Skip to main content

ಅಂತರ್ಜಾಲ ಆಧಾರಿತ ಕವನ ರಚನೆ ವಾಚನೆ

ಗಜಲ್


ನವನವೀನ  ಕನಸುಗಳ ಹೊತ್ತು ಬಂದಿರುವೆ ನಿನಗಾಗಿI

ನವೋಲ್ಲಾಸದಿ ನಲಿಯುವ ಕ್ಷಣಕೆ ಕಾದಿರುವೆ ನಿನಗಾಗಿ


ಮದುರಸದ ಬಟ್ಟಲು ನನ್ನೊಡಲ ತುಂಬಾ ತುಂಬಿದೆ

ಅನುರಾಗವ ನಿರೀಕ್ಷಿಸುತ  ನಿಂತಿರುವೆ ನಿನಗಾಗಿ 


ಗಾಲಿ   ಕಳಚಿದ ಗಾಡಿಯಂತಾಗಿದೆ ನನ್ನ ಜೀವನ

ಬಾಳಿನಲ್ಲಿ ಬಂದ  ಕಷ್ಟಗಳ ಸಹಿಸಿರುವೆ ನಿನಗಾಗಿ


ಬದುಕ ಬಂಡಿಯ ಎಳೆಯಲು ನೀನು ಬರುವೆಯಲ್ಲವೇ

ಮುರುಕು ಮಂಟಪದಲ್ಲಿ  ಕುಳಿತಿರುವೆ  ನಿನಗಾಗಿ


ಜೀವನಕ್ಕೆ ಒಂದು  ಗುರಿ ಇರಬೇಕಲ್ಲವೇ  ಪಂಕಜಾ

ಛಲದಿಂದ ಮುನ್ನಡೆದು ಬದುಕ ಗೆಲ್ಲುವೆ ನಿನಗಾಗಿ


ಪಂಕಜಾ.ಕೆ. ಮುಡಿಪು

ನಿವೃತ್ತ ಅಸ್ಸಿಸ್ಟಂಟ್  ಪೋಸ್ಟ್ ಮಾಸ್ಟರ್

[4/6/2020, 9:26 PM] pankajarambhat: ಅಂತರ್ಜಾಲ ಆಧಾರಿತ ರಾಜ್ಯಮಟ್ಟದ ಹಾಯ್ಕುಗಳ ರಚನೆ ಮತ್ತು ವಾಚನ ಸ್ಪರ್ಧೆಗಾಗಿ


ಹಾಯ್ಕ1

ಬಾಳೆಂಬ ಬಂಡಿ

ಸರಾಗ ಸಾಗುವಾಗ

ಬೆಳದಿಂಗಳು

2  

ನಾನೆಂಬ ಹಮ್ಮು

ಏಳಿಗೆಗೆ ಮಾರಕ

ಬಿಡದಿದ್ದರೆ

3

ಚೈತ್ರ ಬರಲು

ತುಂಬಿತು ಚಿಗುರೆಲೆ

ಮನಕೆ ತಂಪು


ಪಂಕಜಾ.ಕೆ ಮುಡಿಪು

[12/6/2020, 2:13 PM] pankajarambhat: ಆಧುನಿಕ ವಚನ  ರಚನೆ ಮತ್ತು ವಾಚನ ಸ್ಪರ್ಧೆಗಾಗಿ 


ವಚನ 1.. ಕರುಣೆ


ಸರ್ವ ಪ್ರಾಣಿಗಳನ್ನು ಕರುಣೆಯಿಂದ ಕಾಣಯ್ಯ

ಎಲ್ಲರೊಡನೆ ಸ್ನೇಹಭಾವ ದಿಂದಿರಬೇಕಯ್ಯ 

ದ್ವೇಷ ಮತ್ಸರವೆಂಬುದನು ತೊರೆಯಯ್ಯ  

ಜಗ ಮೆಚ್ಚುವಂತೆ ಬಾಳಿ ಬದುಕ ಬೇಕಯ್ಯ

ಜೀವನದ ನಶ್ವರತೆಯ ತಿಳಿದು ನಡೆ ಪಂಕಜಾರಾಮ


 ವಚನ ..2

ಆಷಾಢ ಭೂತಿ


ಮನದ ತುಂಬಾ ಕಾಮ ಕ್ರೋಧ ಲೋಭಗಳ ತುಂಬಿ

ಮೈಕೈಗಳಿಗೆ ವಿಭೂತಿಯ ಬಳಿದು ಮಂತ್ರವನು ಜಪಿಸಿದರೆ ಶಿವನೊಲಿವನೇ ಪಂಕಜಾರಾಮ


ಪಂಕಜಾ.ಕೆ. ಮುಡಿಪು

[26/6/2020, 2:13 PM] pankajarambhat: ಅಂತರ್ಜಾಲ ಆಧಾರಿತ ರಾಜ್ಯಮಟ್ಟದ ಶಿಶುಗೀತೆ ರಚನೆ ಮತ್ತು ವಾಚನ  ಸ್ಪರ್ಧೆಗಾಗಿ


2  ನನ್ನ ಶಾಲೆ 


ನನ್ನ ಶಾಲೆ ಚೆನ್ನ ಶಾಲೆ

ಸುತ್ತ ಹಸಿರ ತೋಟವು

ಆಟ ಪಾಠ ಎಲ್ಲ ಕಲಿಸುವ

ಗುರುಗಳವರು ದೇವರು


ಶಿಸ್ತಿನಿಂದ  ನಿಂತು ನಾವು

ಧ್ವಜವಂದನೆ ಮಾಡುವೆವು

ರಾಷ್ಟ್ರಗೀತೆಯನ್ನು ಹಾಡಿ

ಕ್ಲಾಸಿನೊಳಗೆ ನಡೆವೆವು


ಕರಿಯ ಹಲಗೆ ತುಂಬಾ 

ಚಿತ್ರಗಳನು ಬಿಡಿಸುತ

ಪುಟ್ಟ ಪುಟ್ಟ ಅಕ್ಷರಗಳ

ಬೇಗ ನಾವು ಕಲಿವೆವು


ಆಡಲೆಂದು ಮೈದಾನದಲ್ಲಿ

ನಾವು ಕೂಡಿ ಆಡಿ ನಲಿವೆವು

ಒಂದೇ ತಾಯ ಮಕ್ಕಳಂತೆ 

ಪ್ರೀತಿಯಿಂದ ಇರುವೆವು


ಜಾತಿ ಬೇಧ ತಿಳಿಯದಲ್ಲ

ನಾವು  ಎಳೆಯ ಚಿಣ್ಣರು

ಶಾಲೆಎಂಬ ದೇಗುಲದಲ್ಲಿ

ಪಾಠ ಕಲಿವ ಜಾಣರು


ಪಂಕಜಾ.ಕೆ.ಮುಡಿಪು

[3/7/2020, 4:09 PM] pankajarambhat: ಅಂತರ್ಜಾಲ ಆಧಾರಿತ ಭಾವಗೀತೆ ರಚನೆ ಮತ್ತು ಗಾಯನ ಸ್ಪರ್ಧೆಗಾಗಿ

     

       ಅನ್ನದಾತ (ಭಾವಗೀತೆ) ಕಾವ್ಯದ ರಸಗಂಗೆ

     *~~~~~~~~~~*  

ಮಳೆ ಬಿಸಿಲೆನ್ನದೆ ಚಳಿಯನು ಗಣಿಸದೆ  

ಗದ್ದೆಯ ಕೆಸರಲಿ ದುಡಿಯುವನು | 

ಹೊಲವನು ಉಳುತಲಿ ಬೀಜವ ಬಿತ್ತುತ  

ನೇಜಿಯು ಮೊಳೆಯಲು ಕಾಯುವನು || 


ಕಷ್ಟವ ಗಣಿಸದೆ ನಷ್ಟಕೆ ಹೆದರದೆ  

ಇಷ್ಟದ ಕಾಯಕ ಮಾಡುವನು | 

ಸುಗ್ಗಿಯ ಕಾಲದಿ ಸಡಗರದಿಂದಲಿ 

ಹಿಗ್ಗುತ ಭೂಮಿಗೆ ನಮಿಸುವನು ||   


ಕಾಯಕವೆಂದರೆ ದೇವರು ಎನ್ನುತ  

ಬೆವರಿನ ಫಲವನು ಗಳಿಸುವನು | 

ನೇಗಿಲಯೋಗಿಯು ಅನ್ನವ ನೀಡುತ  

ದೇಶದ ಹಸಿವನು ತಣಿಸುವನು ||  


ನಮಿಸುವ ಗೆಳೆಯರೆ ದುಡಿಯುವ ರೈತಗೆ  

ಅನುದಿನ ಅನ್ನವ ಕೊಡುವವಗೆ |  

ಮೈಯನು ಬಗ್ಗಿಸಿ ದೇಹವ ಕುಗ್ಗಿಸಿ  

ಛಲದಲಿ ಮುಂದಕೆ ನಡೆವವಗೆ ||  


ಪಂಕಜಾ. ಕೆ ಮುಡಿಪು

ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

[10/7/2020, 2:55 PM] pankajarambhat: ಅಂತರ್ಜಾಲ ಆಧಾರಿತ ಕವನ ರಚನೆ ಮತ್ತು ವಾಚನ ಸ್ಪರ್ಧೆಗಾಗಿ 


ವರುಣನ ಒಲವು


ಏನು ವೈಭವ ಮೇಘ ಗರ್ಜನೆ 

ಹರಿದು ಬಾನನು ಸುರಿಸಿ ತಣ್ಣನೆ

ಮಳೆಯ ನೀರನು ಇಳಿಸಿ ಬಿಮ್ಮನೆ

ವರುಣ  ತಾ ಇಳೆಯ ತಬ್ಬುವನು


ಮೇಘರಾಜನ ಒಲವ ಸುಧೆಯಲಿ

ತನುವು ಅರಳಿಸಿ ನಲಿವ ಸುಂದರಿ

ಬಾಳ  ಬಯಲಲಿ ಬಯಕೆ ತುಂಬುತ

ತನುವ ಬಳುಕಿಸಿ  ತೂಗಿ ಬಾಗುತಿದೆ


ಹರಿದು ನೀರದು ಇಳೆಯ ತುಂಬಿತು

ತಂಪು ಗಾಳಿಯು ಬೀಸಿ ಹಬ್ಬಿತು

ಬಿಸಿಲ ಬೇಗೆಯ ತಣಿಸಿ ಎಲ್ಲೆಡೆ

ಮಣ್ಣ ಗಂಧವು ಹರಡಿ ತನುವಿಗೆ ತಂಪು ತಂದಿಹುದು


ಇಳೆಯ ನೋವನು ಕಳೆದು ಪಕ್ಕನೆ

ತಬ್ಬಿ ಮುದ್ದಿಸಿ  ತನುವ ಅರಳಿಸಿ

ಮನದಿ ಚೆಲುವಿನ  ಕನಸ ಬಿತ್ತುತ

ಓಡುತೋಡುತ ವರುಣ ಬೇಗ ಬಂದಿಹನು


ಪಂಕಜಾ.ರಾಮಭಟ್ ಕಬ್ಬಿನಹಿತ್ಲು

ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

[24/7/2020, 1:39 PM] pankajarambhat: ಅಂತರ್ಜಾಲ ಆಧಾರಿತ ಕವನ ರಚನೆ ಮತ್ತು ವಾಚನ ಸ್ಪರ್ಧೆಗಾಗಿ

 

 ಇಳೆಯ ಸೊಬಗು


ಬಾನ ಬಯಲಲಿ ಮುಗಿಲು ಕಟ್ಟಿದೆ

ಚೆಲುವ ಬಣ್ಣವ ಕಲಸಿದೆ

ಮೋಡಿ ಮಾಡುವ ಚೆಲುವ ಸವಿಯುತ

ಕಣ್ಣು ಮನವು ತುಂಬಿದೆ


ಏನು ಹೇಳಲಿ ಪ್ರಕೃತಿ ವೈಭವ

ಎನಿತು ಚಂದದ ಸಿರಿಯಿದು

ನೋಡ ನೋಡುತ ತುಂಬಿ ತುಳುಕಿತು

ಕಪ್ಪು  ಮೋಡವು ಗಗನದಿ


 ಗುಡುಗು ಸಿಡಿಲಿನ ಆರ್ಭಟಕೆ

 ಬೆಚ್ಚಿ ಬೆರಗಿನ ನೋಟವು

ಸುರಿದ ಮಳೆಯು ಇಳೆಯ ತಣಿಸಿ

ಹಸಿರ  ಹಂದರ  ಹಾಸಿದೆ


ಕೆರೆಕೊಳಗಳು ತುಂಬಿ ಹರಿಯಿತು

ಬಿರಿದ  ಭೂಮಿಯು ತಣಿಯಿತು

ನಲಿವು ತುಂಬಿತು ಇಳೆಯ ಮಡಿಲಲಿ

ಚಿಗುರು ಹೂಗಳು ಬಿರಿಯಿತು


ಹೂವ ಗಂಧವು ಹಬ್ಬಿ ಎಲ್ಲೆಡೆ

ದುಂಬಿಗಳನು ಕರೆಯಿತು

ಹಾರಿ ಬರುವ ದುಂಬಿಗಳಿಗೆ

ತನಿರರಸವನು ಉಣಿಸಿತು


ಪಂಕಜಾ.ಕೆ.ಮುಡಿಪು

[31/7/2020, 12:47 PM] pankajarambhat: ಅಂತರ್ಜಾಲ ಆಧಾರಿತ ಹನಿಕವನ ರಚನೆ ಮತ್ತು ವಾಚನೆ ಸ್ಪರ್ಧೆಗಾಗಿ 


(ಹನಿ ಕವನ)


 1..ಪ್ರಕೃತಿ ಉಳಿಸಿ


ಪ್ರಕೃತಿಯೊಡನಾಟ

ತುಂಬುತಿದೆ ಮನಕೆ ಉಲ್ಲಾಸ 

ಉಳಿಸಿ ಬೆಳೆಸಿದರೆ

ಕೊಡುವುದದು  ನಮಗೆ ಶ್ವಾಸ

ಎಲ್ಲೆಂದರಲ್ಲಿ ಎಸೆದರೆ ಕಸ

ಉಳಿದೀತೆ ನಮ್ಮ ಶ್ವಾಸ


2...ಹಸಿರು ಉಸಿರು


ಹಸಿರು ತುಂಬಿದ ಇಳೆಯ ಅಂದ

ಮೈ ಮನಕೆ ಉಲ್ಲಾಸದ ಬಂಧ

ಚಿಗುರು ಹೂವು ಹಬ್ಬಿ ನಿಂತ ಇಳೆ

ಕಣ್ಣು ಮನಕೆಲ್ಲಾ ತುಂಬುವುದು ಕಳೆ

ಗಿಡಮರಗಳಲಿ ತುಂಬಿದ ಹಸಿರು

ಕೊಡುತಿದೆ ನಮಗೆ ಅನುದಿನವೂ ಉಸಿರು


ಪಂಕಜಾ.ಕೆ. ಮುಡಿಪು

[6/8/2020, 4:03 PM] pankajarambhat: ಅಂತರ್ಜಾಲ ಆಧಾರಿತ ಟಂಕಾಗಳ ರಚನೆ ಮತ್ತು ವಾಚನೆ  ಸ್ಪರ್ಧೆಗಾಗಿ ನನ್ನ ಸ್ವ ರಚಿತ ಟಂಕಾ ಗಳು


ಟಂಕಾ..1


ನಾನು ನನ್ನದು 

ಎನ್ನುವುದು ಯಾವದು

ನಮ್ಮ ಜೀವವೇ

ಶಾಶ್ವತವಲ್ಲವೆಂದು

ತಿಳಿಯದೇ ಮನುಜ


ಟಂಕಾ 2


ಜಗದೊಡೆಯ

ಶ್ರೀಕೃಷ್ಣನಪದಕೆ

ಎರಗುತಲಿ

ಭಕ್ತಿಯಿಂದ ಬೇಡಲು

ಕೊಡುವನೆಲ್ಲವನು


ಪಂಕಜಾ.ಕೆ. ಮುಡಿಪು

ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

[14/8/2020, 5:32 AM] pankajarambhat: ಅಂತರ್ಜಾಲ ಆಧಾರಿತ ಗಜಲ್ ರಚನೆ ಮತ್ತು ವಾಚನ ಸ್ಪರ್ಧೆಗಾಗಿ


ಹಿರಿಯರ ವಿಭಾಗ. 2  ಕ್ಕಾಗಿ ನನ್ನ ಸ್ವರಚಿತ ಗಜಲ್


              ಗಜಲ್


ಮುಂಗಾರು ಮಳೆಸುರಿದು ಮೈ ಮನಕೆ ಮುದ ತಂದಿದೆ ಗೆಳತಿ

ಭೂತಾಯಿಯ ಹಸಿರಿನ ಸೆರಗು ಕಣ್ಣುಗಳನ್ನು ತಂಪಾಗಿಸಿದೆ ಗೆಳತಿ


ಚಿಗುರು ಹೂಗಳಿಂದ ತುಂಬಿ ಗಿಡಮರಗಳು ನಳನಳಿಸುತಿದೆಯಲ್ಲವೇ

ವಸುಂಧರೆಯ ಚೆಲುವು ನೋಡುವುದು ಹಬ್ಬವಾಗಿದೆ ಗೆಳತಿ


ಜುಳು ಜುಳು ಹರಿಯುವ ನೀರಧಾರೆಯಲಿ ಕಾಲಾಡಿಸುವ ಆಸೆ

ಜಿಟಿ ಜಿಟಿ ಮಳೆಯಲಿ ಮನಸ್ಪೂರ್ತಿಯಾಗಿ ನಲಿಯಬೇಕೆನಿಸಿದೆ ಗೆಳತಿ


ಬಾಂದಳದಲಿ ಕಟ್ಟಿರುವ ಕರಿಮೋಡಗಳ ದಂಡು ಮನ ಸೆಳೆದಿದೆ

ಪ್ರಕೃತಿಯ ಮಡಿಲಲಿ  ನವೋಲ್ಲಾಸದಿಂದ ವಿಹರಿಸಬೇಕೆನಿಸಿದೆ ಗೆಳತಿ


ಬೇಸಿಗೆಯಲಿ ನೀರ ಕೊರತೆ ಬಾರದಂತೆ  ನೋಡಿಕೊಳ್ಳಬೇಕಲ್ಲವೇ ಪಂಕಜಾ

ಹರಿಯುವ ನೀರನು ಇಂಗು ಗುಂಡಿಗಳ ತೋಡಿ ಇಂಗಿಸಬೇಕಿದೆ ಗೆಳತಿ


 ಪಂಕಜಾ. ಕಬ್ಬಿನಹಿತ್ಲು  ಮುಡಿಪು

ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

[22/8/2020, 8:25 PM] pankajarambhat: ಅಂತರ್ಜಾಲ ಆಧಾರಿತ ನ್ಯಾನೊ ಕಥಾ ರಚನೆ ಮತ್ತು ವಾಚನೆ ಸ್ಪರ್ಧೆಗಾಗಿ

 

          ತಿರುಗೇಟು  (ನ್ಯಾನೊ ಕಥೆ)


ಅತ್ತೆಮಾವ ಇಲ್ಲಿ ಏಕೆ ವೃದ್ಧಾಶ್ರಮದಲ್ಲಿ ಬಿಡಿ, ಎಂದು ದಿನಾ ಜಗಳ ಮಾಡುತ್ತಿದ್ದ, ತಾಯಿಯ ಬಗ್ಗೆ  ಅಜ್ಜ ಅಜ್ಜಿಯರ ಮಡಿಲಲ್ಲೇ ಬೆಳೆದ  ಸಾಕೇತನಿಗೆ ಎಲ್ಲಿಲ್ಲದ ಕೋಪ  . ರಾಜೀವನೂ ನಾವು ಇಂದು ಉಣ್ಣುವ ಅನ್ನ ನನ್ನ ತಂದೆ ತಾಯಿಯರ ಭಿಕ್ಷೆ ,ಅವರಿಂದವೇ ನಾನಿಂದು ಈ ಸ್ಥಿತಿಯಲ್ಲಿ ಇರುವುದು ಎಂದು  ಹೇಳಿ ಹೇಳಿ ಸಾಕಾಗಿದ್ದ. ದಿನಾ ಜಗಳ ನೋಡಿ ಬೇಸತ್ತ ಆತ ಕೊನೆಗೊಮ್ಮೆ ಮನಸ್ಸಿಲ್ಲದ ಮನಸ್ಸಿನಿಂದ ತಂದೆ ತಾಯಿಯನ್ನು ವೃದ್ದಾಶ್ರಮದಲ್ಲಿ  ಬಿಡಲು ಹೊರಟ. ಇದನ್ನು ತಿಳಿದ  ಸಾಕೇತ  ಕೂಡಲೇ ಅಮ್ಮನ ಕೈ ಹಿಡಿದು  ಅಪ್ಪನ ಜತೆ ನಾನೂ ಹೋಗುತ್ತೇನೆ. ನಾಳೆ ನೀನು ಮುದುಕಿಯಾದಾಗ ನಿನ್ನನ್ನು ಅಲ್ಲಿ ಬಿಡಲು ಇಂದೇ ಸ್ಥಳ ಕಾದಿರಿಸುವೆ ಎನ್ನುತ್ತಾನೆ  ಮಗನ ಮಾತು ಕೇಳಿದ  ಮೇಧಾ ದಿಗ್ಮೂಡಳಾಗಿ ನಿಂತು ಬಿಟ್ಟಳು


ಪಂಕಜಾ. ಕಬ್ಬಿನಹಿತ್ಲು. ಮುಡಿಪು.ನಿವೃತ್ತ ಅಸ್ಸಿಸ್ಟಂಟ್ .ಪೋಸ್ಟ್ ಮಾಸ್ಟರ್

[25/9/2020, 3:36 PM] pankajarambhat: ಅಂತರ್ಜಾಲ ಆಧಾರಿತ ಶಿಶುಗೀತೆ ರಚನೆ ಮತ್ತು ವಾಚನ ಸ್ಪರ್ಧೆಗಾಗಿ ನನ್ನ ಸ್ವರಚಿತ ಶಿಶುಗೀತೆ




24  ಯೋಧನಾಗುವೆ


ಅಮ್ಮನಾನು

ಗಡಿಯ ಕಾಯುವ

ಯೋಧನಾಗುವೆ


ಗಡಿಯ ಎಡೆಯಲಿ

ನುಸುಳುತಿರುವ

ವೈರಿಗಳ ಸದೆ ಬಡಿಯುವೆ


ದೇಶಕಾಗಿ 

ಹಸಿವು ನಿದ್ದೆ ಬಿಟ್ಟು

ನಿತ್ಯ ದುಡಿಯುವೆ


ನನ್ನ ದೇಶವನ್ನು

ರಕ್ಷಿಸಲು

ಫಣವ ತೊಡುವೆನು


ದೇಶ ಸೇವೆಯೇ

ಈಶ ಸೇವೆ

ಎನುತ ದುಡಿಯುವೆ


ಹುಟ್ಟಿ ಬೆಳೆದ

ನಾಡಿಗಾಗಿ

ಜೀವ ಬಿಡುವೆನು


ಭಾರತದ 

ಕೀರ್ತಿಯನು

ಎತ್ತಿ ಹಿಡಿವೆನು


ಪಂಕಜಾ.ಕೆ. ಮುಡಿಪು

ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ ಶ್ರೀ.ಗಣೇಶ ಕೃಪಾ.ಮುಡಿಪು

ಅಂಚೆ..ಕುರ್ನಾಡು.ದ.ಕ.574153

[1/10/2020, 8:33 PM] pankajarambhat: ಅಂತರ್ಜಾಲ ಆಧಾರಿತ ಮಕ್ಕಳ ಕಥಾ ರಚನಾ ಮತ್ತು ವಾಚನ  ಸ್ಪರ್ಧೆಗಾಗಿ

 

         ಮೌನದ ಮಹತ್ವ


ಒಂದು ಊರಿನಲ್ಲಿ ಸುಂದರ ಮತ್ತು ಸುಂದರಿ ಎಂಬ ದಂಪತಿಗಳಿದ್ದರು.ಗಂಡ ಏನೇ ಹೇಳಿದರೂ ಹೆಂಡತಿ ಅದಕ್ಕೆ ವಿರುದ್ಧವಾಗಿ ಏನಾದರೂ ಹೇಳುತ್ತಾ ಇದ್ದಳು.ಗಂಡನೂ ಅಷ್ಟೇ ಮಾತು ಮಾತಿಗೆ ಹೆಂಡತಿಯನ್ನು ಕೆಣಕಿ ಜಗಳವಾಡುತ್ತಿದ್ದ. ಇದರಿಂದ ನಿತ್ಯ ಆ ಮನೆಯಲ್ಲಿ ಜಗಳವಾಗುತ್ತಿತ್ತು.ಇವರಿಬ್ಬರ ಜಗಳ ನೋಡಿ ಬೇಸತ್ತ ಮಗ ನವೀನ  ತನ್ನ ಸ್ನೇಹಿತನ ಜತೆ ತನ್ನ ದುಃಖವನ್ನು ತೋಡಿಕೊಂಡ..ಆತನ ಸ್ನೇಹಿತ  ನಟೇಶ್  ಒಂದು ಉಪಾಯವನ್ನು  ನವೀನನಿಗೆ ಹೇಳಿ ಕೊಟ್ಟ

                   ಮರುದಿನ ಬೆಳಿಗ್ಗೆ ಯಾವುದೋ ಒಂದು ಸಣ್ಣ ಕಾರಣವನ್ನು ಹಿಡಿದು ನವೀನನ ತಂದೆ ಹೆಂಡತಿಯನ್ನು ನಿಂದಿಸಲು ತೊಡಗಿದ ,ಆಕೆ ಏನಾದರೂ ಹೇಳಬೇಕೆಂದಿದ್ದಾಗ ನವೀನ ಕೂಡಲೇ ಆಕೆಯ ಬಾಯಿಗೆ ತನ್ನ ಕೈಯಲ್ಲಿದ್ದ ಚಾಕೊಲೇಟ್ ನ್ನು ಹಾಕಿ ಅಮ್ಮ  ಬಾಯಿಯಲ್ಲಿರುವ ಈ ಚಾಕೊಲೇಟ್ ಕರಗುವ ತನಕ ನೀವು ಮಾತಾಡಬಾರದು ಎಂದು  ಗುಟ್ಟು ಹೇಳಿದ.ಚಾಕೊಲೇಟ್ ಬಾಯಿಯಲ್ಲಿ ಇದ್ದುದರಿಂದ  ನವೀನನ ಅಮ್ಮ ಅಪ್ಪನ ಬೊಬ್ಬೆಗೆ ಮರು ಉತ್ತರ ಕೊಡದೆ ತನ್ನ ಕೆಲಸವನ್ನು ಮಾಡುತ್ತಾ ಮೌನವಾಗಿ  ಇದ್ದಳು .ಹೆಂಡತಿ ಮೌನವಾಗಿರುವುದು ಕಂಡು ಸುಂದರನೂ ತನ್ನ ಬಾಯಿಯನ್ನು  ಮುಚ್ಚಿ ಕೆಲಸಕ್ಕಾಗಿ ಹೊರಟು ಬಿಟ್ಟ .ಹೀಗೆ ನಾಲ್ಕು ಐದು ದಿನ  ಈ ರೀತಿ ಮಾಡಲು ಆ ಮನೆಯಲ್ಲಿ ಶಾಂತಿ ನೆಲೆಸಿತು.ಇದನ್ನು ಕಂಡ ನವೀನನಿಗೆ ಅಶ್ವರ್ಯ ವಾಯಿತು.ಮತ್ತು ನವೀನನ ತಾಯಿಯೂ ಮೌನದ ಮಹತ್ವನ್ನು ಅರಿತು ಮುಂದೆಂದೂ ಗಂಡನ ಮಾತಿಗೆ ಮರು ಉತ್ತರ ಕೊಡುವುದನ್ನು ಬಿಟ್ಟು ಬಿಟ್ಟಳು.ಇದರಿಂದಾಗಿ ಒಂದೇ ಕೈಯಲ್ಲಿ ಚಪ್ಪಾಳೆ ತಟ್ಟಲು ಆಗದೆ ನವೀನನ ತಂದೆಯು ತನ್ನ ಕೋಪವನ್ನು ನಿಯಂತ್ರಿಸಿ ಮೃದುವಾಗಿ ಮಾತನಾಡಲು ಪ್ರಾರಂಭಿಸಿದ ಈಗ ಆ ಮನೆಯಲ್ಲಿ ನಿತ್ಯ ಸಂತೋಷದ ವಾತಾವರಣ ತುಂಬಿರುತ್ತದೆ

                   

ನೀತಿ  ..ಮೌನವಾಗಿದ್ದರೆ ಕಲಹವಿಲ್ಲ


ಪಂಕಜಾ.ಕೆ. ಮುಡಿಪು

ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ .ಶ್ರೀ ಗಣೇಶ ಕೃಪಾ.ಮುಡಿಪು ಅಂಚೆ..ಕುರ್ನಾಡು.ದ.ಕ.574153

[9/10/2020, 9:55 AM] pankajarambhat: ಅಂತರ್ಜಾಲ ಆಧಾರಿತ ಹಾಯ್ಕು ರಚನಾ ಸ್ಪರ್ಧೆಗಾಗಿ ನನ್ನ ಸ್ವರಚಿತ ಹಾಯ್ಕುಗಳು

 

ಹಾಯ್ಕು..1 ಪ್ರಕೃತಿ ಮಾತೆ


ಕಣ್ಸಳೆಯಿತು

ನಯನಮನೋಹರ

ಪ್ರಕೃತಿಮಾತೆ


ಹಾಯ್ಕು.2  ..ಅಮ್ಮ


ಅಮ್ಮನೆಂದರೆ

ಅಮೃತದ ಬಂಡಾರ

ಮಮತಾಮಯಿ


ಹಾಯ್ಕು..3...ಬಾಳು


 ಜಯಿಸಬೇಕು

 ಕಷ್ಟನಷ್ಟಗಳನ್ನು

 ಬಾಳು ಹಸನು


ಪಂಕಜಾ.ಕೆ. ಮುಡಿಪು

ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ಶ್ರೀ ಗಣೇಶ ಕೃಪಾ..ಮುಡಿಪು

ಅಂಚೆ.ಕುರ್ನಾಡು.ದ.ಕ.574153

[17/10/2020, 10:27 AM] pankajarambhat: ಅಂತರ್ಜಾಲ ಆಧಾರಿತ ಚಿತ್ರಕ್ಕೊಂದು ಕವನ ರಚನೆ ಮತ್ತು ವಾಚನ ಸ್ಪರ್ಧೆಗಾಗಿ ನನ್ನ ಸ್ವರಚಿತ ಕವನ

  

ಹೆಣ್ಣಿನ ಮನ

 

ಬಾಳಿನ ಬಂಡಿಯ ಸಾಗಿಸಲು

ಸೈಕಲ್ ರಿಕ್ಷವ ತುಳಿಯುವನು

ಉಡಲು ಸರಿಯಾದ ಬಟ್ಟೆಗಳಿಲ್ಲ

ಬರಿಮೈ ತಿಳಿಸುತಿದೆ ಬಡತದ ಬವಣೆ


ಮಳೆ ಬಿಸಿಲೆನ್ನದೆ ದುಡಿಯುತ

ಸಾಗಿಸಬೇಕಿದೆ ಬಾಳಿನ ಬಂಡಿ

ರಿಕ್ಷದಲಿ ಕುಳಿತಿರುವಳು ಹೆಣ್ಣು ಮಗಳು

ಮಳೆಯದು ಸುರಿಯಿತು ವೇಗದಲಿ


ಸಹಾನುಭೂತಿಯು ತುಂಬಿತು

ಹೆಣ್ಣುಮಗಳ ಮೃದು ಮನದಲಿ

ಕೊಡೆಯನು ಹಿಡಿಯುತಳಾಕೆ

ಮಳೆಯಿಂದ ಕೊಟ್ಟಳು ರಕ್ಷಣೆಯ


ಹೆಣ್ಣಿನ ಮನವದು ಪ್ರೀತಿಯ ಸಾಗರ

ಮಮತೆ ವಾತ್ಸಲ್ಯದ ಕಡಲವಳು

ತಾಯಿ ಸೋದರಿ ಹತ್ತು ಹಲವು ಮುಖಗಳು

ಜಗವನ್ನೇ ಪ್ರೀತಿಸುವ ಮಮತೆಯ ಮಾತೆ


ಹೆಣ್ಣಿಲ್ಲದೆ ಗಂಡಿಲ್ಲ  ಹೆಣ್ಣು ಸಂಸಾರದ ಕಣ್ಣು

ಕಾಯಬೇಕು ಅವಳ ಮಾನ ಪ್ರಾಣವನು

ಜಗದ ತಾಯಿ ಆಕೆ ತಿಳಿ ನೀ ಮನುಜ

ಹೆಣ್ಣಿನ ರಕ್ಷಣೆ ನಮ್ಮೆಲ್ಲರ ಹೊಣೆ


 ಶ್ರೀಮತಿ .ಪಂಕಜಾ.ಕೆ. ಮುಡಿಪು

ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ 

ಶ್ರೀ ಗಣೇಶ ಕೃಪಾ ಮುಡಿಪು.

ಅಂಚೆ.ಕುರ್ನಾಡು.ದಕ.574153

[23/10/2020, 8:38 PM] pankajarambhat: ಅಂತರ್ಜಾಲ ಆಧಾರಿತ   ಕವನ ರಚನೆ ಮತ್ತು ವಾಚನ ಸ್ಪರ್ಧೆಗಾಗಿ

 

ನಾಡ ಭಕ್ತಿ ಕವಿತೆ


  ಶೀರ್ಷಿಕೆ..ನಮ್ಮ  ಹೆಮ್ಮೆಯ ಕರುನಾಡು


ಕನ್ನಡ ನಾಡಿದು ಗಂಧದ ಬೀಡು

ಋಷಿ ಮುನಿಗಳು ಜನಿಸಿದ ನಾಡು 

ಕವಿಕೋಗಿಲೆಗಳು ಹಾಡಿದ ನಾಡು

ಇತಿಹಾಸದ ಪುಟಗಳಲಿ ಮಿಂಚಿದ ಬೀಡು


ಪಂಪ ರನ್ನರು ಹಾಡಿ ಹೊಗಳಿದ ನಾಡು

ಕವಿ ಕಬ್ಬಿಗರು ಜನಿಸಿದ ನಾಡು

ಸಂಗೀತ ಸಾಹಿತ್ಯ ಕಲೆಗಳ ಬೀಡು

ಶಿಲ್ಪ ಕಲೆಗಳ ವೈಭವ ಸಾರುವ ಬೀಡು 


ಹಸಿರು ಬೆಟ್ಟ ಗುಡ್ಡಗಳಿಂದ ತುಂಬಿದ ನಾಡು

ತೆಂಗು  ಕಂಗುಗಳು ಬೆಳೆಯುವ ನಾಡು

ವೀರ  ನಾರಿಯರು ಆಳಿದ ನಾಡು

ಕೋಟೆ ಕೊತ್ತಲಗಳು  ತುಂಬಿದ ಬೀಡು


ಕಲೆ ಸಾಹಿತ್ಯ ಸಂಸ್ಕೃತಿ ಇತಿಹಾಸದ ತವರು

ಕಾವೇರಿ ಕೃಷ್ಣೆಪುಣ್ಯ ನದಿಗಳ ತವರೂರು

ಐತಿಹಾಸಿಕ  ಭವ್ಯ ಪರಂಪರೆಯ ನಾಡು

ಪ್ರವಾಸಿಗಳ ಸ್ವರ್ಗ ನಮ್ಮ ಹೆಮ್ಮೆಯ ಕರುನಾಡು


ಪಂಕಜಾ.ಕೆ. ಮುಡಿಪು

ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್.ಶ್ರೀ ಗಣೇಶ ಕೃಪಾ .ಮುಡಿಪು.ಅಂಚೆ..ಕುರ್ನಾಡು. ದ.ಕ.574153

[30/10/2020, 3:53 PM] pankajarambhat: ಅಂತರ್ಜಾಲ ಆಧಾರಿತ ಕವನ ಸ್ಪರ್ಧೆಗಾಗಿ ಸ್ವರಚಿತ ಕವನ


  ವಿಷಯ... ಕನ್ನಡ ಸಾಹಿತ್ಯ ನಾಡು ನುಡಿಗೆ ನಮ್ಮ ಜಿಲ್ಲೆಯ ಕೊಡುಗೆ

  

      ದಕ್ಷಿಣ ಕನ್ನಡ ಜಿಲ್ಲೆ

      

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು

ಇತಿಹಾಸದ ಪುಟಗಳಲ್ಲಿ ಮಿಂಚಿದ ಊರು

ಉಳ್ಳಾಲ ರಾಣಿ ಅಬ್ಬಕ್ಕ ಆಳಿದ ಊರು

ಧರ್ಮ ಸಾಹಿತ್ಯ ಪರಂಪರೆಯ ಊರು


ವಿಜಯನಗರದ ಅರಸರು ಆಳಿದ ಜಿಲ್ಲೆ

ಪೋರ್ಚುಗೀಸರು ವ್ಯಾಪಾರ ಮಾಡಿದ ಜಿಲ್ಲೆ

ಕೊಟ್ಟಿದೆ ನಾಡು ನುಡಿ ಸಾಹಿತ್ಯಕ್ಕೆ ಅಪಾರ ಕೊಡುಗೆ

ಭವ್ಯ ಪರಂಪರೆ ಸಾರಿದೆ  ಇಲ್ಲಿಯ ಸಂಸ್ಕೃತಿ


ಏರ್ಯ ಲಕ್ಷ್ಮೀನಾರಾಯಣ ಆಳ್ವರು 

ಕಡಲತಡಿಯ ಬಾರ್ಗವ ಶಿವರಾಮ ಕಾರಂತರು

ಹತ್ತು ಹಲವು ಕನ್ನಡದ ಮೇರು ಸಾಹಿತಿಗಳು

ಬದುಕಿ ಬಾಳಿದ ಊರಿದು ನಮ್ಮ ದಕ್ಷಿಣ ಕನ್ನಡ


ಪಕ್ಷ  ಜಾತಿ  ಮತ  ಬೇಧವ  ಮರೆತು

ಕಥೆ ಕಾದಂಬರಿ  ನಾಟಕ  ರಚಿಸಿ

ಯಕ್ಷಗಾನದ ವಿವಿಧ ಕಲೆಗಳಲ್ಲಿ ರಂಜಿಸಿ

ಹಬ್ಬಿ ಹರಡಿದರು ಜಗದೆಲ್ಲೆಡೆ ಕನ್ನಡ ಸಾಹಿತ್ಯವ


ಜ್ಞಾನಪೀಠ ಪ್ರಶಸ್ತಿ ಪದ್ಮಭೂಷಣ ಪ್ರಶಸ್ತಿಗೆ

ಮಾನ್ಯವಾಗಿದೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆ

ಕಲೆ ಸಾಹಿತ್ಯ ಸಂಸ್ಕೃತಿಯ ತವರೂರು

ನಮ್ಮ ಈ  ದಕ್ಷಿಣ ಕನ್ನಡ ಜಿಲ್ಲೆ

 

  ಶ್ರೀಮತಿ.ಪಂಕಜಾ.ಕೆ. ಮುಡಿಪು.

  ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್

  ಶ್ರೀ ಗಣೇಶ ಕೃಪಾ.ಮುಡಿಪು.

  ಅಂಚೆ.ಕುರ್ನಾಡು.ದ.ಕ.574153

[7/11/2020, 10:55 AM] pankajarambhat: ಅಂತರ್ಜಾಲ ಆಧಾರಿತ ಅಂತರಾಜ್ಯ ಕನ್ನಡ ನಾಡು ನುಡಿ ಕುರಿತ ಚಿಂತನ ಬರಹ ಮತ್ತು ವಾಚನ ಸ್ಪರ್ಧೆಗಾಗಿ


ಕನ್ನಡ ನಾಡು ನುಡಿ


 ಭಾಷೆ ಎನ್ನುವುದು ಸಂಸ್ಕೃತಿಯ ಪ್ರತೀಕ. ಭಾಷೆಯು ಜನರ ಜೀವನ,ಬದುಕನ್ನು ಪ್ರತಿಬಿಂಬಿಸುವ ಒಂದು ಮಾಧ್ಯಮವಾಗಿದೆ. ಒಬ್ಬರ ಮನಸಿನ ಭಾವನೆಯನ್ನು ಮಾತಿನ ಮೂಲಕ ವ್ಯಕ್ತಪಡಿಸಲು ಉಪಯೋಗಿಸುವ ಶಬ್ದಗಳೇ ಭಾಷೆಗಳಾಗಿ ಪರಿವರ್ತನೆಗೊಂಡಿದೆ. ಕನ್ನಡ ಭಾಷೆಯು ಒಂದು ಪ್ರಾಚೀನ ಭಾಷೆ .ಇದನ್ನು ಕಟ್ಟಿ ಬೆಳೆಸಿದವರು ಜನಪದರು ಎಂದರೆ ತಪ್ಪಿಲ್ಲ. ಜನಪದರು ತಮ್ಮ ಹಾಡುಗಳ ಮೂಲಕ ತಮ್ಮ ಆಚಾರ, ವಿಚಾರ, ಸಂಸ್ಕೃತಿ , ನಡವಳಿಕೆಗಳನ್ನು  ಅಭಿವ್ಯಕ್ತಿಗೊಳಿಸುತ್ತಾ ಕನ್ನಡವನ್ನು ಉಳಿಸಿ ಬೆಳೆಸಿದರು. ಕುವೆಂಪು ಬೇಂದ್ರೆಯಂತಹ ಹಿರಿಯ ಕವಿಗಳು,ನಡೆದಾಡುವ ವಿಶ್ವಕೋಶವೆಂದು ಬಿರುದಾಂಕಿತರಾದ ಡಾ. ಶಿವರಾಮಕಾರಂತರಂತಹ ಕನ್ನಡಪರ ಕವಿಗಳು ಕನ್ನಡ ಭಾಷೆಯನ್ನು ಉತ್ತುಂಗಕ್ಕೇರಿಸಲು ಕಾರಣರಾದರು. ಕಲಿಯಲು ಮತ್ತು ಕಲಿಸಲು ಸುಲಭ ಮತ್ತು ಸರಳವಾಗಿರುವ ಕನ್ನಡ ಭಾಷೆಯು ಮೃಧು ಮದುರವಾಗಿದೆ 

                ಕನ್ನಡಿಗನಾದವನಿಗೆ  ಕನ್ನಡತನದ ಬಗ್ಗೆ  ಅರಿವಿರಬೇಕು. ಇತಿಹಾಸದ ಪುಟಗಳಲ್ಲಿ ಮಿಂಚಿ ಮರೆಯಾದ ಕನ್ನಡಿಗರ ಬಗ್ಗೆ ಅಭಿಮಾನವಿರಬೇಕು.ಕರ್ನಾಟಕದ ಗತವೈಭವವನ್ನು ಅರಿತುದೇ ಆದರೆ  ಎಂದಿಗೂ ಪರಭಾಷೆಯ ಮೋಹಕ್ಕೆ ಒಳಗಾಗದೆ,ನಮ್ಮ ಮಾತೃಭಾಷೆಯನ್ನು ಪ್ರೀತಿಸುತ್ತ ಅನ್ಯಭಾಷೆಯನ್ನು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬಹುದು.ಅದಕ್ಕಾಗಿ ಚಿಕ್ಕಂದಿನಿಂದಲೇ ನಮ್ಮ  ಮಕ್ಕಳಿಗೆ ಮಾತೃಭಾಷೆಯನ್ನು ಕಲಿಸಿ, ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಕಲಿಸಿ, ನಮ್ಮ ನಾಡು ನುಡಿಯ ಬಗ್ಗೆ ಅಭಿಮಾನಿಯಾಗಿರುವಂತೆ ನೋಡಿಕೊಳ್ಳಬೇಕು

                   ತನ್ನ ವೈವಿಧ್ಯಮಯ  ವೈಶಿಷ್ಟ್ಯಮಯ ಐತಿಹಾಸಿಕ ಪರಂಪರೆಯಿಂದ ಸಮೃದ್ಧವೂ, ಸಾಂಸ್ಕೃತಿಕ ಪರಂಪರೆಯಿಂದ ಅವಿಸ್ಮರಣೀಯವೂ ಆದ ದಾಖಲೆಗಳನ್ನು ಗುರುತಿಡಿಕೊಂಡಿರುವ ಹಿರಿಮೆಯ ನಾಡು ನಮ್ಮ ಕನ್ನಡನಾಡು ಪ್ರಕೃತಿ ರಮ್ಯ ಗುಡ್ಡಬೆಟ್ಟಗಳು  ಹಸಿರು ವನರಾಜಿಗಳಿಂದ ಕೂಡಿದ  ನಮ್ಮ ಕನ್ನಡ ನಾಡಿನ ಪ್ರಾಕೃತಿಕ ಸಂಪತ್ತನ್ನು ಉಳಿಸಿ ಬೆಳೆಸುವ ಕೆಲಸವೂ ನಮ್ಮಿಂದಾಗಬೇಕು. ಕರ್ನಾಟಕವು ಶಿಲ್ಪಕಲೆಗೂ ಹೆಸರುವಾಸಿಯಾಗಿದೆ. ಇಲ್ಲಿಯ ಗುಡಿ ಗುಂಡಾರಗಳ ಕಲ್ಲು ಕಲ್ಲುಗಳಲ್ಲೂ ಕೇಳಿಸುತ್ತದೆ ಕನ್ನಡ ನುಡಿ.ರಾಮಾಯಣ ಮಹಾಭಾರತದಂತಹ ಸದ್ಗ್ರಂಥಗಳಲ್ಲಿ ಉಲ್ಲೇಖಿತವಾಗಿರುವ  ಪುಣ್ಯ ನಾಡು ನಮ್ಮ ಕನ್ನಡನಾಡು.ಸಾವಿರಾರು ಋಷಿ ಮುನಿಗಳು ಬಾಳಿ ಬದುಕಿದ ಪುಣ್ಯ ಭೂಮಿ,ಗಂಗೆ ತುಂಗೆ ಕಾವೇರಿಯರೆಂಬ ಪುಣ್ಯ ನದಿಗಳು ಹರಿಯುವ ನಾಡು ನಮ್ಮದು. .ಕನ್ನಡಿಗರು ವಿನಯವಂತರೂ ಸಜ್ಜನರೂ ಆಗಿದ್ದು ಅನ್ಯಭಾಷೆಯನ್ನು ಗೌರವಿಸುವ ಸಹೃದಯದವರೂ ಆಗಿದ್ದಾರೆ. ಅನ್ಯ ಭಾಷೆಯ ಕಲಿಕೆ ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ ಬದುಕಿನ ಮಾರ್ಗಕ್ಕೆ ದಾರಿದೀಪವಾಗುತ್ತದೆ ಆದರೆ ಕನ್ನಡ ನುಡಿ ನಮ್ಮ ಬದುಕೇ ಆಗಿದೆ .ಪ್ರತಿಯೊಬ್ಬ ಕನ್ನಡಿಗನೂ  ನಮ್ಮ ನಾಡು ನುಡಿ ಸಂಸ್ಕೃತಿ ಪರಂಪರೆ ಬಗ್ಗೆ ಅಭಿಮಾನಪಡಬೇಕು

                      ಸುಮಾರು ಎರಡೂವರೆ ಸಾವಿರ ಇತಿಹಾಸ ಹೊಂದಿದ ಕನ್ನಡ ನಾಡನ್ನು  ಸುವರ್ಣಾಕ್ಷರಗಳಿಂದ ಬರೆದಿಡುವಂತ ಅರಸರು ಆಳಿದ್ದಾರೆ.ಬೇಲೂರು ,ಹಳೇಬೀಡು,ಪಟ್ಟದಕಲ್ಲು ಐಹೊಳೆ ,ಹಂಪಿಯಂತ ಸ್ಥಳಗಳು ಕರ್ನಾಟಕದ ಭವ್ಯ ಇತಿಹಾಸ ಪರಂಪರೆಗೆ ಸಾಕ್ಷಿಯಾಗಿದೆ. ಪ್ರಾಚೀನ ಕಾಲದಿಂದಲೂ ನಮ್ಮ ನಾಡು ಸಂಗೀತ ,ನೃತ್ಯ,ಕಲೆ,ಕ್ರೀಡೆ, ಶಿಲ್ಪ,ಮತ್ತು ವಾಸ್ಟುಶಿಲ್ಪಗಳಿಗೆ ಹೆಸರಾದುದು.ಹಲವಾರು ಧರ್ಮಗಳಿಗೆ ಆಶ್ರಯ ತಾಣವಾಗಿರುವ ಕರ್ನಾಟಕವು ಸರ್ವಧರ್ಮ ಸಹಿಷ್ಟ್ರನುತೆಯನ್ನು ಮೆರೆದಿದೆ .ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಭಾಷೆ ನಮ್ಮ ಕನ್ನಡ ಭಾಷೆ.

                ಕನ್ನಡಿಗರಾದ ನಾವು ಕನ್ನಡ ನಾಡು ನುಡಿ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸಬೇಕು. ನಮ್ಮ ಮುಂದಿನ ತಲೆಮಾರಿನವರು ನಮ್ಮ ಕನ್ನಡನಾಡಿನ ವೈಭವ ಸಂಸ್ಕೃತಿ ಇತಿಹಾಸದ ಬಗ್ಗೆ ಅಭಿಮಾನಪಡುವಂತಾಗಬೇಕು.  ಪರಭಾಷಿಗರು ನಮ್ಮ ಕನ್ನಡವನ್ನು ಮೂಲೆಗುಂಪು ಮಾಡದಂತೆ , ಕನ್ನಡ ತಾಯಿ ಕರ್ನಾಟಕದಲ್ಲೇ ಕಳೆದುಹೋಗದಂತೆ  ಕನ್ನಡ ನೆಲ ಜಲ ಭಾಷೆ ಸಂಸ್ಕೃತಿಗಳ ಉಳಿವಿಗಾಗಿ  ನಾವು ಶ್ರಮಿಸಬೇಕು

                ಕನ್ನಡಿಗರಾದ ನಾವೇ ಪರಭಾಷಾ ವ್ಯಾಮೋಹಿಗಳಾಗಿ ನಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಶಾಲೆಗೆ  ಸೇರಿಸಿ ಮಾತೃಭಾಷೆಯನ್ನು ಮರೆಯುವಂತೆ ಮಾಡುತ್ತಿರುವುದು ವಿಪರ್ಯಾಸ. ಕನ್ನಡನಾಡಿನಲ್ಲೇ ಕನ್ನಡನುಡಿ ಮೇಲೆಗುಂಪಾಗುತ್ತಿರುವುದು  ಚಿಂತಿಸಬೇಕಾದ ವಿಷಯ.ಅತ್ಯಂತ ಶ್ರೀಮಂತ ಇತಿಹಾಸ ಹೊಂದಿರುವ ಕನ್ನಡ ಭಾಷೆ ಸಂಸ್ಕೃತಿಯನ್ನು ಇಂದಿನ ಯುವಜನತೆ ಅರಿಯಬೇಕಾದುದು ಅತ್ಯಗತ್ಯ. ಆದ್ದರಿಂದ ಆದಷ್ಟು ಕನ್ನಡದಲ್ಲಿ ವ್ಯವಹರಿಸಿ ತಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನಾದರೂ ಕನ್ನಡದಲ್ಲಿ ಕಲಿಸುವಂತಾಗಬೇಕು.

                ಪಂಕಜಾ.ಕೆ. ಮುಡಿಪು

                ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್.ಮಾಸ್ಟರ್.ಶ್ರೀ ಗಣೇಶ ಕೃಪಾ.ಮುಡಿಪು.ಅಂಚೆ.ಕುರ್ನಾಡು.ದ.ಕ.574153

[14/11/2020, 2:05 PM] pankajarambhat: ಅಂತರ್ಜಾಲ ಆಧಾರಿತ ಅಂತರರಾಜ್ಯಮಟ್ಟದ  ಸುನೀತಾ ಕವನ ರಚನೆ ಮತ್ತು ವಾಚನ ಸ್ಪರ್ಧೆಗಾಗಿ


ಹಸಿರು..ಉಸಿರು


ಹಸಿರು ತುಂಬಿದ ಕಾನನ

ಮನಕೆ ಮುದವನುತರುತಿದೆ

ಉಸಿರನು  ನಮಗೆ ಕೊಡುತಿದೆ

ಮನೆ ಮನಗಳಲಿ ತನನ

ಉಳಿಸಿ ಬೆಳೆಸಬೇಕು ಹಸಿರಿನ

ಮನುಕುಲದ ಉಳಿವಿಗಾಗಿ

ಹಸಿವೆ ತಣಿಸುವ  ತಾಯಿಗಾಗಿ

ಕಾಯಬೇಕು ಅವಳ ಬಸಿರಿನ

ಹಸಿರು ಇದ್ದರೆ ಉಸಿರು ಸಿಗುವುದು

ಬಾಳಲಿ ಸಂತಸ ತುಂಬುವುದು

ಮೈಮನಕೆ ಉಲ್ಲಾಸ ಹಾಸ

ಬೀಸುವ ತಂಗಾಳಿ  ಹಿತ ಕೊಡುತಿದೆ

ಹೂವು ಹಣ್ಣುಗಳಿಂದ ಕಂಗೊಳಿಸುತಿದೆ

ಪ್ರಕೃತಿ ಮಾನವನಿಗೆ ದೇವನಿತ್ತ. ಕೊಡುಗೆ


ಪಂಕಜಾ.ಕೆ. ಮುಡಿಪು

ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ 

ಕುರ್ನಾಡು ದ.ಕ.

[20/11/2020, 9:00 PM] pankajarambhat: ಅಂತರ್ಜಾಲ ಆಧಾರಿತ ಅಂತರರಾಜ್ಯ ಮಟ್ಟದ ಚುಟುಕುಗಳ ರಚನೆ ಮತ್ತು ವಾಚನ ಸ್ಪರ್ಧೆಗಾಗಿ


ಚುಟುಕುಗಳು...


 ಚುಟುಕು.1..ಜಾಹಿರಾತು


ಟಿ. ವಿ.ಯಲ್ಲಿ ಬರುವ ಜಾಹಿರಾತು

ಮಹಿಳೆಯರಿಗೆ ಅದರದೇ ಮಾತು

ಎಲ್ಲವನ್ನು  ತೆಗೆಯುವ ಆಸೆ ಹೊತ್ತು

ಗಂಡನ ಜೇಬಿಗೆ ಬಂತು ದೊಡ್ಡ ಕುತ್ತು


ಚುಟುಕು ..2. ಪ್ರಕೃತಿ ಉಳಿಸಿ


ಗಿಡಮರಗಳನ್ನು ಬೆಳೆಸಿ ಉಳಿಸಿ

ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ

ನಮ್ಮ ಸಂಸ್ಕೃತಿಯ ಅರಿವು ಮೂಡಿಸಿ

ಭವ್ಯ ಭಾರತದ ಪರಂಪರೆ ಹೆಚ್ಚಿಸಿ 


ಪಂಕಜಾ.ಕೆ. ಮುಡಿಪು

ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ಶ್ರೀ ಗಣೇಶ. ಕೃಪಾ ಮುಡಿಪು

ಅಂಚೆ. ಕುರ್ನಾಡು.ದ.ಕ.574153

[28/11/2020, 1:44 PM] pankajarambhat: ಅಂತರ್ಜಾಲ ಆಧಾರಿತ ಕವನ ರಚನೆ ಮತ್ತು ವಾಚನ ಸ್ಪರ್ಧೆಗಾಗಿ  ಚಿತ್ರಕ್ಕೊಂದು ಕವನ


           ಒಲವಿನ ಬಂಧ


ಕೈಗಳ ಬೆಸೆಯುತ ಬಂಧವ ಬೆಳೆಸುತ

ಒಲವಿನ ಆಸರೆ ಬಯಸುತಲಿ

ಹಸಿರಿನ ಸಿರಿಯಲಿ ನಲಿಯುತ ಸಾಗಿದೆ

ಬದುಕಿನ ಬವಣೆಯ ಕಳೆಯುತಲಿ


ನೋಯುವ ಮನಸಿಗೆ ಸಾಂತ್ವನ ತುಂಬಿ

ಕರಗುವ ಕನಸಿಗೆ ಉಸಿರನು ಕೊಡುತ

ಒಂಟಿ ತನದ ಬೇಸರ ಕಳೆಯುತ

ಚಿಗುರಿತು  ಸುಂದರ ಸ್ನೇಹ


ಹೃದಯ ಹೃದಯಗಳ ಅನುಬಂಧ

ಬೆಸೆಯಿತು ಸ್ನೇಹದ ಸಂಬಂಧ

ಜೋಡಿ ಹಕ್ಕಿಯ ತೆರದಲಿ ಇರುತ

ಹಬ್ಬಿತು ಪ್ರೀತಿಯ ಹೂಬಳ್ಳಿ


ಒಲವಿನ  ಹೂವನು ಎದೆಯಲಿ ಅರಳಿಸಿ

ನಲಿವನು ಬಾಳಲಿ ತುಂಬುತಲಿ

ಮೈಮನಕೆಲ್ಲಾ  ಮುದವನು ಕೊಡುತ

ಕನಸನು  ಮನದಲಿ ಬಿತ್ತುತಿದೆ


ಶ್ರೀಮತಿ.ಪಂಕಜಾ.ಕೆ. ಮುಡಿಪು

ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್

ಶ್ರೀ ಗಣೇಶಕೃಪಾ. ಮುಡಿಪು.

 ಅಂಚೆ..ಕುರ್ನಾಡು.ದ.ಕ.574153

[4/12/2020, 3:16 PM] pankajarambhat: ಅಂತರ್ಜಾಲ ಆಧಾರಿತ ಹನಿಗವನ ರಚನೆ ಮತ್ತು ವಾಚನ ಸ್ಪರ್ಧೆಗಾಗಿ


ಹನಿಕವನ. 1  ಭಿಕ್ಷಾಟನೆ


ರಾಜಕಾರಣಿಗಳು 

ಕೊಡುವ

ಆಶ್ವಾಸನೆ

ನಂಬಿದರೆ

ಮಾಡಬೇಕು

ಭಿಕ್ಷಾಟನೆ


ಹನಿಕವನ..2  ನಿಖರ


ಏರುವಾಗ

ಯಶಸ್ಸಿನ

ಶಿಖರ

ಕಾಲೆಳೆಯುವ

ಜನರಿರುವುದು

ನಿಖರ



ಶ್ರೀಮತಿ. ಪಂಕಜಾ. ಕೆ.ಮುಡಿಪು

ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

ಕುರ್ನಾಡು.ದ.ಕ  .  574153

[08/01, 9:02 PM] pankajarambhat: ಅಂತರ್ಜಾಲ ಆಧಾರಿತ ಅಂತರರಾಜ್ಯ ಮಟ್ಟದ  ಚಿತ್ರ ಕಥೆ ಮತ್ತು ವಾಚನ ಸ್ಪರ್ಧೆಗಾಗಿ


   ಕೊರೊನಾ ವಾರಿಯರ್


ನಿತ್ಯಾನಂದ ಮತ್ತು ಸರಳ ದಂಪತಿಗಳ ಏಕೈಕ ಪುತ್ರನಾದ ಕೀರ್ತಿನಾಥ ಬಾಲ್ಯದಿಂದಲೂ ತುಂಬಾ ಚುರುಕಿನ ಹುಡುಗ  ,ಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ  ಚಾಚುವ ಅವನನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಓದುವುದರಲ್ಲಿ ಜಾಣನಾಗಿದ್ದ ಕೀರ್ತಿನಾಥನು  ಪ್ರತಿಯೊಂದು ತರಗತಿಗಳಲ್ಲೂ  ತರಗತಿಗೆ  ಮೊದಲನೆಯವನಾಗಿ ಉತ್ತಮ ಅಂಕಗಳಿಸುತ್ತಾ ,  ಕಲಿತ ತಕ್ಷಣ  ಇಂಜಿನೀಯರ್ ಆಗಿ  ನಿಯುಕ್ತಿ ಗೊಂಡುದು ತಂದೆ ತಾಯಿಯರಿಗೆ ಹೇಳಲಾರದ ಖುಷಿ ಕೊಟ್ಟಿತು..ಕೆಲಸಕ್ಕೆ ಸೇರಿದ  ವರ್ಷದ ಒಳಗೆ ಅಮೆರಿಕಾದ ದೊಡ್ಡ ಕಂಪನಿಯಲ್ಲಿ ಉನ್ನತ ಹುದ್ದೆಗೆ ನಿಯುಕ್ತಿಗೊಂಡಿದ್ದರಿಂದ ಆತ ಅಲ್ಲಿಗೆ ಹೋಗಿ ಕೆಲಸಕ್ಕೆ ಸೇರಿ ತನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತಾ ಉತ್ತಮ ಹೆಸರು ಪಡೆದು ಕೊಂಡಿದ್ದನು.ಹೀಗಿರಲು ಕಾಣದ ಅಣುವೊಂದು ಜಗತ್ತನ್ನು ಕಾಡಲು ಪ್ರಾರಂಭಿಸಿತು.ಕೊರೊನಾ ಎಂಬ  ಮಹಾಮಾರಿಗೆ ತತ್ತರಿಸಿದ  ಜಗತ್ತಿನ ಜನಜೀವನ ಅಸ್ತವ್ಯಸ್ತಗೊಂಡ ಸಂಧರ್ಭದಲ್ಲಿ  ಅಮೆರಿಕಾದಲ್ಲಿದ್ದ ಭಾರತೀಯರನ್ನು ಸ್ವದೇಶಕ್ಕೆ ಕಳಿಸುವ ವ್ಯವಸ್ಥೆಯನ್ನು ಕಂಪನಿಯು ಯೋಚಿಸಿತು.ಅದರಂತೆ ಕೀರ್ತಿನಾಥನು ಊರಿಗೆ ಬಂದಾಗ ವಿಮಾನ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆಗೆ ಒಳಗಾದ ಕೀರ್ತಿನಾಥನು ಕೊರೊನಾ ಪಾಸಿಟಿವ್ ಬಂದಿದ್ದರಿಂದ  ಹದಿನಾಲ್ಕು ದಿನದ ಕ್ವಾರೆಂಟಿನ್ ನಲ್ಲಿ ಇರಬೇಕಾಗಿತ್ತು. ಯಾರಿಗೂ ಭೇಟಿಯ ಅವಕಾಶವನ್ನು ನಿರಾಕರಿಸಲಾಗಿದ್ದರೂ ,  ಕೀರ್ತಿನಾಥನ ತಾಯಿ ಸರಳರವರ ದುಃಖ ನೋಡಲಾಗದೆ,

ಅಗತ್ಯಕ್ರಮದಂತೆ ಪ್ಲಾಸ್ಟಿಕ್ ನ ಒಂದು ತೆರೆಯ ಹಿಂದೆ ಅವರಿಬ್ಬರ ಭೇಟಿಗೆ ಅವಕಾಶ ಕಲ್ಪಿಸಲಾಗಿತ್ತು..ಮಗನನ್ನು ಕಂಡ ತಾಯಿ ಖುಷಿ ತಡೆಯಲಾಗದೆ ಪ್ಲಾಸ್ಟಿಕ್ ಕವಚಹಿಡಿದುಕೊಂಡೇ ಮಗನನ್ನು ತಬ್ಬಿ ಕಣ್ಣೀರು ಸುರಿಸುತ್ತಾ ಕಂಡ ಕಂಡ ದೇವರಿಗೆ ಹರಕೆ ಹೊತ್ತು ಬಿಡಲಾರದೆ ಮಗನನ್ನು ಬಿಟ್ಟು, ಹೊರಟು ಹೋದಳು

                 ಇತ್ತ ಕೀರ್ತಿನಾಥನು ಹದಿನಾಲ್ಕು ದಿನದ ಕ್ವಾರೆಂಟೈನ್ ನನ್ನು ಪೂರೈಸಿ ಮರಳಿ ಬರುವ ನಿರೀಕ್ಷೆಯಲ್ಲಿ ತನ್ನ ಸೆಂಟರ್ ಗೆ ಹೊರಟು ಹೋದನು. ನಿತ್ಯ ಬಿಸಿಲು ಸ್ನಾನ  ಒಳ್ಳೆಯ ಆಹಾರ, ಕಾಲಕಾಲಕ್ಕೆ  ಸೂಕ್ತ ಚಿಕಿತ್ಸೆಯಿಂದ ಆತ ಸಂಪೂರ್ಣ  ಗುಣಮುಖನಾಗಿ ,ಮರಳಿ ಮನೆಗೆ ಬಂದಾಗ ತಾಯಿಯ ಕಣ್ಣುಗಳಿಂದ ಅನಂದಭಾಷ್ಪ ಸುರಿಯಿತು. ಕೊರೊನಾ ಬಂತೆಂದು ಹೆದರದೆ ಧೈರ್ಯದಿಂದ, ಎದುರಿಸಿ ಮನೆಯಲ್ಲೇ ಇದ್ದು, ಉತ್ತಮ ಆಹಾರ, ವ್ಯಾಯಾಮ, ಕಣ್ಣು ಕೈಗಳ ಸ್ವಚ್ಛತೆಗೆ ಗಮನಕೊಟ್ಟರೆ ರೋಗಮುಕ್ತನಾಗಬಹುದೆಂದು ತಿಳಿದ ಕೀರ್ತಿನಾಥನು , ತನ್ನ ಬಿಡುವಿನ ವೇಳೆಯನ್ನು.ಕೊರೋನಾ  ಪೀಡಿತರ ಸೇವೆಯಲ್ಲಿತೊಡಗಿಸಿಕೊಂಡು ಅವರಿಗೆ ಮಾನಸಿಕ ಧೈರ್ಯ ತುಂಬುತ್ತಾ  ಜನಮನ್ನಣೆ ಗಳಿಸಿದನು

                 

ಶ್ರೀಮತಿ.ಪಂಕಜಾ.ಕೆ. ಮುಡಿಪು

ನಿವೃತ್ತ ಅಸ್ಸಿಸ್ಟಂಟ್ .ಪೋಸ್ಟ್.ಮಾಸ್ಟರ್.ಶ್ರೀ ಗಣೇಶ ಕೃಪಾ ಮುಡಿಪು  ಕುರ್ನಾಡು ದ ಕ 574153

[15/01, 3:16 PM] pankajarambhat: ಅಂತರ್ಜಾಲ ಆಧಾರಿತ ಚುಟುಕು ರಚನೆ ಮತ್ತು ವಾಚನ ಸ್ಪರ್ಧೆಗಾಗಿ ಚುಟುಕುಗಳು


 ಚು ಸಾ.ಸಪ್ತಾಹ. 67 ಆಶ್ವಾಸನೆ


ಚುನಾವಣೆಯ ಸಮಯದ  ಆಶ್ವಾಸನೆ

ನಂಬಿ ಇಡಬೇಡ ಅವರಲಿ  ವಿಶ್ವಾಸವನೆ

ಗೆದ್ದಮೇಲೆ ಮಾಡುವರು ವಂಚನೆ

ಭ್ರಷ್ಟರಿಂದ ಆಗದು ಯಾವುದೇಸುಧಾರಣೆ


ಚು.ಸಾ.ಸಪ್ತಾಹ  68 . ಸಂಪತ್ತು


ಮರಗಿಡಗಳು ದೇಶದ ಸಂಪತ್ತು

ಉಳಿಸಿ ಬೆಳೆಸಬೇಕು ಅದನು ಯಾವತ್ತೂ

ಪ್ರಕೃತಿನಾಶ ಜೀವಸಂಕುಲಕೆ ಮಾರಕ

ಹಸಿರು ಪರಿಸರವಿಲ್ಲದಿದ್ದರೆ ಜೀವನ ನರಕ


ಶ್ರೀಮತಿ.ಪಂಕಜಾ.ಕೆ. ಮುಡಿಪು

ನಿವೃತ್ತ ಅಸ್ಸಿಸ್ಟಂಟ್ .ಪೋಸ್ಟ್.ಮಾಸ್ಟರ್

ಕುರ್ನಾಡು.ದ.ಕ.574153

[22/01, 2:47 PM] pankajarambhat: ಅಂತರ್ಜಾಲ ಆಧಾರಿತ ಶಿಶುಗೀತೆ ರಚನೆ ಮತ್ತು  ವಾಚನ ಸ್ಪರ್ಧೆಗಾಗಿ ನನ್ನ


 ಶ್ರೀಮತಿ.ಪಂಕಜಾ.ಕೆ. ಮುಡಿಪು ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ .ಕುರ್ನಾಡು .ದ.ಕ 574153

[27/01, 3:57 PM] pankajarambhat: ಕೇಂದ್ರ ಕನ್ನಡ ಸಾಹಿತ್ಯವೇದಿ ಕೆಯ  ಅಂತರ್ಜಾಲ ಆಧಾರಿತ ಸ್ಪರ್ಧೆಯಲ್ಲಿ ಭಾಗವಹಿಸಿದ ವಿವರ


ಹೆಸರು..ಶ್ರೀಮತಿ.ಪಂಕಜಾ.ಕೆ. ಮುಡಿಪು

ಜಿಲ್ಲೆ....ದಕ್ಷಿಣ ಕನ್ನಡ

ತಾಲೂಕು..ಬಂಟ್ವಾಳ

ಭಾಗವಹಿಸಿದ ಸ್ಪರ್ಧೆಗಳ ಸಂಖ್ಯೆ ..26

ಭಾಗವಹಿಸಿದ ಸಾಹಿತ್ಯಪ್ರಕಾರಗಳು ..

ಮಕ್ಕಳಕಥೆ,ಗಜಲ್ ಹಾಯ್ಕು, ಆಧುನಿಕ ವಚನ, ಶಿಶುಗೀತೆ, ಭಾವಗೀತೆ, ಸ್ವರಚಿತ ಕವನಗಳು, ಹನಿಕವನ, ಟಂಕಾ, ನ್ಯಾನೊ ಕಥೆ, ಮಕ್ಕಳ ಕಥೆ, ಚಿತ್ರಕವನ, ನಾಡಭಕ್ತಿಗೀತೆ,   ನಾಡು ನುಡಿ ಬಗ್ಗೆ ಕವನ, ಬಾದು ನುಡಿ ಬಗ್ಗೆ ಚಿಂತನ ಬರಹ, ಸುನೀತಾ ಕವನ, ಚುಟುಕು, ಚಿತ್ರಕವನ ಇತ್ಯಾದಿಗಳು

   ಟಾಪ್ .10 ಪುಸ್ತಕ ಬಹುಮಾನ ಒಟ್ಟು 3

1) ಟಾಪ್ 1 ,

2) ಟಾಪ್,3 

3) ಟಾಪ್,5

ದ್ವಿತೀಯ ಬಹುಮಾನ ರೂ 401/ 

ಮೆಚ್ಚುಗೆ ...2

ತೃಪ್ತಿಕರ.  .2

 

ಬಹುಮಾನ ದ ಸಂಖ್ಯೆ..8


ಧನ್ಯವಾದಗಳು🙏🙏

[06/02, 2:04 PM] pankajarambhat: ಅಂತರ್ಜಾಲ ಆಧಾರಿತ ಅಂತರರಾಜ್ಯ ಮಟ್ಟದ ವಿಷಯಾಧಾರಿತ ಕವನ ರಚನೆ ಮತ್ತು ವಾಚನ ಸ್ಪರ್ಧೆಗಾಗಿ

 ವಿಷಯ. ಸಾಹಿತಿಗಳ ಅಂತರಾಳದಲ್ಲಿ ಶಿಕ್ಷಕರು


 ಶೀರ್ಷಿಕೆ..ಗುರುವೆಂಬ ಜ್ಯೋತಿ


ಹಸಿಮಣ್ಣಿನ ಮುದ್ದೆಯಂತೆ

ಇರುವ ಮಕ್ಕಳ ಮನವನು

ತಿದ್ದಿ ತೀಡುತ ವಿದ್ಯೆ ಬುದ್ಧಿಯಕಲಿಸಿ

ಮೂರ್ತರೂಪವ ಕೊಡುವನು


ತಪ್ಪುಗಳನು ತಿಳಿಸಿ ಹೇಳುತ

ಸರಿದಾರಿಯಲಿ ನಡೆಸುವನು

ಬಾಳದಾರಿಗೆ ದೀಪವಾಗುತ

ನಿಸ್ವಾರ್ಥದಿಂದ ದುಡಿಯುವನು


ಅಂತರಂಗದ ಅರಿವು ಮೂಡಿಸಿ

ಜ್ಞಾನಜ್ಯೋತಿಯ ಬೆಳಗುವನು

ಅಜ್ಞಾನ ಅಂಧಕಾರವ ಕಳೆದು

ಸುಜ್ಞಾನದ ಸುಧೆಯನು ಉಣಿಸುವನು


ಕತ್ತಲಿನಿಂದ ಬೆಳಕಿನೆಡೆಗೆ

ದಾರಿ ತೋರುತ ನಡೆಸುವನು

ಕಣ್ಣಿನಲ್ಲಿ ಬೆರಗು ಮೂಡಿಸಿ 

ಕುತೂಹಲವನು ತಣಿಸುವನು


ಮಕ್ಕಳ ಬಾಳಿನ ಜ್ಯೋತಿಯಾಗುತ

ಅರಿವ ತೋರುವ ಶಿಕ್ಷಕ

ಗುರುತರ ಹೊಣೆಯ ಹೊತ್ತುಕೊಂಡು

ಗುರಿಯೆಡೆಗೆ ನಡೆಸುವ ರಕ್ಷಕ


ಶ್ರೀಮತಿ.ಪಂಕಜಾ.ಕೆ. ಮುಡಿಪು

ನಿವೃತ್ತ  ಅಸ್ಸಿಸ್ಟಂಟ್  ಪೋಸ್ಟ್ ಮಾಸ್ಟರ್ಪ್ ಕುರ್ನಾಡು.ದ.ಕ

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.