ನ ಮಗನೇನೆ ಗೋಪಿ

ಬಾಲ ಗೋಪಾಲ

ನಿನ್ನ ಮಗನೇನೆ ಗೋಪಿ
ಬೆಣ್ಣೆಯ ಕದಿಯುವನಲ್ಲ
ನಾರಿಯರೆ ಕೆಣಕುವನಲ್ಲ
ಕೊಳಲನೂದುತ ಮೈ ಮರೆಸುವನಲ್ಲ//ನಿನ್ನ//

ರಾಧೆಯ ಮನವ ಕದ್ದನಲ್ಲ
ರಕ್ಕಸಿ ಪೂತನಿಯ  ಕೊಂದನಲ್ಲ
ಬಾಯಿಯಲಿ ಜಗವ ತೋರಿದನಲ್ಲ
ಬಾಲಲೀಲೆಯ ತೋರಿದನಲ್ಲ//ನಿನ್ನ//

ಕಾಳಿಂಗ ಮರ್ಧನವ  ಮಾಡಿ
ಗೋವುಗಳ ಕಾಯ್ದನಲ್ಲ
ರಕ್ಕಸರ ತರಿದೊಗೆದು 
ಮಾವ ಕಂಸನ  ಕೊಂದನಲ್ಲ//ನಿನ್ನ//

ಕಾರಾಗೃಹದಲಿ   ಕತ್ತಲಲಿ ಜನಿಸಿ
ಮಾಯೆಯನು ತೋರಿದನಲ್ಲ
ಜಗವನುದ್ದರಿಸಲು ಅವತರಿಸಿ
ಗೀತೆಯ  ಸಾರವನು ಉಸಿರಿದನಲ್ಲ//ನಿನ್ನ//

ಪಂಕಜಾ.ಕೆ. ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.