*ಶ್ರೀ ರಾಮ ನಾಮ*
(ಭಾಮಿನಿ ಷಟ್ಪದಿ)
ಪರಮ ಪಾವನ ರಾಮ ದೇವರ
ಚರಣಕೆರಗುತ ಭಕುತಿಯಿಂದಲಿ
ವರವ ಬೇಡುವೆ ರಾಮಚಂದ್ರನ ಜಪವ ಮಾಡುತಲಿ
ಕರವ ಮುಗಿಯುತ ಬೇಡಿಕೊಳ್ಳುವೆ
ವರದ ಹಸ್ತವ ಶಿರದಲಿರಿಸುತ
ಭರದಿ ಬರುತಲಿ ಕಾಯು ನಮ್ಮನು ಕೊಟ್ಟು ಸಕಲವನು
ಮುನ್ನ ಮಾಡಿದ ಪುಣ್ಯ ಫಲವಿದು
ಬನ್ನ ಪಡದೆಯೆ ಬದುಕುತಿರುವೆವು
ನಿನ್ನ ನಾಮದ ಬಲವು ಜತೆಗಿರೆ ಬಾಳು ಸೊಗಸಿಹುದು
ತಣ್ಣಗಾಗಿದೆ ಮನದ ಕಾಮನೆ
ಬಣ್ಣಿಸಲರಿಯೆ ನಿನ್ನ ಮಹಿಮೆಯ
ಮನ್ನಿಸೆನ್ನನು ಕಳೆದು ಪಾಪವ ಮುಕುತ ಕರುಣಿಸುತ
ದುಷ್ಟ ರಕ್ಕಸರನ್ನು ತರಿಯುತ
ಕಷ್ಟ ನಷ್ಟಗಳನ್ನು ಸಹಿಸುತ
ಶಿಷ್ಟ ರಕ್ಷಕನೆಂಬ ಬಿರುದನು ಪಡೆದ ದೇವನನು
,_ನೆಷ್ಟು ಬಗೆಯಲಿ ಹಾಡಿ ಹೊಗಳಲಿ_
_ಕಿಷ್ಟು ಶಕ್ತಿಯ ನಮಗೆ ಕರುಣಿಸು
ನಷ್ಟವಿಲ್ಲದೆ ಬಾಳಿ ಬದುಕಲು ನಮ್ಮ ಹರಸುತಿರು
*ಪಂಕಜಾ.ಕೆ ರಾಮಭಟ್*.
Comments
Post a Comment