ರಾಮಕಥೆ 2
ಭಾಮಿನಿ ಷಟ್ಪದಿ
ಪಂಕಜಾ. ಕೆ. ರಾಮಭಟ್
ಬಂದ ನಾರದರನ್ನು ಕಾಣುತ
ಮಂದಿಯೊಳಗುತ್ತಮನ ಚರಿತೆಯ
ಕುಂದನಿಲ್ಲದೆ ಪೇಳು ನೀನೆನಗೆಂದ ವಾಲ್ಮೀಕಿ
ಸಂದ ಕಾಲದಿ ನಡೆದ ಕಥೆಯಿದು
ಕಂದ ರಾಮನ ಚರಿತೆಯೊರೆವೆನು
ಮುಂದೆ ನೀನದನೆತ್ತರಿಸಿ ಬರೆ ರಾಮ ಕಥೆಯನ್ನು
ಎಂದು ಹೇಳಿದ ಮಾತನಾಲಿಸಿ
ಮುಂದೆ ನಿಲ್ಲುತ ಕೇಳಿ ಚರಿತೆಯ
ಚಂದದಿಂದಲಿ ರಾಮ ಕಥೆಯನು ಬರೆದ ವಾಲ್ಮೀಕಿ
ಅಂದು ನಡೆದಿಹ ವಿಷಯವೆಲ್ಲವ
ಮಂದಿಯೆಲ್ಲರನೊಟ್ಟುಗೂಡಿಸಿ
ಕಂದ ರಾಮನ ಚರಿತೆಯನುತಾ ಮುದದಿ ಹಾಡಿದನು
ಪಂಕಜಾ ಕೆ. ರಾಮಭಟ್
Comments
Post a Comment