Skip to main content

ಮುಕ್ತಕ ಇತ್ಯಾದಿ

[4/12/2021, 7:55 pm] Pankaja K: ಮುಕ್ತಕ
 
ಕೆಟ್ಟತನ  ಮೈಗೂಡಿ ಇರುತಿರುವ ಜನರಿಂದ
ತಟ್ಟನೇ ಸರಿಯುತಿರು ದೂರಕ್ಕೆ ಮನುಜ
ಬಿಟ್ಟುಬಿಡು ಗೆಳೆತನವ ಕಡಿಯುತ್ತ  ಸಂಗವನು
ಮೆಟ್ಟಿಬಿಡು ಅವರನ್ನು ಪಂಕಜಾಕ್ಷಿ

ಪಂಕಜಾ.ಕೆ
[4/12/2021, 7:55 pm] Pankaja K: ಮುಕ್ತಕ

ಹತ್ತರಲಿ ಹನ್ನೊಂದು ಆಗಿರದೆ ಇರುತಿದ್ದು
ತುತ್ತಿನಲಿ ಸಿಗುತಿರುವ ಕಲ್ಲಂತೆ ಇರದೆ 
ಕತ್ತಲನು ಸೀಳುವಾ ಬೆಳಕಂತೆ ಇರಬೇಕು
ಸುತ್ತಲೂ ಹರಡುತಲಿ ಪಂಕಜಾಕ್ಷಿ

ಪಂಕಜಾ.ಕೆ. ಮುಡಿಪು
[4/12/2021, 7:55 pm] Pankaja K: ಮುಕ್ತಕ 
 
ಗುಟ್ಟೊಂದು ಹೇಳುವೆನು ಕಿವಿಗೊಟ್ಟು ಕೇಳುತಿರು
ಕೆಟ್ಟವರ ಸಂಗವನು ಬಿಡುತಿದ್ದು ನೀನು
ಮೆಟ್ಟುವಾ ಜನರನ್ನು  ಹರದಾರಿ ದೂರವಿಡು
ಕಟ್ಟುತಲಿ ಕನಸನ್ನು ಪಂಕಜಾಕ್ಷಿ

ಪಂಕಜಾ.ಕೆ
[5/12/2021, 8:57 pm] Pankaja K: .ಗುರುಕುಲಾ ಚಿಕ್ಕಮಗಳೂರು ಘಟಕ

ಸ್ಪರ್ಧೆಗಾಗಿ ಗಜಲ್

ದತ್ತಸಾಲು.. ಬತ್ತದ ಒರತೆಯ ಪ್ರೀತಿ ಕಂಡೆಯಾ 

ಗಜಲ್

ಚಿತ್ತದಲ್ಲಿ  ನಿನ್ನ ಬಿಂಬವ ತುಂಬಿದೆಯಾ ಸಖ
ಬತ್ತದ ಒರತೆಯ ಪ್ರೀತಿ ಕಂಡೆಯಾ ಸಖ

ಬರಡಾದ  ಬಾಳಿಗೆ ತಂಗಾಳಿಯಾಗುವೆಯಲ್ಲವೇ
ಒಲವಿನ ಪಯಣಕೆ ಜತೆಯಾಗಿ ಬರುವೆಯಾ ಸಖ

ಕಂಗಳ ತುಂಬಾ ಕನಸನು ಬಿತ್ತಿದೆಯಲ್ಲ ನೀನು
ಕಣ್ಣೋಟದ ಮದನ ಬಾಣಕೆ ಸೋತೆಯಾ ಸಖ

ನಗುವಿನ ಹೊಳೆಯಲ್ಲಿ ನನ್ನ  ಮೈಮನ ಮರೆಸಿದೆ 
ಕಣ್ಣೀರ ಕರಗಿಸಿ ಹೊಸಬೆಳಕು ತಂದೆಯಾ ಸಖ

ನಿನಗಾಗಿ ಜೀವನವೆಲ್ಲಾ ಮುಡಿಪಾಗಿಟ್ಟಿರುವೆ ನಾನು
ಪಂಕಜಾಳ ಬಾಳಲ್ಲಿ  ಹರುಷ  ಮೂಡಿಸಿದೆಯ ಸಖ

ಪಂಕಜಾ.ಕೆ. ಮುಡಿಪು
[10/12/2021, 2:28 pm] Pankaja K: ಮುಕ್ತಕ

ಹೆಣ್ಣಿ ನಲಿ ದೇವತೆಯ  ಕಾಣುತ್ತ ಇರುತಿರಲು
ತಣ್ಣನೆಯ ಭಾವನೆಯು ಮೂಡುವುದು ಮನದಿ
ಕಣ್ಣಿನಲಿ  ಹೊಸಕಾಂತಿ ಮನದಲ್ಲಿ  ಖುಷಿ ತುಂಬಿ
ಮನ್ನಣೆಯು ಸಿಗುತಿಹುದು ಪಂಕಜಾಕ್ಷಿ

ಪಂಕಜಾ.ಕೆ. ಮುಡಿಪು
[12/12/2021, 8:17 pm] Pankaja K: ಗುರುಕುಲಾ ಚಿಕ್ಕಮಗಳೂರು
ಕವನ ಸ್ಪರ್ಧೆಗಾಗಿ
ದತ್ತಪದ ..ಪ್ರಾಯ(ಹರೆಯ)

    ಹುಚ್ಚು ಕೋಡಿ  ಮನಸು

ಹುಚ್ಚು  ಖೋಡಿ ಮನಸು ಹದಿ ಹರೆಯ
ಮಧುರ ಭಾವನೆಗಳ ರಿಂಗಣದ  ಸಮಯ
ಜತೆಯಾಗಿದೆ ಪ್ರೀತಿ ಪ್ರೇಮದ ಭಾವನೆಗಳು
ರಂಗು ರಂಗಿನ ಕಾಮನಬಿಲ್ಲಿನ ಬಾಣಗಳು

ಕೂತಲ್ಲಿ ನಿಂತಲ್ಲಿ  ಗುನುಗುತ್ತಿದೆ ಕವನ 
ಮೈಮನದಲಿ ತುಂಬುತಿದೆ ರೋಮಾಂಚನ
ಹೋದಲ್ಲಿ ಬಂದಲ್ಲಿ ಕನಸು ಕಾಣುವ ವಯಸು
ಕಂಡದೆಲ್ಲವೂ ಬೇಕೆನ್ನುವ  ಮನಸು

ಎತ್ತ ನೋಡಿದರೂ ಕಾಣುವುದು ಬಣ್ಣದ ತೋರಣ 
ಮನದಲ್ಲಿ ತೇಲುತಿದೆ ಸವಿರಸದ ಹೂರಣ
ಕಂಡ ಕಂಡ ತರುಣನ  ನೋಟ ಸೆಳೆಯುತಿದೆ
ನಾಚಿಕೆಯ ಭಾವನೆಯು ಮನವನ್ನು ತುಂಬುತಿದೆ

ನಸು ನಾಚಿ  ನೆಲ ಕೆರೆಯುತಿದೆ ಕಾಲ್ಗಳು
ಪದೇ ಪದೇ ನೋಡುತಿದೆ  ಕನ್ನಡಿಯ ಕಂಗಳು
ಅಲಂಕಾರ ಎಷ್ಟು ಮಾಡಿದರೂ ಸಾಲದು
ಹಕ್ಕಿಯಂತೆ ಹಾರುತಿದೆ ಮನಸು ನಲಿದು

ಏನನ್ನಾದರೂ ಸಾಧಿಸಬೇಕೆನ್ನುವ ಹಂಬಲ
ಆಗಸವನ್ನು  ಮುಟ್ಟ ಬೇಕೆನ್ನುವ ಛಲ
ಎಡವಿದರೂ ಎದ್ದು ನಿಲ್ಲುವೆನೆಂಬ  ದೃಢ ಮನಸು
ಕಗ್ಗಲ್ಲನ್ನು ಕಡಿದು ಬಿಡುವೆನೆಂಬ ಹುಮ್ಮಸ್ಸು

ಹರೆಯ ತುಂಬಿದ ಪ್ರಾಯವೇ ಅಂಥಹದು
ಯಾವುದಕ್ಕೂ ಹೆದರದ ಕಲ್ಲಿನಂತಹದು
ತುಂಬಬೇಕು ಈ ದಿನಗಳಲ್ಲಿ ಒಳ್ಳೆಯ ವಿಚಾರ
ಪಡಬೇಕು ಪ್ರಯತ್ನ ಆಗಲು ಕನಸು ಸಾಕಾರ

ಪಂಕಜಾ.ಕೆ.
[16/1/2022, 4:59 pm] Pankaja K: ಗುರುಕುಲಾ ಕಲಾಪ್ರತಿಸ್ಥಾನ ಜಿಲ್ಲಾ ಘಟಕ ಚಾಮರಾಜನಗರ 

ಚುಟುಕು ಸ್ಪರ್ಧೆಗಾಗಿ

ದತ್ತಪದ ತೇರು

ಕನ್ನಡದ ತೇರನ್ನು ಜತೆಯಾಗಿ ಎಳೆಯೋಣ 
ಕನ್ನಡಕೆ ಹೋರಾಡಿದ ವೀರರ ನೆನೆಯೋಣ 
ಭಾರತಾಂಬೆಯ  ಮುಕುಟಮಣಿ ಗಳಾಗೋಣ
ಭಾರತದ ಕೀರ್ತಿಯನ್ನು ಜಗದಗಲ  ಹರಡೋಣ

ಪಂಕಜಾ.ಕೆ ಮುಡಿಪು
ಗಣೇಶ ಕೃಪಾ ಮುಡಿಪು ಕುರ್ನಾಡು
[16/1/2022, 5:25 pm] Pankaja K: ಗುರುಕುಲಾ ಕಲಾಒರತಿಷ್ಠಾನ  ಜಿಲ್ಲಾ ಘಟಕ ಅಂತರರಾಜ್ಯ
ಚಿತ್ರಕ್ಕೊಂದು ಕವನ

ಸಂಕ್ರಾಂತಿ ಹಬ್ಬ

ಭಾಸ್ಕರನು ಬದಲಿಸಿದ ತನ್ನ ಪಥ
ಉತ್ತರಕ್ಕೆ ಚಲಿಸಿತು ಅವನ ರಥ

ಮಾಗಿಯ ಚಳಿ ಸರಿಸಿ ಕಳೆಯಿತು ಜಡತೆ
ಹರುಷದಿ ಹಬ್ಬವನಾಚರಿಸುವರು ಜನತೆ

ಹಸಿರು ಹಂದರ ಹಾಸಿದೆ  ಧರೆಯಲಿ
ಬಾನಿನಲಿ ಚಲಿಸುತಿಹನು ರವಿ ಭರದಲಿ

ಅಂಗಳದಲ್ಲಿ ರಂಗಿನ ರಂಗವಲ್ಲಿ ಮೂಡಿದೆ
ತೆಂಗು  ಕಬ್ಬಿನ ಫಸಲು ತಲೆಬಾಗಿ  ನಿಂತಿದೆ
 
ಎಳ್ಳು  ಬೆಲ್ಲವ ಹಂಚುತ ಬಾಂಧವ್ಯ ವೃದ್ಧಿ
ಭರಪೂರ  ಬೆಳೆ ಬಂದು ರೈತನ ಬಾಳು ಸಮೃದ್ಧಿ

ಹೊಸ ಅಕ್ಕಿಯ ಅನ್ನ ಬೇಯುತಿದೆ ಒಲೆಯಲಿ
ಹೂ ಹಣ್ಣುಗಳು  ತುಂಬಿದ ತಟ್ಟೆ ಇದೆ ಬಳಿಯಲಿ

ಸಡಗರ ಸಂತಸ ತಂದಿದೆ ಮಕರ ಸಂಕ್ರಮಣ
ಬಂದಿತು ಭರದಲಿ  ಪುಣ್ಯಕಾಲ ಉತ್ತರಾಯಣ 

ಪ್ರೀತಿ ಸ್ನೇಹ ಬಾಂಧವ್ಯವ ವೃದ್ಧಿಸುವ ಹಬ್ಬ
ಮನೆ ಮನದಲಿ ತುಂಬಿದೆ ಹರುಷದ ದಿಬ್ಬ

 ಶ್ರೀಮತಿ ಪಂಕಜಾ. ಕೆ. ಮುಡಿಪು
 ಕುರ್ನಾಡು ದ..ಕ.
[23/1/2022, 8:23 pm] Pankaja K: ಗುರುಕುಲಾ ಕಲಾಪ್ರತಿಸ್ಥಾನ ಜಿಲ್ಲಾ ಘಟಕ ಕೊಡಗು

ಚಿತ್ರಕ್ಕೊಂದು ಅಂತ್ಯಪ್ರಾಸಯುಕ್ತ ಕವನ

       ಮಕ್ಕಳ ಸೈನ್ಯ

ಗಾಡಿಯ ತುಂಬಾ ಹೇರಿರುವನು ಮಕ್ಕಳನು
ಹೆರಿಗೆಯ ಯಂತ್ರವಾಗಿಸಿರುವನು ಹೆಂಡತಿಯನು
ನಿರ್ಭಯದಿಂದ ಎಗ್ಗಿಲ್ಲದೆ ಸವಾರಿ ಮಾಡುತಿರುವನು
ಪೊಲೀಸಪ್ಪನೇ ಇವನನ್ನು ಕಂಡು ಬೆರಗಾಗಿಹನು

ಕೈಮುಗಿದು ನಿಂತಿಹನು ಕರ್ತವ್ಯ ಮರೆತು
ಅತ್ತಿಗೆ  ಬಂದಿಲ್ವಾ ಅಣ್ಣಾ ಎಂದು ಕೇಳುತ ನಿಂತು
ಮಕ್ಕಳು ನಗುತಿಹರು ಹಿಂದೆ ಮುಂದೆ ಕುಳಿತು
ಇದೆ ಅವರಿಗೆ  ಅಮ್ಮ ಪ್ರೆಗ್ನೆನ್ಟ್ ಎಂದು ಹೇಳುವ ತಾಕತ್ತು

ಚಿಕ್ಕ ಸಂಸಾರದ ಬಗ್ಗೆ ಇವನಿಗೆ ಅರಿವು ಇಲ್ಲ
ಕುರಿಗಳಂತೆ ಮಕ್ಕಳನು ತುಂಬಿಹನಲ್ಲ
ಇವರನ್ನೆಲ್ಲ ಗುರಿ  ಸೇರಿಸುವ ಚಿಂತೆಯಿಲ್ಲ
ಗಂದೆಂಬ ಹಮ್ಮಿನಲಿ ಬೀಗುತಿರುವನಲ್ಲ

ಇಂಥವರಿಂದವೇ ಜನಸಂಖ್ಯೆ ಮಿತಿ ಮೀರಿದೆ
ದೇಶದ ಪ್ರಗತಿಗೆ ಇದು ಮಾರಕವಾಗಿದೆ
ತಿಳಿಹೇಳಿದರೆ   ಕೇಳುವ ಇರಾದೆ ಇಲ್ಲವಾಗಿದೆ
ಮಕ್ಕಳನ್ನು ಮಾಡುವುದೇ ಇವನ ಕಾಯಕವಾಗಿದೆ

ಪಂಕಜಾ.ಕೆ. ಮುಡಿಪು
ಕುರ್ನಾಡು.ದ.ಕ.
[24/1/2022, 10:36 am] Pankaja K: ಅಬಾಬಿ
 
ಮಾಮೂಲಿ ಜ್ವರ ಶೀತ ಕೆಮ್ಮು ಬಂತೆಂದು
ಡಾಕ್ತರಲ್ಲಿ  ಹೋದರೆ  ಆ ಪರೀಕ್ಷೆ ಈ ಪರೀಕ್ಷೆ
ಎಂದು ಅಟ್ಟಾಡಿಸಿ  ಕಾಸು ಕೀಳುವರು
ಪಂಕಜಾರಾಮ
ಕೊರೊನಾ ಎನ್ನುವ ಹಣೆಪಟ್ಟಿ ಹಚ್ಚಿ  ಕುಳ್ಳಿಸುವರು

ಪಂಕಜಾ.ಕೆ. ಮುಡಿಪು
[24/1/2022, 10:36 am] Pankaja K: ಅಬಾಬಿ
  
ಸತ್ತವರ ವಾರ್ತೆಯನ್ನುತಾನು ಮೊದಲು ಹಂಚಿಕೊಳ್ಳಬೇಕು ಎನ್ನುವ ಧಾವಂತ
 ಅದಕ್ಕಾಗಿ ಸುಳ್ಳು ಸುದ್ದಿ ಹಬ್ಬಿಸುವರು
 ಪಂಕಜಾರಾಮ
 ಈ ಸಮೂಹ ಸನ್ನಿಧಿಗೆ ಮದ್ದು ಎಲ್ಲಿದೆ
 
ಪಂಕಜಾ .ಕೆ. ಮುಡಿಪು
[24/1/2022, 10:42 am] Pankaja K: ಅಬಾಬಿ

ಶೀತ ಕೆಮ್ಮು ಜ್ವರವನ್ನೇ ವಿಜೃಂಭಿಸುವರು
ಕೊರೊನಾ ಎನ್ನುವ ಹಣೆಪಟ್ಟಿ ಕಟ್ಟುವರು
ತಲ್ಲಣ ಗೊಂಡ ಜನತೆಯನ್ನು ನೋಡಿ ನಗುವರು
ಪಂಕಜಾರಾಮ 
ಈ  ಲಾಬಿಗೆ  ಕೊನೆಯೆಂದು?

ಪಂಕಜಾ.ಕೆ. ಮುಡಿಪು
[26/1/2022, 10:05 am] Pankaja K: ಮುಕ್ತಕ
 
ವಂದಿಸುವೆ ಸರಸತಿಯ ಚರಣಕ್ಕೆ ಎರಗುತ್ತ
ಬಂದಿಸುವ ಮಂದಿಯನು ಕಟ್ಟುತ್ತಲಿರುತ
ಕುಂದಿರುವ ಹುರುಪನ್ನು ತುಂಬುತಲಿ ತನುಮನದಿ
ಚಂದದಲಿ ಬರೆಯುತಿರು ಪಂಕಜಾಕ್ಷಿ

ನಲುಮೆಯಲಿ ಸಾಗುತಿಹ ಜೀವನವು ಬಲು ಮೋದ
ಒಲುಮೆಯಲಿ ಇರುತಿರಲು ಬಾಳೊಂದು ಹೂವು
ಗೆಲುಮೆಯನು ಪಡೆಯಲಿಕೆ ದೇವನನು ನೆನೆಯುತ್ತ
ಸಲಿಸುತಿರು ನಮನವನು ಪಂಕಜಾಕ್ಸ್ಗಿ

ಪ್ರಕೃತಿಯ ನಲಿವನ್ನು  ಕಾಣುವುದು  ಸೊಗವಿಹುದು
ಸುಕೃತಿಯು ದೇವನಾ ಕರುಣೆಯದು ಮನುಜ
ವಿಕೃತಿಯ ಮಾಡದೆಯೆ ಉಳಿಸುತಿರು ಹಸಿರನ್ನು
ಪ್ರಕೃತಿಗೆ  ನಮಿಸುತ್ತ ಪಂಕಜಾಕ್ಷಿ

ಪಂಕಜಾ.ಕೆ. ಮುಡಿಪು
[26/1/2022, 6:14 pm] Pankaja K: ಕರುನಾಡ  ಕಣ್ಮಣಿ ಬಳಗದ  ಸ್ಪರ್ಧೆಗಾಗಿ
ಕವನ
ವಿಷಯ. ಗಣರಾಜ್ಯ

ಗಣರಾಜ್ಯೋತ್ಸವ

ನಮ್ಮ ದೇಶದ ಸಂವಿಧಾನವು
ವಿಶ್ವ ಮಾನ್ಯತೆ ಪಡೆದಿದೆ
ಗಣರಾಜ್ಯದ ದಿನದಲದು
ಪೂರ್ಣ ಜಾರಿಗೆ ಬಂದಿದೆ

ಬ್ರಿಟಿಷರ ದಾಸ್ಯದಿಂದ
ಮುಕ್ತಿ ಪಡೆಯಿತು ಭಾರತ
ಶತಮಾನದ ಗುಲಾಮಗಿರಿಯನು
ಕಳೆದುಕೊಂಡಿತು ಭಾರತ

ಬಂಧನದಿಂದ ಮುಕ್ತಿಯಾಗುತ
ದೇಶ ವಿಭಜನೆಗೊಂಡಿತು
ಸಂವಿಧಾನವ ರಚಿಸುವ ಮೂಲಕ
ವಿಶ್ವ ಮಾನ್ಯತೆ ಪಡೆಯಿತು

ಪ್ರಜೆಗಳಿಂದ  ಪ್ರಜೆಗಳಿಗಾಗಿಯೇ
ಇರುವ ನೀತಿಯ ತೋರಿತು
ಕಾನೂನುಗಳ ಸುವ್ಯವಸ್ಥೆಗೆ
ಅಡಿಪಾಯವ ಹಾಕಿತು

ತಮ್ಮನ್ನಾಳುವವರನು ಆಯ್ಕೆಮಾಡುವ 
ಸ್ವಾತಂತ್ರ್ಯವನು ಕೊಟ್ಟಿತು
ವೈವಿದ್ಯತೆಯಲಿ ಏಕತೆಯನು
ಸಂವಿಧಾನವು ತೋರಿತು

ನವ ಸಮಾಜದ  ನಿರ್ಮಾಣವೇ 
ಸಂವಿದಾನದ ಆಶಯ
ತಾರತಮ್ಯವಿಲ್ಲದೆ  ಬದುಕುವುದೇ
ಗಣರಾಜ್ಯದ  ಆಶಯ

ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್  ಶ್ರೀ ಗಣೇಶ ಕೃಪಾ ಮುಡಿಪು .ಕುರ್ನಾಡು.ದ..ಕ.574153 
ಮೊಬೈಲ್ ನಂಬರ್ 9964659620
[30/1/2022, 8:24 pm] Pankaja K: ಗುರುಕುಲಾ ಚಿಕ್ಕಮಗಳೂರು ಕವನ ಸ್ಪರ್ಧೆಗಾಗಿ
ವಿಷಯ..ಒಂಟಿಬದುಕು

ನೋವು ಹೇಳಲಿ ಯಾರಿಗೆ

ಮಕ್ಕಳಿದ್ದರೂ ಒಂಟಿಯಾಗಿಹ
ನೋವು ಹೇಳಲಿ ಯಾರಿಗೋ
ಮನದ ಭಾವಗಳೆಲ್ಲ ಕರಗಿದೆ
ಕನಸು ಹೋಗಿದೆ ಎಲ್ಲಿಗೋ

ನಿಟ್ಟುಸಿರು  ಬರುತಲಿರುವುದು
ಒಂಟಿಯಾಗಿದೆ ಜೀವನ
ಮಾತನಾಡಲು ಜತೆಯು ಇಲ್ಲದೆ 
 ಮೂಕವಾಗಿಹ ಭಾವನೆ

ಹಸಿರು ಇಲ್ಲದ ಬಯಲ ತೆರದಲಿ
ಒಣಗಿ ಹೋಗಿಹ  ಬದುಕದು
ಹೂವ ಕಾಣದ ದುಂಬಿಯಂತೆ
ನೊಂದು ಬೆಂದಿಹ ಜೀವವಿದು

ಸುತ್ತು ಮುತ್ತಲೂ ತುಂಬಿ ನಿಂತಿಹ
ಮೌನ ಮನವನು ಹಿಂಡಿದೆ
ಕನಸು ಕರಗುತ  ಮನವು ನೊಂದಿದೆ
ಬದುಕು ಭಾರವಾಗಿದೆ

ದೇವ ಕರುಣೆಯ ತೋರಲಾರೆಯ
ಸಾಕು ಈ ಒಂಟಿ  ಜೀವನ
ಜತೆಗೆ ನಲಿಯಯುವ  ಜೀವ ಇದ್ದರೆ
ಬಾಳೊಂದು ನಂದನವನ

ಪಂಕಜಾ.ಕೆ. ಮುಡಿಪು
[6/2/2022, 8:35 pm] Pankaja K: ಗುರುಕುಲಾ ಕೊಡಗು ಘಟಕ
ಭಾವಗೀತೆ  ಸ್ಪರ್ಧೆಗಾಗಿ
ದತ್ತಪದ  ಪರಿಸರ ರಕ್ಷಣೆ

ಹಸಿರು ಉಳಿಸಿ

ಹಸಿರು ಪರಿಸರವಿರಲು  ಇಳೆಯಲಿ 
ಉಸಿರು ಕೊಡುತಲಿ ಮನಕೆ ಸಂತಸ
ಬಸಿದ ಬೆವರನು ಹರಿಯಗೊಡದೆಯೇ
ತುಸುವೆ ಗಾಳಿಯ ಬೀಸಿ ತನುವಿಗೆ ಹರುಷ  ಕೊಡುತಿಹುದು

ಧರೆಯ ಸೊಬಗನು ತರಿದು ಬಿಸುಡದೆ
ಬರಿದೆ ಮಸೆಯದೆ  ಉಳಿಸಿ  ಕೊಂಡರೆ 
ನರನ ಜೀವಕೆ ನಲಿವು ಮೂಡಿಸಿ 
ಹುರುಪು ತುಂಬುತ  ಬಾಳ ಬಯಲಲಿ ಕನಸ  ಬಿತ್ತುವುದು

ಬಣ್ಣ ಬಣ್ಣದ ಹೂವು ಅರಳಿದೆ
ಕಣ್ಣು  ತುಂಬುತ ಚೆಲುವು ಸೂಸಿದೆ
ಸಣ್ಣ ಗಿಡಗಳು ಬೆಳೆದು ನಿಲ್ಲುತ
ಮಣ್ಣಿನೆಡೆಯಲಿ ಹರಿದು ಹೋಗುವ  ನೀರ ತಡೆಯುವುದು

ಪರಿಸರ ರಕ್ಷಣೆಯ ಮಾಡುತ
ಇರಲು ಬಾಳಲಿ   ಹೊಸತನ
ರೋಗಬಾಧೆಯ ಕಳೆದು ಕೊಡುತಲಿ
ಶುದ್ಧ ಗಾಳಿ ಸಿಗುತಿಹುದು

ಪಂಕಜಾ..ಕೆ. ಮುಡಿಪು
[6/2/2022, 8:36 pm] Pankaja K: ಗುರುಕುಲಾ ಚಿಕ್ಕಮಗಳೂರು ಘಟಕ  ಭಾವಗೀತೆ ಸ್ಪರ್ಧೆಗಾಗಿ 
 ದತ್ತಪದ..ಪ್ರಕೃತಿ ವಿಸ್ಮಯ

    ಅದ್ಬುತ  ಚಿತ್ರ 

ಹೊನ್ನ ಕಿರಣವ ಧರೆಗೆ ಹರಡುತ 
ಬಾಲ ಭಾಸ್ಕರ ಬಂದನು
ಮಂಜು ಮುಸುಕಿದ ಧರೆಯ ಒಡಲನು
ಸವರಿ ಬಿಸುಪನು ತಂದನು

ಹಬ್ಬಿ ನಿಂತಿಹ ಮಂಜು ಹನಿಗಳು
ಮುತ್ತಿನಂತೆಯೇ ಹೊಳೆದಿದೆ
ಬಣ್ಣ ಬಣ್ಣದ  ಹೂಗಳರಲಿ
ಕಣ್ಣು ತುಂಬುತ ನಲಿದಿದೆ

ಸಂಜೆ  ಸೊಬಗದು  ಕಣ್ಣು ಸೆಳೆದಿದೆ
ರಸಿಕ ಮನವದು ಅರಳಿದೆ  
ಪ್ರಕೃತಿ ವಿಸ್ಮಯವ ಕಾಣುತಿರಲು
ಮನದಿ ಸಂತಸ ಮೂಡಿದೆ

ಕಪ್ಪು  ಮೋಡವು ಬಾನ ತುಂಬಲು
ಮಳೆಯು ಬಿರುಸಲಿ ಸುರಿಯಿತು
ಮಿಂಚು ಗುಡುಗಿನ ಆರ್ಭಟಕೆ
ಧರೆಯ ಸೊಬಗು ಸೆಳೆಯಿತು

ಪಂಕಜಾ.ಕೆ. ಮುಡಿಪು
[27/2/2022, 7:50 pm] Pankaja K: ಗುರುಕುಲಾ ಕೊಡಗು ಘಟಕ
 ಸ್ಪರ್ಧೆಗಾಗಿ 
 ಪ್ರಾಕಾರ. ವಿಮರ್ಶೆ 
 ದತ್ತಸಾಲು ...ಮಾತು ಅಂತರಂಗದ ಕನ್ನಡಿ 
 
  ಮಾತು ಅಂತರಂಗದ ಕನ್ನಡಿ ಎಂದುಬಲ್ಲವರು ಹೇಳಿದ್ದಾರೆ .ಒಬ್ಬನು ಆಡುವ ನುಡಿಯಿಂದ ಆತನ ವ್ಯಕ್ತಿತ್ವವನ್ನು ಅಳೆಯಬಹುದು.  ಆದರೆ ಮೃದುವಾಗಿ ಮಾತನಾಡುವವರೆಲ್ಲಾ ಒಳ್ಳೆಯವರು ಎಂದು ನಾವು ತಿಳಿದರೆ ಮೋಸ ಹೋಗುವುದೇ ಜಾಸ್ತಿ .. ಏಕೆಂದರೆ ಇತ್ತೀಚೆಗೆ ಅಂತರಂಗದಲ್ಲಿ ನಂಜು ತುಂಬಿದ್ದರೂ ಮೇಲ್ನೋಟಕ್ಕೆ ಬೆಣ್ಣೆಯಂತಹ ಮಾತನಾಡುವವರು ಇದ್ದಾರೆ .ತಮ್ಮ ಕಾರ್ಯವಾಗಬೇಕಾದರೆ ಮೃದುವಾಗಿ ಮಾತನಾಡಿ ಕಾರ್ಯ ಸಾಧಿಸಿಕೊಳ್ಳುವವರು ಇದ್ದಾರೆ .ಇದೆಲ್ಲದರಿಂದಾಗಿ ಮಾತು ಇಂದಿನ ದಿನದಲ್ಲಿ ತೋರಿಕೆಯ   ಬಾಯಿ ಮಾತಾಗಿದೆ..
           ಮಾತು ಮನುಷ್ಯನಿಗೆ ದೇವರು ಕೊಟ್ಟ ವರ .ಮಾತಿನಿಂದ  ಮಿತ್ರನನ್ನು ಶತ್ರುವನ್ನಾಗಿಯೂ  ಶತ್ರುವನ್ನು ಮಿತ್ರರನ್ನಾಗಿಸುವುದು ಸಾಧ್ಯ .  ಅದಕ್ಕಾಗಿಯೇ ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎನ್ನುವ  ಗಾದೆ ಹುಟ್ಟಿದೆ  ಇತ್ತೀಚೆಗೆ ಮಾತು ಎನ್ನುವುದು ಕೇವಲ ನಾಲಿಗೆಯ  ಕದಲುವಿಕೆ ಆಗಿದೆಯೇ ಹೊರತು ಅಂತರಂಗದಿಂದ ಬಂದಿರುವುದು ಕಡಿಮೆ  ಆದ್ದರಿಂದ ಮಾತು ಅಂತರಂಗದ ಕನ್ನಡಿ ಎನ್ನುವ ಹಳೆಯ ಸೂಕ್ತಿಯು ಇತ್ತೀಚೆಗೆ  ಅರ್ಥಕಳೆದು ಕೊಳ್ಳುತ್ತಿದೆ . ಮಾತು ಮತ್ತು ಮನಸ್ಸು ಒಂದೇ ಆಗಿದ್ದರೆ ಮಾತ್ರ ಆತನು ಜೀವನದಲ್ಲಿ ಯಶಸ್ಸು  ಕಾಣಬಹುದು .ಮಾತು ಮಾಣಿಕ್ಯ ಎನ್ನುವುದು ಇದೆ ಕಾರಣಕ್ಕೆ  ಅಂತರಂಗವು ಪರಿಶುದ್ಧವಾಗಿ ಸ್ವಚ್ಛವಾಗಿದ್ದವನ ಮಾತು  ಯಾವಾಗಳು ಸುಂದರವಾಗಿರುತ್ರದೆ ಆತನ ಮುಖದಲ್ಲಿ ಅಂತರಂಗದ ಭಾವನ್3 ಸ್ಪಷ್ಟವಾಗಿ ಪ್ರತಿಬಿಂಬಿತವಾಗುತ್ರದೆ ಅಂತರಂಗ  ಬಹಿರಂಗ  ಎರಡರಲ್ಲೂ ಒಂದೇ ಇರುವವನ ಮಾತಿಗೆ ಬೆಲೆ ಜಾಸ್ತಿ ಆತನ  ಮಾತಿಗೆ  ಎಲ್ಲಾ ಕಡೆಯೂ  ಬೆಲೆ ಸಿಗುತ್ತದೆ ಆತನು ಎಲ್ಲರಿಂದ ಗೌರವಿಸಲ್ಪಟ್ಟು ಗೌರವಾನ್ವಿತನಾಗುತ್ತಾನೆ . ಆದ್ದರಿಂದ ನಮ್ಮ ಮಾತು ಯಾವಾಗಲೂ ಅಂತರಂಗದ ಕನ್ನಡಿಯಂತಿರಲು  ಪ್ರಯತ್ನಿಸಬೇಕು 
           
ಪಂಕಜಾ.ಕೆ. ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.