ಹಚ್ಚೋಣ ಕನ್ನಡದ ಹಣತೆ
(ಹಂಸ ಗತಿ ವೃತ್ತ)
ಬೆಳಕನು ಬೀರುವ ಹಬ್ಬದಲೆಲ್ಲರು ಮಾಡುವ ಸೇವೆಯ ದೇವರಿಗೈ
ಕಳೆಯಲು ಕತ್ತಲು ಮೋದವ ತಂದಿತು ಹಾರಿದೆ ಬಾನಲಿ ಬಾಣವದೈ
ಹೊಳೆಯುವ ದೀಪದ ಕಾಂತಿಯಲೆಲ್ಲರು ಕೂಡುತ ಹಾಡುವರಾಗದಲೈ
ಬೆಳೆಯಲು ಬಂಧವು ತೋರಿತು ಹಾಸವು ಮೋಡಿಯ ಮಾಡಿತು ಹಬ್ಬವದೈ
ಹಣತೆಯ ಹಚ್ಚುತ ತಾಯಿಗೆ ವಂದಿಸಿ ಪಾದಕೆ ಬಾಗುವ ಭಕ್ತಿಯಲೈ
ಮಣಿಯುತ ಕನ್ನಡ ಮಾತೆಯ ಪಾದಕೆ ಹಾಸವ ಬೀರುತ ವಂದಿಸಿರೈ
ಕುಣಿಯುವ ಬೆಳ್ಳನೆ ಕಾಣುವ ನೋಟಕೆ ಸೋಲುತ ಬೇಗನೆ ಸೇರುತಲೈ
ತಣಿಸುತ ನೋವನು ದೂಡುತ ಬೇಸರ ಬಾನಲಿ ಹಾರಿಸಿ ಬಾಣವ ನೀ
ಪಂಕಜಾ. ಕೆ.ರಾಮಭಟ್.
Comments
Post a Comment