;ಭಕ್ತಿಗೀತೆ
ನವದುರ್ಗೆ
ಅರ್ಧ ಚಂದ್ರನ ತಿಲಕ ಧರಿಸಿದ
ಚಂದ್ರಘಂಟಾ ದೇವಿ ಬೇಡುವೆ
ಚಂದದಿಂದಲಿ ಹರಸು ನಮ್ಮನು ತಾಯಿ ಪಾರ್ವತಿಯೇ
ಬಂಧನದಿ ಸಿಲುಕಿರುವ ಲೋಗರ
ಕಂದನಂತೆಯೇ ಕಾಯುತಿರುತಲಿ
ಸುಂದರಾಂಗಿಯೇ ಪಾಲಿಸೆಮ್ಮನು
ಮಾತೆ ಶಾರದೆಯೇ
ಹರಿದ್ರಾ ಕುಂಕುಮವನರ್ಪಿಸಿ
ನಿನ್ನ ಚರಿತೆಯ ಪಾಡಿ ಪೊಗಳುವೆ
ಮಂಗಳಾಂಗಿಯೇ ನಿನ್ನ ಸ್ತುತಿಸುತ
ಶಿರವ ಬಾಗುವೆನು
ವಿವಿಧ ಹೂಗಳನರ್ಪಿಸುತ್ತಲಿ
ಗಂಧ ಚಂದನದಿಂದ ಪೂಜಿಸಿ
ಕುಂಕುಮಾರ್ಚನೆಯನ್ನು ಮಾಡುತ ಮೈಯ ಮರೆಯುವೆನು
ನವರಾತ್ರಿಯ ನವದಿನದಲೂ
ನವವಿಧದಿಂದಲರ್ಚಿಸಿ
ನಾಮ ಪಠಿಸುತ ಬಕುತಿಯಿಂದಲಿ ಬೇಡಿಕೊಳ್ಳುವೆನು
ಬಕುತಿ ಭಾವವ ತುಂಬಿ ಮನದಲಿ
ಬಾವಶುದ್ಧಿಯಲಿದ್ದು ಬೇಡುವೆ
ಸಕಲ ಕಷ್ಟವ ಕಳೆದು ಬಿಡುತಲಿ ಹರಸು ನೀನೆಂದು
ಪಂಕಜಾ. ಕೆ.ರಾಮಭಟ್
Comments
Post a Comment