Skip to main content

ನ್ಯಾನೋ ಕಥೆಗಳು

68  ವ್ಯಾಪಾರ

ವ್ಯಾಪಾರ ವ್ಯವಹಾರ ನಮ್ಮಂತವರಿಗಲ್ಲ ಇದನ್ನೆಲ್ಲಾ ಬಿಟ್ಟು ಚೆನ್ನಾಗಿ ಓದಿ ಒಳ್ಳೆಯ ಕೆಲಸ
 ಸಂಪಾದಿಸು  ಎಂದು ತಂದೆಯವರು ಸುಶಾಂತನನ್ನು ದಿನಾ ತರಾಟೆಗೆ ತೆಗೆದು ಕೊಳ್ಳುತ್ತಿದ್ದರು.  ತನಗೆ ಎಲೆಕ್ಟ್ರಾನಿಕ್ ಬಿಡಿ ಬಾಗಗಳ ವ್ಯಾಪಾರದ ಬಗ್ಗೆ ಆಸಕ್ತಿ ಇದ್ದರೂ ತಂದೆಯನ್ನು ನೋಯಿಸಲಾಗದೆ ವಿದ್ಯಾಭ್ಯಾಸ ಮಾಡಿ ಸಣ್ಣ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ ಅವನಿಗೆ ಕೊರೊನಾದ ಕಾರಣದಿಂದ ಕೆಲಸ ಕಳೆದುಕೊಂಡಾಗ , ಎಲೆಕ್ಟ್ರಾನಿಕ್ ಬಿಡಿ ಬಾಗದ ವ್ಯಾಪಾರವೇ ಕೈ ಹಿಡಿಯಿತು.



 

69  ವಿದಾಯ  

 ಪ್ರೀತಿ ಎಂದು ಭಾವಿಸಿ  ತನ್ನನ್ನು ಹೆತ್ತು ಹೊತ್ತು ಸಾಕಿದ ತಂದೆ ತಾಯಿಯರನ್ನು ಬಿಟ್ಟು ಅವನ ಹಿಂದೆ  ಬಂದ ಅವಳು, ತಾನು ಪ್ರೀತಿಸಿದ್ದು ಒಬ್ಬ ಅಯೋಗ್ಯನನ್ನು ಎಂಧು ತಿಳಿದಾಗ  ಅವನ ಕಪಿ ಮುಷ್ಟಿಯಿಂದ ತಪ್ಪಿಸಿ ಬಂದು  ಬದುಕಿಗೆ ವಿದಾಯ ಹೇಳಲು ನಿಶ್ಚಯಿಸಿದಾಗ  ಅವಳನ್ನು ರಕ್ಷಿಸಿದ   ಅವರ ಹಿತೋಪದೇಶದಿಂದ   ಆಕೆ ತನ್ನ  ಮುಂದಿನ ದಾರಿಯನ್ನು ಆಯ್ಕೆಮಾಡಿಕೊಂಡಳು  


70 ಮೋಹದ ಜಾಲ

ಆತ  ಮೋಸಗಾರನೆಂದು ತಿಳಿಯದೆ ಆಕೆ  ಆತನ ಮೋಹದ ಜಾಲದಲ್ಲಿ ಸಿಲುಕಿ ಅವನ ಜತೆ  ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ಹೊರಟು ಬಂದಿದ್ದಳು.ಮಹಾನಗರದ  ಆ ವೈಭವೋಪೇತ ಹೋಟೆಲ್ ನ  ರೂಮಿನಿಂದ  ಹೇಗೋ ತಪ್ಪಿಸಿ ಕೊಂಡು  ಬಂದ ಆಕೆ ತನ್ನೂರಿನ ದಾರಿಯನ್ನು ಹಿಡಿದು ನಿಟ್ಟುಸಿರು ಬಿಟ್ಟಳು.

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...