ರಾಮಕಥೆ 3
ಭಾಮಿನಿ ಷಟ್ಪದಿ
ಪಂಕಜಾ.ಕೆ. ರಾಮಭಟ್
ತನ್ನ ಮಕ್ಕಳ ತೆರದಿ ಸಾಕಿದ
ಚೆನ್ನ ರಾಮನ ಮುದ್ದು ಮಕ್ಕಳು
ಚಿನ್ನ ಪುತ್ತಲಿಯಂತೆ ಹೊಳೆಯುತ
ಕಥೆಯನೊರೆಯುವರು
ಮುನ್ನ ಮಾಡಿದ ಪುಣ್ಯ ಫಲವಿದು
ಕಣ್ಣ ತುಂಬುವ ಚೆಲುವ ಮೂರುತಿ -
-ಯನ್ನು ಬಣ್ಣಿಸಿ ಹಾಡಿ ಹೊಗಳುವ ಕಥೆಯ ಕೇಳುವುದು
ದೇಶ ಕೋಸಲದಲ್ಲಿ ದಶರಥ
ತೋಷದಿಂದಲಿ ಮಡದಿಯರೊಡನೆ
ಕ್ಲೇಶವಿಲ್ಲದೆ ರಾಜ್ಯಭಾರವ ಮಾಡುತಿರುತಿದ್ದ
ವೇಷ ಹಾಕುವ ಜನರ ಮದ್ಯಧಿ
ದೇಶದೆಲ್ಲೆಡೆ ಕವಿದ ಬೇಸರ
ಪಾಶದಂತೆಯೆ ಸೆಳೆದು ಬಿಡುತಲಿ ರಾಜ ಬಳಲಿದನು.
ತನಯರಿಲ್ಲದ ಚಿಂತೆ ಕಾಡಲು
ಮನನ ಮಾಡುತ ದೇವ ಚರಣವ
ಮುನಿವರೇಣ್ಯರ ಕರೆಸಿ ಕೇಳಿದ ರಾಜ ದಶರಥನು
ಮುನಿಗಳುಲಿಯುವ ಮಾತು ಕೇಳುತ
ನೆನೆದು ತನ್ನಯ ತಂದೆ ತಾಯಿಯ
ಕನಸು ಕಾಣುತ ಮಾಡಿ ಬಿಟ್ಟನು ಪುತ್ರ ಕಾಮೇಷ್ಠಿ
ಪಂಕಜಾ.ಕೆ. ರಾಮಭಟ್
Comments
Post a Comment