ಹೂ ಜೋಡಣೆ
ಭಾಮಿನಿ ಷಟ್ಪದಿ
ಅಂದದಿಂದಲಿ ಹೂವ ಜೋಡಿಸಿ
ಮಂದಿ ಗಮನವ ಸೆಳೆಯುವಂತೆಯೆ
ಚಂದವಿರುವಾ ತರುಣಿ ರೂಪವ ಕೊಟ್ಟು ಬಿಟ್ಟಿಹರು
ಹೊಂದಿಸಿಟ್ಟಿಹ ಹೂಗಳೆಲ್ಲವ
ಮುಂದೆ ಸೇರುತಲೊಂದುಗೂಡಿಸಿ
ಬಂಧ ಬೆಸೆಯುವ ಹೆಣ್ಣಿನಂತೆಯೆ ಮಾಡಿ ಬಿಟ್ಟಿಹರು
ಆರ ಕೈಗಳ ಚಳಕವಿದುವೋ
ಮೇರು ಕೃತಿಯ ತೆರದಿ ಕಾಣುತ
ಬಾರಿ ಬಾರಿಗೂ ಮನವ ಸೆಳೆಯುತ ಕಣ್ಣು ತುಂಬುವುದು
ಸೋರಿ ಹೋಗುವ ಸೊಬಗ ಸಿರಿಯಲಿ
ನಾರಿ ನಿಂತಳು ಮೊಗವ ತಿರುಗಿಸಿ
ಸೀರೆ ಧರಿಸಿದ ಮುಗುದೆ ಮನದಲ್ಲೆನಿತು ನಾಚಿಗೆಯೋ
ಪಂಕಜಾ.ಕೆ ರಾಮಭಟ್
Comments
Post a Comment